ದೇವಾಡಿಗ ಸಂಘ ಮುಂಬಯಿ: ವಾರ್ಷಿಕ ವಿಹಾರ ಕೂಟ
Team Udayavani, Nov 1, 2018, 4:47 PM IST
ಮುಂಬಯಿ: ದೇವಾಡಿಗ ಸಂಘ ಮುಂಬಯಿ ವತಿಯಿಂದ ವಿವಿಧ ಪ್ರಾದೇಶಿಕ ಸಮನ್ವಯ ಸಮಿತಿಗಳ ಕೂಡುವಿಕೆಯಲ್ಲಿ ವಾರ್ಷಿಕ ವಿಹಾರಕೂಟವು ಗೋವಾದಲ್ಲಿ ಅ. 26 ರಿಂದ ಅ. 28ರ ವರೆಗೆ ನಡೆಯಿತು.
ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಸಂಯೋಜನೆಯಲ್ಲಿ ಸ್ನೇಹ ಮಿಲನದೊಂದಿಗೆ ವಿಹಾರಕೂಟಲು ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮವು ಸಿಟಿ ಸಮಿತಿಯ ಕಾರ್ಯಾಧ್ಯಕ್ಷರಾದ ಹೇಮನಾಥ್ ದೇವಾಡಿಗ ಹಾಗೂ ಸಮಿತಿಯ ಯುವ ಘಟಕದ ಕಾರ್ಯದರ್ಶಿ ನಿತೀಶ್ ದೇವಾಡಿಗ ಅವರ ನೇತೃತ್ವದಲ್ಲಿ ನಡೆಯಿತು.
ವಿಹಾರಕೂಟದಲ್ಲಿ ಮೊದಲ ದಿನ ಗೋವಾದಲ್ಲಿನ ಇತಿಹಾಸ ಪ್ರಸಿದ್ಧ ಮಾರದೊಳ್ ಮಾಹಲಸಾ ನಾರಾಯಣಿ, ಶಾಂತಾದುರ್ಗಾ, ಮಂಗೇಶಿ ದೇವಸ್ಥಾನಗಳಲ್ಲಿ ದೇವಿ ದರ್ಶನ ಪಡೆದು ಸಂಜೆ ದೋಣಿ ವಿಹಾರದಲ್ಲಿ ಭಾಗವಹಿಸಲಾಯಿತು. ಮರುದಿನ ಗೋವಾ ದಲ್ಲಿನ ಆಕರ್ಷಣೀಯ ಆಘುವಾ ಕೋಟೆ, ಕಾಲಂಗೋಟು., ಅಂಜುನ್, ಮಿರಾಮಾರು, ವಾಗತುರು ಬೀಚ್‌ಗೆ ತೆರಳಲಾಯಿತು.
ಸಂಘದ ಅಧ್ಯಕ್ಷರಾದ ರವಿ ಎಸ್. ದೇವಾಡಿಗ, ಮಾಜಿ ಅಧ್ಯಕ್ಷರಾದ ಗೋಪಾಲ್ ಎಂ. ಮೊಲಿ, ಹಿರಿಯಡ್ಕ ಮೋಹನಾªಸ್ , ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಬಿ. ದೇವಾಡಿಗ, ಜತೆ ಕಾರ್ಯದರ್ಶಿ ಮಾಲತಿ ಜೆ. ಮೊಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಆರ್. ಮೊಲಿ, ಕಾರ್ಯದರ್ಶಿ ಪೂರ್ಣಿಮಾ ಡಿ. ದೇವಾಡಿಗ, ಜತೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್, ನ್ಪೋರ್ಟ್ಸ್ ಕ್ಲಬ್‌ನ ಸುರೇಶ್ ಆರ್. ದೇವಾಡಿಗ, ಸಿಟಿ ವಲಯ ಮಹಿಳಾ ಕಾರ್ಯಾಧ್ಯಕ್ಷೆ ಗೀತಾ ಎಲ್. ದೇವಾಡಿಗ, ಕಾರ್ಯದರ್ಶಿ ಸುಜಯಾ ವಿ. ದೇವಾಡಿಗ, ನವಿ ಮುಂಬಯಿಯ ವಲಯಾಧ್ಯಕ್ಷ ಆನಂದ್ ಕೆ. ಶೇರಿಗಾರ್, ಮಹಿಳಾ ವಿಭಾಗದ ಕಾರ್ಯದರ್ಶಿ ಲತಾ ಎ. ಶೇರಿಗಾರ್, ಮೀರಾರೋಡ್ ವಲಯಾಧ್ಯಕ್ಷ ನಾಗರಾಜ್ ದೇವಾಡಿಗ, ಕಾರ್ಯದರ್ಶಿ ಪ್ರಶಾಂತ್ ದೇವಾಡಿಗ, ಯುವ ವಿಭಾಗದ ಮಾಜಿ ಕಾರ್ಯಾದ್ಯಕ್ಷ ದೀಕ್ಷಿತ್ ದೇವಾಡಿಗ ಅವರು ಉಪಸ್ಥಿತರಿದ್ದರು.
ಅಲ್ಲದೆ ದೇವಾಡಿಗ ಸಂಘ ಮುಂಬಯಿ ಇದರ ಡೊಂಬಿವಲಿ, ಥಾಣೆ, ಬೊರಿವಲಿ, ಚೆಂಬೂರು, ಮೀರಾರೋಡ್, ನವಿ ಮುಂಬಯಿ, ಜೋಗೇಶ್ವರಿ, ಆಸಲ್ಫಾ, ಸಿಟಿ ಮತ್ತು ಭಾಂಡೂಪ್ ಪ್ರಾದೇಶಿಕ ಸಮಿತಿಗಳ ಸದ್ಯಸರು, ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.