Dubai ಯುಎಇ ಬ್ರಾಹ್ಮಣ ಸಮಾಜ: ಲಕ್ಷ್ಮೀ ಪೂಜೆ
Team Udayavani, Sep 9, 2023, 6:49 PM IST
ಇಲ್ಲಿನ ಯುಎಇ ಬ್ರಾಹ್ಮಣ ಸಮಾಜದ ವತಿಯಿಂದ ಆ.26ರಂದು ವರಮಹಾಲಕ್ಷ್ಮೀ ಪೂಜೆಯನ್ನು ಭಕ್ತಿಯಿಂದ ಆಚರಿಸಲಾಯಿತು. ಗಣಪತಿ ಪೂಜೆ, ಯಮುನಾ ಪೂಜೆಯ ಹಾಗೂ ಸಂಕಲ್ಪದೊಂದಿಗೆ ಪೂಜೆಯನ್ನು ಆರಂಭಿಸಲಾಯಿತು. ದುಬೈನ ಝಹಿಯ ಸಭಾಂಗಣದಲ್ಲಿ ನಡೆದ ಪೂಜೆಯಲ್ಲಿ ಕರ್ನಾಟಕ ಮೂಲದ ಸುಮಾರು 250ಕ್ಕೂ ಹೆಚ್ಚು ಸಮಾಜ ಬಾಂಧವರು ಶ್ರದ್ಧಾ – ಭಕ್ತಿಯಿಂದ ಪಾಲ್ಗೊಂಡರು.
ಪುರೋಹಿತರಾದ ಲಕ್ಷ್ಮೀಶ ಅವರ ಪೌರೋಹಿತ್ಯದಲ್ಲಿ ಲಕ್ಷೀ ಪೂಜೆಯ ಜತೆಗೆ ಕುಂಕುಮಾರ್ಚನೆ, ಭಜನೆ , ಸಹಸ್ರ ನಾಮ, ಅಷ್ಟೋತ್ತರ, ವೇದ ಘೋಷ, ವೃತ ಕಥಾ ಸಾರ ಮತ್ತು ಮಹಾಮಂಗಳಾರತಿ ಜರಗಿತು. ಸಂಕಲ್ಪ ದಂಪತಿಗಳಾಗಿ ಅನುರಾಧ ಹಾಗೂ ರಮೇಶ್ ಕುಲಕರ್ಣಿ ದಂಪತಿಗಳು ಭಾಗವಹಿಸಿದ್ದರು. ವಿಶೇಷವಾಗಿ 60ಕ್ಕೂ ಹೆಚ್ಚು ಜನರು ಏಕ ಕಾಲದಲ್ಲಿ ಸಹಸ್ರ ಕುಂಕುಮಾರ್ಚನೆ ಯನ್ನು ಸಹಸ್ರ ನಾಮಾವಳಿಯೊಂದಿಗೆ ಅರ್ಪಿಸಿದರು. ಸಮರ್ಥ್ ಅರುಣ್ ಕುಮಾರ್ ಅವರು ವಯೋಲಿನ್ ಉಪಾಸನ ಸೇವೆಯನ್ನು ಸಲ್ಲಿಸಿದರು.
ಸುಮಾರು 5 ಗಂಟೆಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. 2003ರಲ್ಲಿ ಆರಂಭಗೊಂಡ ಯುಎಇ ಬ್ರಾಹ್ಮಣ ಸಮಾಜಯ ದುಬೈನ 20ನೇ ವರ್ಷ ಸಂಭ್ರಮದ ವಿಂಶತಿ ಉತ್ಸವದ 5ನೇ ಕಾರ್ಯಕ್ರಮವಾಗಿ ಇದನ್ನು ಹಮ್ಮಿಕೊಳ್ಳಲಾಗಿತ್ತು.
ವರದಿ: ಆರತಿ ಅಡಿಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.