ದೆಹಲಿ ಕರ್ನಾಟಕ ಸಂಘ: ರಾಗಮಾಲಿಕಾ, ಹಾಸ್ಯ ಸಂಜೆ


Team Udayavani, Oct 31, 2017, 4:48 PM IST

5896.jpg

ಮುಂಬಯಿ: ದೆಹಲಿಯ ಗಂಧರ್ವ ಕಲಾವಿದರು  ರಾಗಮಾಲಿಕಾ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮವನ್ನು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಅ.29ರಂದು ಪ್ರಸ್ತುತಪಡಿಸಿದರು.

ಗಂಧರ್ವ ದೆಹಲಿ ಕರ್ನಾಟಕ ಸಂಘದಿಂದ ಚಿಗುರಿದ ಮೊಳಕೆ, ದೆಹಲಿ ಕರ್ನಾಟಕ ಸಂಘವು ಸುಮಾರು 5-6 ವರ್ಷಗಳಿಂದ ತಾಯಿ ಸ್ಥಾನದಲ್ಲಿ ನಿಂತು ಕಲಾವಿದರನ್ನು ಪೋಷಿಸಿ ಬೆಳೆಸುತ್ತಿದೆ. ಎಷ್ಟೋ ಜನರು ಈ ವೇದಿಕೆಯಿಂದ ಕಲಾವಿದರಾಗಿದ್ದಾರೆ, ಇದಕ್ಕೆ ಮೂಲ ಕಾರಣ ದೆಹಲಿ ಕರ್ನಾಟಕ ಸಂಘ. ನೃತ್ಯತರಬೇತಿ, ಸಂಗೀತ ತರಬೇತಿ, ನಾಟಕ ತರಬೇತಿಯನ್ನು ಕರ್ನಾಟಕ ಸಂಘದಿಂದ ಪಡೆದು ಒಂದೇ ವೇದಿಕೆ ಮೇಲೆ 150ಕ್ಕೂ ಹೆಚ್ಚು ಕಲಾವಿದರು ಹಾಡಿ ಕುಣಿದಿದ್ದಾರೆ. ಖ್ಯಾತ ಕಲಾವಿದರಾದ ಹಂಸಲೇಖ, ಟಿ. ಎಸ್‌. ನಾಗಾಭರಣ, ಬಿ. ಕೆ. ಸುಮಿತ್ರಾ ಇವರೆಲ್ಲರ ತರಬೇತಿ ಪಡೆದು ಈ ಗಂಧರ್ವ ತಂಡ, ಗಾನ ಗಂಧರ್ವ ತಂಡವಾಗಿದೆ. ಇದೇ ರೀತಿಯಲ್ಲಿ ಇನ್ನೂ ಅನೇಕ ತಂಡಗಳು ಈ ವೇದಿಕೆ ಮೂಲಕ ಪ್ರಖ್ಯಾತಿ ಪಡೆಯುತ್ತಿವೆ, ಬೆಳೆಯುತ್ತಿವೆ. ಇದಕ್ಕೆಲ್ಲಾ ಮೂಲ ಕಾರಣ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ ಅವರು ಮತ್ತು ಪದಾಧಿಕಾರಿಗಳು.

ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಈ ದಿನ ನಾವು ಈ ವೇದಿಕೆ ಮೇಲೆ  ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಗಂಧರ್ವ ತಂಡದ ಸಂಚಾಲಕ ರಾಜ್‌ಕುಮಾರ್‌ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ಹಾಸ್ಯ ಕಲಾವಿದರಾದ ಬ್ಯಾಂಕ್‌ ಜನಾರ್ದನ,  ರೇಖಾದಾಸ್‌ ಮತ್ತು  ಎಂ.ಎನ್‌. ಸುರೇಶ್‌ ಅವರು ಹಾಸ್ಯ ಕಾರ್ಯಕ್ರಮ ನೀಡಿ ದೆಹಲಿ ಕನ್ನಡಿಗರನ್ನು ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವ ದೆಹಲಿಯ ಜಿಲ್ಲಾ ನ್ಯಾಯಾಧೀಶರಾದ  ಎ. ಎಸ್‌. ಜಯಚಂದ್ರ ಅವರು ವಹಿಸಿದ್ದರು.

ಭಾರತ ಸರ್ಕಾರದ ಬುಡಕಟ್ಟು ಸಚಿವಾಲಯದಲ್ಲಿ ವ್ಯವಸ್ಥಾಪಕ ನಿರ್ದೇಶಕ ರಾಗಿರುವ ರಮೇಶ್‌ ಕುಮಾರ್‌ ಗಂತ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ರಾಜಧಾನಿಯಲ್ಲಿ ಕನ್ನಡದ ಕಂಪು ಹರಡಲು ಈ ಬಗೆಯ ಕಾರ್ಯಕ್ರಮಗಳು ನಿರಂತರ ಜರಗುತ್ತಿರಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ದೆಹಲಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ರಂಗನಾಥ ಸಿಂಗಾರಿ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಸರವು ಕೃಷ್ಣ ಭಟ್‌, ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ, ಕರ್ನಾಟಕ ಸಂಗೀತ ವಿದ್ವಾಂಸರಾದ ಪಂಡಿತ್‌ ಲೋಕನಾಥ ಶರ್ಮಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪೃಥ್ವೀ ಕಾರಿಂಜೆ ಕಾರ್ಯಕ್ರಮ ನಿರೂಪಿಸಿದರು. ಗಂಧರ್ವ ತಂಡದ ಸಂಚಾಲಕರಾದ  ರಾಜ್‌ಕುಮಾರ್‌ ಸ್ವಾಗತಿಸಿದರು. ಚಿದಂಬರ ಕೋಟೆ ವಂದಿಸಿದರು.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.