ನಿರಂತರ ಶ್ರೀ ಹರಿ ಸ್ಮರಣೆಯಿಂದ ಪರಮಾತ್ಮನ ಸಾನ್ನಿಧ್ಯ: ಅನಂತಪದ್ಮನಾಭ ಭಟ್‌


Team Udayavani, Mar 23, 2022, 11:05 AM IST

ನಿರಂತರ ಶ್ರೀ ಹರಿ ಸ್ಮರಣೆಯಿಂದ ಪರಮಾತ್ಮನ ಸಾನ್ನಿಧ್ಯ: ಅನಂತಪದ್ಮನಾಭ ಭಟ್‌

ಡೊಂಬಿವಲಿ: ನಮ್ಮಲ್ಲಿನ ದುಬುìದ್ಧಿ ತ್ಯಜಿಸುವುದರ ಜತೆಗೆ ನಿರಂತರವಾಗಿ ಶ್ರೀ ಹರಿಯ ನಾಮಸ್ಮರಣೆ ಮಾಡುವುದರಿಂದ ನಮಗೆ ಪರಮಾತ್ಮನ ಸಾನ್ನಿಧ್ಯ ಸಾಧ್ಯ ಎಂದು ಹರಿದಾಸ ಸಾಹಿತ್ಯದ ಖ್ಯಾತ ವಾಗ್ಮಿ ಕಾರ್ಕಳದ ವೈ. ಅನಂತ ಪದ್ಮನಾಭ ಭಟ್‌ ಹೇಳಿದರು.

ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ದಶಮಾನೋತ್ಸವದ ಅಂಗವಾಗಿ ಡೊಂಬಿವಲಿ ಪೂರ್ವದ ಶ್ರೀ ಗಣೇಶ ಮಂದಿರದ ವಿನಾಯಕ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಶ್ರೀ ಪುರಂದರದಾಸರ ಆರಾಧನೆ ಮತ್ತು ದಾಸರ ಪದಗಳ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಾವು ಪರಮಾತ್ಮನ ದಾಸನಾಗಬೇಕಾದರೆ ಆತನನ್ನು ಸಂಪೂರ್ಣವಾಗಿ ಅರಿಯಬೇಕು. ಭಗವಂತನನ್ನು ಕಣ್ಣೀರು ಬೆರೆತು ಕೂಗಿದಾಗ ಆತ ನಮ್ಮನ್ನು ರಕ್ಷಿಸುತ್ತಾನೆ. ಲೋಭಿಯಾದವನಿಗೆ ತನ್ನವರು ಯಾರೂ ಇರುವುದಿಲ್ಲ. ನಾವೆಲ್ಲರು ಮೋಹ ಹಾಗೂ ಮಾಯೆಯಿಂದ ದೂರವಿದ್ದು, ಪರಿಶುದ್ಧ ಜೀವನ ಸಾಗಿಸಬೇಕು. ದಶಮಾನೋತ್ಸವ ಸಂಭ್ರಮ ದಲ್ಲಿರುವ ಮಹಾನಗರ ಕನ್ನಡ ಸಂಸ್ಥೆ ನಮ್ಮ ಕನ್ನಡ ನಾಡಿನ ಶ್ರೀಮಂತ ಸಾಹಿತ್ಯ ಸಂಸ್ಕೃತಿ, ಕಲೆ ಹಾಗೂ ಧರ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಕಾರ್ಯದಲ್ಲಿ ಸಕ್ರಿಯವಾಗಿರಲಿ ಎಂದರು.

ಹರಿಕಿರ್ತನೆಯಲ್ಲಿ  ಶ್ರೀ ಪುರಂದರದಾಸರ ರಚನೆಗಳನ್ನು ಅತ್ಯಂತ ಮನೋಜ್ಞವಾಗಿ ಪ್ರಸ್ತುತಪಡಿಸಿದ ವೈ. ಆನಂತ ಪದ್ಮನಾಭ ಭಟ್‌ ಅವರು ಸೇರಿದ ನೂರಾರು ಭಕ್ತರನ್ನು ರಂಜಿಸಿದರು. ಹಿಮ್ಮೇಳದಲ್ಲಿ  ಪ್ರದೀಪ್‌ ಉಪಾಧ್ಯಾಯ ತಬಲಾದಲ್ಲಿ, ರಮೇಶ ಹೆಬ್ಟಾರ ಮಾರ್ವಿ ಹಾರ್ಮೋನಿಯಂನಲ್ಲಿ ಸಹಕರಿಸಿದರು. ಹಿಮ್ಮೇಳ ಕಲಾವಿದರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಇದೇ ಸಂದರ್ಭ ಶ್ರೀ ಪುರಂದರದಾಸರ ಆರಾಧನ ಮಹೋತ್ಸವ ಪ್ರಯುಕ್ತ ಪುರಂದರದಾಸರ ರಚನೆಗಳ ಹಾಡು ಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಭಾವನಾ ಬೆಂಗೇರಿ ಪ್ರಥಮ, ಸುನಂದಾ ಶೆಟ್ಟಿ  ದ್ವಿತೀಯ, ಅಂಕಿತಾ ನಾಗೇಶ ಹೊಸನಗರ ತೃತೀಯ ಬಹುಮಾನ ಪಡೆದರು. ವಿಜೇತ ಸ್ಪರ್ಧಿಗಳನ್ನು ನಗದು ಬಹುಮಾನ ಹಾಗೂ ಪುಷ್ಪಗುತ್ಛ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ  ತೀರ್ಪುಗಾರರಾಗಿ ಕರ್ನಾಟಕದ ಖ್ಯಾತ ಸಂಗೀತಗಾರರಾದ ರಮೇಶ ಹೆಬ್ಟಾರ ಮಾರ್ವಿ ಹಾಗೂ ಪ್ರದೀಪ್‌ ಉಪಾಧ್ಯಾಯ ಸಹಕರಿಸಿದರು. ಕಾರ್ಯಕ್ರಮದಲ್ಲಿ ಅಂತಾ ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಜೀವ ವಿಮಾ ಕ್ಷೇತ್ರದಲ್ಲಿ  ಗಣನೀಯ ಸಾಧನೆಗೈದ ಪೂಜಾ ಉಮರಾಣಿ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

