ಅಲ್ಡೇಲ್ ರಾಷ್ಟ್ರಾಭಿಮಾನದ ಸಂಸ್ಥೆಯಾಗಿ ಬೆಳೆಯುತ್ತಿದೆ: ಆಲ್ಬರ್ಟ್ ಡಿ’ಸೋಜಾ
Team Udayavani, Apr 12, 2022, 11:27 AM IST
ಮುಂಬಯಿ: ಉಪನಗರ ಪಾಲ‍್ಘರ್ ಜಿಲ್ಲೆಯಲ್ಲಿ ಉಡುಪಿ ಮೂಲದ ಆಲ್ಬರ್ಟ್ ಡಬ್ಲ್ಯು. ಡಿ’ಸೋಜಾ (ಪಾಂಗಳ) ಆಡಳಿತ್ವದ ಅಲ್ಡೇಲ್ ಎಜುಕೇಶನ್ ಟ್ರಸ್ಟ್‌ನ ಸಮೂಹದ ಸೈಂಟ್ ಜಾನ್ ಟೆಕ್ನಿಕಲ್ ಆ್ಯಂಡ್ ಎಜುಕೇಶನಲ್ ವಿದ್ಯಾಲಯದ ದಶ ವಾರ್ಷಿಕ ಘಟಿಕೋತ್ಸವವು ಎ. 9ರಂದು ಕಾಲೇಜು ಕ್ಯಾಂಪಸ್‌ನ ಸೈಂಟ್ ಜಾನ್ ಮಹಾವಿದ್ಯಾಲಯದ ಸಭಾಗೃಹದಲ್ಲಿ ಜರಗಿತು.
ಎರಡು ಭಾಗಗಳಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಪೂರ್ವಾಹ್ನ ಸೈಂಟ್ ಜಾನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮ್ಯಾನಿಟಿಸ್ ಆ್ಯಂಡ್ ಸೈನ್ಸ್ ಹಾಗೂ ಸೈಂಟ್ ಜಾನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ರಿಸರ್ಚ್ ವಿಭಾಗದ ಘಟಿಕೋತ್ಸವ ನೆರವೇರಿಸಲಾಗಿದ್ದು, ಮೌಂಟ್ ಕಾರ್ಮೆಲ್ ಚರ್ಚ್ ಬಾಂದ್ರಾ ಇದರ ಧರ್ಮಗುರು ರೆ| ಫಾ| ರೂಬೆನ್ ಟೆಲ್ಲಿಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪದವಿ ಪ್ರದಾನಗೈದು ಶುಭ ಹಾರೈಸಿದರು. ಅಪರಾಹ್ನ ಸೈಂಟ್ ಜಾನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಮತ್ತು ಸೈಂಟ್ ಜಾನ್ ಕಾಲೇಜ್ ಆಫ್ ಫಾರ್ಮಸಿ ಆ್ಯಂಡ್ ರಿಸರ್ಚ್ (ಎಸ್‌ಜೆಸಿಎಫ್‌ಆರ್) ವಿದ್ಯಾರ್ಥಿಗಳ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯ ಮುಂಬಯಿ ಇದರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ| ಅನುರಾಧಾ ಮಜುಂದಾರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು.
