ಆರೋಗ್ಯ ಇಲಾಖೆಯಿಂದ 76 ವೈದ್ಯರ ನೇಮಕ
Team Udayavani, Jul 23, 2021, 12:44 PM IST
ವಸಾಯಿ: ಕೊರೊನಾ ಮೂರನೇ ಅಲೆಗೆ ಸಿದ್ಧತೆಗಾಗಿ ಮನಪಾ ಆರೋಗ್ಯ ಇಲಾಖೆಯಲ್ಲಿ 76 ಹೊಸ ವೈದ್ಯರನ್ನು ನೇಮಿಸಲಾಗಿದ್ದು, ಇದರಿಂದ ವೈದ್ಯರ ಸಂಖ್ಯೆ 142ರಿಂದ 218ಕ್ಕೆ ಹೆಚ್ಚಳಗೊಂಡಿದೆ.
ಎರಡನೇ ಅಲೆಯು ಮೊದಲನೆ ಯದಕ್ಕಿಂತ ಭಯಾನಕವಾಗಿತ್ತು. ಅದನ್ನು ತಡೆಗಟ್ಟಲು ಆರೋಗ್ಯ ವ್ಯವಸ್ಥೆ ಪರದಾಡುತ್ತಿತ್ತು. ಈ ಮಧ್ಯೆ 3ನೇ
ಅಲೆಯ ಸಾಧ್ಯತೆಯಿದ್ದು, ವಸಾಯಿ- ವಿರಾರ್ ಮನಪಾ ಆರೋಗ್ಯ ಇಲಾಖೆಯ ವಿವಿಧ ಹುದ್ದೆಗಳ ನೇಮ ಕಾತಿಯನ್ನು ಪ್ರಾರಂಭಿಸಿತು. ಪ್ರಸ್ತುತ 905 ಸಿಬಂದಿಯನ್ನು ಹೊಂದಿದ್ದು, ಇದರಲ್ಲಿ 218 ವೈದ್ಯರು, 5 ಸಾರ್ವಜನಿ ಕ ಆರೋಗ್ಯ ದಾದಿಯರು, 263 ದಾದಿ
ಯರು, 236 ಪ್ರಸೂತಿ ತಜ್ಞರು, 71 ಔಷಧಕಾರರು, 84 ಪ್ರಯೋಗಾಲಯ ಸಹಾಯಕರು ಮತ್ತು 19 ಎಕ್ಸರೆ ಸಹಾ ಯಕರನ್ನು ಒಳಗೊಂಡಿದೆ. ಇದಲ್ಲದೆ ಡಯಾಲಿಸಿಸ್ ಮೇಲ್ವಿಚಾರಕನಂತಹ ವಿವಿಧ ಹುದ್ದೆಗಳನ್ನು ಸೇರಿಸಲಾಗಿದೆ.
ನೂತನ ಸಿಬಂದಿಯಿಂದ ವಿವಿಧೆಡೆ ಸೇವೆ
3ನೇ ಸಂಭಾವ್ಯ ಅಲೆಯನ್ನು ಎದುರಿಸಲು ಕ್ರಮಗಳನ್ನು ಪ್ರಾರಂಭಿ ಸಲಾಗಿದೆ. ಇದಕ್ಕೆ ಹೆಚ್ಚಿನ ಪ್ರಮಾಣದ ಸಿಬಂದಿ ಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಮಾಡಲಾ ಗಿದೆ ಎಂದು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸಂತೋಷ್ ದೇಹಾರ್ಕರ್ ಮಾಹಿತಿ ನೀಡಿದ್ದಾರೆ. ಹೊಸದಾಗಿ ನೇಮಕಗೊಂಡ ಸಿಬಂದಿ
ಯನ್ನು ಹೊಸ ಕೊರೊನಾ ಚಿಕಿತ್ಸಾ ಕೇಂದ್ರ, ಕೊರೊನಾ ಮಕ್ಕಳ ಆಸ್ಪತ್ರೆ, ವ್ಯಾಕ್ಸಿನೇಶನ್ ಅಭಿಯಾನಕ್ಕೆ ಬಳಸಲಾ ಗುವುದು ಎಂದು ಆಯುಕ್ತ ಸಂತೋಷ್ ದೇಹಾರ್ಕರ್ ತಿಳಿಸಿದ್ದಾರೆ.
ಮೂರನೇ ಸಂಭಾವ್ಯ ಅಲೆ ಎದುರಿಸಲು ಕ್ರಮ
ಎನ್‌ಎಂಸಿಯಲ್ಲಿ 21 ನಾಗರಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಸಾಯಿಯಲ್ಲಿ ಸರ್ ಡಿಎಂ ಪೆಟಿಟ್ ಆಸ್ಪತ್ರೆ ಮತ್ತು ನಲಸೋಪರದ ತುಲಿಂಜ್ ಆಸ್ಪತ್ರೆ ಹಾಗೂ ಎರಡು ಶಿಶುಪಾಲನ ಕೇಂದ್ರಗಳಿವೆ. ಕೊರೊನಾಗೆ ಚಂದನ್ಸರ್ ಆಸ್ಪತ್ರೆ, ವರುಣ್ ಕೈಗಾರಿಕಾ ಕೋವಿಡ್ ಕೇಂದ್ರ ಗಳು, ಅಗರ್ವಾಲ್ ಕೇಂದ್ರಗಳನ್ನು ನಿರ್ಮಿಸಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಆರೋಗ್ಯ ಇಲಾಖೆ ಯಲ್ಲಿ ಹೆಚ್ಚಿನ ವೈದ್ಯರು ಮತ್ತು ದಾದಿಯರನ್ನು ನೇಮಕ ಮಾಡಲು ಮನಪಾ ಎಪ್ರಿಲ್‌ನಲ್ಲಿ ನಿರ್ಧರಿಸಿತು. ಅದನ್ನು ಗಮನದಲ್ಲಿಟ್ಟುಕೊಂಡು ನೇರ ಸಂದರ್ಶನಗಳ ಮೂಲಕ ಪೋಸ್ಟ್ ಗಳನ್ನು ಭರ್ತಿ ಮಾಡಲಾಯಿತು.
ಒಪ್ಪಂದದ ಮೇಲೆ ನೇಮಕ
ಮನಪಾ ಪ್ರಸ್ತುತ ಎಂಬಿಬಿಎಸ್ ವೈದ್ಯರಿಗೆ ಮಾಸಿಕ 75,000 ರೂ., ಬಿಎಎಂಎಸ್ ವೈದ್ಯರಿಗೆ 50,000 ರೂ. ಮತ್ತು ಬಿಎಚ್‌ಎಂಎಸ್ ವೈದ್ಯ ರಿಗೆ 40,000 ರೂ., ಹೊಸದಾಗಿ ನೇಮಕಗೊಂಡ ವೈದ್ಯರು ಮತ್ತು ದಾದಿಯರಿಗೂ ಅದೇ ವೇತನ ಪ್ರಮಾಣದಲ್ಲಿ ಪಾವತಿಸಲಾಗುವುದು. ಹೊಸದಾಗಿ ನೇಮಕಗೊಂಡ ವೈದ್ಯರು ಮತ್ತು ಇತರ ಸಿಬಂದಿಯನ್ನು 11 ತಿಂಗಳ ಒಪ್ಪಂದದ ಮೇಲೆ ನೇಮಕ ಮಾಡಲಾಗಿದೆ. ಈ ಒಪ್ಪಂದವನ್ನು ನಿಯಮಿತವಾಗಿ ವಿಸ್ತರಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.