ದೇವಾಡಿಗ ಸಂಘ ಮುಂಬಯಿ ಥಾಣೆ:ಪ್ರತಿಭಾ ಪುರಸ್ಕಾರ
Team Udayavani, Sep 12, 2017, 2:11 PM IST
ಥಾಣೆ: ದೇವಾಡಿಗ ಸಂಘ ಮುಂಬಯಿ ಇದರ ಥಾಣೆ ಪ್ರಾದೇಶಿಕ ಸಮನ್ವಯ ಸಮಿತಿಯ ವತಿಯಿಂದ ಥಾಣೆ ಬಂಟ್ಸ್ ಅಸೋಸಿಯೇಶನ್ ಸಭಾಗೃಹದಲ್ಲಿ ಆಟಿಡೊಂಜಿ ಕೂಟ ಮತ್ತು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಸಮಿತಿಯಿ ಕಾರ್ಯಾಧ್ಯಕ್ಷ ಅಶೋಕ್ ದೇವಾಡಿಗ ಇವರ ಅಧ್ಯಕ್ಷತೆಯಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಾ| ರಾಜು ದೇವಾಡಿಗ, ಪ್ರವೀಣ್ ಸಾಲ್ಯಾನ್, ಕಾರ್ಯದರ್ಶಿ ಮಂಜುನಾಥ್ ದೇವಾಡಿಗ, ಕೋಶಾಧಿಕಾರಿ ಯಾದವ ದೇವಾಡಿಗ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಗೋಪಾಲ ಶೇರಿಗಾರ್ ಅವರು ಪ್ರಾರ್ಥನೆಗೈದರು. ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್. ದೇವಾಡಿಗರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ನೆರೆದಿದ್ದನ್ನು ಕಂಡು ಸಂತೋಷವಾಗುತ್ತಿದೆ. ಸಮಾಜ ಬಾಂಧವರು ನೂತನ ಸದಸ್ಯತನ ನೋಂದಾವಣೆ ಮತ್ತು ವೈದ್ಯಕೀಯ ನಿಧಿ ಸಂಗ್ರಹದ ಬಗ್ಗೆ ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದೊಂದಿಗೆ ಸುಸಂಸ್ಕೃತರಾಗಿ ಬೆಳೆಯಬೇಕು ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.
ಜೊತೆ ಕಾರ್ಯದರ್ಶಿ ಗಣೇಶ ಶೇರಿಗಾರ, ಮಾಲತಿ ಮೊಲಿ, ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ ಮೊಲಿ, ಜೊತೆ ಕಾರ್ಯದರ್ಶಿ ರಂಜಿನಿ ಮೊಲಿ, ಸುರೇಖಾ ದೇವಾಡಿಗ, ಥಾಣೆ ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಮಮತಾ ದೇವಾಡಿಗ, ಉಪ ಕಾರ್ಯಾಧ್ಯಕ್ಷೆ ಕವಿತಾ ದೇವಾಡಿಗ, ಕಾರ್ಯದರ್ಶಿ ಉಷಾ ದೇವಾಡಿಗ, ಜಯಶ್ರೀ ಅಶೋಕ ದೇವಾಡಿಗ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಕಾರ್ಯಾಧ್ಯಕ್ಷೆ ಮಮತಾ ದೇವಾಡಿಗ ಅವರು ಸ್ವಾಗತಿಸಿದರು. ಆನಂದ ದೇವಾಡಿಗ ಅವರು, ಥಾಣೆ ವಲಯದ ಪ್ರತಿಭಾವಂತ ವಿದ್ಯಾರ್ಥಿಳಾದ ಕು| ಮೈತ್ರಿ ದೇವಾಡಿಗ , ಕು| ಕಾವ್ಯಶ್ರೀ ದೇವಾಡಿಗ, ಮಾ| ಓಜಸ್ ದೇವಾಡಿಗ, ಕು| ರಿದ್ದಿ ದೇವಾಡಿಗ, ಕು| ಯಶಿಕಾ ದೇವಾಡಿಗ, ಮಾ| ಜಿತು ದೇವಾಡಿಗ ಅವರ ನಗದು ಬಹುಮಾನ ಪ್ರಾಯೋಜಕರಾದ ಜಗನ್ನಾಥ ದೇವಾಡಿಗ, ಸುರೇಶ್ ರಾವ್, ಜಯ ದೇವಾಡಿಗ, ಅಶೋಕ್ ದೇವಾಡಿಗ, ಎ. ಆರ್. ಆರೆಬೈಲ್ ಹಾಗೂ ಗೋಪಾಲ ಶೇರಿಗಾರ್ ಅವರನ್ನು ಸಮ್ಮಾನಿಸಿದರು. ಠಾಣೆ ವಲಯದ ಯುವ ವಿಭಾಗದ ಶ್ರದ್ಧಾ ಆನಂದ ದೇವಾಡಿಗ, ಡಾ| ರಶ್ಮಿ ರಾಜು ದೇವಾಡಿಗ, ಶ್ರೀಶಾಂತ್ ಶ್ರೀಧರ ದೇವಾಡಿಗ, ನಿತೇಶ್ ನಾಗೇಶ ದೇವಾಡಿಗ, ವಿಶ್ವನಾಥ್ ದೇವಾಡಿಗ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣ ವೃತ್ತಿ ಮಾರ್ಗದರ್ಶನದ ಬಗ್ಗೆ ಕೆಲವು ಮಾಹಿತಿಯನ್ನು ನೀಡಿದರು.
