ದೇವಾಡಿಗ ಸಂಘ ಪುಣೆ ಪ್ರತಿಭಾ ಪುರಸ್ಕಾರ, ಆಟಿಡೊಂಜಿ ದಿನ
Team Udayavani, Aug 12, 2018, 3:49 PM IST
ಪುಣೆ: ಪುಣೆ ದೇವಾಡಿಗ ಸಂಘದ ವತಿಯಿಂದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಆಟಿಡೊಂಜಿ ದಿನ ಆಚರಣೆಯು ಆ. 5ರಂದು ಹೊಟೇಲ್ ಪಿಕಾಕ್ ಸಭಾಂ ಗಣ, ತಿಲಕ್ರೋಡ್ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಸಚಿನ್ ಕೆ. ದೇವಾಡಿಗ, ಪ್ರಧಾನ ಸಲಹೆಗಾರ ನರಸಿಂಹ ದೇವಾಡಿಗ ಹಾಗೂ ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹತ್ತನೇ ತರಗತಿಯ ವರೆಗಿನ ವಿದ್ಯಾ ರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಶೇ. 82 ಅಂಕಗಳನ್ನು ಪಡೆದ ಆಕಾಂಕ್ಷ ಅಜಯ್ ದೇವಾಡಿಗ ಇವರನ್ನು ಸತ್ಕರಿಸಲಾಯಿತು.
ಈ ಸಂದರ್ಭ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಹರೀಶ್ ದೇವಾಡಿಗ ಮಾತನಾಡಿ, ಸಂಘದ ವತಿಯಿಂದ ಸಮಾಜ ಬಾಂಧವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಸ್ತುತ್ಯರ್ಹವಾಗಿದೆ. ಸಂಘದ ಮೂಲಕ ಸಮಾಜಮುಖೀ ಕಾರ್ಯಗಳು ನಡೆಯುತ್ತಿರಲಿ. ತನ್ನಿಂದಾದ ಸಹಕಾರವನ್ನು ಸಂಘಕ್ಕೆ ನೀಡುತ್ತೇನೆ ಎಂದರು.
ನಾಸಿಕ್ನ ಸಂತೋಷ್ ದೇವಾಡಿಗ ಮಾತನಾಡಿ, ಪುಣೆಯಲ್ಲಿ ಸಮಾಜಬಾಂಧವರು ಸಂಖ್ಯೆಯಲ್ಲಿ ಒಗ್ಗಟ್ಟಿನಿಂದ ಬೆಸೆದಿರುವುದನ್ನು ಕಂಡಾಗ ನಮ್ಮದೇ ಕುಟುಂಬದಲ್ಲಿ ಸಂಭ್ರಮಿಸಿದ ಅನುಭವ ನೀಡಿತು. ಸಂಘವು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಮುಖ್ಯ ಸಲಹೆಗಾರರಾದ ನರಸಿಂಹ ದೇವಾಡಿಗರು ಮಾತನಾಡಿ, ನಮ್ಮ ಸಂಘವು ಸಮಾಜದ ಒಗ್ಗಟ್ಟಿಗಾಗಿ ಶ್ರಮಿಸುವುದಲ್ಲದೆ ಉತ್ತಮ ಕಾರ್ಯಕ್ರಮಗಳ ಮೂಲಕ ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ. ಮುಂದೆಯೂ ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರಲಿ ಎಂದರು. ಸಂಘದ ಅಧ್ಯಕ್ಷ ಸಚಿನ್ ಕೆ. ದೇವಾಡಿಗ ಮಾತನಾಡಿ ಹನಿಗೂಡಿ ಹಳ್ಳ ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬರೂ ತಮ್ಮಿಂದಾದ ಸಹಕಾರವನ್ನು ನೀಡಿ ಜತೆಸೇರಿ ಮಾಡಿದ ಯಾವುದೇ ಕಾರ್ಯವು ಯಶಸ್ವಿಯಾಗಿ ನೆರವೇರುವುದರಲ್ಲಿ ಸಂದೇಹವಿಲ್ಲ. ಅದೇ ರೀತಿ ನಮ್ಮ ಸಂಘದ ಮಹಿಳೆಯರೆಲ್ಲ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಆಟಿಯ ಸವಿಯನ್ನು ಹಂಚುತ್ತಿರುವುದಕ್ಕೆ ಅವರೆಲ್ಲರನ್ನೂ ಅಭಿನಂದಿಸಬೇಕಾಗಿದೆ ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.
