ಡಾ| ಸುನೀತಾ ಎಂ.ಶೆಟ್ಟಿ ಅವರಿಗೆ “ತುಳುರತ್ನ’ ಬಿರುದು ಪ್ರದಾನ
Team Udayavani, Dec 18, 2017, 12:01 PM IST
ಮುಂಬಯಿ: ತುಳುನಾಡೋಚ್ಚಯ-2017 ಇದರ ಪ್ರತಿಷ್ಠಿತ “ತುಳು ರತ್ನ’ ಬಿರುದು ಪ್ರಶಸ್ತಿಗೆ ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ವಿಶ್ವ ತುಳುವೆರೆ ಆಯನೊ ಕೂಟ ಮತ್ತು ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಿ. 23 ಮತ್ತು ಡಿ. 24 ಮಂಗಳೂರಿನ ಪಿಲಿಕುಲದಲ್ಲಿ ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ದತೆ ಎಂಬ ನೆಲೆಗಟ್ಟಿನಲ್ಲಿ ತುಳುನಾಡೋಚ್ಚಯ-2017 ಸಂಭ್ರಮವು ನಡೆಯಲಿದ್ದು, ಡಿ. 24ರಂದು ಮಧ್ಯಾಹ್ನ 12ರಿಂದ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ಸುನೀತಾ ಎಂ. ಶೆಟ್ಟಿ ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ “ತುಳುರತ್ನ’ ಬಿರುದು ಪ್ರದಾನಿಸಿ ಗೌರವಿಸಲಾಗುವುದು.
ಡಾ| ಸುನೀತಾ ಎಂ. ಶೆಟ್ಟಿ
ಮಂಬಯಿಯ ಹಿರಿಯ ಸಾಹಿತಿಯಾಗಿ, ಕವಿಯಾಗಿ, ಲೇಖಕಿಯಾಗಿ ಜನಮನ್ನಣೆಯನ್ನು ಪಡೆದ ಡಾ| ಸುನೀತಾ ಎಂ. ಶೆಟ್ಟಿ ಅವರು ಪ್ರಾಧ್ಯಾಪಕಿಯಾಗಿ, ಒಳ್ಳೆಯ ವಾಗ್ಮಿಯಾಗಿ ಒಳ ಮತ್ತು ಹೊರನಾಡಿನಲ್ಲಿ ಹೆಸರು ಮಾಡಿದ್ದಾರೆ. ತುಳು-ಕನ್ನಡ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಇವರು “ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ ‘ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿಯನ್ನು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಪಡೆದಿದ್ದಾರೆ. ಮೂಲತಃ ಮಂಗಳೂರು ಕಳವಾರು ಎಂಬಲ್ಲಿ ಜನಿಸಿದ ಡಾ| ಸುನೀತಾ ಎಂ. ಶೆಟ್ಟಿ ಅವರು, “ಮಹಿಳೆಗೊಂದು ಸ್ವತಂತ್ರ ವ್ಯಕ್ತಿತ್ವ ಇರಬೇಕು. ಅದನ್ನು ಅವಳು ಬದುಕಿನಲ್ಲಿ ಉಳಿಸಿಕೊಳ್ಳಬೇಕು’ ಎಂಬುದನ್ನು ನಂಬಿ, ನೆಚ್ಚಿ, ಹಾಗೆ ನಡೆದು ಉನ್ನತ ವ್ಯಕ್ತಿತ್ವವನ್ನು ಗಳಿಸಿಕೊಂಡವರು. ಹೊಸ ವಿಚಾರ, ಹೊಸ ಚಿಂತನೆಗೆ ಸದಾ ತೆರೆದುಕೊಂಡು ಓಡಾಡುವ ಅವರು ಮುಂಬಯಿ ಕನ್ನಡಿಗರ ಅಕ್ಕರೆಯ ಅಕ್ಕನಾಗಿ, ಅಭಿಮಾನದ ಅಮ್ಮನಾಗಿ ಅಪಾರ ಮೆಚ್ಚುಗೆಯನ್ನು ಪಡೆದಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ, ಸಂಗೀತ, ಯಕ್ಷಗಾನ, ಚರ್ಚಾಕೂಟಗಳ ಒಡನಾಟ, ಸುತ್ತಲಿನ ರಮ್ಯ ನಿಸರ್ಗ, ಸುಸಂಸ್ಕೃತ ಕೌಟುಂಬಿಕ ವಾತಾವರಣದಲ್ಲಿ ಬೆಳೆದ ಅವರಿಗೆ ಸೃಜನಶೀಲವಾಗಿ ಸ್ಪಂದಿಸಲು ಸಾಧ್ಯವಾಯಿತು. ವಡಾಲದ ಎನ್‌ಕೆಇಎಸ್ ಹೈಸ್ಕೂಲ್, ಮಾಟುಂಗದ ಖಾಲ್ಸಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ ಇವರು ಮುಂಬಯಿ ವಿಶ್ವವಿದ್ಯಾಲಯದಲ್ಲೂ ದಶಕಗಳಿಗೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಾಹಿತ್ಯ ಶ್ರದ್ದೆ ಕಾರ್ಯೋತ್ಸಾಹಕ್ಕೆ ಯಾರೂ ಬೆರಗಾಗಬೇಕು. ತಾವಾಯಿತು, ತಮ್ಮ ಸಾಹಿತ್ಯ ಕೃಷಿಯಾಯಿತು ಎಂದು ಅವರು ಸಮಾಜ ಸೇವೆಯಿಂದ ದೂರ ಉಳಿದವರಲ್ಲ. ಸೃಷ್ಟಿಶೀಲ ಸಾಹಿತ್ಯ ನಿರ್ಮಾಣ ಹಾಗೂ ಕನ್ನಡ ತುಳು ಕೈಂಕರ್ಯ ಎರಡೂ ಒಂದೇ ಅವರ ಪಾಲಿಗೆ. ಉದಯವಾಣಿ ಮುಂಬಯಿ ಆವೃತ್ತಿಯಲ್ಲಿ ತುಳು ತುಪ್ಪೆ ಅಂಕಣ ಬರಹಗಳನ್ನು ಬರೆಯುತ್ತಿದ್ದರು. ನಾಗಸಂಪಿಗೆ, ಪಿಂಗಾರ, ಸಂಕ್ರಾಂತಿ, ಕರಜನ, ಪದಪಣ್ ಕಣ್ಣಾರೋ ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಡಾ| ಸುನೀತಾ ಶೆಟ್ಟಿ ಅವರ ಕವನಗಳ ಧ್ವನಿ ಸುರುಳಿ ಮತ್ತು ಸಿಡಿಗಳು ಬಹಳ ಜನಪ್ರಿಯವಾಗಿದೆ. ತುಳು ಚಲನಚಿತ್ರಗಳಿಗೂ ಹಾಡುಗಳನ್ನು ಬರೆದಿದ್ದಾರೆ. “ಪೊಣ್ಣ ಮನಸ್Õ ಬೆಂಗ್‌ದ ಕಡಲ್’ ಇದು ಸುನೀತಾ ಶೆಟ್ಟಿ ಅವರು ತುಳುವಿಗೆ ಅನುವಾದಿಸಿದ ನಾಟಕ. ಹೃದಯ ಸಂವಾದ ಎಂಬ ಸದರ್ಶನ ಲೇಖನಗಳ ಸಂಗ್ರಹ, ಮೆರವಣಿಗೆ ಎಂಬ ಲೇಖನಗಳ ಸಂಪುಟ ಹಾಗೂ ಇನ್ನಿತರ ಇಪ್ಪತ್ತಕ್ಕೂ ಅಧಿಕ ತುಳು-ಕನ್ನಡ ಕೃತಿಗಳನ್ನು ಪ್ರಕಟಿಸಿ ಎರಡೂ ಸಾಹಿತ್ಯ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ್ದಾರೆ. ಮುಂಬಯಿಯ ಮಹಿಳಾ ಲೇಖಕಿಯರನ್ನು ಸೃಜನಾ ವೇದಿಕೆಯಲ್ಲಿ ಒಂದುಗೂಡಿಸಿದ ಶ್ರೇಯಸ್ಸು ಇವರಿಗಿದೆ. ವಿದೇಶ ಸಂದರ್ಶನಗೈದು ಪ್ರವಾಸ ಕೃತಿಗಳನ್ನು ರಚಿಸಿ ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿದ್ದಾರೆ. ಆಡುಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಡಾ| ಸುನೀತಾ ಶೆಟ್ಟಿ ಅವರು ಕೈಯಾಡಿಸದ ಕ್ಷೇತ್ರವಿಲ್ಲ. ವಿಮರ್ಶಕಿಯಾಗಿ, ಸಂಶೋಧಕಿಯಾಗಿಯೂ ಅವರು ಹೆಸರು ಗಳಿಸಿದ್ದಾರೆ. ಅವರ ತುಳು ಮತ್ತು ಕನ್ನಡ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು, ವಿವಿಧ ಸಂಘಟನೆಗಳಿಂದ ಸಮ್ಮಾನಗಳು ಲಭಿಸಿವೆ. ಇದಕ್ಕೆ ಇನ್ನೊಂದು ಸೇರ್ಪಡೆ ಎಂಬಂತೆ ತುಳು ರತ್ನ ಬಿರುದು ಪ್ರಶಸ್ತಿಗೆ ಭಾಜನರಾಗಿರುವುದು ಮುಂಬಯಿ ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.