ಡೊಂಬಿವಲಿ ಶ್ರೀ ಬಸವ ಸೇವಾ ಮಂಡಳ: ಬಸವೇಶ್ವರ ಜಯಂತಿ 

Team Udayavani, Apr 24, 2018, 2:08 PM IST

2204mum03.jpg

ಡೊಂಬಿವಲಿ: ವೀರಶೈವ ಹಾಗೂ ಲಿಂಗಾಯತರು ಧರ್ಮದ ವಿಷಯದಲ್ಲಿ ಕಾದಾಡದೆ ಪರಸ್ಪರ ಒಗ್ಗಟ್ಟಿನಿಂದ ಮುನ್ನಡೆದು ಇಷ್ಟಲಿಂಗದ ಉಪಾಸನೆ ಮಾಡುವುದರಿಂದ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಸತಾರಾ ಶ್ರೀಕ್ಷೇತ್ರವಾಮಿ ಮಠದ ಶ್ರೀ ಮಹಾದೇವ ಶಿವಾಚಾರ್ಯ ಮಹಾರಾಜರು ಅವರು  ನುಡಿದರು.

ಎ. 21 ರಂದು ಸಂಜೆ ಡೊಂಬಿವಲಿ ಪೂರ್ವದ ಸರ್ವೇಶ ಸಭಾಗೃಹದಲ್ಲಿ ಡೊಂಬಿ ವಲಿಯ ಶ್ರೀ ಬಸವ ಸೇವಾ ಮಂಡಳದ ವತಿಯಿಂದ ನಡೆದ ಜಗಜ್ಯೋತಿ ಶ್ರೀ ಬಸವೇಶ್ವರ 886 ನೇ ಜಯಂತಿ ಉತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಆಧ್ಯಾತ್ಮಿಕತೆಯ ಬೇರುಗಳು ಸಡಿಲಗೊಂಡಿವೆ. ನಮ್ಮ ಅಂತ:ಕರಣ ಮಲೀನವಾಗಿವೆ. ನಾವು ಜಾತಿಯಿಂದ ಲಿಂಗಾಯಿತರಾಗಿರದೆ ಸಂಸ್ಕಾರದಿಂದ ಲಿಂಗಾಯತರಾಗಬೇಕು. ಜಾತೀಯತೆಯ ಲಿಂಗಾಯತ ಧರ್ಮಕ್ಕಿಂತ ಬಸವ ತತ್ವಗಳ ಆಧಾರಿತ ದೃಷ್ಟಿಯಲ್ಲಿ ದೇಹವೇ ದೇಗುಲವಾಗಿದ್ದು, ಅದರಲ್ಲಿ ನಾವು ಆ ಪರಮಾತ್ಮನನ್ನು ಪ್ರತಿಷ್ಠಾಪಿಸಬೇಕಾಗಿದೆ. ಸಕಲ ಮಾನವ ಕುಲಕ್ಕೆ ಲೇಸನ್ನೆ ಬಯಸುವ ಬಸವ ತತ್ವಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಡೊಂಬಿವಲಿಯ ಶ್ರೀ ಬಸವ ಸೇವಾ ಮಂಡಳದ ಕಾರ್ಯವೈಖರಿ ಅಭಿನಂದನೀಯವಾಗಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಶ್ವ ಲಿಂಗಾಯತ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಶಿಕಾಂತ್‌ ಪಟ್ಟಣ ಅವರು ಮಾತನಾಡಿ, 12 ನೇ ಶತಮಾನದಲ್ಲಿ ಸಮಾನತೆಗಾಗಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ ಹೆಗ್ಗಳಿಕೆ ಜಗಜ್ಯೋತಿ ಬಸವೇಶ್ವರರದ್ದಾಗಿದೆ. ಡಾ| ಬಾಬಾ ಸಾಹೇಬ ಅಂಬೇಡ್ಕರ್‌ ಅವರು ಸಂವಿಧಾನದ ಶಿಲ್ಪಿಯಾದರೆ, ಬಸವೇಶ್ವರರು ಸಂವಿ ಧಾನದ ಜನಕರಾಗಿದ್ದಾರೆ. ಕಾರ್ಲ್ ಮಾರ್ಕ್ಸ್

ನಂತವರು ಸಮಾನತೆಯಲ್ಲಿ ಒಂದು ಹೆಜ್ಜೆ ಮುಂದಿದ್ದ ಬಸವೇಶ್ವರರ ಕಾಯಕಕ್ಕೆ ಪಾವಿತ್ರÂತೆ ನೀಡಿದರಲ್ಲದೆ ಮಹಿಳೆಯರಿಗೆ ಸಮಾನತೆಯನ್ನು ದೊರಕಿಸಿಕೊಡಲು ಪ್ರಯತ್ನಿಸಿದರು. ನಮ್ಮ ದೃಷ್ಟಿಯಲ್ಲಿ ಬಸವೇಶ್ವರರೇ ಜಗದ್ಗುರು. ಜನ ಸಾಮಾನ್ಯರಿಗೂ ಮೂಲಭೂತ ಅರ್ಥವನ್ನು ಒದಗಿಸಿಕೊಟ್ಟ ಮಹಾನ್‌ ಸಾಧಕ ಬಸವಣ್ಣನವರಾಗಿದ್ದಾರೆ ಎಂದು ನುಡಿದು, ವಿಶ್ವಗುರು ಬಸವೇಶ್ವರರ ವಚನಗಳ ಬಗ್ಗೆ ವಿವರಿಸಿದರು.

