ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಆಟಿಡೊಂಜಿ ದಿನ


Team Udayavani, Jul 28, 2017, 4:14 PM IST

25-Mum02a.jpg

ಮುಂಬಯಿ: ದಾದರ್‌ ಪೂರ್ವದ ದೇವಾಡಿಗ ಸೆಂಟರ್‌ನಲ್ಲಿ ದೇವಾಡಿಗ ಸಂಘದ ಮಹಿಳಾ ವಿಭಾಗದ ವತಿಯಿದ ಆಟಿಡೊಂಜಿ ದಿನ  ಕಾರ್ಯಕ್ರಮವು ಜು.  22ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. 

ಸಂಘದ ಅಧ್ಯಕ್ಷ  ರವಿ ಎಸ್‌. ದೇವಾಡಿಗ ಮಾತನಾಡಿ, ಜಾತಿ ಬಾಂಧವರ ಸದಸ್ಯತನದ ಗಣತಿ ಮತ್ತು ವೈದ್ಯಕೀಯ ನಿಧಿ ಸಂಗ್ರಹದ ಬಗ್ಗೆ ಸಹಕಾರ ನೀಡುವಂತೆ ಸಂಘದ ಸದಸ್ಯರಲ್ಲಿ ವಿನಂತಿಸಿ, ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆ ಯರು ನೆರೆದಿದ್ದನ್ನು ಕಂಡು ಸಂತೋಷ ವಾಗುತ್ತಿದೆ ಎಂದರು. ಕಾರ್ಯಕ್ರಮವು  ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ದೇವಾಡಿಗ   ಮತ್ತು ಜತೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್‌ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಡಿತು.

ಮಹಿಳಾ ಕಾರ್ಯಾಧ್ಯಕ್ಷೆ  ಜಯಂತಿ  ರಘು ಮೊಲಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಕಾರಿ ಸಮಿತಿಯ ಸದಸ್ಯರು, ಉಪ ಸಮಿತಿಯ ಸದಸ್ಯರು, ಎಲ್ಲಾ ಸಮನ್ವಯ ಸಮಿತಿ ಪದಾಧಿಕಾರಿಗಳು, ಯುವ ವಿಭಾಗದವರು  ಹಾಗೂ ಮಹಿಳಾ ಸದಸ್ಯರನ್ನು ಸ್ವಾಗತಿಸಿ, ಸಂಘದ ಎಲ್ಲಾ ಕಾರ್ಯಗಳಲ್ಲಿ  ತಮ್ಮನ್ನು ತೊಡಗಿಸಿ ಕೊಳ್ಳುವಂತೆ ಸದಸ್ಯೆಯರಿಗೆ  ವಿನಂತಿಸಿ ದರು.

 ಊರಿನಲ್ಲಿ  ಆಟಿ ತಿಂಗಳಲ್ಲಿ ಜನರು ಕೆಲಸಕಾರ್ಯ, ಆಚರಿಸುವ ಹಬ್ಬ
ಗಳ, ಆಟಿ ಕಳಂಜ ಇತ್ಯಾದಿಗಳ ಮಾಹಿತಿ ಯನ್ನು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ  ರಂಜಿನಿ ಆರ್‌. ಮೊಲಿ ನೀಡಿದರು. ಮಹಿಳಾ ಮಾಜಿ ಕಾರ್ಯಾಧ್ಯಕ್ಷೆ  ಪ್ರಫುಲ್ಲಾ ವಾಸು ದೇವಾಡಿಗರು ಪ್ರತಿಭಾ ಸ್ಪರ್ಧೆ ಏರ್ಪಡಿಸಿದ್ದು, ಮಾತ್ರವಲ್ಲದೆ ಅದರ ಬಹುಮಾನಗಳ ಪ್ರಾಯೋಜಕತ್ವ ವಹಿಸಿದರು.

ಆಯಾ ವಸ್ತುಗಳ ಬ್ರಾಂಡ್‌  ಹೆಸರಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸುಜಾತಾ  ಆರ್‌. ಶೇರಿಗಾರ್‌, ದ್ವಿತೀಯ ಬಹುಮಾನ ಪ್ರಭಾ ಆರ್‌. ದೇವಾಡಿಗ ಹಾಗೂ ತೃತೀಯ ಬಹುಮಾನ ಸೀಮಾ ಆರ್‌. ದೇವಾಡಿಗ ಅವರು ಪಡೆದರೆ, ಟ್ಯಾಗ್‌ ದ ಲೈನ್‌ ಸ್ಪರ್ಧೆಯಲ್ಲಿ ಮೊದಲನೆಯದಾಗಿ ಕು| ಐಶ್ವರ್ಯ ಆರ್‌. ಮೊಲಿ, ದ್ವಿತೀಯ ಕು|  ಶ್ರುತಿ ದೇವಾಡಿಗ ಹಾಗೂ ತೃತೀಯ ಕು| ಅಪೇಕ್ಷಾ ದೇವಾಡಿಗ ಅವರು ಬಹುಮಾನ ಪಡೆದರು. ಸಂಘದ ಜತೆ ಕಾರ್ಯದರ್ಶಿ ಮಾಲತಿ ಜೆ.  ಮೊಲಿ ಅವರು ಸಹಕರಿಸಿದರು. ತುಳುನಾಡಿನ ಬಗ್ಗೆ ಪ್ರತಿಭಾ ಸ್ಪರ್ಧೆಯನ್ನು ಜಯಂತಿ ಆರ್‌. ಮೊಲಿ  ಪ್ರಾಯೋಜಿಸಿದರು. ಲಕ್ಷ್ಮೀ ಜಿ. ದೇವಾಡಿಗ, ಕು|  ಶೇಫಾಲೀ ದೇವಾಡಿಗ,  ಲೋಲಾಕ್ಷಿ ದೇವಾಡಿಗ ಮತ್ತು ಸರೋಜಿನಿ ದೇವಾಡಿಗ ತುಳು ಜಾನಪದ ಮತ್ತು ಭಾವಗೀತೆಗಳನ್ನು ಹಾಡಿದರು.

ಮಹಿಳಾ ಸದಸ್ಯೆಯರು  ಆಟಿ ತಿಂಗಳ ವ್ಯಂಜನಗಳನ್ನು ಪ್ರದರ್ಶಿಸಿ ತಮ್ಮ ಪಾಕ ವಿಶೇಷತೆಯನ್ನು ಮೆರೆದಿದ್ದು,  ಎಲ್ಲರ ಪ್ರಶಂಸೆಗೆ ಪಾತ್ರ ರಾದರು. ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣವನ್ನು ಸುಂದರವಾಗಿ ವಿನ್ಯಾಸ ಮಾಡಿದ ಯುವ ವಿಭಾಗದ ನೀತೇಶ್‌  ದೇವಾಡಿಗರನ್ನು ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷರಾದ ವಾಸು ದೇವಾಡಿಗ, ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್‌  ದೇವಾಡಿಗ ಮತ್ತು ಯುವ ವಿಭಾಗದ ಮಾರ್ಗದರ್ಶಕ ಗಿರೀಶ್‌ ದೇವಾಡಿಗರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.

ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ. ಮೋಹನ್‌ದಾಸ್‌,  ಚ್‌. ಮೋಹನ್‌
ದಾಸ್‌, ಉಪಾಧ್ಯಕ್ಷ ಭಾಸ್ಕರ್‌  ರಾವ್‌, ಜತೆ ಕಾರ್ಯದರ್ಶಿ ಗಣೇಶ್‌ ಶೇರಿಗಾರ್‌, ಕೋಶಾಧಿಕಾರಿ ದಯಾನಂದ್‌ ದೇವಾಡಿಗ ಮತ್ತು ಸಂಘದ ವೈದ್ಯಕೀಯ ಘಟಕದ ಕಾರ್ಯಾಧ್ಯಕ್ಷ ಜನಾರ್ದನ ದೇವಾಡಿಗ,ಮಹಿಳಾ ವಿಭಾಗದ ನಿಕಟಪೂರ್ವ  ಕಾರ್ಯಾಧ್ಯಕ್ಷೆ  ಭಾರತಿ ನಿಟ್ಟೇಕರ್‌ ಉಪಸ್ಥಿತ
ರಿದ್ದರು. ಪ್ರಮಿಳಾ ವಿ. ಶೇರಿಗಾರ್‌ ಕಾರ್ಯ ಕ್ರಮ ನಿರೂಪಿಸಿದರು. ಪೂರ್ಣಿಮಾ ಡಿ. ದೇವಾಡಿಗ ವಂದಿಸಿದರು.  

ಟಾಪ್ ನ್ಯೂಸ್

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hrb

Hebri; ಬೈಕ್‌ಗೆ ಕಾರು ಢಿಕ್ಕಿ: ಯುವಕ ಸಾ*ವು

police

Mudbidri; ಎಂಟು ತಿಂಗಳ ಹಿಂದೆ ಬ್ಯಾಟರಿ ಕಳವು: ಇಬ್ಬರು ಆರೋಪಿಗಳ ಬಂಧನ

Exam

Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.