ಅಲ್ಡೇಲ್ ಎಜುಕೇಶನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು. ಡಿ’ಸೋಜಾ ಮಾತನಾಡಿ, ಯಾವುದೇ ಉನ್ನತ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪದವಿ ಪಡೆಯುವುದು ಗೌರವದ ಸಂಕೇತವಾಗಿದೆ. ಪಾಲಕರು, ಶಿಕ್ಷಕರು ಮತ್ತು ಗೆಳೆಯರೊಂದಿಗೆ ವಿಶೇಷ ಅತಿಥಿಗಳ ಒಗ್ಗೂ ಡುವಿಕೆಯೊಂದಿಗೆ ಈ ಜೀವನ ಸಾಧನೆಯನ್ನು ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸುವುದು ಸ್ಮರಣೀಯವನ್ನಾಗಿಸುತ್ತದೆ. ಇಂಡಸ್ಟ್ರೀ ಇನ್‌ಪುಟ್‌ಗಳನ್ನು ಲಿಂಕ್ ಮಾಡಲು ಮತ್ತು ಜೀವಮಾನದ ಕಲಿಕೆಯ ಫಲಿತಾಂಶಗಳನ್ನು ಸೃಷ್ಟಿಸಲು ಈ ಅಗತ್ಯವನ್ನು ಅರ್ಥಮಾಡಿಕೊಂಡು, ಸೈಂಟ್ ಜಾನ್ ಟೆಕ್ನಿಕಲ್ ಕ್ಯಾಂಪಸ್ 2012ರಿಂದ ವಾರ್ಷಿಕ ಪದವಿ ದಿನವನ್ನು ಆಯೋಜಿಸುತ್ತಿದೆ. ಎರಡು ವರ್ಷಗಳ ಲಾಕ್‌ಡೌನ್ ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದು, ಶೇ. 90ರಷ್ಟು ಕಾರ್ಯವು ಆನ್‌ಲೈನ್‌ನಲ್ಲಿ ನಡೆಯುವುದರೊಂದಿಗೆ ಶಿಕ್ಷಣ ಕ್ಷೇತ್ರ ಬಿಕ್ಕಟ್ಟನ್ನು ಅನುಭವಿಸಿತು. 2020-2021ರ
ಪದವೀಧರ ಬ್ಯಾಚ್‌ಗಳು ಅಮೂಲ್ಯವಾದ ಪೀರ್ ಕಲಿಕೆ ಮತ್ತು ಮುಖಾಮುಖೀ ಸಂವಹನವನ್ನು ಕಳೆದುಕೊಂಡಿದ್ದಾರೆ. ಅದನ್ನು ಎಂದಿಗೂ ಬದಲಾಯಿ ಸಲು ಸಾಧ್ಯವಿಲ್ಲ. ಆದ್ದರಿಂದ 2021ರಲ್ಲಿ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದರ ಆತಿಥೇಯ ಸಂಸ್ಥೆಗಳಿಂದ ಪದವಿ ಪಡೆದಿದ್ದಾರೆ ಎಂಬುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಅಲ್ಡೇಲ್ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಎಲ್ವಿನಾ ಎ. ಡಿ’ಸೋಜಾ, ಕೋಶಾಧಿಕಾರಿ ಎಲೈನ್ ಆರ್. ಬುಥೆಲ್ಲೋ, ಸದಸ್ಯ ಆಲ್ಡಿ’ಜ್ ಎ. ಡಿ’ಸೋಜಾ, ಕ್ಯಾಂಪಸ್ ನಿರ್ದೇಶಕ ಡಾ| ಡಿ. ಹೆನ್ರಿ ಬಾಬು, ಉಪ ಕ್ಯಾಂಪಸ್ ನಿರ್ದೇಶಕಿ ಮತ್ತು ಎಸ್‌ಜೆಸಿಎಫ್‌ಆರ್ ಪ್ರಾಂಶುಪಾಲೆ ಸವಿತಾ ತೌರೊ, ಎಸ್‌ಜೆಸಿಇಎಂ ಪ್ರಾಂಶುಪಾಲ ಡಾ| ಜಿ.ವಿ ಮುಳಗುಂದ, ಸೈಂಟ್ ಜಾನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮ್ಯಾನಿಟಿಸ್ ಆ್ಯಂಡ್ ಸೈನ್ಸ್ ಮುಖ್ಯಸ್ಥ ಡಾ| ಬೃಜಬಂಧು ದಾಸ್, ಎಚ್‌ಆರ್‌ಡಿ ಮುಖ್ಯಸ್ಥ ವಿದ್ಯಾಧರ ಪಾಟೀಲ್ ಮತ್ತು ಎಚ್‌ಆರ್‌ಡಿ ವ್ಯವಸ್ಥಾಪಕ ಸುಧೀರ್ ಬಾಬು ಉಪಸ್ಥಿತರಿದ್ದರು.
ಸೈಂಟ್ ಜಾನ್ ಇಂಟರ್‌ನ್ಯಾಶನಲ್ ಸಿಬಿಎಸ್‌ಇ ಶಾಲಾ ವಿದ್ಯಾರ್ಥಿಗಳ ಸ್ಕೂಲ್ ಬ್ರ್ಯಾಂಡ್ ನ ನಿನಾದ ದೊಂದಿಗೆ ಪದವೀಧರ ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ಸಭಾಂಗಣಕ್ಕೆ ಕರೆತರಲಾಯಿತು. ಬಳಿಕ ಜಾಗತಿಕ ಶಾಂತಿ ನೆಮ್ಮದಿಯ ಬಾಳಿಗಾಗಿ ಸಾರ್ವತ್ರಿಕವಾಗಿ ಪ್ರಾರ್ಥಿಸಲಾಯಿತು. ಸರಸ್ವತಿ ವಂದನೆಯೊಂದಿಗೆ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಲಾಯಿತು. ಆಲ್ಬರ್ಟ್ ಡಬ್ಲ್ಯು. ಡಿ’ಸೋಜಾ ಸ್ವಾಗತಿಸಿ, ಪ್ರಸ್ತಾವನೆಗೈದರು.