ಸಂಘದ ಸತ್ಕಾರವನ್ನು ಸ್ವೀಕರಿಸಿದ ಆಕಾಂಕ್ಷ ಎ. ದೇವಾಡಿಗ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದ್ದಲ್ಲದೆ ನಿಯಮಿತವಾದ ಅಭ್ಯಾಸದಿಂದ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಯಿತು ಎಂದರು. ಭಾವನಾ ನೃತ್ಯ ಅಕಾಡೆಮಿಯ ಭಾವನಾ ರಾಮ್ ದೇವಾಡಿಗ ಸಂಘದ ಕಾರ್ಯಕ್ರಮಕ್ಕೆ ಶುಭ ಕೋರಿದರು. ಲತಾ ಆರ್. ದೇವಾಡಿಗ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಸುರೇಶ ಶ್ರೀಯಾನ್, ಜತೆ ಪದಾಧಿಕಾರಿಗಳಾದ ನಾರಾಯಣ ದೇವಾಡಿಗ, ವಿಠಲ್ ದೇವಾಡಿಗ, ನವೀನ್ ದೇವಾಡಿಗ, ಸುಧಾಕರ್ ದೇವಾಡಿಗ, ಜಗದೀಶ್ ದೇವಾಡಿಗ, ಪುರಂದರ ದೇವಾಡಿಗ, ಸಂತೋಷ್ ದೇವಾಡಿಗ, ಸತೀಶ್ ದೇವಾಡಿಗ, ಪ್ರಕಾಶ್ ದೇವಾಡಿಗ, ಉದಯ್ ದೇವಾಡಿಗ, ಶಶಿಕಾಂತಿ ದೇವಾಡಿಗ ಹಾಗೂ ಸುರೇಶ ದೇವಾಡಿಗ ಉಪಸ್ಥಿತರಿದ್ದು ಸಹಕರಿಸಿದರು. ಪ್ರಿಯಾ ಎಚ್. ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಪ್ರದಾಯಿಕವಾಗಿ ಆಟಿ ತಿಂಗಳಲ್ಲಿ ಸಿದ್ಧಪಡಿಸುವ ವಿಶೇಷ ಖಾದ್ಯಗಳನ್ನು ಮಹಿಳೆಯರು ಸಿದ್ಧಪಡಿಸಿ ಭೋಜನ ವ್ಯವಸ್ಥೆಯನ್ನು ಮಾಡಿದ್ದರು. ತಿಮರೆ ಚಟ್ನಿ, ಕುಕ್ಕುದ ಚಟ್ನಿ, ಕುಡುತ ಚಟ್ನಿ, ಉಪ್ಪಡ್ ಪಚ್ಚಿರ್, ತೊಜಂಕ್ ಪಲ್ಯ, ಪತ್ರೊಡೆ, ಪುಂಡಿ, ಸೇಮೆದಡ್ಡೆ, ದೋಸೆ, ಕೊ¨ªೆಲ್, ತೆಕ್ಕರೆ ತಲ್ಲಿ, ಪದೆಂಗಿ ಪಾಯಸ, ಗೋದಿದ ಪಾಯಸ, ಮೆತ್ತೆದ ಗಂಜಿ ಇತ್ಯಾದಿ ಖಾದ್ಯಗಳು ಒಳಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.