ವಿದೇಶದಲ್ಲಿರುವ ಕನ್ನಡಿಗರಿಂದ ಮಾತೃ ಭಾಷೆಯ ಶುದ್ಧೀಕರಣ: ಡಾ| ಡಿ. ವೀರೇಂದ್ರ ಹೆಗ್ಗಡೆ

ಟೊರೊಂಟೊ ಕನ್ನಡ ಸಂಘದ ನಾಡಹಬ್ಬ ಉದ್ಘಾಟನೆ

Team Udayavani, Nov 28, 2020, 12:39 PM IST

ವಿದೇಶದಲ್ಲಿರುವ ಕನ್ನಡಿಗರಿಂದ ಮಾತೃ ಭಾಷೆಯ ಶುದ್ಧೀಕರಣ: ಡಾ| ವೀರೇಂದ್ರ ಹೆಗ್ಗಡೆ

ಟೊರೊಂಟೊ: ವಿದೇಶದಲ್ಲಿರುವ ಕನ್ನಡಿಗರು ಸಂತೋಷಪಡುವಷ್ಟೇ ಸವಾಲುಗಳನ್ನು ಎದುರಿಸುತ್ತಾರೆ. ಆದರೆ ಅದರ ಮಧ್ಯೆ ಸಂಸ್ಕಾರ, ಸಂಸ್ಕೃತಿಯನ್ನು ಮರೆಯದೆ ಕನ್ನಡವನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಮಾತನಾಡುವಾಗ ಅಪ್ಪಿ ತಪ್ಪಿಯೂ ಸಹ ಇಂಗ್ಲಿಷ್‌ ಶಬ್ದ ಬಳಸುವುದಿಲ್ಲ. ದೂರಕ್ಕೆ ಹೋದರೂ ಕನ್ನಡವನ್ನು ಶುದ್ಧೀಕರಿಸುತ್ತಿರುವರು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಟೊರೊಂಟೊ ಕನ್ನಡ ಸಂಘವು ಒಟ್ಟಾವಾ ಕನ್ನಡ ಸಂಘ, ಮಾಂಟ್ರಿಯಲ್‌ ಕನ್ನಡ ಕೂಟ ಮತ್ತು ಗ್ರಾಂಡ್‌ ರಿವರ್‌ ಕನ್ನಡಿಗರ ಸಹಭಾಗಿತ್ವದಲ್ಲಿ  ಆಯೋಜಿಸಿದ್ದ ನಾಡಹಬ್ಬ ಭಾಗ- 1 ಅನ್ನು ಉದ್ಘಾಟಿಸಿ ಮಾತನಾಡಿದರು.

ವಿದೇಶದಲ್ಲಿರುವ ಹೆಚ್ಚಿನ ಕನ್ನಡಿಗರು ಕನ್ನಡದ ಶುದ್ಧ ಭಾಷೆಯನ್ನು ಬಳಸುತ್ತಿದ್ದೀರಿ. ಒಳ್ಳೊಳ್ಳೆಯ ಶಬ್ದಗಳನ್ನು ಸಹ ಬಳಸುತ್ತಿರುವಿರಿ. ಅದಕ್ಕಾಗಿ ಅಭಿನಂದನೆಗಳು ಎಂದರು.

ಬ್ರಹ್ಮಾಂಡದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ ಎಂಬ ಕರ್ನಾಟಕದ ಮೇಲಿನ ಪ್ರೀತಿಯನ್ನು ಸಾರುವ ದಿವಂಗತ ಹೊನ್ನಪ್ಪ ಭಾಗವತರ ಹಾಡನ್ನು ಸ್ಮರಿಸಿದ ಅವರು, ಕನ್ನಡ ರಾಜ್ಯದ ಬಗ್ಗೆ ಮತ್ತು ವಿದೇಶದಲ್ಲಿರುವ ಕನ್ನಡಿಗರ ಭಾಷಾ  ಅಭಿಮಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದಲ್ಲಿ  ವೈವಿಧ್ಯಮಯವಾದ ರಾಜ್ಯ, ಭಾಷೆ, ಸಂಸ್ಕೃತಿ, ಸಂಸ್ಕಾರ, ಬುದ್ಧಿವಂತರು ಇದ್ದಾರೆ. ಆದರೂ ಕರ್ನಾಟಕ ಭಾರತ ದೇಶದಲ್ಲೇ    ಅತ್ಯಂತ ಸಜ್ಜನಿಕೆಯ, ಸೌಮ್ಯ ಸ್ವಭಾವದ ಮತ್ತು  ಪ್ರತಿಷ್ಠಿತ ರಾಜ್ಯವೆಂದು ಹೆಸರುಗಳಿಸಿದೆ. ಇದಕ್ಕೆ ಕಾರಣ ನಮ್ಮ ಮಾತೃ ಭಾಷೆ ಕನ್ನಡದ ಪರಿಣಾಮ. ಕನ್ನಡದಲ್ಲಿ ಎಷ್ಟೋ ಶ್ರೇಷ್ಠ ಸಾಹಿತಿಗಳು ಹುಟ್ಟಿ ನಮ್ಮ ಸಂಪತ್ತನ್ನು ಹೆಚ್ಚಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಬಹುತೇಕ ಎಲ್ಲರೂ ವಾಸಿಸಲು ಯೋಗ್ಯವೆಂದು ಆಯ್ಕೆ ಮಾಡುವ ಪ್ರದೇಶ.  ಕರ್ನಾಟಕ ಇಂದು ಬೆಳೆಯುತ್ತಿರುವುದಕ್ಕೆ ಮುಖ್ಯ ಕಾರಣ ಇಲ್ಲಿನ ಶಿಕ್ಷಣ ವ್ಯವಸ್ಥೆ. ಜನರು ಶಿಕ್ಷಣದ ಮಹತ್ವವನ್ನು ಕಂಡು ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದಾರೆ. ಒಂದು ರೀತಿಯಲ್ಲಿ ಇಡೀ ದೇಶದಲ್ಲಿ  ಅತ್ಯಂತ ಸುರಕ್ಷೆಯ ರಾಜ್ಯ ಎನ್ನುವ ಹೆಸರನ್ನೂ ಸಹ ಇದು ಪಡೆದಿದೆ. ಹಾಗಾಗಿ ನೀವು ದೂರದೇಶಕ್ಕೆ ಹೋದಾಗ ಕರ್ನಾಟಕದ ಸ್ಮರಣೆ ಮಾಡುವಂತದ್ದು ಬಹಳ ಸಹಜ ಎಂದರು.

