ಡೊಂಬಿವಲಿ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ವಜ್ರ ಮಹೋತ್ಸವ
Team Udayavani, Feb 20, 2019, 5:46 PM IST
ಡೊಂಬಿವಲಿ: ದೂರದ ಕರ್ನಾಟಕದಿಂದ ಬಂದು ಇಲ್ಲಿಯವರ ಜೊತೆಗೆ ಬೆರೆತು, ಭಾವೈಕ್ಯತೆಯೊಂದಿಗೆ ತಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುತ್ತಿರುವ ತುಳು- ಕನ್ನಡಿಗರ ಶ್ರದ್ಧಾ ಭಕ್ತಿ ಅನನ್ಯ. ಅವರ ಹೃದಯ ವೈಶಾಲ್ಯತೆಗೆ ತಲೆಭಾಗಿದ್ದೇವೆ ಎಂದು ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯ ಮೇಯರ್ ವಿನೀತಾ ವಿ. ರಾಣೆ ಹೇಳಿದರು.
ಫೆ. 17 ರಂದು ಸಂಜೆ ಡೊಂಬಿವಲಿ ಪೂರ್ವದ ಶ್ರೀ ವರದ ಸಿದ್ಧಿವಿನಾಯಕ ಸಭಾಗೃಹದಲ್ಲಿ ನಡೆದ ಡೊಂಬಿವಲಿಯ ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ವಜ್ರ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಅಂದು ನಿಮ್ಮ ಹಿರಿಯರು ನೆಟ್ಟ ಸಸಿ ಇವತ್ತು ವಿಶಾಲ ವಟವೃಕ್ಷವಾಗಿ ಬೆಳೆದಿದ್ದು, ತಮ್ಮ ಸತತ ಪ್ರಯತ್ನ ಹಾಗೂ ಶ್ರದ್ಧಾಭಕ್ತಿಯ ಪ್ರತೀಕವಾಗಿದೆ. ತಮ್ಮ ಸಂಸ್ಥೆಯ ಈ ವಜ್ರ ಮಹೋತ್ಸವದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ. ನಿಮ್ಮೆಲ್ಲರ ಬಹುದಿನಗಳ ಕನಸಾದ ನೂತನ ಮಂದಿರ ನಿರ್ಮಾಣಕ್ಕೆ ನನ್ನ ಸಂಪೂರ್ಣ ಸಹಕಾರವಿದ್ದು, ಧರ್ಮ ಸಂಸ್ಕೃತಿಯನ್ನು ತಮ್ಮ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.
ಇನ್ನೋರ್ವ ಅತಿಥಿ ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯ ಸದಸ್ಯ ವಿಶ್ವನಾಥ ರಾಣೆ ಅವರು ಮಾತನಾಡಿ, ನಮ್ಮ ನಿಮ್ಮೆಲ್ಲರ ಶ್ರದ್ಧಾಕೇಂದ್ರವಾದ ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯನ್ನು ವಜ್ರ ಮಹೋತ್ಸವದ ಸಂಭ್ರಮವನ್ನು ಕಂಡು ಅಪಾರ ಸಂತಸವಾಗಿದ್ದು, ಮುಂಬರುವ ದಿನಗಳಲ್ಲಿ ತಮ್ಮ ಬಹುದಿನಗಳ ಮಂದಿರ ನಿರ್ಮಾಣದ ಕನಸು ನನಸಾಗಲಿದ್ದು, ಮಂದಿರದ ನಿವೇಶನಕ್ಕಾಗಿ ತಮ್ಮ ಸಂಪೂರ್ಣ ಸಹಕಾರ ಇದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿÅà ಇದರ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಇವರು ಮಾತನಾಡಿ, ಸಂಸ್ಥೆಯ ಪದಾಧಿಕಾರಿಗಳ ಸತತ ಪ್ರಯತ್ನ, ಪ್ರಬಲವಾದ ಇಚ್ಛಾಶಕ್ತಿ ಹಾಗೂ ಶ್ರದ್ಧಾಭಕ್ತಿ ಯಿಂದ ಈ ಸಂಸ್ಥೆ ಆರು ದಶಕಗಳನ್ನು ಕಂಡಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೆ ಆದ ವಿಶೇಷ ಸ್ಥಾನಮಾನವನ್ನು ಹೊಂದಿದ್ದು, ನಿಮ್ಮ ಕನಸಿನ ಭವ್ಯ ಮಂದಿರದ ನಿರ್ಮಾಣದ ಕಾರ್ಯ ಶೀಘ್ರವೇ ನೆರವೇರಲಿ ಎಂದರು.
