ದೇವಿ ಪ್ರಾರ್ಥನೆಯಿಂದ ಸಮೃದ್ಧಿ: ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿ
Team Udayavani, Oct 9, 2022, 11:15 AM IST
ಬೊರಿವಲಿ: ಬೊರಿವಲಿ ಜೈರಾಜ್ ನಗರದ ಶ್ರೀ ಮಹಿಷಮರ್ದಿನಿ ದೇಗುಲದಲ್ಲಿ ಶರವನ್ನವರಾತ್ರಿಯ 8ನೇ ದಿನವಾದ ಅ. 3 ರಂದು ದುರ್ಗಾಷ್ಟಮಿ ಪ್ರಯುಕ್ತ ಸಾರ್ವ ಜನಿಕ ಚಂಡಿಕಾಯಾಗ ಅಸಂಖ್ಯಾಕ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರಗಿತು.
ಬೆಳಗ್ಗೆ ಬ್ರಹ್ಮಶ್ರೀ ಕೊಯ್ಯೂರು ನಂದಕು ಮಾರ ತಂತ್ರಿಯವರ ಮಾರ್ಗದರ್ಶನದಲ್ಲಿ ದೇವಿ ಶ್ಲೋಕ ಮಂತ್ರೋತ್ಪಟನೆ, ಮಂಡಲ ಮಟ್ಟದಲ್ಲಿ ಶ್ಲೋಕ, ದ್ರವ್ಯಾಧಿಗಳನ್ನು ಯಾಗ ಕುಂಡದಲ್ಲಿ ಅರ್ಪಿಸಿ ಪ್ರಸನ್ನ ಕಾಲದಲ್ಲಿ ಚಂಡಿಕಾಯಾಗವು ಪ್ರಾರಂಭಗೊಂಡಿತು. ಕೊನೆಯಲ್ಲಿ ಯಾಗ ಕುಂಡದಲ್ಲಿ ಭಕ್ತರು ನೀಡಿದ ಕಲ್ಪತರು ಕಾಯಿ, ವಸ್ತ್ರ, ದ್ರವ್ಯ ಅರ್ಪಿಸಿ ವಿವಿಧ ಪೂಜಾ ವಿಧಿ-ವಿಧಾನಗಳು ಪೂರೈಸಿ ಮಂಗಳಾರತಿ ಜರಗಿತು. ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿ ಆಶೀರ್ವಚನ ನೀಡಿ, ಬ್ರಹ್ಮನಿಂದ ಅಮರ ವರ ಪಡೆದ ರಾಕ್ಷಸರು ದೇವತೆಗಳಿಗೆ ಹಿಂಸೆ ನೀಡುತ್ತಿದ್ದ ಸಮಯದಲ್ಲಿ ದುಷ್ಟರ ನಾಶಕ್ಕಾಗಿ ಸಹಕಾರ ಮೂರ್ತಿಯಾಗಿ ಜನ್ಮತಾಳಿದ ಶ್ರೀದೇವಿಯನ್ನು ಮಾರ್ಕಂಡೇಯ ಪುರಾಣ, ಉಪಾಸನೆಯಿಂದ ಶುದ್ಧ ಮನಸ್ಸಿನಿಂದ ಶ್ಲೋಕ, ಭಕ್ತಿಯಿಂದ ಪ್ರಾರ್ಥಿಸುವ ಮೂಲಕ ಸರ್ವರಿಗೂ ಸಮೃದ್ಧಿ ದೊರೆಯಲಿ, ಪೂರ್ಣಾವತಿಯ ಪ್ರಸನ್ನ ಕಾಲದಲ್ಲಿ ನಾವು ಪ್ರಾರ್ಥಿಸುವ ಮೂಲಕ ಎಲ್ಲರಿಗೂ ಸುಖ, ಶಾಂತಿ, ಸಂತಾನ ಪ್ರಾಪ್ತಿ ದೊರೆಯಲಿ ಎಂದು ಶುಭ ಹಾರೈಸಿದರು.
ದೇಗುಲದ ಆಡಳಿತ ಮೊಕ್ತೇಸರ ಕಣಂ ಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ ಮಾತ ನಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಹಿಷಮರ್ದಿನಿ ದೇವಿಗೆ ವಿಶೇಷ ಪೂಜೆ ಮಂಗಳಾರತಿ ಜರಗಿತು. ಈ ಸಂದರ್ಭ ದೇವಸ್ಥಾನದಲ್ಲಿ ಸ್ಥಾಪಿಸಲ್ಪಟ್ಟ ಶ್ರೀ ಗಣಪತಿ ವೀರಾಂಜನೇಯ ರಕ್ತೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸ್ಥಾಪಿಸಲ್ಪಟ್ಟ ಶ್ರೀ ನಾಗದೇವರಿಗೆ ಮತ್ತು ಶ್ರೀ ಕೊಡಮಣಿತ್ತಾಯ ದೈವ ದೇವರಿಗೂ ವಿಶೇಷ ದೈನಂದಿನ ಪೂಜೆಗಳು ನೇರವೇರಿದವು.
