ಆರೋಗ್ಯ ಇಲಾಖೆಯಿಂದ ಮಕ್ಕಳ ವೈದ್ಯರ ಕಾರ್ಯಪಡೆ ರಚನೆ
Team Udayavani, May 31, 2021, 1:58 PM IST
ಮುಂಬಯಿ: ಮುಂದಿನ ಕೆಲವು ತಿಂಗಳುಗಳಲ್ಲಿ ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಕಾಣಿಸಿಕೊಳ್ಳುವ ಕುರಿತು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಮಕ್ಕಳ ವೈದ್ಯರು ಮತ್ತು ಗ್ರಾಮೀಣ ಅನುಭವ ಹೊಂದಿರುವ ಮಕ್ಕಳ ವೈದ್ಯರನ್ನು ಸಂಪರ್ಕಿಸುವ ಮೂಲಕ ಮಕ್ಕಳ ಸಾಂಕ್ರಾಮಿಕ ರೋಗದ ಮಧ್ಯೆ ಕೆಲಸ ಮಾಡಲು ತನ್ನ ಕಾರ್ಯಪಡೆಯನ್ನು ವಿಸ್ತರಿಸಿದೆ.
ಕಾರ್ಯಪಡೆಗೆ ವಿಶೇಷ ಅಧಿಕಾರ
ಹಿಂದಿನ ಕಾರ್ಯಪಡೆಯು ಒಂಬತ್ತು ಸದಸ್ಯರನ್ನು ಹೊಂದಿತ್ತು, ಅವರೆಲ್ಲರೂ ಮುಂಬಯಿ ಮೂಲದವರು. ಎರಡನೇ ಅಲೆ ಸಂದರ್ಭ ಅನೇಕ ನವಜಾತ ಶಿಶುಗಳು ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ನಿಯೋ ನಾಟಾಲಜಿಸ್ಟ್ ಸಹಿತ ಕಾರ್ಯಪಡೆಯ ಮಾರ್ಗಸೂಚಿಗಳು ಉತ್ತಮ ದೃಷ್ಟಿಕೋನ ವನ್ನು ಹೊಂದಿರುತ್ತದೆ ಎಂದು ಕಾರ್ಯಪಡೆಯ ಸದಸ್ಯರು ಹೇಳಿದ್ದಾರೆ.
ಸೋಂಕು ನಿಯಂತ್ರಿಸಲು ಸಹಾಯ
ರಾಜ್ಯಾದ್ಯಂತ ಪೀಡಿಯಾಟ್ರಿಕ್ಸ್ ಕೊರೊನಾ ಸೋಂಕಿಗೆ ತುತ್ತಾದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಪಡೆಯಲ್ಲಿ ಮಕ್ಕಳ ವೈದ್ಯರು ಮತ್ತು ನವಜಾತ ಶಿಶು ತಜ್ಞರು ಸೇರಿದ್ದಾರೆ. ಇದು ಮೂರನೇ ಅಲೆಯ ಕೊರೊನಾ ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಾಜ್ಯ ಸರಕಾರಕ್ಕೆ ಮಾರ್ಗದರ್ಶನ
ಮೊದಲ ಅಲೆ ಬಳಿಕ ಪ್ರಕರಣಗಳು ಕಡಿಮೆ ಯಾಗಲು ಪ್ರಾರಂಭಿಸಿದ ಬಳಿಕ ಮತ್ತೆ ಸೋಂಕು ಹೆಚ್ಚಾಗುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ಫೆಬ್ರವರಿ ಮಧ್ಯದಿಂದ 2ನೇ ಅಲೆ ಪ್ರಾರಂಭವಾಯಿತು. ಸದ್ಯ ಮೂರನೇ ಅಲೆ ಪ್ರಾರಂಭವಾಗಲಿದೆ ಎಂದು ತಜ್ಞರು ತಿಳಿಸಿದ್ದು, ಇದಕ್ಕೆ ನಾವು ತಯಾರಿ ನಡೆಸುತ್ತಿದ್ದೇವೆ. ಪ್ರಕರಣಗಳ ಹರಡುವಿಕೆಯನ್ನು ನಿಯಂತ್ರಿಸಲು ಹೆಚ್ಚುವರಿ ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ಕೊರೊನಾದಿಂದ ಮಕ್ಕಳನ್ನು ರಕ್ಷಿಸಲು ಮತ್ತು ಚಿಕಿತ್ಸೆಯ ಪ್ರೋಟೋàಕಾಲ್‌ಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರಕ್ಕೆ ಮಾರ್ಗದರ್ಶನ ನೀಡಲು ರಾಜ್ಯ ಮಕ್ಕಳ ಕಾರ್ಯಪಡೆ ರಚಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ
ಕೊರೊನಾ ಸೋಂಕು ನಿರ್ದಿಷ್ಟ ವಯಸ್ಸಿನವರನ್ನು ಗುರಿಯಾಗಿಸುತ್ತಿಲ್ಲ. ಕೊಮೊ ರ್ಬಿಡಿಟಿಗಳನ್ನು ಹೊಂದಿರುವ ಹಿರಿಯ ನಾಗರಿಕರನ್ನು ಹೊರತುಪಡಿಸಿ ಎಲ್ಲರೂ ಸಮಾನವಾಗಿ ಪ್ರಭಾವಿತರಾಗುತ್ತಾರೆ. ಸದ್ಯಕ್ಕೆ ನಾವು ಮಧ್ಯಮ ರೋಗ ಲಕ್ಷಣಗಳನ್ನು ಹೊಂದಿರುವ ಮಕ್ಕಳನ್ನು ಗುರುತಿಸುವತ್ತ ಗಮನ ಹರಿಸಬೇಕಾಗಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮತ್ತು ಮಾನವಶಕ್ತಿ ಒದಗಿಸುವ ಮೂಲಕ ಮಾತ್ರ ಇದನ್ನು ಮಾಡಬಹುದು ಎಂದು ರಾಜ್ಯ ಮಕ್ಕಳ ಕಾರ್ಯ ಪಡೆಯ ಸದಸ್ಯರೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.