ಉತ್ತಮ ಕಥಾ ಹಂದರದ ಮಲ್ತಿನಕ್ಲು ತಿನ್ಪೆರ್ ನಾಟಕ
Team Udayavani, Jan 24, 2017, 4:09 PM IST
ಇತ್ತೀಚೆಗೆ ಭಂಡಾರಿ ಸೇವಾ ಸಮಿತಿ ಮುಂಬಯಿ ಅವರ ವಾರ್ಷಿಕ ಸ್ನೇಹ ಸಮ್ಮಿಲನದಲ್ಲಿ ವಿದ್ಯಾನಂದ ಕುಲಾಲ್ ಕಡ್ತಲ ಅವರು ರಚಿಸಿನ “ಮಲ್ತಿನಕ್ಲು ತಿನೆ³ರ್’ ನಾಟಕವನ್ನು ಮುಂಬಯಿ ರಂಗದಲ್ಲಿ ಅಭಿನಯಶ್ರೀ ಬಿರುದು ಪಡೆದ ಉಮೇಶ್ ಕಡ್ತಲ ಅವರ ನಿರ್ದೇಶನದಲ್ಲಿ ಭಂಡಾರಿ ಸೇವಾ ಸಮಿತಿಯ ಸದಸ್ಯರು ಉತ್ತಮವಾಗಿ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು. ಪ್ರತಿಯೊಂದು ಸಮಾಜದಲ್ಲೂ ಅದ್ಭುತ ಪ್ರತಿಭೆಗಳು ಇದ್ದು, ಅವರನ್ನು ಗುರುತಿಸುವ ಕಾರ್ಯ ಮಾಡಬೇಕು. ಹಾಗೆಯೇ ಭಂಡಾರಿ ಸಮಾಜದಲ್ಲೂ ಕಲಾವಿದರಿದ್ದಾರೆ. ಅವರು ರಂಗದಲ್ಲಿ ದುಡಿಯಬೇಕು, ಎಲ್ಲಾ ರಂಗದಲ್ಲೂ ಭಂಡಾರಿ ಸಮಾಜದವರು ಮಿಂಚಬೇಕು ಎಂಬ ನಿಲುವನ್ನು ಹೊಂದಿರುವ ಸಂಘದ ಅಧ್ಯಕ್ಷ ನ್ಯಾಯವಾದಿ ಶೇಖರ್ ಭಂಡಾರಿ ಅವರ ನಿಲುವಿನಂತೆ ಭಂಡಾರಿ ಸೇವಾ ಸಮಿತಿಯ ಸದಸ್ಯರು ತಮ್ಮ ಅದ್ಭುತ ಪ್ರತಿಭೆಯನ್ನು ಮಲ್ತಿನಕ್ಲು ತಿನೆ³ರ್ ನಾಟಕದಲ್ಲಿ ಪ್ರಸ್ತುತಪಡಿಸಿದ್ದಾರೆ.
