ವಿವಿಧ ಸಂಘಟನೆಯಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ
Team Udayavani, Apr 13, 2020, 12:27 PM IST
ಮುಂಬಯಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಹಾರಾಷ್ಟ್ರ ಐಎಎಸ್ ಅಧಿಕಾರಿಗಳ ಪತ್ನಿಯರ ಸಂಘವು ಮುಖ್ಯಮಂತ್ರಿ ಪರಿಹಾರ ನಿಧಿಗೆ 1.75 ಲಕ್ಷ ರೂ.ಗಳ ದೇಣಿಗೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್ ಕುಮಾರ್ ಅವರು ಶನಿವಾರ ಸಂಜೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಚೆಕ್ ಹಸ್ತಾಂತರಿಸಿದ್ದು, ಇದನ್ನು ರಾಜ್ಯದಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸಲು ವಿವಿಧ ಉಪಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ದೊಡ್ಡ ಕಾರ್ಪೋರೇಟ್‌ಗಳು ತಮ್ಮ ಸಂಪತ್ತನ್ನು ಸರಕಾರಿ ಯೋಜನೆಗಳಿಗೆ ಉಪಲಬ್ಧಗೊಳಿಸಿದ ಅನಂತರ ಮುಂಬಯಿ ಮತ್ತು ಮಹಾರಾಷ್ಟ್ರದ ಇತರೆಡೆಯ ಸಾಮಾನ್ಯ ವ್ಯಕ್ತಿಗಳು ಮತ್ತು ಸ್ಥಳೀಯ ಸ್ವಯಂಸೇವಕ ಸಂಘಗಳು ಕೂಡ ಲಾಕ್‌ಡೌನ್ನಿಂದಾಗಿ ಸಿಕ್ಕಿಕೊಂಡಿರುವ ವಲಸಿಗರು, ಸಾಮಾನ್ಯ ಕಾರ್ಮಿಕರು ಮತ್ತು ಇತರರಿಗೆ ಸಹಾಯ ಮಾಡಲು ಇದೇ ರೀತಿಯ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಒಂದು ವಿಶಿಷ್ಟ ಉಪಕ್ರಮದಲ್ಲಿ ಚಾಂದಿವಲಿಯ ವುಡ್‌ಲ್ಯಾಂಡ್ ಹೈಟ್ಸ್ ಕಟ್ಟಡದ ಸದಸ್ಯರು ಪ್ರತಿದಿನ ಸುಮಾರು 500 ವಲಸೆ ಭದ್ರತಾ ಸಿಬಂದಿಗಳು, ಮನೆ ನೌಕರರು, ಕನ್ಸರ್ವೆನ್ಸಿ ಸಿಬಂದಿ ಮತ್ತು ಚಾಲಕರಿಗೆ ಸ್ಥಳೀಯ ದೇವಾಲಯಗಳು ಮತ್ತು ಸುತ್ತಮುತ್ತಲಿನ ಸ್ವಯಂಸೇವಕರ ಮೂಲಕ ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ ಮತ್ತು ತಮ್ಮ ವೈಯಕ್ತಿಕ ಉಳಿತಾಯದಿಂದ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡುತ್ತಿದ್ದಾರೆ ಎಂದು ತಂಡದ ಸದಸ್ಯ ಪ್ರದೀಪ್ ಮೆನನ್ ಹೇಳಿದ್ದಾರೆ.
ಗೋವಂಡಿ ಪೊಲೀಸ್ ಠಾಣೆಯ ಕಾಸ್ಟೇಬಲ್ ರಾಜೇಂದ್ರ ಘೋರ್ಪಡೆ ಅವರು ಕಳೆದ ಕೆಲವು ದಿನಗಳಿಂದ ಬಡವರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುವುದರ ಜತೆಗೆ ತಮ್ಮ ಉಳಿತಾಯದಿಂದ 25,000 ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದಾನ ಮಾಡಿದ್ದಾರೆ. ಬಾಲಿವುಡ್ ನಟ ನಾನಾ ಪಾಟೆಕರ್ ಅವರ ನಾಮ್ ಫೌಂಡೇಶನ್ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದೆ. ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ನೆಸ್ ಟೆಂಪಲ…, ರಿಲಯನ್ಸ್ ಫೌಂಡೇಶನ…, ರೋಟರಿ ಕ್ಲಬ್ ಆಫ್ ಮುಂಬಯಿ ಕ್ವೀನ್ಸ್ ನೆಕ್ಲೆಸ್ ಇಸ್ಕಾನ್ ಅನ್ನಾಮೃತ ಜತೆಗೆ ಕೈಜೋಡಿಸಿ ಮುಂಬಯಿ, ಪಾಲ್ಗರ್, ಪುಣೆ, ಔರಂಗಾಬಾದ್, ಜಾಲಾ° ಮತ್ತು ನಾಗಪುರಗಳಲ್ಲಿ ವಲಸೆ ಬಂದವರಿಗೆ 2,25,000 ಕ್ಕೂ ಹೆಚ್ಚು ಊಟವನ್ನು ಒದಗಿಸಿದೆ.
ಲಾಕ್‌ಡೌನ್ ಅವಧಿಯಲ್ಲಿ 250 ಬೆಸ್ಟ್ ಬಸ್ ಚಾಲಕರು, ಕಂಡಕ್ಟರ್‌ಗಳು, ಪಾದಚಾರಿ ನಿವಾಸಿಗಳು ಮತ್ತು ವಲಸಿಗರಿಗೆ ಧರ್ಮೇಶ್ ಝವೇರಿ ಮತ್ತು ಭರತ್ ಪರೇಖ್ ನೇತೃತ್ವದ ವಿಲೇ ಪಾರ್ಲೆ ಜೈನ್ ಡೈಮಂಡ್ ಟ್ರೇಡರ್ಸ್ ಗ್ರೂಪ್ ವಾರಾಂತ್ಯದ ಊಟ ಮತ್ತು ಉಪಾಹಾರವನ್ನು ಆಯೋಜಿಸುತ್ತಿದೆ. ಅದೇ, ರಾಯಗಡದ 150 ವಲಸೆ ಕುಟುಂಬಗಳಿಗೆ ಆಹಾರ ಪ್ಯಾಕೆಟ್‌ಗಳನ್ನು ಒದಗಿಸಲು ಇಲ್ಲಿನ ಹಿಲ್ ಸ್ಪ್ರಿಂಗ್ ಇಂಟರ್‌ನ್ಯಾಷನಲ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಅಬಿಷೇಕ್ ಅವರ್‌ಸೇಕರ್ ಅವರು 1,53,000 ರೂ. ದೇಣಿಗೆ ಸಂಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.