ಡೊಂಬಿವಲಿ ಶ್ರೀ ರಾಧಾಕೃಷ್ಣ ಶ್ರೀ ಶನೀಶ್ವರ ಮಂದಿರ: ಧಾರ್ಮಿಕ ಸಭೆ
Team Udayavani, Nov 17, 2018, 4:25 PM IST
ಡೊಂಬಿವಲಿ: ನಾನು ಕಷ್ಟದಲ್ಲಿರುವಾಗ ಈ ಸ್ಥಳದಲ್ಲಿ ಬಂದು ಪ್ರಾರ್ಥಿಸಿ ನನ್ನ ಕಷ್ಟ ಗಳನ್ನು ಪರಿಹರಿಸಿಕೊಂಡಿದ್ದೇನೆ. ಉದ್ಯಮವನ್ನು ಪ್ರಾರಂಭಿಸುವಾಗ ತಾಯಿಯ ಪ್ರೇರಣೆಯಂತೆ ಇಲ್ಲಿ ಪ್ರಾರ್ಥಿಸಿದ ಅನಂತರ ಉದ್ಯಮದಲ್ಲಿ ಯಶಸ್ಸನ್ನು ಕಂಡಿದ್ದೇನೆ. ನಾವೆಲ್ಲರೂ ಒಂದಾಗಿ ಈ ಮಂದಿರವನ್ನು ಭವ್ಯ ದೇವಸ್ಥಾನವನ್ನಾಗಿಸೋಣ ಎಂದು ಉದ್ಯಮಿ ದಿನೇಶ್ ಕೋಟ್ಯಾನ್ ನುಡಿದರು.
ಡೊಂಬಿವಲಿ ಪಶ್ಚಿಮದ ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ಸಂಚಾಲಕತ್ವದ ಶ್ರೀ ರಾಧಾಕೃಷ್ಣ ಶ್ರೀ ಶನೀಶ್ವರ ಮಂದಿರದ 60 ನೇ ವಾರ್ಷಿಕ ಮಂಗಳ್ಳೋತ್ಸವ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಂದಿರದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ವಾಗಿದೆ. ಎಲ್ಲರು ಒಗ್ಗಟ್ಟಿನಿಂದ ಮಂದಿರವನ್ನು ನಿರ್ಮಿಸೋಣ. ಅದಕ್ಕಾಗಿ ತುಳು-ಕನ್ನಡಿಗರು ಕಟಿ ಬದ್ಧರಾಗೋಣ ಎಂದರು.
ವಜ್ರ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಜಾತಿ, ಮತ, ಭೇದವನ್ನು ಮರೆತು ಕಳೆದ ಎರಡು ದಿನಗಳಿಂದ ಎಲ್ಲ ಸದಸ್ಯರು ಅದರೊಂದಿಗೆ ವಿಶೇಷವಾಗಿ ಮಹಿಳಾ ವೃಂದ ಬಹಳಷ್ಟು ಶ್ರಮವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆ. ನಾವೆಲ್ಲರೂ ಒಂದಾಗಿ ಭವ್ಯ ದೇವ ಸ್ಥಾನ ನಿರ್ಮಿಸುವುದರೊಂದಿಗೆ ಡೊಂಬಿವಲಿಯ ಪ್ರಸಿದ್ಧ ಕ್ಷೇತ್ರವನ್ನಾಗಿ ಸೋಣ ಎಂದರು.
ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಕಲ್ಲಡ್ಕ ಕರುಣಾಕರ ಶೆಟ್ಟಿ ಅವರು ಮಾತನಾಡಿ, ದೇವಸ್ಥಾನ, ಮಠ, ಮಂದಿರ, ಹಿಂದುತ್ವದ ಸಂಕೇತ ವಾಗಿದೆ. ನಮ್ಮ ಹಿರಿಯರು ಹಿಂದು ತ್ವದ ಮೂಲವನ್ನು ಉಳಿಸಲು ಅಂದಿನ ದಿನಗಳಲ್ಲೇ ಅಡಿಪಾಯವನ್ನು ಹಾಕಿದ್ದಾರೆ. ನಮ್ಮ ಉದ್ದೇಶ, ದೇವರ ಅನುಗ್ರಹವಿದ್ದರೆ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದು ನುಡಿದರು.