ಮಹಾನಗರ ಕನ್ನಡ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಲಹೆಗಾರ ಸುರೇಂದ್ರ ಕುಬೇರ ಅವರು ನೂತನವಾಗಿ ಪ್ರಾರಂಭಿಸಲಾದ ಮಹಿಳಾ ವಿಭಾಗದ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು. ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾದ ವಿದ್ಯಾವತಿ ಆಲಗೂರ, ಉಪಕಾರ್ಯಾಧ್ಯಕ್ಷೆಯಾಗಿ ನೇಮಕಗೊಂಡ ವಾಸಂತಿ ದೇಶಪಾಂಡೆ, ಕೋಶಾಧಿಕಾರಿ ಪ್ರತಿಭಾ ಕುಲಕರ್ಣಿ, ಕಾರ್ಯದರ್ಶಿ ಲೀಲಾ ಮಸಳಿ ಅವರನ್ನು ಗೌರವಿಸಲಾಯಿತು. ವಿದ್ಯಾವತಿ ಆಲಗೂರ ಅವರ ಪ್ರಾರ್ಥನೆಗೈದರು. ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಇಂ. ಸತೀಶ್‌ ಆಲಗೂರ ಸ್ವಾಗತಿಸಿ, ಸಂಸ್ಥೆಯ ಯೋಜನೆಗಳನ್ನು ವಿವರಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಡಾ| ಬಿ. ಆರ್‌. ದೇಶಪಾಂಡೆ, ವೆಂಕಟೇಶ್‌ ಕುಲಕರ್ಣಿ ಹಾಗೂ ಸೋಮಶೇಖರ ಮಸಳಿ ಗಣ್ಯರನ್ನು ಪರಿಚಯಿಸಿದರು, ಪ್ರಕಾಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ| ಅಜೀತ ಉಮರಾಣಿ ವಂದಿಸಿದರು. ಗಣ್ಯರಾದ ಗೋಪಾಲ್‌ ಶೆಟ್ಟಿ, ಹರೀಶ್‌ ಶೆಟ್ಟಿ, ಗುರುರಾಜ ನಾಯಕ್‌, ಡಾ| ವಿ. ಎಸ್‌. ಅಡಿಗಲ…, ಡಾ| ದಿಲೀಪ್‌ ಕೊಪರ್ಡೆ, ಪ್ರಕಾಶ ಭಟ್‌ ಕಾನಿಂಗೆ, ರಮೇಶ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜೀವನದಲ್ಲಿ ಗುರಿ, ಗುರು ಅದರ ಜತೆಗೆ ಸಾಧಿಸುವ ಛಲವಿದ್ದರೆ ಯಾವ ಕಾರ್ಯವೂ ಅಸಾಧ್ಯವಲ್ಲ. ಒಂದು ಕಾಲದಲ್ಲಿ ಮಹಿಳೆ ಅಡುಗೆ ಕೋಣೆ ಹಾಗೂ ಮನೆಗೆಲಸಕ್ಕಷ್ಟೇ ಸೀಮಿತವಾಗಿದ್ದಳು. ಆದರೆ ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಇದಕ್ಕೆ ಪುರುಷರ ಪ್ರೋತ್ಸಾಹವೂ ಕಾರಣವಾಗಿದೆ. ಮಹಾನಗರ ಕನ್ನಡ

ಸಂಸ್ಥೆ ನೀಡಿದ ಈ ಪ್ರಶಸ್ತಿಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿ ನನ್ನ ಪರಿವಾರಕ್ಕೆ ಅರ್ಪಿಸುತ್ತೇನೆ. ದಶಮಾನೋತ್ಸವದ ಸಂಭ್ರಮದಲ್ಲಿರುವ ಮಹಾನಗರ ಕನ್ನಡ ಸಂಸ್ಥೆ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಿ ಕನ್ನಡದ ಕೈಂಕರ್ಯಕ್ಕೆ ಸದಾ ಬದ್ದವಾಗಿರಲಿ.ಪೂಜಾ ಉಮರಾಣಿ, ಸಮ್ಮಾನಿತರು

ಚಿತ್ರ-ವರದಿ: ಗುರುರಾಜ ಪೋತನೀಸ್‌

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.