ದುಬೈ ಅಲ್ ನಾಸರ್‌ನಲ್ಲಿ “ವಿಶ್ವ ತುಳು ಸಮ್ಮೇಳನಕ್ಕೆ ಚಾಲನೆ
Team Udayavani, Nov 24, 2018, 5:10 PM IST
ದುಬೈ: ದೈವ-ದೇವರುಗಳೆಲ್ಲವೂ ನಮ್ಮ ತುಳುನಾಡಿನಲ್ಲೇ ನೆಲೆಯಾಗಿವೆ. ಆದ್ದರಿಂದ ತುಳುವರು ಸಂಪ್ರದಾಯಸ್ಥರಾಗಿ ಬದುಕು ಕಂಡು ಕೊಂಡವರಾಗಿದ್ದಾರೆ. ತುಳುನಾಡ ಹಿರಿಮೆ, ಗರಿಮೆ ಏನೆಂದು ತಿಳಿಯಬೇಕಾದರೆ ಹೊರನಾಡಿನಲ್ಲಿ ತಿಳಿಯಬೇಕು. ದುಬಾೖ ಅಂದರೆ ಬಂಗಾರದ ನಾಡು. ರಾಜ ಕುಟುಂಬಸ್ಥರು ಆಳಿದ ಈ ನಾಡಿಗೆ ತುಳುವರು ಬಂದು ಸಾಧಕರೆಣಿಸುತ್ತಿರುವುದು ತುಳುಮಾತೆಯ ಅನುಗ್ರಹವೇ ಸರಿ. ಇದು ಸ್ವರ್ಣಮಯ ದೇಶ ಎಂದೇ ಪ್ರಸಿದ್ಧಿ ಪಡೆದಿದ್ದು ಇಲ್ಲಿ ತುಳುನಾಡ ಸಂಸ್ಕೃತಿ, ಭಾಷೆ ಮೇಳೈಸುತ್ತಿರುವುದು ತುಳುನಾಡ ವೈಶಿಷ್ಟÂವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ನುಡಿದರು.
ಸಾಗರೋತ್ತರ ತುಳುವರ ಕೂಟವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖೀಲಭಾರತ ತುಳು ಒಕ್ಕೂಟದ ಸಹಯೋಗದೊಂದಿಗೆ ಅರಬ್ ಸಂಯುಕ್ತ ಸಂಸ್ಥಾನದ ದುಬಾೖಯ ಅಲ್ ನಾಸರ್‌ನ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವಿಶ್ವದ ತುಳುವರ ದ್ವಿದಿನಗಳ “ವಿಶ್ವ ತುಳು ಸಮ್ಮೇಳನ ದುಬಾೖ- 2018’ನ್ನು ಶುಕ್ರವಾರ ಅಪರಾಹ್ನ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಬ್ರಹ್ಮಾಂಡದೊಳಗೆ ಅರಸಿ ಬಾಳಲು ತುಳುನಾಡೇ ವಾಸಿ ಎಂದು ಹೇಳಿದರೆ ಈ ಹೊರನಾಡ ತುಳು ಸಮ್ಮೇಳನದ ಉದ್ದೇಶ ಪರಿಪೂರ್ಣವಾಗುತ್ತದೆ. ತುಳುವರು ಮತ್ತಷ್ಟು ಸ್ವಾಭಿಮಾನಿಗಳಾಗಿ ಸಾಧನೆಗಳ ಮೂಲಕ ಮುನ್ನಡೆಯಬೇಕು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದುಬಾೖಯ ಟಾಲರೆನ್ಸ್ ಮಿನಿಸ್ಟರ್ ಶೇಖ್ ಮಬರಕ್ ಆಲ್ ನಹ್ಯನ್ ಉಪಸ್ಥಿತರಿದ್ದು ಮಾತನಾಡಿ, ಸಹನೆ- ಸಹಬಾಳ್ವೆಗೆ ತುಳುವರು ಮಾದರಿ. ತುಳುವರು ಎಲ್ಲಿದ್ದರೂ ಸಾಂಘಿಕವಾಗಿ ಜೀವನ ರೂಪಿಸಿ ಅನ್ಯರನ್ನು ಒಗ್ಗೂಡಿಸುವ ಸದ್ಗುಣರು. ಕಾಯಕ ನಿಮಿತ್ತ ದುಬಾೖಯಲ್ಲಿ ನೆಲೆಯಾದರೂ ತಮ್ಮ ಕೆಲಸ, ಸಾಧನೆಗಳಿಂದ ಸ್ವಂತಿಕೆಯ ಪ್ರತಿಷ್ಠೆಯನ್ನು ರೂಪಿಸಿದ ಕೀರ್ತಿ ತುಳುವರದ್ದು. ಭಾರತ ಮತ್ತು ಯುಎಇ ಸಂಬಂಧ ಅನ್ಯೋನ್ಯತೆಯಿಂದ ಮುಂದುವರಿದ ಕಾರಣ ಇಂತಹ ತುಳು ಸಮ್ಮೇಳನಕ್ಕೆ ಸಂಧಿಯಾಯಿತು ಎಂದು ಮಧ್ಯೆಮಧ್ಯೆ ತುಳುವಿನಲ್ಲೇ ಮಾತನಾಡಿ ತುಳುವರನ್ನು ಹುರಿದುಂಬಿಸಿದರು.
ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರ ಸಾರಥ್ಯದಲ್ಲಿ, ಎನ್‌ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷ ಡಾ| ಬಿ. ಆರ್. ಶೆಟ್ಟಿ ಘನಾಧ್ಯಕ್ಷತೆಯಲ್ಲಿ ಆರಂಭಗೊಂಡ ವಿಶ್ವ ತುಳು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿ ಅಭ್ಯಾಗತರುಗಳಾಗಿ ರೋಮನ್ ಕ್ಯಾಥೋಲಿಕ್ ಮಂಗಳೂರು ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಅ| ವಂ| ಡಾ| ಪೀಟರ್ ಪಾವ್É ಸಲ್ದಾನ್ಹಾ, ಸಿಎಸ್‌ಐ ಪ್ರೊಟೆಸ್ಟೆಂಟ್ ಮಂಗಳೂರು ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ವಂ| ಎಬಿನೆಜರ್ ಜತ್ತನ್ನ, ರೋಮನ್ ಕ್ಯಾಥೋಲಿಕ್ ಬಳ್ಳಾರಿ ಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಅ| ವಂ| ಡಾ| ಹೆನ್ರಿ ಡಿಸೋಜಾ, ಮುಸ್ಲಿಂ ಧರ್ಮಶಾಸ್ತ್ರಜ್ಞ ಅಬ್ದುಸ್ಸಲಾಂ ಪುತ್ತಿಗೆ, ಕರ್ನಾಟಕದ ನಗರಾಭಿವೃದ್ಧಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ಯು. ಟಿ. ಖಾದರ್, ಕರ್ನಾಟಕದ ಮಹಿಳಾ-ಮಕ್ಕಳ ಕಲ್ಯಾಣ, ಕನ್ನಡ-ಸಂಸ್ಕೃತಿ ಖಾತೆ, ಉಡುಪಿ ಜಿಲ್ಲಾ ಉಸ್ತುವರಿ ಸಚಿವೆ ಡಾ| ಜಯಮಾಲ ಹಾಗೂ ಗೌರವ ಅತಿಥಿಗಳಾಗಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ, ಆಳ್ವಾಸ್ ಎಜುಕೇಶನ್ ಟ್ರಸ್ಟ್ ಮೂಡಬಿದ್ರೆ ಇದರ ಕಾರ್ಯಾಧ್ಯಕ್ಷ ಡಾ| ಎಂ. ಮೋಹನ್ ಆಳ್ವ, ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಅನಿವಾಸಿ ಭಾರತೀಯ ಉದ್ಯಮಿಗಳಾದ ರೋನಾಲ್ಡ್ ಕೊಲಾಸೋ ಮತ್ತು ಸುಜಾತ್ ಶೆಟ್ಟಿ, ಬಸವ ಸಮಿತಿಯ ಅಧ್ಯಕ್ಷ ಬಸವ ಜತ್ತಿ, ಚಂದ್ರಕಲಾ ಬಿ. ಆರ್ ಶೆಟ್ಟಿ, ಸಂಗೀತ ನಿರ್ದೇಶಕ ಗುರು ಕಿರಣ್ ಹಾಗೂ ಕರ್ನಾಟಕರ ರಾಜ್ಯ ತುಳು ಅಕಾಡಮಿ ಅಧ್ಯಕ್ಷ ಎ. ಸಿ. ಭಂಡಾರಿ, ಅಖೀಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಶ್‌ವನ್ ಸಭಾಗೃಹದ ಮುಂಭಾಗ ಧ್ವಜಾರೋಹಣಗೈದು ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ರಾಣಿ ಅಬ್ಬಕ್ಕ, ಅಬ್ಬಗ ದಾರಗ, ಕೋಟಿ-ಚನ್ನಯ, ರೆವರೆಂಡ್ ಕಿಟ್ಟಲ್, ಅಗೋಲಿ ಮಂಜಣ್ಣ, ಡಾ| ಕಯ್ನಾರ ಕಿಂಜಣ್ಣ ರೈ ಅವರನ್ನು ಸ್ಮರಿಸಲಾಯಿತು. ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಸ್ವಾಗತಿಸಿ ಪ್ರಸ್ತಾವನೆಗೈದರು. ಭಾಸ್ಕರ್ ರೈ ಕುಕ್ಕುವಳ್ಳಿ ಮತ್ತು ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ| ಬಿ. ಆರ್. ಶೆಟ್ಟಿ ಅತಿಥಿಗಳನ್ನು ಗೌರವಿಸಿದರರು. ಗಳಿಗೆ ಪುಷ ಗುತ್ಛ, ಸಾಗರೋತ್ತರ ಕೊಲ್ಲಿ ರಾಷ್ಟ್ರದ ತುಳುವರ ಒಕ್ಕೂಟ ದುಬಾೖ ಮುಖ್ಯಸ್ಥ ಶೋಧನ್ ಪ್ರಸಾದ್ ವಂದಿಸಿದರು.
ಸಂಸ್ಥೆಯ ಗೌ| ಪ್ರ| ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಕೆನರಾ ಪಿಂಟೋ ಟ್ರಾವೆಲ್ಸ್ ಮಾಲೀಕ ಹಾಗೂ ಆಲ್ ಇಂಡಿಯಾ ಟ್ರಾನ್ಸ್‌ಪೊàರ್ಟ್ ಕಾಂಗ್ರೆಸ್‌ನ ಕರ್ನಾಟಕ ರಾಜ್ಯಧ್ಯಕ್ಷ ಸುನೀಲ್ ಪಾಯ್ಸ ಪುತ್ತೂರು, ಹೆಸರಾಂತ ವಾಸ್ತುತಜ್ಞ, ಪುರೋಹಿತ ಡಾ| ಎಂ. ಜೆ. ಪ್ರವೀಣ್ ಭಟ್ ಸಯಾನ್, ತೋನ್ಸೆ ವಿಜಯಕುಮಾರ್ ಶೆಟ್ಟಿ, ದುಬಾೖಯ ಉದ್ಯಮಿ ಪ್ರವೀಣ್ ಶೆಟ್ಟಿ ವಕ್ವಾಡಿ, ಸುಧೀರ್‌ಕುಮಾರ್ ಶೆಟ್ಟಿ, ಶೀಲಾ ಸುಧೀರ್ ಕುಮಾರ್, ಚಂದ್ರಶೇಖರ್ ಆರ್. ಬೆಲ್ಚಡ, ಕರ್ನೂರು ಮೋಹನ್ ರೈ, ನಾರಾಯಣ ಕಾಪು, ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ತುಳು ಸಂಘ ಬರೋಡಾ, ತುಳುಕೂಟ ಅಂಕಲೇಶ್ವರ, ವಿಶ್ವ ತುಳುವೆರೆ ಆಯೋನದಿಂದ ನೂರಾರು ತುಳುವರು ಆಗಮಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಗಲ್ಫ್ ರಾಷ್ಟ್ರದ ಸುಮಾರು ಆರು ತಂಡಗಳು ಸಮೂಹ ಜಾನಪದ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಚಕ್ರಪಾಣಿ ನೃತ್ಯ ಕೇಂದ್ರವು ಸುರೇಶ್ ಅತ್ತಾವರ ಮಂಗಳೂರು ಸಾರಥ್ಯದಲ್ಲಿ “ತುಳುನಾಡ ಪಬೊìಲು’ ನೃತ್ಯ ರೂಪಕ, ಯಕ್ಷ ಮಿತ್ರರು ದುಬಾೖ ಮಂಡಳಿಯಿಂದ “ಜಾಂಬವತಿ ಕಲ್ಯಾಣ’ತುಳು ಯಕ್ಷಗಾನ ಪ್ರದರ್ಶನಗೊಂಡಿತು. ದುಬಾೖಯ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಗಿರೀಶ್ ನಾರಾಯಣ್ ನಿರ್ದೇಶನದಲ್ಲಿ “ಪಿಲಿನಲಿಕೆ’, ಪ್ರಸನ್ನ ಕಾಪು ಬಳಗದ ಬಲೇ ತೆಲಿಪಾಲೆ ತಂಡ ಮತ್ತು ಉಮೇಶ್ ಮಿಜಾರು ತಂಡದಿಂದ ಹಾಸ್ಯ ಪ್ರಹಸನ, ಸತೀಶ್ ಶೆಟ್ಟಿ ಪಟ್ಲ ಮತ್ತು ತಂಡವು “ಯಕ್ಷಗಾನ ನಾಟ್ಯ ವೈಭವ’, ಮತ್ತು “ಯಕ್ಷಗಾನ ಹಾಸ್ಯ ವೈಭವ’ವನ್ನು ಪ್ರಸ್ತುತಪಡಿಸಿದರು. ಪ್ರಮೋದ್ ಕುಮಾರ್ ಬಳಗದ ವೆರಾಸಟೈಲ್ಸ್ ದುಬಾ ತಂಡವು ರಸ ಮಂಜರಿಯನ್ನು ನಡೆಸಿಕೊಟ್ಟಿತು. ಕದ್ರಿ ನವನೀತ್ ಶೆಟ್ಟಿ ಮತ್ತು ಸಾಹಿಲ್ ರೈ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ತುಳುವ ಸಂಪ್ರದಾಯದಂತೆ ಸ್ವಾಗತ
ಪಾಲ್ಗೊಂಡ ತುಳುವರನ್ನು ತುಳುವ ಸಂಪ್ರದಾಯದಂತೆಯೇ ಸ್ವಾಗತಿಸಲಾಯಿತು. ಕೃಷಿಕ ಸಂಪ್ರದಾಯಸ್ಥ ತುಳುನಾಡ ಜನತೆಯ ತಿಂಡಿ-ತಿನಿಸುಗಳೂ, ಬಂದಂತಹ ಗಣ್ಯರಿಗೆ ಮಹಿಳೆಯಯರು ಪಾರಂಪರಿಕ ರುಚಿಕರ ಬಿಸಿಬಿಸಿಯಾದ ಫಲಾಹಾರ, ಊಟ ಉಣಬಡಿಸಿದರು. ದೇವೇಶ್ ಆಳ್ವ ದುಬಾೖ ಇವರ ಉಸ್ತುವರಿಯಲ್ಲಿ ತುಳುನಾಡ ಶೈಲಿಯ ತುಳುನಾಡ ತಿಂಡಿ ತಿನಸುಗಳು ಗಮನ ಸೆಳೆಯಿತು. ಜುಬೇರ್ ಖಾನ್ ಮಂಗಳೂರು ಮತ್ತು ಬಳಗದವರು ತುಳುನಾಡ ಪರಂಪರೆಯ ವಸ್ತುಪ್ರದರ್ಶನ ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ನಿರೀಕ್ಷೆಗೂ ಮೀರಿ ತುಳುವರು ಪಾಲ್ಗೊಂಡಿರುವುದ ವಿಶೇಷತೆಯಾಗಿತ್ತು.
ಚಿತ್ರ-ವರದಿ:ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.