ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿ: ರಂಜಾನ್ ಹಬ್ಬದ ಪಡಿತರ ವಿತರಣೆ
Team Udayavani, May 15, 2021, 1:34 PM IST
ಸೊಲ್ಲಾಪುರ: ಕೊರೊನಾ ಹಿನ್ನಲೇ ಜಗತ್ತು ಸ್ಥಬ್ಧಗೊಂಡಿದ್ದು, ಸಾಮಾನ್ಯ ಜನರ ಬದುಕು ಸಂಕಷ್ಟದಲ್ಲಿದೆ. ಕಳೆದ ಮೂರು ತಿಂಗಳಿಂದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿ ಸಂಪೂರ್ಣ ಬಂದ್ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಮಂಡಳಿಯ ಮುಸ್ಲಿಂ ಸೇವಕರಿಗೆ ರಂಜಾನ್ ಹಬ್ಬದ ಪಡಿತರವನ್ನು ವಿತರಿಸಲಾಯಿತು.
ಕೊರೊನಾದಿಂದ ಅನೇಕ ವ್ಯಾಪಾರಿಗಳ ಬದುಕು ಚಿಂತಾಜನಕವಾಗಿದೆ. ಅಕ್ಕಲ್‌ಕೋಟೆ ಪಟ್ಟಣದ ಸ್ವಾಮಿ ಸಮರ್ಥ ಮಂದಿರ ಮತ್ತು ಅನ್ನಛತ್ರ ಆವರಣ
ದಲ್ಲಿದ್ದ ಅಂಗಡಿ, ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿರುವುದರಿಂದ ಯಾವುದೇ ವ್ಯಾಪಾರ, ವಹಿವಾಟು ನಡೆಯುತ್ತಿಲ್ಲ.
ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ಅನ್ನಛತ್ರದ ಸೇವಕರಿಗೆ ನೇರವಾಗಬೇಕು ಎನ್ನುವ ಉದ್ದೇಶದಿಂದ ಮಂಡಳಿಯ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸ್ಲೆ
ಅವರ ಮಾರ್ಗದರ್ಶನ ಮತ್ತು ಪ್ರಮುಖಕಾರ್ಯಕಾರಿ ವಿಶ್ವಸ್ತ ಅಮೋಲ್‌ರಾಜೆ ಭೋಸ್ಲೆಯವರ ನೇತೃತ್ವದಲ್ಲಿ ಕಾಯದರ್ಶಿ ಶಾಮರಾವ ಮೋರೆ ಮಂಡಳಿಯ ಮುಸ್ಲಿಂ ಸೇವಕರಿಗೆ ರಂಜಾನ್ ಹಬ್ಬದ ಅಂಗವಾಗಿ ಪಡಿತರವನ್ನು ವಿತರಿಸಿದರು.
ಸಂಸ್ಥೆಯ ವತಿಯಿಂದ ಬಡ ಕೂಲಿ ಕಾರ್ಮಿಕರ ಮತ್ತು ದೀನ ದಲಿತರ ಮಕ್ಕಳಿಗೆ ಶೈಕ್ಷಣಿಕ ಸಹಾಯ, ಭೂಕಂಪ, ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ಚಾಚಿದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಆರೋಗ್ಯ, ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರ, ಸ್ತ್ರೀ ಭ್ರೂಣ ಹತ್ಯೆ ವಿರುದ್ಧ, ವರದಕ್ಷಿಣೆ ವಿರುದ್ಧ, ಸ್ವತ್ಛತಾ ಅಭಿಯಾನ ಸಹಿತ ಅನೇಕ ಮಹತ್ವದ ಕಾರ್ಯದಲ್ಲಿ ಸಂಸ್ಥೆ ಪ್ರಮುಖವಾದ ಕಾರ್ಯ ನಿರ್ವಹಿಸುತ್ತಿದೆ.
ಈ ಸಂದರ್ಭ ಮಂಡಳದ ಉಪಾಧ್ಯಕ್ಷ ಅಭಯ ಖೋಬರೆ, ಕಾರ್ಯದರ್ಶಿ ಶಾಮರಾವ ಮೋರೆ, ಅಪ್ಪಾ ಹಂಚಾಟೆ, ನಾಮಾ ಭೋಸ್ಲೆ, ಬಾಳಾಸಾಹೇಬ್ ಘಾಟಗೆ, ಅಮಿತ್ ಥೋರಾತ, ಮಹಾಂತೇಶ ಸ್ವಾಮಿ, ಸಮರ್ಥ ಘಾಟಗೆ, ದತ್ತಾ ಮಾನೆ, ಲಕ್ಷ್ಮಣ್ ಪಾಟೀಲ್, ರಾಜೇಂದ್ರ ಪವಾರ್ ಹಾಗೂ ಮಂಡಳಿಯ ಸೇವಕರು Óಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.