ಕೆಂಪು ವಲಯದಲ್ಲಿ ಬಿಎಂಸಿ ಕಾರ್ಯಾಚರಣೆ ಜನರಿಗೆ ಇಮ್ಯೂನಿಟಿ ಬೂಸ್ಟರ್ ಗುಳಿಗೆ ವಿತರಣೆ
Team Udayavani, May 15, 2020, 8:18 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ಕೋವಿಡ್ -19 ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ 26,000 ಮತ್ತು ಮುಂಬಯಿಯಲ್ಲಿ 16,000ಕ್ಕೆ ಸಮೀಪಿಸುತ್ತಿರುವುದರೊಂದಿಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಕಂಟೈನ್‌ಮೆಂಟ್ ಮತ್ತು ಕೆಂಪು ವಲಯಗಳಲ್ಲಿ ವಾಸಿಸುವ ಜನರಿಗೆ ರೋಗನಿರೋಧಕ ಶಕ್ತಿ ವರ್ಧಕ (ಇಮ್ಯೂನಿಟಿ ಬೂಸ್ಟರ್) ಮಾತ್ರೆಗಳನ್ನು ವಿತರಿಸಲು ಆರಂಭಿಸಿದೆ.
ಮುಂಬಯಿ ಮೇಯರ್ ಕಿಶೋರಿ ಪೆಡ್ನ್ಕರ್ ಇದನ್ನು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ಬಿಎಂಸಿ ಮನೆ-ಮನೆಗೆ ತೆರಳಿ ಜನರ ತಪಾಸಣೆ ಮಾಡಲು ಪ್ರಾರಂಭಿಸಿದೆ ಹಾಗೂ ಕಂಟೈನ್‌ಮೆಂಟ್ ಮತ್ತು ಕೆಂಪು ವಲಯಗಳಲ್ಲಿ ವಾಸಿಸುವ ಎಲ್ಲ ಜನರಿಗೆ ಆರ್ಸೆನಿಕಮ್ ಆಲ್ಬಮ್ 30 ಗುಳಿಗೆಯನ್ನು ನೀಡಲು ಪ್ರಾರಂಭಿಸಿದೆ ಎಂದು ಪೆಡ್ನ್ಕರ್ ಹೇಳಿದ್ದಾರೆ. ಈ ಔಷಧದ ಪರಿಣಾಮಕಾರಿತ್ವವು ಇನ್ನೂ ತಿಳಿದುಬಂದಿಲ್ಲ ಆದರೆ ಅದರ ಸಾಮರ್ಥ್ಯದ ಬಗ್ಗೆ ಕಲ್ಪನೆಯನ್ನು ಪಡೆಯಲು ಅದನ್ನು ಪ್ರಾಯೋಗಿಕ ಆಧಾರದ ಮೇಲೆ ನೀಡಲು ಪ್ರಾರಂಭಿಸಿದೆ ಎಂದು ಮೇಯರ್ ತಿಳಿಸಿದ್ದಾರೆ. ಔಷಧಿ ಪರಿಣಾಮಕಾರಿ ಎಂದು ಕಂಡುಬಂದಲ್ಲಿ, ಅಧಿಕಾರಿಗಳು ಅದನ್ನು ಮತ್ತಷ್ಟು ಕಂಟೈನ್‌ಮೆಂಟ್ ಕೇಂದ್ರಗಳಲ್ಲಿ ಜನರಿಗೆ ವಿತರಿಸಲಿದ್ದಾರೆ ಎಂದು ಪೆಡ್ನ್ಕರ್ ಹೇಳಿದ್ದಾರೆ. ಬಿಎಂಸಿ ಮೂಲಕ ಸರಕಾರ ಕಳೆದ ಎರಡು ವಾರಗಳಲ್ಲಿ ಹೆಚ್ಚುವರಿ ಆರು ಕೋವಿಡ್ ಆರೈಕೆ ಕೇಂದ್ರಗಳನ್ನು (ಸಿಸಿಸಿ) ಸ್ಥಾಪಿಸಿದೆ. ಈ ಕೇಂದ್ರ ಗಳಲ್ಲಿ ದಟ್ಟವಾದ ಕೊಳೆಗೇರಿ ಪ್ರದೇಶಗಳ ರೋಗ
ಲಕ್ಷಣವಿಲ್ಲದ ರೋಗಿಗಳನ್ನು ಇರಿಸಲಾಗುತ್ತದೆ. ಮಹಾಲಕ್ಷ್ಮೀ ರೇಸ್‌ಕೋರ್ಸ್, ನೆಹರು ವಿಜ್ಞಾನ ಕೇಂದ್ರ, ಬಿಕೆಸಿಯ ಎಂಎಂಆರ್‌ಡಿಎ ಮೈದಾನ, ಮಾಹಿಮ್ ನೇಚರ್ ಪಾರ್ಕ್ ಮತ್ತು ಗೋರೆ
ಗಾಂವ್‌ನ ನೆಸ್ಕೋ ಮೈದಾನದಲ್ಲಿ ಹೊಸ ಸೌಲಭ್ಯ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಸೌಲಭ್ಯ ಗಳೊಂದಿಗೆ ಮುಂಬಯಿಯ ಒಟ್ಟು ಸಾಮರ್ಥ್ಯ ವನ್ನು 14,000 ದಿಂದ 34,000 ಹಾಸಿಗೆಗಳಿಗೆ ಹೆಚ್ಚಿಸಲಾಗಿದೆ.
ನಾಯರ್, ಕೆಇಎಂ, ಸೆವೆನ್ ಹಿಲ್ಸ್ ಮುಂತಾದ ಆಸ್ಪತ್ರೆಗಳಲ್ಲಿ ಗಂಭೀರ ರೋಗಿಗಳ ಆರೈಕೆ ಹಾಸಿಗೆ ಗಳನ್ನು 3,000ದಿಂದ 4,750ಕ್ಕೆ ಹೆಚ್ಚಿಸಲಾಗಿದೆ. ಎನ್‌ಎಸ್‌ಸಿಐ ಡೋಮ್‌ನಲ್ಲಿ ಮೊಬೈಲ್ ಐಸಿಯು ಹಾಸಿಗೆಗಳನ್ನು ಕೂಡ ಯೋಜಿಸಲಾಗುತ್ತಿದೆ. ಕಂಟೈನ್‌ಮೆಂಟ್ ಮತ್ತು ಕೆಂಪು ವಲಯಗಳಲ್ಲಿ ಕೋವಿಡ್-19 ಹರಡುವುದನ್ನು ತಪ್ಪಿಸಲು ಬಿಎಂಸಿ ಮುಂಬಯಿಯ ನಿವಾಸಿಗಳನ್ನು ಸಂಪರ್ಕ ತಡೆಯಲ್ಲಿರಿಸಿಕೊಳ್ಳುತ್ತಿದೆ.
ಮಹಾರಾಷ್ಟ್ರದಲ್ಲಿ ಗುರುವಾರ ಕೋವಿಡ್ -19 ಪ್ರಕರಣಗಳ ಸಂಖ್ಯೆ 25,922ಕ್ಕೆ ಏರಿದ್ದು, ಕಳೆದ 24 ಗಂಟೆಗಳಲ್ಲಿ 1,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಕೋವಿಡ್-19ರಿಂದ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿರುವ ಮಹಾರಾಷ್ಟ್ರ ಸತತ 8ನೇ ದಿನಕ್ಕೆ 1,000ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ರಾಜ್ಯವು ಒಂದೇ ಒಂದು ದಿನದಲ್ಲಿ 53 ಹೊಸ ಸಾವುಗಳನ್ನು ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.