“ಕಠಿನ ಪರಿಶ್ರಮದೊಂದಿಗೆ ಸದ್ಗುಣ ಬೆಳೆಸಿಕೊಳ್ಳಿ”
Team Udayavani, Feb 26, 2021, 8:38 PM IST
ಮುಂಬಯಿ: ಪದವಿ ಪಡೆಯುವುದು ಜೀವನ ಶಿಕ್ಷಣದ ಪ್ರಾರಂಭ. ಸಾಧಿಸುವ ದೊಡ್ಡ ಗುರಿಗಳನ್ನು ಹೊಂದಿರಬೇಕು. ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಹೊಸತನವನ್ನು ಹೊಂದಬೇಕು ಮತ್ತು ಆ ಗುರಿಗಳನ್ನು ಸಾಧಿಸಲು ಶ್ರಮಿಸಬೇಕು. ತಮ್ಮ ಕಠಿನ ಪರಿಶ್ರಮಕ್ಕೆ ಸದ್ಗುಣವನ್ನು ಸೇರಿಸಿ ದರೆ ಬಲವಾದ, ಸಮರ್ಥ ಮತ್ತು ಸ್ವಾವಲಂಬಿ ಭಾರತ ವನ್ನು ನಿರ್ಮಿಸಬಹುದು ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿದರು.
ಸೋಲಾಪುರದ ಪುಣ್ಯಶ್ಲೋಕ್ ಅಹಲ್ಯಾದೇವಿ ಹೊಲ್ಕರ್ ವಿಶ್ವವಿದ್ಯಾನಿಲಯದ 16ನೇ ಸಮಾ ವೇಶ ದಲ್ಲಿ ರಾಜ್ಯಪಾಲರು ಮಾತನಾಡಿ, ಯುವ ಜನತೆ ಸದ್ಗುಣಶೀಲ ಜನರೊಂದಿಗೆ ಬೆರೆತರೆ ಜೀವ ನವು ಯಶಸ್ವಿಯಾಗುತ್ತದೆ ಎಂದು ಹೇಳಿದ ರಾಜ್ಯ ಪಾಲರು, ಮುದ್ರಾ, ಸ್ಟಾರ್ಟ್ ಅಪ್ ಇಂಡಿಯಾ, ಪ್ರಧಾನ್ ಮಂತ್ರಿ ಕೌಶಲ ವಿಕಾಸ್ ಯೋಜನೆ ಇತ್ಯಾದಿಗಳ ಪ್ರಯೋಜನ ಪಡೆದುಕೊಂಡು ಸ್ವಾವಲಂಬಿಗಳಾಗಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಾಸಕ ಸುಭಾಷ್ ದೇಶ್ಮುಖ್, ವಿಶ್ವವಿದ್ಯಾನಿಲಯದ ಉಪಕುಲಪತಿ ಮೃಣಾಲಿನಿ ಫಡ್ನವೀಸ್, ವಿಶ್ವವಿ ದ್ಯಾನಿಲ ಯದ ವಿವಿಧ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಾಜಿ ಸಚಿವ ಸುಭಾಷ್ ದೇಶ್ಮುಖ್ ಪ್ರಸ್ತಾವಿಸಿ, ಪುಣ್ಯಶ್ಲೋಕ್ ಅಹಲ್ಯಾ ದೇವಿ ಹೊಲ್ಕರ್ ಸೋಲಾಪುರ ವಿಶ್ವವಿದ್ಯಾನಿಲಯವು ಸೋಲಾಪು ರದ ಒಂದು ಜಿಲ್ಲೆಗೆ ಮಾತ್ರ ಕಾರ್ಯನಿರ್ವಹಿ ಸುತ್ತಿ ರುವ ಏಕೈಕ ವಿಶ್ವವಿದ್ಯಾನಿಲಯವಾಗಿದೆ. ಜವಳಿ ಕಾರ್ಮಿಕರ ಕೌಶಲ ಹೆಚ್ಚಿಸಲು ವಿಶ್ವವಿದ್ಯಾನಿಲ ಯವು ಪ್ರಯತ್ನಗಳನ್ನು ಮಾಡಬೇಕೆಂದು ಸಲಹೆ ನೀಡಿದರು.
ಪುಣ್ಯಶ್ಲೋಕ್ ಅಹಲ್ಯಾದೇವಿ ಹೊಲ್ಕರ್ ಸೋಲಾಪುರ ವಿಶ್ವವಿದ್ಯಾನಿಲಯವು 92 ಕೌಶಲ ಅಭಿವೃದ್ಧಿ ಕೋರ್ಸ್‌ಗಳನ್ನು ಜಾರಿಗೊಳಿಸುತ್ತಿದೆ. ವಿಶ್ವವಿದ್ಯಾನಿಲಯವು ಸಮುದಾಯ ರೇಡಿಯೋ, ಅರ್ಥಶಾಸ್ತ್ರ ಪ್ರಯೋಗಾಲಯ ಮತ್ತು ಪುರಾತತ್ವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವ ಪ್ರಕ್ರಿಯೆ ಯಲ್ಲಿದೆ ಎಂದು ಉಪಕುಲಪತಿ ಮೃಣಾಲಿನಿ ಫಡ್ನವೀಸ್ ತಮ್ಮ ವರದಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ನಾಲ್ವರು ಶ್ರೇಷ್ಠ ವಿದ್ಯಾ ರ್ಥಿ ಗಳಿಗೆ ಚಿನ್ನದ ಪದಕಗಳನ್ನು ಮತ್ತು 4 ಪದವೀಧರರಿಗೆ ವಿದ್ಯಾವಾಚಸ್ಪತಿ ಪಿಎಚ್‌ಡಿ ಪದವಿ ನೀಡಲಾಯಿತು. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ, ಅತ್ಯುತ್ತಮ ಶಿಕ್ಷಣ ಸಂಸ್ಥೆ, ಅತ್ಯುತ್ತಮ ಕಾಲೇಜು, ಅತ್ಯುತ್ತಮ ಪ್ರಾಂಶುಪಾಲರು, ಅತ್ಯುತ್ತಮ ಶಿಕ್ಷಕರು ಮತ್ತು ಅತ್ಯುತ್ತಮ ಬೋಧಕೇತರ ಸಿಬಂದಿಯನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.