ಐತಿಹಾಸಿಕ ಜಿಪಿಒ ಕಟ್ಟಡದ ಇತಿಹಾಸದ ಡಿಜಿಟಲ್‌ ಕೃತಿ ಲೋಕಾರ್ಪಣೆ

Team Udayavani, Mar 18, 2021, 3:47 PM IST

ಐತಿಹಾಸಿಕ ಜಿಪಿಒ ಕಟ್ಟಡದ ಇತಿಹಾಸದ ಡಿಜಿಟಲ್‌ ಕೃತಿ ಲೋಕಾರ್ಪಣೆ

ಮುಂಬಯಿ: ಉಡುಪಿ ಜಿಲ್ಲೆಯ ಕಲ್ಯಾಣಪುರ ಮೂಡುತೋನ್ಸೆಯ ಬ್ರಹ್ಮಶ್ರಿ ಬೈದರ್ಕಳ ಪಂಚ ಧೂಮಾವತೀ ಗರೋಡಿಯ ಸರ್ವೋನ್ನತಿಗಾಗಿ ಸೇವಾನಿರತವಾಗಿರುವ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್‌ ಮುಂಬಯಿ ಇದರ ದ್ವಿತೀಯ ವಾರ್ಷಿಕ ಮಹಾಸಭೆಯು ಮಾ. 14ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಿತ್ಯಾನಂದ ಡಿ. ಕೋಟ್ಯಾನ್‌ ಅಧ್ಯಕ್ಷೀಯ ಭಾಷಣಗೈದು, ಭವಿಷ್ಯದಲ್ಲಿ ನಮ್ಮ ಟ್ರಸ್ಟ್‌ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಮತ್ತು ಸದಸ್ಯರಲ್ಲಿ  ಏಕತೆಯನ್ನು ತರಲು ವಿಭಿನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸಬೇಕು. ಯುವಕರು ಮತ್ತು ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಟ್ರಸ್ಟ್‌  ತೋನ್ಸೆ ಗರೋಡಿ ಧಾರ್ಮಿಕ ಕ್ರಮಬದ್ಧತೆಯ ಚಟುವಟಿಕೆಗಳಿಗೆ ಕೊಡುಗೆ ನೀಡಬೇಕು. ಭಕ್ತರಿಂದ ಹಣಕಾಸಿನ ಸಹಾಯಕ್ಕಾಗಿ ಮನವಿ ಮಾಡಲು ಮುಂದಾಗಬೇಕು ಎಂದು ತಿಳಿಸಿ, ಟ್ರಸ್ಟ್‌ನ ಆರ್ಥಿಕ ಬಲವನ್ನು ಹೆಚ್ಚಿಸಲು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಸದಸ್ಯರಿಗೆ ಮನವಿ ಮಾಡಿದರು.

ಹಿರಿಯರು ಮತ್ತು ಕಿರಿಯರ ಸರ್ವಕಾಲಿಕ ಮತ್ತು ಸಮಯೋಚಿತ ಬೆಂಬಲಕ್ಕಾಗಿ ಧನ್ಯವಾದಗಳು. ಇಂದಿನ ಮಹಾಸಭೆಯಲ್ಲಿ ಸೇರಿರುವ ಇಷ್ಟೊಂದು ಸಂಖ್ಯೆಯ ಸದಸ್ಯರನ್ನು ಕಂಡಾಗ ಸಂತೋಷವಾಗುತ್ತದೆ. ನಾವೆಲ್ಲರು ಒಮ್ಮತ ಮತ್ತು ಒಗ್ಗಟ್ಟಿನಿಂದ ಸಮಿತಿಯನ್ನು ಮುನ್ನಡೆಸುವುದರೊಂದಿಗೆ ಮಕ್ಕಳಲ್ಲಿ ಧಾರ್ಮಿಕ ಭಾವನೆಯನ್ನು ಮೂಡಿಸೋಣ ಎಂದು ತಿಳಿಸಿದರು.

ಜತೆ ಕಾರ್ಯದರ್ಶಿ ಕರುಣಾಕರ್‌ ಬಿ. ಪೂಜಾರಿ ಅವರು ಗತಸಾಲಿನ ಮಹಾಸಭೆಯ ವರದಿ ವಾಚಿಸಿದರು. ವರದಿಯನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಗತ ವರ್ಷದ ಕಾರ್ಯಚಟುವಟಿಕೆಗಳ ಮಾಹಿತಿಯನ್ನಿತ್ತು ಟ್ರಸ್ಟ್‌ನ ವೈದ್ಯಕೀಯ ನೆರವು ಯೋಜನೆಗೆ ಕೊಡುಗೆ ನೀಡಿದವರ, ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಇತ್ಯಾದಿ ವಿವರಗಳೊಂದಿಗೆ ವಾರ್ಷಿಕ ವರದಿ ಪ್ರಸ್ತುತಪಡಿಸಿದರು. ಗೌರವ ಪ್ರಧಾನ ಕೋಶಾಧಿಕಾರಿ ರವಿರಾಜ್‌ ಕಲ್ಯಾಣಪುರ ಅವರು ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.