ಬಂಟರ ಸಂಘ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಸಂಘಟಕ ಸುಬ್ಬಯ್ಯ ಶೆಟ್ಟಿ ಅವರು ಮಾತನಾಡಿ, ದಿವಾಕರ ಶೆಟ್ಟಿ ಇಂದ್ರಾಳಿಯವರೊಂದಿಗೆ ಮಂದಿರದ ಕೆಲಸದಲ್ಲಿ ನನ್ನನ್ನು ಭಾಗಿಯಾಗಿಸಿದ್ದೀರಿ. ಈ ಕ್ಷೇತ್ರದ ಅಭಿವೃದ್ಧಿಯಲ್ಲಿ ನನ್ನ ಕೊಡುಗೆ ನೀಡಲು ತಯಾರಿದ್ದೇನೆ. ಡೊಂಬಿವಲಿಯಲ್ಲಿ ರಾಧಾಕೃಷ್ಣ ಶ್ರೀ ಶನಿದೇವರ ಭವ್ಯ ದೇವಸ್ಥಾನದ ನಿರ್ಮಾಣಕ್ಕೆ ತಯಾರಾಗೋಣ ಎಂದು ಹೇಳಿದರು.
ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ಸ್ಥಳದಲ್ಲಿ ಉತ್ತಮ ಕಾರ್ಯಕ್ರಮಗಳು ಜರ ಗುತ್ತಿವೆ. ನಿಮ್ಮೆಲ್ಲರ ಸಹಕಾರ ದೇವರ ದಯೆಯಿಂದ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ. ತಾಯ್ನಾಡಿನ ಸಂಸ್ಕೃತಿಯನ್ನು ಇಲ್ಲಿ ಕಾಣುವಂತಾಯಿತು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ರವಿ ಸನಿಲ್ ಅವರು ಮಾತನಾಡಿ, ಕ್ಷೇತ್ರದ ಮಹಿಳಾ ವಿಭಾಗದ ಕೆಲಸಗಳು ಅಚ್ಚು ಕಟ್ಟಾಗಿ ನಡೆಯುವುದರಿಂದ ನಮ್ಮ ಕಾರ್ಯಕಲಾಪಗಳು ಸುಸಾಂಗವಾಗಿ ನೆರವೇರುತ್ತಿದೆ. ಕಾರ್ಯಕಾರಿ ಸಮಿ ತಿಯ ಬೆಂಬಲ, ಅರ್ಚಕರ ಪ್ರೋತ್ಸಾಹ ಈ ಸಂಸ್ಥೆಯೊಂದಿಗಿದೆ. ನಾವೆಲ್ಲರೂ ಶೀಘ್ರದಲ್ಲೇ ಭವ್ಯ ದೇವಸ್ಥಾನ ನಿರ್ಮಿ ಸೋಣ ಎಂದರು.
ಕಾರ್ಯದರ್ಶಿ ಸೋಮನಾಥ ಪೂಜಾರಿ ಸ್ವಾಗತಿಸಿ ಅಧಿಕ ಧನ ಸಂಗ್ರಹಿಸಿದವರ ಯಾದಿ ಓದಿದರು. ಬೆಳಗ್ಗೆ ಶ್ರೀ ಸತ್ಯನಾರಾಯಣ ಮಹಾ ಪೂಜೆ ನಡೆಯಿತು. ಪೂಜಾ ವಿಧಿ- ವಿಧಾನಗಳಲ್ಲಿ ಶೇಖರ್ ಭುವಾಜಿ ಸಹಕರಿಸಿದರು. ವಜ್ರ ಮಹೋತ್ಸವದ ಕಾರ್ಯದರ್ಶಿ ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ರವಿ ಸನಿಲ್, ರಾಜೀವ ಭಂಡಾರಿ, ರಾಮಣ್ಣ ಶೆಟ್ಟಿ, ರವೀಂದ್ರ ವೈ. ಶೆಟ್ಟಿ, ಹರೀಶ್ ಶೆಟ್ಟಿ, ಪ್ರಕಾಶ್ ಭಟ್, ಆರ್. ಬಿ. ಶೆಟ್ಟಿ, ಶೇಖರ್ ಭುವಾಜಿ, ಶೇಖರ್ ಪುತ್ರನ್, ಲಕ್ಷ್ಮಣ್ ಸುವರ್ಣ, ಸೋಮನಾಥ ಪೂಜಾರಿ, ವಸಂತ ಸುವರ್ಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.