ದೇವಸ್ಥಾನದ ಆಡಳಿತ ವಂಶಸ್ಥರಾದ ಶ್ರೀಮತಿ ಮತ್ತು ಶ್ರೀ ಜಯರಾಜ ಶ್ರೀಧರ್ ಶೆಟ್ಟಿ, ಶಾಲಿನಿ ಪ್ರದೀಪ್ ಶೆಟ್ಟಿ, ಮೊಕ್ತೇಸರರಾದ ಜಯಪಾಲಿ ಅಶೋಕ್ ಶೆಟ್ಟಿ, ಅರ್ಚಕ ವೃಂದ, ಬೆಳ್ಮಣ್ ವೆಂಕಟರಮಣ ತಂತ್ರಿ ಮತ್ತು ದಂಪತಿ, ದೇಗುಲದ ಆಡಳಿತ ಮಂಡಳಿ, ಮಹಿಷ ಮರ್ದಿನಿ ಭಜನ ಮಂಡಳಿ, ಜಯಂತ್ ಶೆಟ್ಟಿ, ಅಮೃತಾ ಶೆಟ್ಟಿ, ಬಾಲಕೃಷ್ಣ ರೈ, ರಜನಿ ರೈ, ಭಾಸ್ಕರ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ, ಸದಾನಂದ ಶೆಟ್ಟಿ, ದಿವಾಕರ ಮ್ಹಾತ್ರೆ, ಗುರುದೇವ ಸೇವಾ ಬಳಗ ಮಹಾರಾಷ್ಟ್ರದ ಗೌರವ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ಮಾತೃಭೂಮಿ ಕೋ – ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳೂ¤ ರು ಮೋಹನ್‌ದಾಸ್ ಶೆಟ್ಟಿ, ಸ್ಥಳೀಯ ಸಂಸದ ಗೋಪಾಲ್ ಸಿ. ಶೆಟ್ಟಿ ಇನ್ನಿತರ ಹಲವಾರು ಸ್ಥಳೀಯ ಧಾರ್ಮಿಕ ಮುಖಂಡರು, ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹೊರ ವಲಯದ ಭಕ್ತರು ಶ್ರೀ ದೇವಿಯ ಚಂಡಿಕಾ ಯಾಗದ ಅನುಗ್ರಹ ಪ್ರಸಾದ ಸ್ವೀಕರಿಸಿದರು.
ಕಳೆದ ಎರಡು ವರ್ಷಗಳ ಕಠಿನ ಪರಿಸ್ಥಿತಿಯಲ್ಲಿ ಭಕ್ತರ ಸಂಖ್ಯೆ ವಿರಳವಾಗಿ ಕಂಡುಬಂದರೂ ಪ್ರಸಕ್ತ ವರ್ಷದಲ್ಲಿ ಈ ಆಧ್ಯಾತ್ಮಿಕ ನೆಲೆಯಲ್ಲಿ ವಿವಿಧ ಪ್ರಾಂತೀಯ ಭಕ್ತರ ಸಂಖ್ಯೆ ವೃದ್ಧಿಯಾಗಿದೆ. ಇಂದು ದೇವಿಯ ದರ್ಶನಕ್ಕಾಗಿ ಅಪಾರ ಭಕ್ತರು ಆಗಮಿಸಿದ್ದಾರೆ. ಇದೆಲ್ಲ ದೇವಿಯ ಪವಾಡ. ಪ್ರತೀದಿನ ಭಕ್ತರಿಗೆ ದೇವಸ್ಥಾನದ ವತಿಯಿಂದ ಮಧ್ಯಾಹ್ನ ಮತ್ತು ರಾತ್ರಿ ವಿಶೇಷ ಅನ್ನಸಂತರ್ಪಣೆ, ಸತತ ವಿಧಿವತ್ತಾದ ಪೂಜೆ, ಅನುಷ್ಠಾನಗಳು, ಭಕ್ತರ ಸಂದರ್ಶನ ಇನ್ನಿತರ ಪುಣ್ಯ ಕಾರ್ಯಗಳು ನೆರವೇರಿವೆ. ಶ್ರೀದೇವಿಯು ಎಲ್ಲರ ಕಷ್ಟ ಕಾರ್ಪಣ್ಯಗಳನ್ನು ದೂರಗೊಳಿಸಿ ಆಯುರಾರೋಗ್ಯ ಭಾಗ್ಯ ಕರುಣಿಸಲಿ. -ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ, ಆಡಳಿತ ಮೊಕ್ತೇಸರರು, ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೊರಿವಲಿ
–ಚಿತ್ರ-ವರದಿ: ರಮೇಶ್ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.