ಕರ್ನಾಟಕ ಈಗ ಸುಭೀಕ್ಷವಾಗಿದೆ. ಕಷ್ಟಗಳಿವೆ ಆದರೆ ಅದನ್ನು ಎದುರಿಸುವಂತಹ ಆತ್ಮ ಶಕ್ತಿಯೂ ಇದೆ. ದೂರದೇಶದಲ್ಲಿರುವ ಕನ್ನಡಿಗರ ಮನಸ್ಸುಗಳೆಲ್ಲ ಒಂದಾಗಲು ಕಾರಣ ನಿಮ್ಮ ವ್ಯಕ್ತಿತ್ವ ಬೆಳೆಸಿಕೊಂಡ ರೀತಿ, ಜೀವನ ರೂಪಿಸಿಕೊಂಡ ವಿಧಾನ, ಮಾತೃಭಾಷೆಯ ಸ್ಮರಣೆ ಎಂದು ಅಭಿಪ್ರಾಯ ಪಟ್ಟರು.

ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ  ಮಾಂಟ್ರಿಯಲ್‌ ಕನ್ನಡ ಸಂಘ, ಒಟ್ಟಾವಾ ಕನ್ನಡ ಸಂಘ, ಗ್ರಾಂಡ್‌ ರಿವರ್‌ ಕನ್ನಡ ಸಂಘ, ಶೃಂಗೇರಿ ದೇವಸ್ಥಾನ, ಶ್ರೀಕೃಷ್ಣ ಬೃಂದಾವನ, ಯಕ್ಷಮಿತ್ರ ಟೊರೊಂಟೊ ಪ್ರತಿನಿಧಿಗಳು ಡಾ| ಹೆಗ್ಗಡೆಯವರೊಂದಿಗೆ ವಿಷಯಾಧಾರಿತ ಪ್ರಶ್ನೆಗಳ ಕುರಿತು ಚರ್ಚೆ ನಡೆಸಿದರು.

ನಗೆ ಹಬ್ಬದಲ್ಲಿ  ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್‌, ಬಸವರಾಜ್‌ ಮಹಾಮನಿ ಮತ್ತು  ನರಸಿಂಹ ಜೋಷಿ  ಪಾಲ್ಗೊಂಡರು.

ಆರಂಭದಲ್ಲಿ ಟೊರೊಂಟೊ ಕನ್ನಡ ಸಂಘದ ಅಧ್ಯಕ್ಷ ನಾಗೇಂದ್ರ ಕೃಷ್ಣಮೂರ್ತಿ ಸ್ವಾಗತಿಸಿದರು. ಮಾಂಟ್ರಿಯಲ್‌ ಕನ್ನಡ ಕೂಟದ ಅಧ್ಯಕ್ಷ ಡಾ| ಹೊಸಹಳ್ಳಿ ರಾಮಸ್ವಾಮಿ ಅವರು ವಂದಿಸಿದರು. ಸುಬ್ರಹ್ಮಣ್ಯ ಶಿಶಿಲ ಮತ್ತು ಸತೀಶ್‌ ವೆಂಕೋಬ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

ನ. 28ರಂದು ನಾಡಹಬ್ಬ

ಟೊರೊಂಟೊ ಕನ್ನಡ ಸಂಘದ ನಾಡಹಬ್ಬ ಭಾಗ -2 ಆಚರಣೆಯು ನ. 28ರಂದು ನಡೆಯಲಿದೆ. ಭಾರತದ ರಾಯಭಾರಿಗಳಾದ ಅಪೂರ್ವ ಶ್ರೀವಾತ್ಸವ ಮತ್ತು ಕೆನಡಾದಲ್ಲಿ ಸಂಸದರಾಗಿರುವ ಕನ್ನಡಿಗ ಚಂದ್ರ ಆರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಟೊರೊಂಟೊ ಕನ್ನಡ ಸಂಘದ ಪ್ರತಿಭಾನ್ವಿತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಗಳನ್ನು www.facebook.com/ kstoronto ಮತ್ತು Kannada Sangha Toronto ದ Youtube chanel ಗಳಲ್ಲಿ ವಿಶ್ಶದಾದ್ಯಂತ ಕಾಣಬಹುದಾಗಿದೆ.

– ಸುಬ್ರಹ್ಮಣ್ಯ  ಶಿಶಿಲ

 

 

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.