ತನ್ನ ಸ್ವಾರ್ಥಕ್ಕಾಗಿ ತನ್ನ ಮಾಲಕರ ಮಕ್ಕಳನ್ನು ತನ್ನ ನೌಕರರಂತೆ ದುಡಿಸಿ ಅವರಿಗೆ ಕಷ್ಟವನ್ನಿತ್ತು, ಅವರನ್ನು ಮುಗಿಸುವ ಹುನ್ನಾರದಲ್ಲಿ ತಾನೇ ಬಲಿಯಾಗುವ ಒಂದು ಉತ್ತಮ ಸಂದೇಶವನ್ನು ನಾಟಕದಲ್ಲಿ ನೀಡಲಾಗಿದೆ. ಲೇಖಕರು ತಮ್ಮ ಸಾಮಾಜಿಕ ಕಳಕಳಿಯನ್ನು ಇಲ್ಲಿ ಸಮಾಜಕ್ಕೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ನಾಟಕದ ಪ್ರಮುಖ ಪಾತ್ರಧಾರಿ ವಿಜಯಣ್ಣನ ಪಾತ್ರದಲ್ಲಿ ಸಂಘಟಕ ಪುರುಷೋತ್ತಮ ಭಂಡಾರಿ ಉತ್ತಮ ಅಭಿನಯ ನೀಡಿದರು. ಅವರ ಪುತ್ರಿ ರಂಜನಿಯ ಪಾತ್ರದಲ್ಲಿ ಕು| ಕ್ಷಮಾ ಆರ್. ಭಂಡಾರಿ ಅವರು ಪ್ರಪ್ರಥಮವಾಗಿ ರಂಗಪ್ರವೇಶ ಮಾಡಿದರೂ ನಟನೆಯಲ್ಲಿ ಎಲ್ಲೂ ಕುಂದು ಬಾರದಂತೆ ಅಭಿನಯಿಸಿದರು. ನಾಗುವಿನ ಪಾತ್ರದಲ್ಲಿ ಶಶಿಧರ ಭಂಡಾರಿ ಅವರು ಓರ್ವ ವೃತ್ತಿಪರ ಕಲಾವಿದರಿಗಿಂತ ತಾನೇನು ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತನ್ನ ಪಾತ್ರದ ಘನತೆಯನ್ನು ಅವರು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಾಟಕದ ನಾಯಕ ನಟ ರಾಕೇಶ್ ಪಾತ್ರದಲ್ಲಿ ಜಯಶೀಲ ಭಂಡಾರಿ ಅವರು ತನ್ನ ಏರಿಳಿತದ ಸಂಭಾಷಣೆಯಿಂದ ಓರ್ವ ಪ್ರತಿಭಾವಂತ ನಟನೆಂದು ಸಾಬೀತುಪಡಿಸಿದರು. ಕೃಷ್ಣನ ಪಾತ್ರದಲ್ಲಿ ಕೇಶವ ಟಿ. ಭಂಡಾರಿ ಅವರು ತನ್ನ ಹಾಸ್ಯಮಯ ಸಂಭಾಷಣೆಯಿಂದ ಕಲಾರಸಿಕರ ಮನಗೆದ್ದಿದ್ದಾರೆ. ವಿಶೇಷ ಪಾತ್ರದಲ್ಲಿ ನ್ಯಾಯವಾದಿ ಶೇಖರ ಭಂಡಾರಿ ಅವರು ರಂಗಪ್ರವೇಶಗೈದು ಎಲ್ಲರನ್ನು ಬೆರಗುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಿಯೂ ಸಂಭಾಷಣೆಯ ತೊಡಕು ಅವರಲ್ಲಿ ಕಂಡು ಬಾರದೆ, ಉತ್ತಮ ಅಭಿನಯ ನೀಡಿದ್ದಾರೆ. ಇದರಿಂದ ಯುವ ಕಲಾವಿದರಿಗೆ ಒಂದು ರೀತಿಯ ಸ್ಫೂರ್ತಿ ಸಿಕ್ಕಿದಂತಾಗಿದೆ ಎನ್ನಬಹುದು. ಸುಸೀಲಕ್ಕನ ಪಾತ್ರದಲ್ಲಿ ರೇಖಾ ಎ. ಭಂಡಾರಿ, ಓಬಯನಾಗಿ ರಾಕೇಶ್ ಭಂಡಾರಿ ಅವರು ತಮಗೆ ನೀಡಿದ ಪಾತ್ರಗಳಿಗೆ ಜೀವ ತುಂಬಿದರು.
