ಕೋವಿಡ್ ಸಾವು: ಚೀನವನ್ನು ಮೀರಿಸಿದ ಮಹಾನಗರ
Team Udayavani, Jul 10, 2020, 5:39 PM IST
ಮುಂಬಯಿ, ಜು. 9: ಕಳೆದ ನಾಲ್ಕು ತಿಂಗಳಲ್ಲಿ ನಗರ 5,000 ಸಾವುಗಳನ್ನು ದಾಖಲಿಸಿದ್ದು. ಈ ಮೂಲಕ ಮುಂಬಯಿ ಚೀನಾದ ಕೋವಿಡ್-19 ಸಾವಿನ ಸಂಖ್ಯೆಯನ್ನು ಮೀರಿದೆ. ಕೋವಿಡ್ ಜಾಗತಿಕ ಕೇಂದ್ರಬಿಂದುವಾಗಿರುವ ಚೀನಾದಲ್ಲಿ ಮಂಗಳವಾರದವರೆಗೆ ಸಾವಿನ ಸಂಖ್ಯೆ 4,634ರಷ್ಟಿದ್ದರೆ, ಕಳೆದ 48 ಗಂಟೆಗಳಲ್ಲಿ 64 ಸಾವು-ನೋವುಗಳೊಂದಿಗೆ ಮುಂಬಯಿಯಲ್ಲಿ ಸಾವಿನ ಸಂಖ್ಯೆ 5,002ಕ್ಕೆ ಏರಿಕೆಯಾಗಿದೆ.
ಭಾರತದ 20,160 ಕೋವಿಡ್ ಸಾವುಗಳಲ್ಲಿ ಕಾಲು ಭಾಗ ನಗರದಿಂದ ದಾಖಲಾಗಿದೆ. ಮಾರ್ಚ್ 11ರಂದು ಮೊದಲ ಎರಡು ಪ್ರಕರಣಗಳನ್ನು ಪತ್ತೆಹಚ್ಚಿದ ಆರು ದಿನಗಳಲ್ಲಿ ಮುಂಬಯಿ ತನ್ನ ಮೊದಲ ಸಾವನ್ನು ದಾಖಲಿಸಿದೆ. 70 ದಿನಗಳ ಅನಂತರ ಮೊದಲ ಸಾವಿರ ಸಾವುಗಳು ಸಂಭವಿಸಿವೆ. ಅನಂತರದ ಸಾವಿರ ಸಾವುಗಳು ಕ್ರಮವಾಗಿ 18 ದಿನಗಳು, ನಾಲ್ಕು ಮತ್ತು ಒಂಬತ್ತು ದಿನಗಳಲ್ಲಿ ದಾಖಲಾಗಿದೆ. 12 ದಿನಗಳಲ್ಲಿ 4,000ರಿಂದ 5,000ಕ್ಕೆ ಏರಿಕೆಯಾಗಿದೆ. ಮಾರ್ಚ್ ನಲ್ಲಿ 7 ಸಾವುಗಳು ಸಂಭವಿಸಿದರೆ, ಈ ಸಂಖ್ಯೆ ಏಪ್ರಿಲ್‌ನಲ್ಲಿ 281ಕ್ಕೆ ಮತ್ತು ಮೇ ತಿಂಗಳಲ್ಲಿ 989ಕ್ಕೆ ಏರಿತು. ಜೂನ್‌ನಲ್ಲಿ 3,277, ಜುಲೈನಲ್ಲಿ ಇದುವರೆಗೆ 446 ಸಾವುಗಳು ಸಂಭವಿಸಿವೆ. ನಗರದ ಪ್ರಕರಣಗಳ ಸಾವಿನ ಪ್ರಮಾಣವು ಏಪ್ರಿಲ್‌ನಲ್ಲಿ ಶೇ. 7ರಷ್ಟಿತ್ತು ಪ್ರಸ್ತುತ ಸುಮಾರು 6ರಷ್ಟಿದ್ದು, ಈ ದರವು ಕೋವಿಡ್ ಕಾರ್ಯಪಡೆಯ ರಚನೆಗೆ ಕಾರಣವಾಗಿದೆ. ಮುಂಬಯಿಗೆ ಸಂಬಂಧಿಸಿದಂತೆ 56 ದಿನಗಳ ಅನಂತರ ಕೋವಿಡ್ ಹೊಸ ಪ್ರಕರಣಗಳು 800ಕ್ಕಿಂತಲೂ ಕಡಿಮೆಯಾಗಿದೆ. 785 ಪ್ರಕರಣಗಳ ಸೇರುವಿಕೆಯೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 86,509ಕ್ಕೆ ತಲುಪಿದೆ. ಮುಂಬಯಿಯ ಉಪನಗರಗಳಿಂದ ಸಾವುಗಳು ನಗರಕ್ಕಿಂತ ಹೆಚ್ಚಿನದಾಗಿದೆ. ಈ ಮಧ್ಯೆ ರೋಗದ ಬಗ್ಗೆ ನಗರದ ಹಿಡಿತ ಸುಧಾರಿಸಿದೆ ಎಂದು ಎಎಂಸಿ ಸುರೇಶ್ ಕಾಕಾನಿ ಹೇಳಿದರು.
ಡಿಟಿಎ ಸಮನ್ವಯದ ಪ್ರಾಥಮಿಕ ಪ್ರವೃತ್ತಿಗಳು ಏಪ್ರಿಲ್ ಮತ್ತು ಮೇಗೆ ಹೋಲಿಸಿದರೆ ಜೂನ್ ಮತ್ತು ಜುಲೈನಲ್ಲಿ ನಾವು ಕಡಿಮೆ ಸಾವುಗಳನ್ನು ಹೊಂದಿದ್ದೇವೆ ಎಂದು ತೋರಿಸುತ್ತದೆ, ನಾವು ಇನ್ನೂ ಸೋಂಕಿನ ಬಗ್ಗೆ ಕಲಿಯುತ್ತಿದ್ದೇವೆ. ಈಗ ನಮ್ಮಲ್ಲಿ ಉತ್ತಮ ಔಷಧಿಗಳಿವೆ, ಅವುಗಳ ಲಭ್ಯತೆ ಸುಧಾರಿಸಿದೆ ಮತ್ತು ಪ್ಲಾಸ್ಮಾ ಚಿಕಿತ್ಸೆಯನ್ನು ಬಳಸಲು ಸಹ ನಾವು ಅವಕಾಶ ನೀಡುತ್ತಿದ್ದೇವೆ. ಮರಣಪ್ರಮಾಣವನ್ನು ಕಡಿಮೆ ಮಾಡಲು ಬಿಎಂಸಿ ಮಿಷನ್ ಸೇವ್ ಲೈವ್ಸ್ ಅನ್ನು ಜಾರಿಗೆ ತಂದಿದೆ ಎಂದು ಕಾಕಾನಿ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.