ಡೊಂಬಿವಲಿ ಪಶ್ಚಿಮ ಸಾರ್ವಜನಿಕ ಮಂಡಳಿ:ನವರಾತ್ರ್ಯುತ್ಸವ ಪ್ರಾರಂಭ
Team Udayavani, Oct 12, 2018, 11:45 AM IST
ಮುಂಬಯಿ: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರುéತ್ಸವ ಮಂಡಳಿ ಡೊಂಬಿವಲಿ ಇದರ 54 ನೇ ವಾರ್ಷಿಕ ನವರಾತ್ರ್ಯುತ್ಸವ ಸಂಭ್ರಮವು ಅ. 10 ರಿಂದ ಪ್ರಾರಂಭಗೊಂಡಿದ್ದು, ಅ. 18 ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಡೊಂಬಿವಲಿ ಪ. ರೈಲ್ವೇ ನಿಲ್ದಾಣ ಸಮೀಪದ, ಮಹಾತ್ಮಾ ಗಾಂಧಿ ರೋಡ್, ರೇತಿ ಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಉತ್ಸವವು ನಡೆಯುತ್ತಿದೆ.
ಪ್ರತೀ ದಿನ ಮಧ್ಯಾಹ್ನ 12.30 ಕ್ಕೆ ಮತ್ತು ರಾತ್ರಿ 8.30 ಕ್ಕೆ ಶ್ರೀ ದೇವಿಯ ಪೂಜಾ ವಿಧಿ-ವಿಧಾನಗಳು ಜರಗಿ, ಮಂಗಳಾರತಿಯ ಆನಂತರ ಪ್ರಸಾದ ವಿತರಿಸಲಾಗುತ್ತಿದೆ. ಪೂಜೆ ನೀಡಲಿಚ್ಛಿಸುವ ಭಕ್ತರು ಪೂಜಾ ರಶೀದಿ ಮಾಡಿಸಿ ರಶೀದಿ ಕೊಟ್ಟು, ಪ್ರಸಾದವನ್ನು ಪಡೆಯತಕ್ಕದ್ದು. ಹೂವಿನ ಪೂಜೆ ನೀಡುವ ಭಕ್ತರು ಬೆಳಗ್ಗೆ 8.30 ರಿಂದ ರಾತ್ರಿ 11.30 ರ ಕಾಲಾವಧಿಯಲ್ಲಿ ರಶೀದಿಯನ್ನು ತೋರಿಸಿ ಪ್ರಸಾದವನ್ನು ಸ್ವೀಕರಿಸಬಹುದು. ಅ. 16 ರಂದು ಅಪರಾಹ್ನ 3 ರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಲಿದೆ. ಅ. 14 ಮತ್ತು ಅ. 15 ರಂದು ಸಂಜೆ 7.30 ರಿಂದ ರಂಗಪೂಜೆ ನಡೆಯಲಿದೆ.
ಅ. 11 ರಂದು ಸಂಜೆ 5.30 ರಿಂದ ನಾಗರಾಜ ಶಾನಭಾಗ್ ಮತ್ತು ಬಳಗದವರಿಂದ ಭಕ್ತಿ ಭಜನಾಮೃತ, ಅ. 12 ರಂದು ಸಂಜೆ 5.30 ರಿಂದ ಸುರೇಶ್ ಶೆಟ್ಟಿ ಶಿಬರೂರು ಮತ್ತು ಬಳಗದಿಂದ ಭಜನಾ ಕಾರ್ಯಕ್ರಮ, ಅ. 13 ರಂದು ಸಂಜೆ 5.30 ರಿಂದ ಸತೀಶ್ ಇರ್ವತ್ತೂರು ಮತ್ತು ಬಳಗದಿಂದ ಭಜನ ಕಾರ್ಯಕ್ರಮ, ಅ. 16 ರಂದು ಸಂಜೆ 5.30 ರಿಂದ ಪುತ್ತೂರು ಚಂದ್ರಹಾಸ ರೈ ಮತ್ತು ಬಳಗ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಆಜೆªಪಾಡಾದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ. 13 ರಂದು ವಿಶೇಷ ಪೂಜೆ ಹಾಗೂ ಶೃಂಗಾರದ ಸೇವೆಯನ್ನು ಮುಲುಂಡ್‌ನ ಉದ್ಯಮಿ ಗಂಗಾಧರ ಸೇಸು ಪೂಜಾರಿ ದಂಪತಿ ನೀಡಲಿದ್ದಾರೆ. ಅ. 17 ರಂದು ಡೊಂಬಿವಲಿ ಉದ್ಯಮಿ ವಿಜೀತ್ ಶೆಟ್ಟಿ ಅವರ ಸೇವಾರ್ಥಕವಾಗಿ ಪುಣೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಮತ್ತು ಊರಿನ ಪ್ರಸಿದ್ಧ ಕಲಾವಿದರುಗಳಿಂದ ಶ್ರೀ ದೇವಿ ಮಹಾತೆ¾ ಯಕ್ಷಗಾನವು ಸಂಜೆ 6 ರಿಂದ ಪ್ರದರ್ಶನಗೊಳ್ಳಲಿದೆ.