ನಾಟಕದಲ್ಲಿ ನಡೆಯುವ ಮದುವೆ ಪಾರ್ಟಿಯಲ್ಲಿ ವಿಶ್ವನಾಥ ಭಂಡಾರಿ, ಜಶ್ವಿತಾ ಭಂಡಾರಿ, ಸನತ್ ಭಂಡಾರಿ, ಶರತ್ ಭಂಡಾರಿ, ಧ್ರುವ ಶಶಿಧರ ಭಂಡಾರಿ, ವಂಶಿಕಾ ರೋಹಿತ್ ಭಂಡಾರಿ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ. ಕಲಾವಿದರನ್ನು ದುಡಿಸುವಲ್ಲಿ ಉಮೇಶ್ ಕಡ್ತಲ ಅವರು ತನ್ನ ರಂಗ ಜೀವನದ ಎಲ್ಲಾ ಅನುಭವಗಳನ್ನು ಧಾರೆ ಎರೆದಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅಲ್ಲದೆ ಕಿವುಡ ಭಾಸ್ಕರಣ್ಣ ಪಾತ್ರದಲ್ಲಿ ಉತ್ತಮ ಅಭಿನಯವನ್ನು ನೀಡಿ ಪ್ರೇಕ್ಷಕವರ್ಗವನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅತಿಥಿ ಕಲಾವಿದರಾದ ಹರೀಶ್ ಹೆಗ್ಡೆ ಕಡ್ತಲ ಅವರು ನಾಟಕದಲ್ಲಿ ಮನೆ ಮಾಲಕನ ಪುತ್ರ ರೋಶನ್ ಪಾತ್ರದಲ್ಲಿ ಉತ್ತಮ ಸಂಭಾಷಣೆಯಿಂದ ರಂಗದಲ್ಲಿ ಒಂದು ಭಯಾನಕ ದೃಶ್ಯವನ್ನು ನಿರ್ಮಾಣ ಮಾಡಿದ್ದಾರೆ. ಉತ್ತಮ ಪ್ರತಿಭೆಯನ್ನು ಹೊಂದಿರುವ ಅವರನ್ನು ನಿರ್ದೇಶಕರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ರಂಗ ಸಂಘಟಕ ಕಿಶೋರ್ ಶೆಟ್ಟಿ ಪಿಲಾರ್ ಲಿಂಗಪ್ಪನ ಪಾತ್ರದಲ್ಲಿ ಮಿಂಚಿ, ತಂಡದ ಸದಸ್ಯರಿಗೆಉತ್ತಮ ಮಾರ್ಗದರ್ಶನವನ್ನು ಮಾಡಿದ್ದಾರೆ.
ಉದಯೋನ್ಮುಖ ನಿರ್ದೇಶಕ ರಾಜೇಶ್ ಹೆಗ್ಡೆ ಹೆರ್ಮುಂಡೆ ಅವರ ಸಂಗೀತ ಉತ್ತಮವಾಗಿ ಮೂಡಿಬಂದಿದೆ. ರಂಗವಿನ್ಯಾಸದಲ್ಲಿ ಕಿರಣ್ ಶೆಟ್ಟಿ, ವರ್ಣಲಂಕಾರದಲ್ಲಿ ಮಂಜುನಾಥ ಶೆಟ್ಟಿಗಾರ್, ದೀಪದ ಸಂಯೋಜನೆಯಲ್ಲಿ ರಂಗನಿರ್ದೇಶಕ ಮನೋಹರ್ ಶೆಟ್ಟಿ ನಂದಳಿಕೆ ಅವರು ಸಹಕರಿಸಿದರು. ಸಮಗ್ರ ನಿರ್ವಹಣೆಯನ್ನು ಸಂಘಟಕ ಕಿಶೋರ್ ಶೆಟ್ಟಿ ಪಿಲಾರ್ ಅವರು ಮಾಡಿದ್ದಾರೆ.
ಒಟ್ಟಿನಲ್ಲಿ ಮುಂಬಯಿ ರಂಗಭೂಮಿಯು ಬೆಳೆಯುತ್ತಿರುವುದಾಗಿ ಅಭಿನಂದನೀಯ. ಹೊಸ ಹೊಸ ಪ್ರತಿಭೆಗಳು ರಂಗವನ್ನು ಪ್ರವೇಶಿಸುತ್ತಿದ್ದಾರೆ. ಇದೇ ರೀತಿ ಸಮಾಜದ ಎಲ್ಲಾ ವರ್ಗದವರು ತಮ್ಮ ಸಮಾಜದ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡಬೇಕಾಗಿದೆ. ಭವಿಷ್ಯದಲ್ಲಿ ಯುವ ಕಲಾವಿದರು ಬೆಳಕಿಗೆ ಬಂದು ರಂಗಭೂಮಿಯು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂಬುದು
ನನ್ನ ಹಾರೈಕೆ.
ನಾಗರಾಜ ಗುರುಪುರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.