ದೇವಾಡಿಗ ಸಂಘದ 2016-2019 ನೇ ಸಾಲಿನ ನೂತನ ಅಧ್ಯಕ್ಷ ರವಿ ಎಸ್. ದೇವಾಡಿಗ ಹಾಗೂ ಜಯಂತಿ ಮೊಲಿ ಇವರನ್ನು ಪುಷ್ಪಗುತ್ಛವನ್ನಿತ್ತು, ಶಾಲು ಹೊದಿಸಿ ಗೌರವಿಸಲಾಯಿತು. ಕಳೆದ 12 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಂಗಳಾ ಶ್ರೀನಿವಾಸ ಶೇರಿಗಾರ್ ಅವರನ್ನು ಅಭಿನಂದಿಸಲಾಯಿತು. ನವಿಮುಂಬಯಿ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಪಿ. ವಿ. ಎಸ್. ಮೊಲಿ, ಭಾಂಡೂಪ್ ಮತ್ತು ಸಿಟಿ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರಾದ ವಿಶ್ವನಾಥ್ ದೇವಾಡಿಗ, ಹೇಮನಾಥ ದೇವಾಡಿಗ ಹಾಗೂ ಮಾಲತಿ ಮೊಲಿ, ಜಯಂತಿ ಮೊಲಿ, ರಂಜನಿ ಮೊಲಿ, ಸುರೇಖಾ ದೇವಾಡಿಗ, ನಿತೇಶ್ ದೇವಾಡಿಗ,ಯುವ ವಿಭಾಗದ ಮಾರ್ಗದರ್ಶಕ ನರೇಶ ದೇವಾಡಿಗ ಇವರು ಮಾತನಾಡಿದರು.
ಆಟಿ ತಿಂಗಳ ವಿಶೇಷತೆ, ಆಟಿ ಕಳಂಜ ಇನ್ನಿತರ ವಿಷಯಗಳ ಬಗ್ಗೆ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೀಳಾ ಶೇರಿಗಾರ್ ಮಾಹಿತಿ ನೀಡಿದರು. ವಿವಿಧ ಸ್ಪರ್ಧೆಗಳ ಬಹುಮಾನದ ಪ್ರಾಯೋಜಕತ್ವವನ್ನು ಮಮತಾ ದೇವಾಡಿಗ ವಹಿಸಿದ್ದರು. ಸುಜಾತಾ ಶೇರಿಗಾರ್ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದರು. ಮಾ| ಶ್ರೀಧಿತಾ ದೇವಾಡಿಗ, ಕು| ಪ್ರಾಚಿ ದೇವಾಡಿಗ, ಕು| ಗೌರವಿ ಶೇರಿಗಾರ್, ಗೀತಾ ದೇವಾಡಿಗ, ನಯನಾ ದೇವಾಡಿಗ, ಕವಿತಾ ದೇವಾಡಿಗ, ರಂಜಿನಿ ಮೊಲಿ ಇವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು.
ಆಟಿ ತಿಂಗಳ ತಿಂಡಿ-ತಿನಸುಗಳನ್ನು ತಯಾರಿಸಿ ಪ್ರದರ್ಶಿಸಿದ ಸದಸ್ಯೆಯರನ್ನು ಗೌರವಿಸಲಾಯಿತು. ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು. ಕಾರ್ಯಕ್ರಮವನ್ನು ಪ್ರಮಿಳಾ ಶೇರಿಗಾರ್ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸೀಮಾ ದೇವಾಡಿಗ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.