ದೈವೀ ಪ್ರೇರಣೆಯೇ ಸಮ್ಮಾನಕ್ಕೆ ಕಾರಣ: ಕೈವಲ್ಯ ಶ್ರೀ
Team Udayavani, May 5, 2018, 3:39 PM IST
ಮುಂಬಯಿ: ಮುಂಬಯಿಯಂಥ ಅವಿಶ್ರಾಂತ ಶಹರದಲ್ಲಿ ಜನರ ನಿರಂತರ ಪರಿಶ್ರಮ ಜೀವನದ ಮಧ್ಯೆ ಭಗವಂತನ ನಾಮಸ್ಮರಣೆ ಮಾಡಲು ಅವಕಾಶ ಕಲ್ಪಿಸಿ ಕೊಳ್ಳುವುದರಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ವೃಂದದವರು ನಿಪುಣರು. ಇಂತಹ ಸನ್ನಿವೇಶದ ಹಿನ್ನೆಲೆಯಲ್ಲಿ ಜಿಎಸ್‌ಬಿ ಸಭಾ, ಕೆಸಿಜಿ, ಬಾಲಾಜಿ ಮಂದಿರ ಕುರ್ಲಾ ತಮ್ಮ ಸುವರ್ಣ ಗಣೇಶೋತ್ಸವ ವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಶ್ಲಾಘನೀಯ. ದೈವೀ ಪ್ರೇರಣೆಯೇ ಮನುಷ್ಯನ ಸಮ್ಮಾನಕ್ಕೆ ಕಾರಣ. ದೇವರು ಉತ್ತಮ ಆಚಾರ ವಿಚಾರ ನೀಡಿ ಸಕಲರನ್ನು ಹರಸಲಿ ಎಂದು ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧಿಪತಿಗಳು ನೆರೆದ ಸಮಾಜ ಬಾಂಧವರನ್ನುದ್ದೇಶಿಸಿ ಆಶೀರ್ವಚಿಸಿದರು.
ಎ. 29ರಂದು ಸಂಜೆ ಗೋವಾದಿಂದ ಆಗಮಿಸಿದ ಪರಮಪೂಜ್ಯ ಗುರುವರ್ಯರನ್ನು ಕುರ್ಲಾ ಜಿಎಸ್‌ಬಿ ಸಭಾದ ಅಧ್ಯಕ್ಷ ಗಣೇಶ್ ಬಿ. ಕಾಮತ್, ಸುವರ್ಣ ಗಣೇಶೋತ್ಸವದ ಕಾರ್ಯಾಧ್ಯಕ್ಷ ವಿವೇಕ್ ಭಂಡಾರಿ, ಜನಾರ್ದನ್ ಭಟ್, ಕಾರ್ಯಕರ್ತರು, ಸಮಿತಿ ಸದಸ್ಯರು, ಸ್ವಯಂಸೇವಕರು, ಮಹಿಳಾ ಮಂಡಳಿ ಸದಸ್ಯರು ಪೂರ್ಣ ಕುಂಭ ಸ್ವಾಗತವನ್ನು ನೀಡಿ ಬರಮಾಡಿಕೊಂಡರು. ದೇವರ ದರ್ಶನದ ಬಳಿಕ ಮುಖ್ಯ ಪುರೋಹಿತ ಶ್ರೀ ತ್ರಿವಿಕ್ರಮ ಆಚಾರ್ಯ ಹಾಗೂ ಪ್ರಧಾನ ಅರ್ಚಕ ಗಜಾನನ ಶಾನ್‌ಭಾಗ್ ಅವರಿಂದ ವೇದಘೋಷ ಪಠಣ ನಡೆಯಿತು.
ಅಧ್ಯಕ್ಷರು ಭಕ್ತಿಪೂರ್ವಕವಾಗಿ ಸ್ವಾಮೀಜಿ ಅವರನ್ನು ಸ್ವಾಗತಿಸಿ, ಸ್ವಾಮೀಜಿ ಅವರ 4 ದಿನಗಳ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿ ಅನಂತರ ಅವರ ಪಾದಪೂಜೆ ಗೈದರು. ಪರಮಪೂಜ್ಯರ ಆಶೀರ್ವಚನ ಫಲಮಂತ್ರಾಕ್ಷತೆಯ ಬಳಿಕ ದೇವರ ಪೂಜೆ, ಆರತಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.