ಅತಿಥಿಯಾಗಿ ಆಗಮಿಸಿದ ಸುಬ್ಬಯ್ಯ ಶೆಟ್ಟಿ ಮಾತನಾಡಿ, ಇಂದ್ರಾಳಿ ದಿವಾಕರ ಶೆಟ್ಟಿ ಅವರಂತ ಹ ಅನುಭವಿ ವ್ಯಕ್ತಿಗಳ ಜತೆ ಈ ಸಂಸ್ಥೆಯಲ್ಲಿ ಕಾರ್ಯವೆಸಗುವ ಅವಕಾಶ ದೊರಕಿದ್ದು, ನನ್ನ ಸೌಭಾಗ್ಯ. ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕೆ ತಾವು ಸದಾ ಬದ್ಧರಾಗಿದ್ದೇವೆ ಎಂದರು.
ಕರ್ನಾಟಕ ಸಂಘ ಡೊಂಬಿವಲಿ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಮಾತನಾಡಿ, ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ಪರಮಾತ್ಮನ ಸೇವೆ ನಿತ್ಯನಿರಂತರವಾಗಿರಲಿ. ದೇವರ ಅನುಗ್ರಹ ದಿಂದ ನಿಮ್ಮೆಲ್ಲರ ಕನಸು ನನಸಾಗಲಿ ಎಂದರು.
ಮತ್ತೋರ್ವ ಅತಿಥಿ ಆನಂದ ಶೆಟ್ಟಿ ಎಕ್ಕಾರು ಅವರು ಮಾತನಾಡಿ, ಈ ಸಂಸ್ಥೆಯಲ್ಲಿ ಕೆಲಸ ಮಾಡು ವುದು ಒಂದು ರೀತಿಯ ಸೌಭಾಗ್ಯ ಎನ್ನಬಹುದು. ಆದ್ದರಿಂದ ನಾವೆಲ್ಲರೂ ಒಂದಾಗಿ ಶ್ರೀ ರಾಧಾಕೃಷ್ಣ ಹಾಗೂ ಶ್ರೀ ಶನೀಶ್ವರ ದೇವರ ಸೇವೆಗೈದು ಪುನೀತರಾಗೋಣ ಎಂದು ಕರೆ ನೀಡಿದರು. ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಶ್ರೀ ರಾಧಾಕೃಷ್ಣ ಹಾಗೂ ಶ್ರೀ ಶನೀಶ್ವರ ಮಂದಿರದ ವಜ್ರ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾದ ಎನ್. ಟಿ. ಪೂಜಾರಿ ಅವರು ಸಂಸ್ಥೆಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಮಂಡಳಿಯ ಶ್ರೇಯೋಭಿ ವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಎಸ್. ಟಿ. ವಿಜಯಕುಮಾರ್, ರವಿ ಸನಿಲ್ ದಂಪತಿ, ಸೋಮನಾಥ ಪೂಜಾರಿ, ಶೇಖರ್ ಪುತ್ರನ್, ಶೇಖರ ಕೋಟ್ಯಾನ್, ಅಶೋಕ್ ಪ್ರಸಾದ್, ರಾಜೇಶ್ ಕೋಟ್ಯಾನ್, ಪ್ರಧಾನ ಅರ್ಚಕ ಪ್ರಕಾಶ್ ಭಟ್ ದಂಪತಿ, ಯು. ಲಕ್ಷ್ಮಣ್ ಸುವರ್ಣ, ಆನಂದ್ ಪುತ್ರನ್, ಜಗದೀಶ್ ನಿಟ್ಟೆ, ಗಂಗಾಧರ ಕಾಂಚನ್, ಪುರಂದರ ಕೋಟ್ಯಾನ್, ಸುಕುಮಾರ್ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ರಾಜೀವ ಭಂಡಾರಿ, ಆನಂದ ಶೆಟ್ಟಿ ಎಕ್ಕಾರು, ವಸಂತ ಸುವರ್ಣ, ಮಹಿಳಾ ವಿಭಾಗದ ಸದಸ್ಯೆಯರನ್ನು ಗೌರವಿಸಲಾಯಿತು.
