ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ


Team Udayavani, Feb 11, 2021, 7:07 PM IST

Devadiga Sangha Mumbai

ಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ದಾದರ್‌ನ ದೇವಾಡಿಗ ಸೆಂಟರ್‌ನಲ್ಲಿ ಜ. 24ರಂದು ನಡೆಯಿತು.

ವನಿತಾ ರವಿ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಆರ್‌. ಮೊಲಿ, ಉಪ ಕಾರ್ಯಾಧ್ಯಕ್ಷೆ ಜಯಂತಿ ಎಂ. ದೇವಾಡಿಗ, ಪೂರ್ಣಿಮಾ ಡಿ. ದೇವಾಡಿಗ, ಕಾರ್ಯದರ್ಶಿ ಪ್ರಮೀಳಾ ವಿ. ಶೇರಿಗಾರ್‌, ಸಲಹೆಗಾರ್ತಿ ಜಯಂತಿ ಆರ್‌. ಮೊಲಿ ಹಾಗೂ ಸಂಘದ ಕಾರ್ಯಕಾರಿ ಸಮಿತಿಯ ಜತೆ ಕೋಶಾಧಿಕಾರಿ ಸುರೇಖಾ ಎಚ್‌. ದೇವಾಡಿಗ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಗೋಪಾಲ್‌ ಮೊಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಕರ ಸಂಕ್ರಾಂತಿ ಮತ್ತು ರಥಸಪ್ತಮಿ ಮಧ್ಯೆ ಆಚರಿಸುವ ಅರಸಿನ ಕುಂಕುಮದ ಬಗ್ಗೆ ಮಾಹಿತಿಯನ್ನು ಜಯಂತಿ ದೇವಾಡಿಗ ಮತ್ತು ಸುರೇಖಾ ಮೊಲಿ ವಿವರಿಸಿದರು. ಕಾರ್ಯಾಧ್ಯಕ್ಷೆ ರಂಜನಿ ಮೊಲಿ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಸಾವಿತ್ರಿಬಾಯಿ ಫುಲೆಯವರು ಮಹಿಳಾ ಸಂಘಟನೆಯನ್ನು ರೂಪಿಸಿ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಲು ಮಹಿಳೆಯರನ್ನು ಪ್ರೇರೇಪಿಸಿದರು. ನಾವು ಕೂಡ ನಮ್ಮ ಸಂಘದ ಅಭಿವೃದ್ಧಿಗಾಗಿ ಸಹಕರಿಸಬೇಕು ಎಂದು ತಿಳಿಸಿದರು.

ಏಕನಾಥೇಶ್ವರ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಸದಸ್ಯರು ಹಾಗೂ ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಎಚ್‌. ಮೋಹನ್‌ದಾಸ್‌ ಅವರು ಬೇಟಿ ಬಚಾವ್‌ ಬೇಟಿ ಪಡಾವ್‌ ಹಾಗೂ ವಿಶ್ವ ಹೆಣ್ಣು ಮಕ್ಕಳ ದಿನದ ಮಹತ್ವವನ್ನು ವಿವರಿಸಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮುಖ್ಯ ಸಲಹೆಗಳನ್ನು ನೀಡಿದರು.

ಆಗಸ್ಟ್‌ನಲ್ಲಿ ನಡೆದ ಆಟಿಡೊಂಜಿ ದಿನಾಚರಣೆಯಲ್ಲಿ ಅಡುಗೆಯನ್ನು ಪ್ರಸ್ತುತಪಡಿಸಿದ ಲಕ್ಷ್ಮೀ ದೇವಾಡಿಗ, ರುಕ್ಮಿಣಿ ದೇವಾಡಿಗ, ಶಕುಂತಳಾ ಶೇರಿಗಾರ್‌, ಅಮಿತಾ ದೇವಾಡಿಗ, ಕುಶಲಾಕ್ಷಿ ¾à ದೇವಾಡಿಗ, ಚಂದ್ರಕಲಾ ದೇವಾಡಿಗ ಅವರನ್ನು ಗೌರವಿಸಲಾಯಿತು. ಸೆಲ್ಯೂಟ್‌ ತಿರಂಗ ಕರ್ನಾಟಕ ಸೆಲ್‌ ಮಹಾರಾಷ್ಟ್ರ ಸಂಸ್ಥೆಗೆ ಆಯ್ಕೆಯಾದ ಪ್ರಭಾವತಿ ದೇವಾಡಿಗ, ಪೂರ್ಣಿಮಾ ದೇವಾಡಿಗ, ಜಯಂತಿ ದೇವಾಡಿಗ, ಸುರೇಖಾ ದೇವಾಡಿಗ, ಜಯಂತಿ ಮೊಲಿ, ರಮೇಶ್‌ ದೇವಾಡಿಗರನ್ನು ಸಮ್ಮಾನಿಸಲಾಯಿತು.

ಜಯಂತಿ ದೇವಾಡಿಗ, ಪೂರ್ಣಿಮಾ ದೇವಾಡಿಗ ಅವರು ಸಾಂಸ್ಕೃತಿಕ ಆಟಗಳನ್ನು ನಡೆಸಿಕೊಟ್ಟರು. ಮಹಿಳಾ ವಿಭಾಗದ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಈ ಸಂದರ್ಭದಲ್ಲಿ ಲಕ್ಷ್ಮೀ ದೇವಾಡಿಗ, ಇಂದುಮತಿ ದೇವಾಡಿಗ, ಗೀತಾ ದೇವಾಡಿಗ, ಸರೋಜಿನಿ ದೇವಾಡಿಗ, ರಮೇಶ್‌ ದೇವಾಡಿಗ ಅವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು. ಲಘು ಉಪಾಹಾರದ ವ್ಯವಸ್ಥೆಯನ್ನು ಕಾರ್ಯದರ್ಶಿ ಪ್ರಮೀಳಾ ವಿ. ಶೇರಿಗಾರ್‌ ಅವರು ಆಯೋಜಿಸಿದರು

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್‌ ಶೆಟ್ಟಿ, ಭಾಂಡೂಪ್‌ ವಲಯದ ವೆಂಕಟೇಶ್‌ ದೇವಾಡಿಗ, ರಾಜೇಶ್‌ ದೇವಾಡಿಗ, ಸಂಘದ ಸ್ಥಳೀಯ ಸಮನ್ವಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ದೇವಾಡಿಗ, ಉಷಾ ದೇವಾಡಿಗ, ಸುಜಯಾ ದೇವಾಡಿಗ, ಲತಾ ಮೊಲಿ, ಕುಸುಮಾ ದೇವಾಡಿಗ, ರೇಖಾ ದೇವಾಡಿಗ, ವಿಜಯಲಕ್ಷ್ಮೀ ದೇವಾಡಿಗ ಅವರು ಉಪಸ್ಥಿತರಿದ್ದರು. ಕುಸುಮಾ ದೇವಾಡಿಗ ಪ್ರಾರ್ಥನೆಗೈದರು. ಕಾರ್ಯದರ್ಶಿ ಪ್ರಮೀಳಾ ವಿ. ಶೇರಿಗಾರ್‌ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ನಿತೇಶ್‌ ದೇವಾಡಿಗ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಟಾಪ್ ನ್ಯೂಸ್

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.