ಇದೇ ಸಂದರ್ಭದಲ್ಲಿ ಇನ್ನ ಕುರ್ಕಿಲ್‌ಬೆಟ್ಟು ಬಾಳಿಕೆ ದಿ| ದಾಸು ಬಾಬು ಶೆಟ್ಟಿ ಅವರ ಸಂಸ್ಮರಣಾರ್ಥಕವಾಗಿ ಮಂಡಳಿಯ ವಾರ್ಷಿಕ ಪ್ರಶಸ್ತಿಯನ್ನು ನಗರದ ಹಿರಿಯ ಯಕ್ಷಗಾನ ಹಿಮ್ಮೇಳ ಕಲಾವಿದ ಆನಂದ ಎಂ. ಶೆಟ್ಟಿ ಇನ್ನ ಇವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಿ ಗೌರವಿಸಲಾಗುವುದು. ನವರಾತ್ರೋತ್ಸವದಲ್ಲಿ ಶ್ರೀದೇವಿಗೆ ಪ್ರತಿ ದಿನ ಭಜನಾ ಸೇವೆ ನಡೆಯಲಿದ್ದು, ಆಸಕ್ತ ಭಜನಾ ಮಂಡಳಿಗಳು ಮುಂಚಿತವಾಗಿ ತಿಳಿಸಿದರೆ ಭಜನೆಗೆ ಬೇಕಾಗುವ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸುನೀತಾ ಶಿವರಾಮ ಶೆಟ್ಟಿ (9867158897), ಸವಿತಾ ವಿಶ್ವನಾಥ ಶೆಟ್ಟಿಗಾರ (9819867741) ಇವರನ್ನು ಸಂಪರ್ಕಿಸಬಹುದು.
ಪ್ರತೀ ದಿನ ಬೆಳಗ್ಗೆ ಶ್ರೀ ಸನ್ನಿಧಿಯಲ್ಲಿ ಬೆಳಗ್ಗೆ 8 ರಿಂದ ಬೆಳಗ್ಗೆ 10 ರವರೆಗೆ ಹಾಗೂ ಸಂಜೆ 5 ರಿಂದ ರಾತ್ರಿ 7ರವರೆಗೆ ತುಲಾಭಾರ ಸೇವೆ ನಡೆಯಲಿದೆ. ತುಲಾಭಾರ ಸೇವೆ ಮಾಡಲಿಚ್ಚಿಸುವ ಭಕ್ತರು ಮುಂಚಿತವಾಗಿ ತಿಳಿಸಿದರೆ ಅದಕ್ಕೆ ಬೇಕಾಗುವ ವ್ಯವಸ್ಥೆಯನ್ನು ಮಾಡಲಾಗುವುದು. ಅನ್ನಸಂತರ್ಪಣೆಗೆ ಹಸಿರು-ಹೊರೆ ಕಾಣಿಕೆಯನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಲಾಗುವುದು. ಅ. 18 ರಂದು ಸಂಜೆ 4 ರಿಂದ ವಿಸರ್ಜನಾ ಮೆರವಣಿಗೆಯು ವಿವಿಧ ವೇಷಭೂಷಣ, ಬಿರುದಾವಳಿಗಳಿಂದ ನಡೆಯಲಿದೆ.
ಪ್ರತೀ ದಿನ ಮಧ್ಯಾಹ್ನ 1 ರಿಂದ ಮತ್ತು ರಾತ್ರಿ 9 ರಿಂದ ವಿವಿಧ ದಾನಿಗಳ ಸೇವಾರ್ಥಕವಾಗಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದೆ. ಹೊಟೇಲ್ ಉದ್ಯಮಿ ಶೇಖರ್ ಎನ್. ಶೆಟ್ಟಿ ಅವರು ಮೂರ್ತಿ ಸೇವಾರ್ಥಿಯಾಗಿ ಸಹಕರಿಸಿದ್ದಾರೆ. ಮಂಡಳಿಯ ಈ ನವರಾತ್ರೊÂàತ್ಸವ ಸಂಭ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೊÂàತ್ಸವ ಮಂಡಳಿ ಡೊಂಬಿವಲಿ ಪಶ್ಚಿಮದ ಇದರ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ಧರ್ಮದರ್ಶಿಗಳ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.