ಇನ್ನೋರ್ವ ಅತಿಥಿ ಮಂಜುನಾಥ ವಿದ್ಯಾ ಲಯ ಡೊಂಬಿವಲಿ ಇದರ ಪ್ರಾಂಶುಪಾಲ ಡಾ| ವಿ. ಎಸ್‌. ಅಡಿಗಲ್‌ ಅವರು ಮಾತನಾಡಿ, ಶ್ರೀ ಬಸವೇಶ್ವರರು ಜನಸಾಮಾನ್ಯರಿಗೂ ತಿಳಿಯು ವಂತಹ ವಚನಗಳನ್ನು ರಚಿಸಿದ್ದು, 23 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಅನುವಾದಿತ ಗೊಂಡಿವೆ. ಇಡೀ ವಿಶ್ವವೇ ಮೆಚ್ಚಿದ ಈ ವಿಶ್ವಗುರುವಿನ ತತ್ವಗಳನ್ನು ಜೀವನದಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯ ವಾಗಿಲ್ಲ. ಮೂಡನಂಬಿಕೆಯ ವಿರುದ್ಧ ಹಾಗೂ ಮಹಿಳಾ ಸಬಲಿಕರಣಕ್ಕಾಗಿ ಹೋರಾಡಿದ ವ್ಯಕ್ತಿ ಬಸವೇಶ್ವರರಾಗಿದ್ದು, ಅವರ ಹೆಸರು ಹಾಗೂ ತತ್ವಗಳನ್ನು ಜಯಘೋಷವಾಗಿ ಮೀಸಲಿಡದೆ ಜನಮನಗಳನ್ನು ಮುಟ್ಟಿಸುವಂತೆ ನಾವೆಲ್ಲರು ಪ್ರಯತ್ನಿಸಬೇಕು. ಡೊಂಬಿವಲಿಯ ಶ್ರೀ  ಬಸವ ಸೇವಾ ಮಂಡಳದ ಕಾರ್ಯ ನಿಜವಾಗಿಯೂ ಅನುಕರಣೀಯವಾಗಿದೆ ಎಂದರು.

ವಚನ ಸಾಹಿತ್ಯದ ಅಭ್ಯಾಸಕ ಬಸವರಾಜ ಪೂಜಾರಿ ಅವರು ಕನ್ನಡ ವಚನ ಸಾಹಿತ್ಯಕ್ಕೆ  ಹರ್ಡಿಕರ ಮಂಜಪ್ಪ ಮತ್ತು ಫ. ಗು. ಹಳಕಟ್ಟಿ ಅವರ ಕೊಡುಗೆಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ನಾಗರಿಕರು ಹಾಗೂ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಿ ಗೌರವಿಸಲಾಯಿತು.

75 ನೇ ಹುಟ್ಟುಹಬ್ಬ ಮತ್ತು ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಅಚರಿಸಿದ ಶ್ರೀ ಬಸವ ಸೇವಾ ಮಂಡಳ ಡೊಂಬಿವಲಿ ಇದರ ಅಧ್ಯಕ್ಷ, ಉದ್ಯಮಿ ಆರ್‌. ಬಿ. ಹೆಬ್ಬಳ್ಳಿ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಆರ್‌. ಬಿ. ಹೆಬ್ಬಳ್ಳಿ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಕಾರ್ಯದರ್ಶಿ ರಮೇಶ್‌ ನ್ಹಾವಕರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಪ್ಪಾ ಬಿರಾದಾರ ವಂದಿಸಿದರು. ಕಾರ್ಯಾಧ್ಯಕ್ಷ ಬಸವಲಿಂಗಪ್ಪ ಸೊಡ್ಡಗಿ ಸಂಸ್ಥೆ ನಡೆದು ಬಂದ ಬಗೆಯನ್ನು ವಿವರಿಸಿದರು. ನೂರಾರು ಬಸವ ಅನುಯಾಯಿಗಳು, ಭಕ್ತರು ಉಪಸ್ಥಿತರಿದ್ದರು. 

ಚಿತ್ರ-ವರದಿ : ಗುರುರಾಜ ಪೋತನೀಸ್‌

ಟಾಪ್ ನ್ಯೂಸ್

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

1(1

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.