ಡೊಂಬಿವಲಿ ಪಲಾವಾ ಕನ್ನಡಿಗರ ಸಂಘ:ಕರ್ನಾಟಕ ರಾಜ್ಯೋತ್ಸವ
Team Udayavani, Nov 10, 2017, 2:45 PM IST
ಡೊಂಬಿವಲಿ: ಡೊಂಬಿವಲಿ ಪೂರ್ವದಲ್ಲಿರುವ ಪಲಾವಾ ಕನ್ನಡಿಗರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವು ನ. 5ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ಅದ್ದೂರಿಯಾಗಿ ನಡೆಯಿತು.
ಸಂಸ್ಥೆಯ ಸದಸ್ಯೆ ಮೇಘಾ ಮತ್ತು ಅವರ ತಂಡದಿಂದ ಸಭಾಂಗಣದ ಎದುರಿಗೆ ಬಿಡಿಸಿದ ಸುಂದರವಾದ ರಂಗೋಲಿಯ ಚಿತ್ರ, ಅದರ ಸುತ್ತಲೂ ಇಟ್ಟ ಚಿಕ್ಕ ಚಿಕ್ಕ ಹಣತೆಗಳು ಗಗನದಲ್ಲಿ ಮಿನುಗುತ್ತಿದ್ದ ತಾರೆಗಳಿಗಿಂತ ತಾವೇನು ಕಮ್ಮಿ ಇಲ್ಲ ಎನ್ನುವಂತೆ ಹೊಳೆಯುತ್ತಿದ್ದವು. ಪಕ್ಕದಲ್ಲೇ ಅದೇ ತಂಡದಿಂದ ಹೂವಿನಲ್ಲಿ ಬಿಡಿಸಿದ ಕರ್ನಾಟಕದ ನಕ್ಷೆ ಕನ್ನಡದ ಶ್ರೀಗಂಧದ ಪರಿಮಳವನ್ನು ಸೂಸುತ್ತಿತ್ತು.
ಸಭಾಂಗಣದ ಬಾಗಿಲಲ್ಲಿ ಮುತ್ತೈದೆಯರಿಗೆ ಇಡುತ್ತಿದ್ದ ಕುಂಕುಮ, ಮುಡಿಯಲು ಪುಟ್ಟ ಮಕ್ಕಳು ಕೊಡುತ್ತಿದ್ದ ಹೂಗಳು ಕನ್ನಡದ ಸಂಸ್ಕೃತಿಯನ್ನು ಸಾರುತ್ತಿದ್ದವು. ಎದುರಿನ ಮಂಟಪದ ಹಿಂದೆ ಹಾಕಿದ್ದ ಕನ್ನಡದ ಫಲಕಗಳು, ನೆರೆದ ಅಲ್ಲಿ ಕನ್ನಡಿಗರು ಒಬ್ಬರನ್ನೊಬ್ಬರು ಪರಿಚಯಿಸಿಕೊಂಡು, ಆತ್ಮೀಯತೆಯಿಂದ ಮಾತನಾಡುತ್ತಿದ್ದ ರೀತಿ ಒಂದು ರೀತಿಯ ಮಿನಿ ಕರ್ನಾಟಕವನ್ನೇ ಸೃಷ್ಟಿಸಿತ್ತು.
ಹಿರಿಯ ಲೇಖಕಿ, ಸಂಶೋಧಕಿ ಡಾ| ಸುಮಾದ್ವಾರಕಾನಾಥ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅನಂತರ ಸಂಸ್ಥೆಯ ಸದಸ್ಯೆಯರಿಂದ, ಮಕ್ಕಳಿಂದ ಸ್ವಾಗತ ಗೀತೆ, ಸ್ವಾಗತ ನೃತ್ಯ, ಸಂಗೊಳ್ಳಿ ರಾಯಣ್ಣನ ಕಿರು ನಾಟಕ, ಘಲ್ಲು ಘಲ್ಲು ಕುಣಿಸಿದ ಗೆಜ್ಜೆಗಳು, ಬಳೆಗಾರ ಮಂಟಪಕ್ಕೆ ಬಂದು ಬಳೆ ತೊಡಿಸಿ ಹೋದ ಸಂದರ್ಭ, ಭಾವಗೀತೆಗಳು, ಚಿಕ್ಕ ಮಕ್ಕಳ ನೃತ್ಯಗಳು, ಛದ್ಮವೇಷ, ನಾಡಗೀತೆ ಇತ್ಯಾದಿಗಳು ನೋಡುಗರನ್ನು ಆಕರ್ಷಿಸಿತು.
ರಾಹುಲ್ ಮತ್ತು ವರುಣ್ ಅವರಿಂದ ರಸಪ್ರಶ್ನೆ ಕಾರ್ಯಕ್ರಮ, ಅಂತಾಕ್ಷರಿ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಒಂದು ಕಾಲದಲ್ಲಿ ಪುಟ್ಟ ಸಸಿಯಾಗಿ ನೆಟ್ಟ ಪಲಾವ್ ಕನ್ನಡ ಸಂಘವು ಇಂದು ಗಿಡವಾಗಿ ಬೆಳೆದಿದೆ. ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ವಾರಗಟ್ಟಲೆ ತಯಾರಿ, ಪೂರ್ವ ಸಿದ್ಧತೆ, ಯೋಜನೆಗಳು, ರಂಗೋಲಿ ತಂಡದಿಂದ ರಂಗೋಲಿಯ ಸಿದ್ಧತೆ, ಸಾಂಸ್ಕೃತಿಕ ತಂಡದಿಂದ ಹಾಡು ನೃತ್ಯಗಳ ಸಿದ್ಧತೆ, ತಂಡದಿಂದ ಸಮಾರಂಭವನ್ನು ನಡೆಸಿಕೊಡಲು ಬೇಕಾದ ಸಿದ್ಧತೆಗೆ ಸಂಸ್ಥೆಯ ಸದಸ್ಯ ಬಾಂಧವರು ಸಹಕರಿಸಿ ಸಮಾರಂಭವು ಯಶಸ್ವಿಯಾಗಿ ನೆರವೇರಿಸಿ ಅತಿಥಿ-ಗಣ್ಯರ ಪ್ರಶಂಸೆಗೆ ಪಾತ್ರರಾದರು. ಅವಿನಾಶ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.