ಬಾಕಿ ಬೆಳೆ ಸಾಲ: ಸರಕಾರಿ ಖಾತೆಗೆ ವರ್ಗಾಯಿಸಲು ಬ್ಯಾಂಕ್‌ಗಳಿಗೆ ನಿರ್ದೇಶ
Team Udayavani, May 26, 2020, 5:30 PM IST
ಮುಂಬಯಿ, ಮೇ 25: ಮಹಾರಾಷ್ಟ್ರ ಸರಕಾರವು ರೈತರನ್ನು ಹೊಸ ಸಾಲಕ್ಕೆ ಅರ್ಹರನ್ನಾಗಿ ಮಾಡಲು ಅವರ ಬಾಕಿ ಇರುವ ಬೆಳೆ ಸಾಲಗಳನ್ನು ರಾಜ್ಯದ ಖಾತೆಗೆ ವರ್ಗಾಯಿಸಲು ಬ್ಯಾಂಕ್‌ಗಳಿಗೆ ನಿರ್ದೇಶಿಸಿದೆ.
ಈ ಕುರಿತು ಹೊರಡಿಸಲಾಗಿರುವ ಸರಕಾರಿ ಅಧಿಸೂಚನೆಯಲ್ಲಿ ರೈತರ ಪ್ರಸ್ತುತ ಬಾಕಿ ಸಾಲವನ್ನು ರಾಜ್ಯ ಸರಕಾರದ ಬಾಕಿ ಎಂದು ತೋರಿಸುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಈ ನಿರ್ಧಾರವು ರೈತರ ಖಾತೆಗಳಲ್ಲಿರುವ ಬಾಕಿ ಸಾಲವನ್ನು ತೆರವುಗೊಳಿಸಲಿದೆ ಮತ್ತು ಅವರು ಹೊಸ ಬೆಳೆ ಸಾಲಕ್ಕೆ ಅರ್ಹರಾಗಲಿದ್ದಾರೆ. ಈ ವರ್ಷದ ಎ. 1ರ ವರೆಗೆ ಬಾಕಿ ಇರುವ ಬೆಳೆ ಸಾಲಕ್ಕೆ ಈ ನಿರ್ಧಾರವು ಅನ್ವಯವಾಗಲಿದೆ. ಇದರ ಮೇಲಿನ ಬಂಡವಾಳ ಮತ್ತು ಬಡ್ಡಿಯನ್ನು ರಾಜ್ಯ ಸರಕಾರ ಪಾವತಿಸಲಿದೆ ಎಂದು ಅಧಿಸೂಚನೆ ಹೇಳಿದೆ.
ಇದು ರಾಜ್ಯ ಸರಕಾರವು ಕೈಗೊಂಡ ಅತ್ಯಂತ ಅಪರೂಪದ ನಿರ್ಧಾರವಾಗಿದೆ. ಸರಕಾರವು ಕೆಲವು ಸಹಕಾರಿ ಉದ್ಯಮಗಳಿಗೆ ತನ್ನ ಗ್ಯಾರಂಟಿ ನೀಡಿದೆ ಆದರೆ ಅದು ರೈತರ ಸಾಲಗಳ ಹೊಣೆಯನ್ನು ತೆಗೆದುಕೊಂಡಿರುವುದು ಬಹಳ ವಿರಳವಾಗಿದೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಸರಕಾರದ ಸಾಲ ಮನ್ನಾ ಯೋಜನೆಯನ್ನು ಭಾಗಶಃ ಜಾರಿಗೆ ತರಲಾಗುತ್ತಿದೆ ಎಂದು ಜಿಆರ್ ಹೇಳಿದೆ. ಈವರೆಗೆ ಸುಮಾರು 60 ಶೇಕಡಾ ರೈತರು ಈ ಯೋಜನೆಯ ವ್ಯಾಪ್ತಿಗೆ ಬಂದಿದ್ದಾರೆ. ರಾಜ್ಯದೊಂದಿಗೆ ಯಾವುದೇ ಹಣವಿಲ್ಲದ ಕಾರಣ 11.12 ಲಕ್ಷ ಖಾತೆದಾರರ 8,100 ಕೋ.ರೂ.ಪಾವತಿ ಬಾಕಿ ಉಳಿದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಜಿಆರ್ ಹೊರಡಿಸುವ ಉದ್ದೇಶ ವಿವರಿಸಿದ ಅವರು, ಸಾಲ ಮನ್ನಾ ಹಿಂದಿನ ಪರಿಕಲ್ಪನೆಯೆಂದರೆ ರೈತರ ಸಾಲಗಳನ್ನು ತೆರವುಗೊಳಿಸುವುದು ಆಗಿದೆ. ಸರಕಾರದ ಈ ನಿರ್ಣಯದಿಂದ ನಾಬಾರ್ಡ್ ಸಾಲವನ್ನು ವಿತರಿಸುವಾಗ ರಾಜ್ಯದ ಹೆಚ್ಚಿನ ರೈತರು ಅದಕ್ಕೆ ಅರ್ಹರಾಗಲಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.