ರಾಜ್ಯಪಾಲ, ಗೌರವಾನ್ವಿತ ಕುಲಪತಿ ಭಗತ್ ಸಿಂಗ್ ಕೋಶ್ಯಾರಿ ಮತ್ತು ಮುಂಬಯಿ ವಿವಿ ಉಪ ಕುಲಪತಿ ಪ್ರೊ| ಸುಹಾಸ್ ಪಡ್ನೇಕರ್ ಅವರ ವೀಡಿಯೋ ಭಾಷಣವನ್ನು ಪ್ರದರ್ಶಿಸಲಾಯಿತು. ಎಸ್‌ಜೆಸಿ ಹ್ಯೂಮ್ಯಾನಿಟಿಸ್ ಆ್ಯಂಡ್ ಸೈನ್ಸ್‌ನ 233 ವಿದ್ಯಾರ್ಥಿಗಳು ಮತ್ತು ಎಸ್‌ಜೆಸಿಐಎಂಆರ್‌ನ 41 ವಿದ್ಯಾರ್ಥಿಗಳು ಹಾಗೂ ಎಸ್‌ಜೆಸಿಇಎಫ್‌ನ 584 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಸ್ವೀಕರಿಸಿದರು. ಆಯಾಯ ಕಾಲೇಜುಗಳ ಪ್ರಾಂಶುಪಾಲರು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಘಟಿಕೋತ್ಸವ ಸಮಾಪನಗೊಂಡಿತು. ಕೊನೆಯಲ್ಲಿ ವಿಭಾಗವಾರು ಫೋಟೋ ಸೆಷನ್ ನಡೆಸಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಸ್ಮರಣಿಗಳನ್ನಿತ್ತು ಗೌರವಿಸಲಾಯಿತು.
ಬಿಎ, ಬಿಕಾಂ, ಬಿಎಎಫ್, ಬಿಬಿಐ, ಬಿಎಫ್‌ಎಂ, ಬಿಎಂಎಸ್, ಬಿಎಸ್‌ಸಿ, ಬಿಎಸ್‌ಸಿ-ಸಿಎಸ್, ಬಿಎಸ್‌ಸಿ-ಐಟಿ, ಬಿಎಸ್‌ಸಿ ಹೊಟೇಲ್ ಮ್ಯಾನೇಜ್‌ಮೆಂಟ್, ಮ್ಯಾನೇಜ್‌ಮೆಂಟ್ ಸ್ಟಡೀಸ್, ಎಂಜಿನಿಯ ರಿಂಗ್ ಮತ್ತು ಫಾರ್ಮಸಿಯಲ್ಲಿ ಉನ್ನತ ಶಿಕ್ಷಣದಿಂದ ಹಿಡಿದು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಸ್ಯಶಾಸ್ತ್ರ, ಹಾಸ್ಪಿಟಾಲಿಟಿ ಸ್ಟಡೀಸ್ ಮತ್ತು ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸೈಕಲಾಜಿಯಂತಹ ಪದವಿ ವಿಭಾಗ ಹೊಂದಿದ್ದೇವೆ. ಎ ಸ್ಟೇಟ್ ಬೋರ್ಡ್ ಜೂನಿಯರ್ ಕಾಲೇಜ್, ಸ್ಟೇಟ್ ಬೋರ್ಡ್ ಸ್ಕೂಲ್ ಮತ್ತು ಸಿಬಿಎಸ್‌ಸಿ ಸ್ಕೂಲ್, ಸೈಂಟ್ ಜಾನ್ ಪಾಲ್ಘರ್ ಕ್ಯಾಂಪಸ್ ಮುಂದಿನ ಪೀಳಿಗೆಯನ್ನು ಸಶಕ್ತಗೊಳಿಸಲು ಸನ್ನದ್ಧ ವಾಗಿದೆ. -ಆಲ್ಬರ್ಟ್ ಡಬ್ಲ್ಯು. ಡಿ’ಸೋಜಾ ಕಾರ್ಯಾಧ್ಯಕ್ಷರು, ಅಲ್ಡೇಲ್ ಎಜುಕೇಶನ್ ಟ್ರಸ್ಟ್ ಸಮೂಹ ಸಂಸ್ಥೆ
-ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
Belagavi; ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
Kabaddi: ಇಂದು ಸೀನಿಯರ್ ಕಬಡ್ಡಿ ತಂಡದ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.