ಕೋವಿಡ್ ವೈರಸ್ ನೂತನ ಪ್ರೊಟೊಕಾಲ್ ಜಾರಿಗೆ
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 500ಕ್ಕೂ ಅಧಿಕ ಮಂದಿ ಶೀಘ್ರ ಬಿಡುಗಡೆ
Team Udayavani, May 14, 2020, 7:03 AM IST
ಸಾಂದರ್ಭಿಕ ಚಿತ್ರ
ಪುಣೆ: ಕೋವಿಡ್ ವೈರಸ್ ನೂತನ ಪ್ರೊಟೊಕಾಲ್ ಸೋಮವಾರದಿಂದ ಪುಣೆಯಲ್ಲಿ ಜಾರಿಗೆ ಬಂದಿದ್ದು ಶೀಘ್ರದಲ್ಲೇ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 500ಕ್ಕೂ ಅಧಿಕ ಮಂದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಪಿಎಂಸಿ ತಿಳಿಸಿದೆ.
ಕೋವಿಡ್ -19 ರೋಗಿಗಳಿಗೆ ಮೇ 9ರಂದು ಕೇಂದ್ರವು ನೂತನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ಅನಂತರ ತತ್‌ಕ್ಷಣದ ಆಧಾರದ ಮೇಲೆ 500 ಹಾಸಿಗೆಗಳನ್ನು ಮುಕ್ತಗೊಳಿಸಲಾಗುವುದು ಎಂದು ಪಿಎಂಸಿ ಆಯುಕ್ತ ಶೇಖರ್ ಗಾಯಕ್‌ವಾಡ್ ತಿಳಿಸಿದ್ದಾರೆ. ಪುಣೆಯ ವಿವಿಧ ಆಸ್ಪತ್ರೆಗಳಲ್ಲಿ ಪ್ರಸ್ತುತ 1,350 ಕೋವಿಡ್-19 ಧನಾತ್ಮಕ ರೋಗಿಗಳಿದ್ದಾರೆ. ಈ ರೋಗಿಗಳಲ್ಲಿ 500 ಮಂದಿ ಚಿಕಿತ್ಸೆಯಲ್ಲಿ 10 ದಿನಗಳನ್ನು ಪ್ರತ್ಯೇಕವಾಗಿ ಪೂರೈಸಿದ್ದಾರೆ. ಈ ರೋಗಿಗಳಿಗೆ ಬಲವಾದ ಲಕ್ಷಣಗಳು ಇಲ್ಲದಿದ್ದರೆ ಅವರನ್ನು ಮನೆಯಲ್ಲಿ ಪ್ರತ್ಯೇಕತೆಗೆ ಒಳಪಡಿಸಲಾಗುವುದು. ಇದರಿಂದ ಪಿಎಂಸಿ 500 ಹಾಸಿಗೆಗಳನ್ನು ತತ್‌ಕ್ಷಣದ ಆಧಾರದ ಮೇಲೆಮುಕ್ತಗೊಳಿದಂತಾಗುತ್ತದೆ. ನಾವು ಪ್ರೊಟೊಕಾಲ್ ಅನ್ನು ಕೇಸ್-ಟು-ಕೇಸ್ ಆಧಾರದ ಮೇಲೆ ಅನುಸರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಪುಣೆ ವಿಭಾಗೀಯ ಆಯುಕ್ತ ದೀಪಕ್ ಮೈಶೇಕರ್, ವಿಭಾಗದಲ್ಲಿ ಹೊಸ ಪ್ರೊಟೊಕಾಲ್ ಜಾರಿಗೆ ತರಲಾಗಿದೆ. 10 ದಿನಗಳ ಅನಂತರ ಯಾವುದೇ ಅಥವಾ ಸೌಮ್ಯ ರೋಗಲಕ್ಷಣಗಳಿಲ್ಲದ ರೋಗಿಗಳನ್ನು ಬಿಡುಗಡೆ ಮಾಡುವಾಗ ಕೇಂದ್ರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.
ಹಿಂದಿನ ಪ್ರೊಟೊಕಾಲ್ ಕೋವಿಡ್ ಪಾಸಿಟಿವ್ ರೋಗಿಯನ್ನು ರೋಗಲಕ್ಷಣಗಳ ಹೊರತಾಗಿಯೂ 14 ದಿನಗಳ ಕಾಲ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಮತ್ತು ಸತತ ಎರಡು ಪರೀಕ್ಷೆಗಳ ಅನಂತರ ಬಿಡುಗಡೆ ಮಾಡಬೇಕೆಂದು 24 ಗಂಟೆಗಳ ಅಂತರದಲ್ಲಿ ಒತ್ತಾಯಿಸಿತ್ತು. ಹೊಸ ಪ್ರೊಟೊಕಾಲ್ ಹೇಳುವಂತೆ ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಒಂದೇ ಋಣಾತ್ಮಕ ಪರೀಕ್ಷೆಯ ಆಧಾರದ ಮೇಲೆ 10 ದಿನಗಳಲ್ಲಿ ಬಿಡುಗಡೆ ಮಾಡಬಹುದು ಎಂದು ತಿಳಿಸಲಾಗಿದೆ.
ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವವರು ಜ್ವರವನ್ನು ಮೂರು ದಿನಗಳಲ್ಲಿ ಪರಿಹರಿಸಿದರೆ ಮತ್ತು ಆಮ್ಲಜನಕದ ಶುದ್ಧತ್ವವನ್ನು ಬೆಂಬಲವಿಲ್ಲದೆ ನಿರ್ವಹಿಸಿದರೆ ಅವರನ್ನು 10 ದಿನಗಳಲ್ಲಿ ಬಿಡುಗಡೆ ಮಾಡಬಹುದು ಎಂದು ಪೊ›ಟೊಕಾಲ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.