ಮೀರಾರೋಡ್ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿ: ದೀಪಾವಳಿ-ಗೋಪೂಜೆ
Team Udayavani, Nov 18, 2020, 8:00 PM IST
ಮುಂಬಯಿ, ನ. 17: ಮೀರಾರೋಡ್ ಪೂರ್ವದ ಗೀತಾ ನಗರದಲ್ಲಿರುವ ಪ್ರತಿಷ್ಠಿತ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಅವರಣದಲ್ಲಿ ನ. 15ರಂದು ಬೆಳಗ್ಗೆ ಗೋಪೂಜೆಯೊಂದಿಗೆ ವಿವಿಧ ಧಾರ್ಮಿಕ ಆಚರಣೆಗಳು ದಿನಪೂರ್ತಿ ಜರಗಿದವು.
ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ಅವರು ಗೋ ಮಾತೆಯನ್ನು ಹೂವಿನ ಹಾರಗಳಿಂದ ಶೃಂಗರಿಸಿ ಮಂದಿರದೊಳಗೆ ಬರಮಾಡಿ ಪ್ರದಕ್ಷಿಣೆಗೈದರು. ಅನಂತರ ತುಳುನಾಡಿನ ಸಂಪ್ರದಾಯದಂತೆ ಪೂಜಿಸಿ ಸನ್ನಿಧಿಯ ಪ್ರಸಾದ ನೀಡಿ ಗೋಮಾತೆಯನ್ನು ಗೌರವಿಸಿದರು. ಸಂಜೆ ಶ್ರೀ ಬಾಲಾಜಿ ಸನ್ನಿಧಿ ಯ ಮಹಿಳಾ ಸದಸ್ಯೆಯರಿಂದ ಭಜನೆ, ರಾಮರಾಜ್ ಅವರಿಂದ ಮಹಾಭಾರತ ಪ್ರವಚನ, ಪಲಿಮಾರು ಮಠದ ಟ್ರಸ್ಟಿ ವಾಸು ದೇವ ಎಸ್. ಉಪಾಧ್ಯಾಯ ಅವರ ಪೌರೋ ಹಿತ್ಯದಲ್ಲಿ ಸಾಮೂಹಿಕ ಶ್ರೀ ಶನಿಮಹಾ ಪೂಜೆಯನ್ನು ಆಯೋಜಿಸಲಾಗಿತ್ತು.
ರಾತ್ರಿ ಶ್ರೀನಿವಾಸ ದೇವರಿಗೆ ರಂಗಪೂಜೆ ಮತ್ತು ಪರಿವಾರ ದೇವರಾದ ಶ್ರೀ ಗಣಪತಿ, ಹಿಮಾಲಯದ ಸ್ವಾಮಿಗಳಿಂದ ಪೂಜೆಯನ್ನು ಸ್ವೀಕರಿಸಿದ ಓಂಕಾರ ಇರುವ ಮಾಣಿಕ್ಯ ಲಿಂಗ ಶ್ರೀ ಮಂಗೇಶಿ ಮಹಾ ಮೃತ್ಯುಂಜಯ ರುದ್ರ ದೇವರು, ಶ್ರೀ ಪದ್ಮಾಂಬಿಕೆ, ಶ್ರೀ ಅಂಜನೇ ಯ, ಶ್ರೀ ನಾಗದೇವರು ನವಗ್ರಹ ದೇವರಿಗೆ ವಿಶೇಷ ಪೂಜೆಗಳು ನಡೆದವು.
ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಇಚ್ಛೆ ಮತ್ತು ಸಂಕಲ್ಪ ದೊಂದಿಗೆ ಟ್ರಸ್ಟಿ ಸಚ್ಚಿದಾನಂದ ರಾವ್ ನೇತೃ ತ್ವದಲ್ಲಿ ನ. 26ರ ವರೆಗೆ ರಾತ್ರಿ 7.30ರಿಂದ ತುಳಸಿ ಪೂಜೆ, ಲಕ್ಷ್ಮೀನಾರಾಯಣ ಸಂಕೀರ್ತ ನೆ, ನ. 27ರಂದು ಉತ್ಥಾನ ದ್ವಾದಶಿ ಪ್ರಯುಕ್ತ ಬೆಳಗ್ಗೆ ಮತ್ತು ರಾತ್ರಿ ತುಳಸಿ ಪೂಜೆ, ನಿರಂತರ ಪ್ರವಚನ ಮಾಲಿಕೆಯಲ್ಲಿ ಪ್ರತಿದಿನ ಸಂಜೆ 6ರಿಂದ 7ರ ವರೆಗೆ ಧರೆಗುಡ್ಡೆ ವಿದ್ವಾನ್ ಶ್ರೀàನಿವಾಸ ಭಟ್ ಮತ್ತು ರಾಮರಾಜ್ ದ್ವಿವೇದಿ ಅವರಿಂದ ಮಹಾಭಾರತ ಪ್ರವಚನ ನಡೆಯಲಿದೆ.
ವಿದ್ವಾನ್ ಕುಮಾರ ಸ್ವಾಮಿ ಭಟ್, ಪ್ರಶಾಂತ್ ಭಟ್, ಕೃಷ್ಣಮೂರ್ತಿ ಉಪಾಧ್ಯಾಯ ಮತ್ತಿತರರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಕರಮಚಂದ್ರ ಗೌಡ ಮತ್ತು ಶ್ರೀ ಬಾಲಾಜಿ ಭಜನ ಸನ್ನಿಧಿ ಸದಸ್ಯರು ಸಹಕರಿಸಿದರು. ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳು ನಡೆದವು. ಭಕ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಮೀರಾರೋಡ್ ಪಲಿಮಾರು ಮಠದಲ್ಲಿ ಪ್ರತಿದಿನ ಸಂಜೆ ಭಜನೆ, ಪ್ರತಿ ಶನಿವಾರ ರಂಗಪೂಜೆ, ಪ್ರತಿ ತಿಂಗಳ ಏಕಾದಶಿ ದಿನದಲ್ಲಿ ವಿಷ್ಣು ಸಹಸ್ರನಾಮ, ತುಳಸಿ ಅರ್ಚನೆ, ಹುಣ್ಣಿಮೆ ದಿನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರತಿ ತಿಂಗಳ ಅಮಾವಾಸ್ಯೆ ದಿನ ಸಾರ್ವಜನಿಕ ಶನಿಪೂಜೆ, ಪಂಚಾಂಗಕ್ಕೆ ಅನುಗುಣವಾಗಿ ಗೋಕುಲಾಷ್ಠಮಿ, ಶ್ರೀ ಗಣೇಶ ಚತುರ್ಥಿ, ನವರಾತ್ರಿ, ಕಾರ್ತಿಕ ದೀಪೋತ್ಸವ, ಸುಬ್ರಹ್ಮಣ್ಯ ಷಷ್ಠಿ, ನಾಗರ ಪಂಚಮಿ, ಹನುಮಾನ್ ಜಯಂತಿ, ನವಗೃಹ ಪೂಜೆ, ಶಾಂತಿ, ಉಪನಯನ, ವಿವಾಹ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜೋತಿಷ, ಜಾತಕ ಮಾಡಿಸಲಾಗುವುದು. ನಾಡು – ನುಡಿಯ ವಿಭಿನ್ನ ಕಲಾಪ್ರಕಾರಗಳಿಗೆ ವೇದಿಕೆ ಸಿದ್ಧವಾಗಿದ್ದು, ನಿರ್ದಿಷ್ಟ ಸ್ಥಳದಲ್ಲಿ ಉತ್ತರಕ್ರಿಯೆ, ವೈಕುಂಠ ಸಮಾರಾಧನೆಗೆ ಅವಕಾಶಗಳನ್ನು ಕಲ್ಪಿಸಲಾಗಿದೆ. ತುಳು, ಕನ್ನಡಿಗ ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. –ವಾಸುದೇವ ಎಸ್. ಉಪಾಧ್ಯಾಯ ಟ್ರಸ್ಟಿ , ಪಲಿಮಾರು ಮಠ
ಚಿತ್ರ-ವರದಿ: ರಮೇಶ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.