ಈ ವರೆಗೆ ಉಚಿತ ಸೇವೆಗಳನ್ನು ಸಲ್ಲಿಸುತ್ತಿರುವ ಎಸ್‌. ಎನ್‌. ಪೂಜಾರಿ ಆ್ಯಂಡ್‌ ಕಂಪೆನಿ ಚಾರ್ಟರ್ಡ್‌ ಅಕೌಂಟೆಂಟ್‌ ಅವರನ್ನೇ 2020-21ರ ಸಾಲಿಗೂ ಲೆಕ್ಕ ಪರಿಶೋಧಕರನ್ನಾಗಿ ಸಭೆಯಲ್ಲಿ ಸರ್ವಾನುಮತದಿಂದ ನೇಮಿಸಲಾಯಿತು. ಬಿಇ ಮೆಕ್ಯಾನಿಕಲ್‌ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ ಸಾಹಿಲ್‌ ಮಹೇಶ್‌ ಮತ್ತು ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣರಾದ ಸಿಯಾ ಕಿರಣಚಂದ್ರ ಪೂಜಾರಿ ಮತ್ತು ಅನುಷಾ ಜಯ ಪೂಜಾರಿ ಅವರನ್ನು ಟ್ರಸ್ಟ್‌ ಪರವಾಗಿ ಸ್ಮರಣಿಕೆ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿಶ್ವನಾಥ ತೋನ್ಸೆ ಪ್ರತಿಭಾನ್ವಿತರ ಬಗ್ಗೆ ಮಾಹಿತಿ ನೀಡಿದರು.

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ನಡುವೆ ಸಭೆಯಲ್ಲಿ ಅನೇಕ ಸದಸ್ಯರು ಹಾಜರಿರುವುದು ನಮ್ಮ ಟ್ರಸ್ಟ್‌ನ ಹಿರಿಮೆ. ಯಾವುದೇ ಸಂಘವು ತನ್ನ ಧ್ಯೇಯವನ್ನು ನಿರ್ವಹಿಸಲು ಬಲವಾದ ಅಡಿಪಾಯ ಅಗತ್ಯವಾಗಿದ್ದು, ನಿರಂತರ ಬೆಂಬಲವಿದೆ ಎಂದು ಉಪಾಧ್ಯಕ್ಷರಾದ ಸಿ. ಕೆ. ಪೂಜಾರಿ ಮತ್ತು ಡಿ. ಬಿ. ಅಮೀನ್‌ ಅವರು ತಿಳಿಸಿ, ಸಂತೋಷ ವ್ಯಕ್ತಪಡಿಸಿದರು. ಸಭಿಕರ ಪರವಾಗಿ ಕೃಷ್ಣ ಪಾಲನ್‌, ಭಾರತಿ ಎನ್‌. ಸುವರ್ಣ, ಲಕ್ಷ್ಮೀ ಎನ್‌. ಕೋಟ್ಯಾನ್‌, ವಿಜಯ್‌ ಸನಿಲ್‌, ಸಾಹಿಲ್‌ ಮಹೇಶ್‌ ಮತ್ತು ಅನುಷಾ ಪೂಜಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು, ಸಲಹೆಗಾರರು, ಸದಸ್ಯರು ಹಾಜರಿದ್ದು, ಸದಸ್ಯರು ಶ್ರೀ ಬ್ರಹ್ಮ ಬೈದರ್ಕಳರಿಗೆ ಪ್ರಾರ್ಥನೆಗೈದು ಮಹಾಸಭೆ ಉದ್ಘಾಟಿಸಿದರು. ಉಪಾಧ್ಯಕ್ಷ ವಿಶ್ವನಾಥ ತೋನ್ಸೆ ಸ್ವಾಗತಿಸಿದರು. ಗತ ಸಾಲಿನಲ್ಲಿ ಅಗಲಿದ ಟ್ರಸ್ಟ್‌ನ ಹಿತೈಷಿ ಹಾಗೂ ಕೊಡುಗೈದಾನಿಗಳಾದ ಜಯ ಸಿ. ಸುವರ್ಣ, ಎಂ. ಬಿ. ಕುಕ್ಯಾನ್‌, ಪ್ರೊ| ಶಿವ ಬಿಲ್ಲವ ಮತ್ತು ಟ್ರಸ್ಟ್‌ನ

ಸದಸ್ಯ ಶೇಖರ್‌ ಪೂಜಾರಿ ಸಹಿತ ಅನೇಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಜೀವ ಪೂಜಾರಿ ತೋನ್ಸೆ ಅವರು ಭಕ್ತರು ಒದಗಿಸಿದ ಹಣಕಾಸಿನ ಸಹಾಯದ ವಿವರಗಳನ್ನು ನೀಡಿ, ದಾನಿಗಳ ಹೆಸರುಗಳನ್ನು ತಿಳಿಸಿ ವಂದಿಸಿದರು.

ಟಾಪ್ ನ್ಯೂಸ್

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.