ದೇವಾಡಿಗ ಸಂಘ ಅಸಲ್ಫಾ-ಘಾಟ್ಕೋಪರ್ ಸಮಿತಿ :ಅರಸಿನ ಕುಂಕುಮ
Team Udayavani, Mar 15, 2019, 2:06 PM IST
ಮುಂಬಯಿ: ಮಹಿಳೆಯರಿಗೆ ಅರಸಿನ ಕುಂಕುಮ ಸೌಭಾಗ್ಯದ ಸಂಕೇತವಾಗಿದೆ. ಅಂತೆಯೇ ಆರೋಗ್ಯವನ್ನು ಕಾಪಾಡು ವಲ್ಲಿಯೂ ಮಹತ್ವವುಳ್ಳವರು. ಅರಸಿನ ಕುಂಕುಮದಂತಹ ಕಾರ್ಯಕ್ರಮ ಗಳಲ್ಲಿ ಮಹಿಳೆಯರು ತಪ್ಪದೆ ಭಾಗವ ಹಿಸಬೇಕು. ಅಸಲ್ಫಾ-ಘಾಟ್‌ಕೋಪರ್ ಸಮಿತಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದಲ್ಲದೆ, ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಸಮಾಜದ ಮಹಿಳೆಯರು ಮತ್ತು ಯುವ ಜನಾಂಗ ಸಂಘದ ಎಲ್ಲ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದು ನಮಗೆಲ್ಲಾ ಅಭಿಮಾನದ ವಿಷಯವಾಗಿದೆ ಎಂದು ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಆರ್. ಮೊಲಿ ಅವರು ಅಭಿಪ್ರಾಯಿಸಿದರು.
ಇತ್ತೀಚೆಗೆ ಘಾಟ್‌ಕೋಪರ್ ಪಶ್ಚಿಮದ ಅಸಲ್ಫಾದ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ಮಂದಿರದ ಸಭಾಗೃಹದಲ್ಲಿ ನಡೆದ ದೇವಾಡಿಗ ಸಂಘ ಮುಂಬಯಿ ಅಸಲ್ಫಾ-ಘಾಟ್‌ಕೋಪರ್ ಸಮಿತಿಯ ಮಹಿಳಾ ವಿಭಾಗದ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಎಲ್ಲರಿಗೂ ಶುಭ ಹಾರೈಸಿದರು.
ಸಂಘದ ಮಾಜಿ ಅಧ್ಯಕ್ಷ ಕೆ. ಕೆ. ಮೋಹನ್‌ದಾಸ್, ಗೌರವ ಕಾರ್ಯದರ್ಶಿ ವಿಶ್ವನಾಥ ದೇವಾಡಿಗ ಅವರು ಸಂಘದ ಯೋಜನೆಗಳನ್ನು ವಿವರಿಸಿ, ಈ ಯೋಜನೆಗಳು ಸಮಾಜ ಬಾಂಧವರ ಮನೆ-ಮನಗಳನ್ನು ತಲುಪುವಲ್ಲಿ ಪ್ರಾದೇಶಿಕ ಸಮಿತಿಗಳು ಕಾರ್ಯಪ್ರವೃತ್ತವಾಗಲಿ ಎಂದು ನುಡಿದರು.
ಪ್ರಾರಂಭದಲ್ಲಿ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಬಿ. ದೇವಾಡಿಗ ಸ್ವಾಗತಿಸಿ ಸಮಿತಿಯ ಮಹಿಳೆಯರಿಗಾಗಿ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಆನಂದ ದೇವಾಡಿಗ, ಕೃಷ್ಣ ದೇವಾಡಿಗ, ಕೇಶವ ದೇವಾಡಿಗ, ಭಾಸ್ಕರ ದೇವಾಡಿಗ, ಸದಾಶಿವ ಶೇರಿಗಾರ್, ಪ್ರಮೀಳಾ ಪ್ರವೀಣ್ ದೇವಾಡಿಗ, ರಂಜನಿ ಆರ್. ಮೊಲಿ, ಪ್ರೇಮಾ ಮೋಹನ್‌ನಾಸ್, ಜಲಜಾ ಆನಂದ ದೇವಾಡಿಗ, ಪ್ರಮೀಳಾ ಶೇರಿಗಾರ್, ವನಿತಾ ಭಾಸ್ಕರ ದೇವಾಡಿಗ, ಶಕುಂತಳಾ ಶೇರಿಗಾರ್, ರೇಖಾ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಜನಿ ಮೊಲಿ ಅವರು ಅರಸಿನ ಕುಂಕುಮದ ಮಹತ್ವವವನ್ನು ತಿಳಿಸಿದರು.
ಯುವ ವಿಭಾಗದ ಕಾರ್ಯಾಧ್ಯಕ್ಷ ರಾಕೇಶ್ ಬಿ. ದೇವಾಡಿಗ ಮತ್ತು ಹರ್ಷ ದೇವಾಡಿಗ ಅವರ ನೇತೃತ್ವದಲ್ಲಿ ಯುವ ವಿಭಾಗದವರಿಂದ ಮಹಿಳೆಯರ ಶೋಷಣೆ, ಅವರ ಮೇಲಿನ ದೌರ್ಜನ್ಯದ ಕುರಿತು ಕಿರು ನಾಟಕ ಪ್ರದರ್ಶನಗೊಂಡಿತು. ಅತಿಶ್ ದೇವಾಡಿಗ ಅವರಿಂದ ಹುಲಿವೇಷ ಕುಣಿತ ನಡೆಯಿತು. ಮಹಿಳಾ ವಿಭಾದವರಿಂದ ವಿವಿಧ ಸ್ಪರ್ಧೆಗಳು ನಡೆಯಿತು. ಸೇರಿದ ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು.
ಮೋಹನ್‌ದಾಸ್ ಗುಜರನ್ ಕಾರ್ಯಕ್ರಮ ನಿರ್ವ ಹಿಸಿ ವಂದಿಸಿದರು. ಸುಜಾತಾ ಹರೀಶ್ ದೇವಾಡಿಗ ಪ್ರಾರ್ಥನೆಗೈದರು. ಇತ್ತೀಚೆಗೆ ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗದ ಮತ್ತು ಯುವ ವಿಭಾಗದ ಪದಾಧಿ ಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.