ಡಾ|ಜಿ.ಡಿ.ಜೋಶಿ ಪ್ರತಿಷ್ಠಾನದಿಂದ ಮನೆ ಮನೆಯಲ್ಲಿ ಸಾಹಿತ್ಯ ಸ್ಪಂದನ
Team Udayavani, Mar 17, 2017, 3:38 PM IST
ಮುಂಬಯಿ: ಡಾ| ಜಿ. ಡಿ. ಜೋಶಿ ಪ್ರತಿಷ್ಠಾನ ಮುಂಬಯಿ ವತಿಯಿಂದ ಮನೆಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮವು ಮಾ. 4 ರಂದು ನಗರದ ಕತೆಗಾರ್ತಿ, ಲೇಖಕಿ ಶಕುಂತಳಾ ಪ್ರಭು ಅವರ ನೇತೃತ್ವದಲ್ಲಿ ಗೋರೆಗಾಂವ್‌ನಲ್ಲಿ ನಡೆಯಿತು. ಸುಮಾರು ಮೂವತ್ತು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕನ್ನಡ ಕಲಾಕೇಂದ್ರ ಮುಂಬಯಿ ಅಧ್ಯಕ್ಷ ಬಾಲಚಂದ್ರ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ| ಜಿ. ಡಿ. ಜೋಶಿ, ಸಾಹಿತಿ ರವಿ ರಾ. ಅಂಚನ್, ಕವಿ, ರಂಗನಿರ್ದೇಶಕ ಸಾ. ದಯಾ ಅವರು ಉಪಸ್ಥಿತರಿದ್ದರು. ಅಪರ್ಣಾ ರಾವ್ ಅವರು ಪ್ರಾರ್ಥನೆಗೈದರು. ಆಯೋಜಕರಾದ ಶಕುಂತಳಾ ಪ್ರಭು ಅವರು ಸ್ವಾಗತಿಸಿದರು.
ಲಲಿತಾ ಅಂಗಡಿ ಅವರು ಕಾರ್ಮೋಡ, ಅಪರ್ಣಾ ರಾವ್ ಅವರು ಮಾಸ್ಟರ್ ಸ್ಟ್ರೋಕ್ ಕವನಗಳನ್ನು ವಾಚಿಸಿದರು. ಪದ್ಮಜಾ ಮಣ್ಣೂರ ಅವರು ನಿನ್ನ ನೀನು ಅರಿತುಕೋ…ಲೇಖನವನ್ನು ಪ್ರಸ್ತುತಪಡಿಸಿದರು. ಮೀನಾ ಕಾಳವಾರ ಅವರು ರಾಜಕೀಯ ನೆಲೆಯಲ್ಲಿ ಮಹಿಳೆಯರ ಸ್ಥಾನಮಾನ ಎಂಬ ಲೇಖನವನ್ನು ಪ್ರಸ್ತುತಪಡಿಸಿದರು. ರಮಾ ನಾಯಕ್ ಅವರು ಕುಮಾರಿ ಮಾತಾ ಕಥೆಯನ್ನು ಮಂಡಿಸಿದರು. ಡಾ| ಕೃಷ್ಣ ಶೆಟ್ಟಿ ಅವರು ವೈದ್ಯಕೀಯ ಮಾಹಿತಿ ನೀಡಿ ಸಹಕರಿಸಿದರು. ವಾಣಿ ಶೆಟ್ಟಿ ಅವರು ಪತಿವ್ರತೆ ಊರ್ಮಿಳೆಯ ಮಹಾತ್ಯಾಗದ ಬಗ್ಗೆ ಲೇಖನ ಮಂಡಿಸಿದರು.
ಸುಮಿತ್ರಾ ಗುಜರನ್ ಅವರು ರಾಮಾಯಣದಲ್ಲಿ ಅಗಸನ ಪಾತ್ರದ ಮಹತ್ವದ ಬಗ್ಗೆ ಲೇಖನ ಪ್ರಸ್ತುತಪಡಿಸಿದರು. ಮೀರಾ ಕೃಷ್ಣ ಕಟಾ³ಡಿ ಅವರು ಅರಸಿನ ಕುಂಕುಮದ ಮಹತ್ವ, ಸುಗಂಧಿ ಶ್ಯಾಮ ಹಳೆಯಂಗಡಿ ಅವರು ಸ್ತ್ರೀ ಸಬಲೀಕರಣ ಕುರಿತು ಮಾತನಾಡಿದರು. ಆಶಾ ಶಿವಪುರ ಅವರು ಕನ್ನಡ ಮತ್ತು ಹಿಂದಿ ಕವನಗಳನ್ನು ವಾಚಿಸಿದರು.
ಸುಗುಣಾ ಬಂಗೇರ ಅವರು ಸ್ವರಚಿತ ಕವನ, ಲೀಲಾ ಗಣೇಶ್ ಅವರು ನಾನು ಹೇಗಿರಲಿ ಕವನ, ಗುಣೋದಯ ಐಲ್ ಅವರು ಸತ್ಯಮೇವ ಜಯತೇ ಹಾಗೂ ಶಕುಂತಳಾ ಪ್ರಭು ವೃದ್ಧಾಶ್ರಮ ಕಥೆಯನ್ನು ಓದಿದರು. ರವಿ ರಾ. ಅಂಚನ್ ಅವರು ಶ್ರಮಶಕ್ತಿ, ಸ್ವಾಭಿಮಾನಿ ಕವನ ವಾಚಿಸಿದರು.
ಬಾಲಚಂದ್ರ ರಾವ್ ಅವರು ಮಾತನಾಡಿ, ಮನೆಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮದ ಮಹತ್ವ ಹಾಗೂ ಅವರ ನಾಟಕಕೃತಿ ಗೆದ್ದು ಸೋತವಳ ಇದರ ಬಗ್ಗೆ ವಿಶ್ಲೇಷಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ರಾಮಕೃಷ್ಣ ಪ್ರಭು, ಲಲಿತಾ ಶೆಟ್ಟಿ, ರಮೇಶ್ ಶೆಟ್ಟಿ ಪಯ್ನಾರು, ಕಾರಂತ್, ಗೋಪಾಲ್ ತ್ರಾಸಿ, ರಮೇಶ್ ಶಿವಪುರ, ಸುನಿಲ್ ರಾವ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.