ಡೊಂಬಿವಲಿ ಶ್ರೀ ಜಗದಂಬಾ ಮಂದಿರ 3ನೇ ಪ್ರತಿಷ್ಠಾಪನಾ ಮಹೋತ್ಸವ
Team Udayavani, Mar 13, 2018, 2:35 PM IST
ಡೊಂಬಿವಲಿ: ತುಳು-ಕನ್ನಡಿಗರ ಕೇಂದ್ರವೆಂದೇ ಖ್ಯಾತಿಯಾಗಿರುವ ಡೊಂಬಿವಲಿ ಪಟ್ಟಣದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡ, ತುಳು ಕನ್ನಡಿಗರ ಶ್ರದ್ಧಾಕೇಂದ್ರವಾದ ಡೊಂಬಿವಲಿ ಪಶ್ಚಿಮದ ಶ್ರೀ ಜಗದಂಬಾ ಮಂದಿರದ 3ನೇ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವವು ವೇದಮೂರ್ತಿ ಪಂಡಿತ್ ಗುರುಪ್ರಸಾದ್ ಭಟ್ ಹಾಗೂ ಗಣೇಶ್ ಭಟ್ ಅವರ ಸಾರಥ್ಯದಲ್ಲಿ ಮಾ.11ರಂದು ಸಂಭ್ರಮ ಸಡಗರದಿಂದ ಜರಗಿತು.
ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಮಹಾಸಂಕಲ್ಪ, ಸ್ವಸ್ತಿ ಪುಣ್ಯಾಹ ವಾಚನ, ತೋರಣ ಮುಹೂರ್ತ, ಮಹಾಗಣಪತಿ ಹೋಮ, ಪ್ರಧಾನ ಹೋಮ, ಮಹಾಪಂಚಾಮೃತ ಅಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಅನಂತರ ಶ್ರೀ ಜಗದಂಬೆಯ ಬಲಿಮೂರ್ತಿಯನ್ನು ವಿವಿಧ ವಾದ್ಯ ಮೇಳ ಹಾಗೂ ವೇದ ಘೋಷಗಳ ಭವ್ಯ ಮೆರವಣಿಗೆಯೊಂದಿಗೆ ಮಧ್ಯ ಗೋಪಿನಾಥ ವೃತ್ತದಿಂದ ಶ್ರೀ ದೇವಿಯ ಸನ್ನಿಧಿಯವರೆಗೆ ತರಲಾಯಿತು. ವೇದಮೂರ್ತಿ ರವಿರಾಜ್ ಭಟ್ ನಂದಳಿಕೆ ಸಾರಥ್ಯದಲ್ಲಿ ಉತ್ಸವ ಬಲಿ, ಪಲ್ಲ ಪೂಜೆ ಹಾಗೂ ಮಂಗಳಾರತಿ ನಡೆಯಿತು.
ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಸಸಿಹಿತ್ಲು ಮಂಗಳೂರು ತಂಡದ ವತಿಯಿಂದ ಭಜನಾ ನೃತ್ಯ ಸಂಕೀರ್ತನೆ ನೆರೆದ ಭಕ್ತರ ಮನದ ಕದ ತಟ್ಟಿತು.
ಶ್ರೀ ದೇವಿಯ ಭವ್ಯ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ತಮ್ಮ ಪಾರಂಪರಿಕ ವೇಷಭೂಷಣಗಳೊಂದಿಗೆ ಪೂರ್ಣ ಕುಂಭ ಸಹಿತ ಭಾಗಿಯಾದರು. ಹುಲಿ ವೇಷ, ಬಣ್ಣದ ಕೊಡೆ ಹಿಡಿದ ವನಿತೆಯರು ಮೆರವಣಿಗೆಗೆ ಮೆರುಗು ನೀಡಿದರು. ದಿನೇಶ್ ಕೋಟ್ಯಾನ್ ಬಳಗದ ವಾದ್ಯ ಹಾಗೂ ಚೆಂಡೆ ವಾದನ ಮೆರಣಿಗೆಯ ಆಕರ್ಷಣೆಯಾಯಿತು.
ರಾತ್ರಿ ರಂಗಪೂಜೆ, ಮಹಾಪೂಜೆ, ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಥಾಣೆಯ ಉಸ್ತುವಾರಿ ಸಚಿವ ಏಕನಾಥ್ ಶಿಂಧೆ, ಥಾಣೆ ಜಿಲ್ಲಾ ಶಿವಸೇನಾ ಸಂಘಟಕ ಗೋಪಾಲ್ ಲಾಂಡೆY, ನಗರಸೇವಕರಾದ ರಾಜೇಶ್ ಮೋರೆ, ವಾಮನ್ ಮ್ಹಾತ್ರೆ, ಪ್ರಕಾಶ್ ಭೊಯೀರ್, ಶಿವಸೇನಾ ದಕ್ಷಿಣ ಭಾರತೀಯ ಘಟಕದ ಅಧ್ಯಕ್ಷ ಜಯ ಪೂಜಾರಿ, ಸಂಘಟಕ ಸುಭಾಶ್ ಶೆಟ್ಟಿ ಇನ್ನಂಜೆ, ಯಕ್ಷಕಲಾ ಸಂಸ್ಥೆಯ ಗೌರವ ಅಧ್ಯಕ್ಷ ದಿವಾಕರ್ ರೈ, ಅಧ್ಯಕ್ಷ ಹರೀಶ್ ಶೆಟ್ಟಿ, ರವೀಂದ್ರ ವೈ. ಶೆಟ್ಟಿ, ವಸಂತ್ ಸುವರ್ಣ, ಮಾಧವ್ ಭಂಡಾರಿ, ಆನಂದ್ ಶೆಟ್ಟಿ ಎಕ್ಕಾರು, ನಾಗಕಿರಣ್ ಶೆಟ್ಟಿ ದಂಪತಿ, ರಮಾನಂದ್ ಶೆಟ್ಟಿ, ರವಿ ಸನೀಲ್, ರಾಜೇಶ್ ಕೋಟ್ಯಾನ್, ನಾರಾಯಣ್ ಶೆಟ್ಟಿ, ಗುರುಸ್ವಾಮಿ ಹಾಗೂ ಮಂಡಳಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಹಾಗೂ ಡೊಂಬಿವಲಿ ಪರಿಸರದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಿತ ನೂರಾರು ಭಕ್ತ ಬಾಂಧವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಚಿತ್ರ,ವರದಿ: ಗುರುರಾಜ್ ಪೋತನೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.