ಯುವ ಪ್ರತಿಭೆ ದೀಕ್ಷಾ ಶೇಖರ್ ಪುತ್ರನ್ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸ ಲಾಯಿತು. ಪ್ರಾರಂಭದಲ್ಲಿ ಇತ್ತೀಚೆಗೆ ಕಾಶ್ಮೀರದಲ್ಲಿ ಭಯೋತ್ಪಾದಕರ ಪೈಶಾಚಿಕ ಕೃತಕ್ಕೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುರಂದರ ಕೋಟ್ಯಾನ್, ಜಗದೀಶ್ ನಿಟ್ಟೆ, ಗಂಗಾಧರ ಕಾಂಚನ್, ರವಿ ಕುಕ್ಯಾನ್ ಹಾಗೂ ರಮೇಶ್ ಸಾಲ್ಯಾನ್ ಪ್ರಾರ್ಥನೆಗೈದರು. ಗಣ್ಯರು ಜ್ಯೋತಿ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮಂಡಳಿಯ ಉಪಾಧ್ಯಕ್ಷ ರವಿ ಸನಿಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ್ ಕೋಟ್ಯಾನ್ ವಂದಿಸಿದರು.
ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬಯಿ ಹಾಗೂ ಆಹ್ವಾನಿತ ಕಲಾವಿದರ ಕೂಡುವಿಕೆಯಲ್ಲಿ ಕನಕಾಂಗಿ ಕಲ್ಯಾಣ ಯಕ್ಷಗಾನ, ವಿವಿಧ ಸಂಘ-ಸಂಸ್ಥೆಗಳ ಕಲಾವಿದರುಗಳಿಂದ ನೃತ್ಯ ವೈವಿಧ್ಯ ನಡೆಯಿತು. ವೇದಿಕೆಯಲ್ಲಿ ಇಂದ್ರಾಳಿ ದಿವಾಕರ ಶೆಟ್ಟಿ, ಎನ್. ಟಿ. ಪೂಜಾರಿ, ಎಸ್. ಟಿ. ವಿಜಯ ಕುಮಾರ್, ವಿನೀತಾ ರಾಣೆ, ವಿಶ್ವನಾಥ ರಾಣೆ, ಯಶೋದಾ ಪೂಜಾರಿ, ಪ್ರಕಾಶ್ ಭಟ್, ರವಿ ಸನಿಲ್, ಸುಬ್ಬಯ್ಯ ಶೆಟ್ಟಿ, ರವೀಂದ್ರ ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರು, ಸುಕುಮಾರ್ ಶೆಟ್ಟಿ, ರಾಜೀವ ಭಂಡಾರಿ, ಸೋಮನಾಥ ಪೂಜಾರಿ, ಶೇಖರ ಕೋಟ್ಯಾನ್, ಶೇಖರ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು. ಅಶೋಕ್ ಶೆಟ್ಟಿ, ಮೋಹನ್ ಸಾಲ್ಯಾನ್, ನ್ಯಾಯವಾದಿ ಆರ್. ಎಂ. ಭಂಡಾರಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ : ಗುರುರಾಜ ಪೋತನೀಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.