“ಎಕನೋಮಿಕ್ಸ್‌ ಟೈಮ್ಸ್‌ ಬಿಜಿನೆಸ್‌ ಐಕಾನ್‌-2019′ ಪ್ರಶಸ್ತಿ

ಭವಾನಿ ಗ್ರೂಪ್‌ನ ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆ

Team Udayavani, Apr 2, 2019, 10:40 AM IST

0104mum04

ಮುಂಬಯಿ: ಗ್ರಾಹಕರ ವಿಶ್ವಾಸದ ಸ್ಫೂರ್ತಿಯಿಂದ ಲಾಜಿಸ್ಟಿಕ್‌ ಸೇವೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವೀ ಸಾಧಕವೆನಿಸಿಕೊಂಡ ತುಳು-ಕನ್ನಡಿಗರ “ಭವಾನಿ ಗ್ರೂಪ್‌ ಆಫ್‌ ಕಂಪೆನೀಸ್‌’ಇದರ ಪ್ರತಿಷ್ಠಿತ “ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ ಇಂಡಿಯಾ ಲಿಮಿಟೆಡ್‌’ ಸಂಸ್ಥೆಗೆ ಈ ಬಾರಿಯ “ಎಕನೋಮಿಕ್‌ ಟೈಮ್ಸ್‌ ಬಿಜಿನೆಸ್‌ ಐಕಾನ್ಸ್‌ -2019 ಲೀಡಿಂಗ್‌ ಮಲ್ಟಿಮೋಡಲ್‌ ಲಾಜಿಸ್ಟಿಕ್‌ ಕಂಪೆನಿ ಪ್ರಶಸ್ತಿ’ ಲಭಿಸಿದೆ.

ಇತ್ತೀಚೆಗೆ ಲೋವರ್‌ ಪರೇಲ್‌ನ ಹೊಟೇಲ್‌ ಸೈಂಟ್‌ ರೇಗಿಸ್‌ ಸಭಾಗೃಹದಲ್ಲಿ ನಡೆದ ವರ್ಣರಂಜಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶೈನಾ ಎಸ್‌. ಸಿ. ಇವರು ಭವಾನಿ ಗ್ರೂಪ್‌ ಆಫ್‌ ಕಂಪೆನೀಸ್‌ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕುಸುಮೋದರ ಡಿ. ಶೆಟ್ಟಿ ಚೆಲ್ಲಡ್ಕ (ಕೆ. ಡಿ. ಶೆಟ್ಟಿ), ನಿರ್ದೇಶಕರಾದ ಜೀಕ್ಷಿತ್‌ ಶೆಟ್ಟಿ, ಅನಿಲ್‌ ದೇವಿÉ ಇವರಿಗೆ ಪ್ರಶಸ್ತಿ ಪ್ರದಾನಿಸಿ ಶುಭಹಾರೈಸಿದರು.

2007 ನೇ ಸಾಲಿನಲ್ಲಿ ಆರಂಭಗೊಂಡ ‘ಭವಾನಿ ಗ್ರೂಪ್‌’ ಸಂಸ್ಥೆಯ ಅತೀ ವೇಗದ ಗತಿಗೆ ತಂತ್ರಜ್ಞಾನ, ಗ್ರಾಹಕರನ್ನು ತೃಪ್ತಿಪಡಿಸುವ ಮೋಡಿ, ಲಾಜಿಸ್ಟಿಕ್‌ ನೆಟ್‌ವರ್ಕ್‌ ಸೇವೆಯೇ ಸಾಕ್ಷಿಯಾಗಿದೆ. ಕೇವಲ ಎರಡು ಟ್ರೈಲರ್‌ ಮತ್ತು ಮೂವರು ಸಿಬಂದಿಗಳನ್ನು ಹೊಂದಿದ್ದ ಈ ಸಂಸ್ಥೆಯು ಇಂದು ಸುಮಾರು 100 ಟ್ರೈಲರ್ ಹಾಗೂ 11 ಕಂಟೇನೆರ್‌ ಡಿಪೋಗಳನ್ನು ಹೊಂದುವಲ್ಲಿ ಯಶಸ್ವಿಯಾಗಿದೆ.

ಅತ್ಯುಚ್ಚ ಮಟ್ಟದ ಸೇವೆಯ ಮೂಲಕ ಗ್ರಾಹಕರನ್ನು ತನ್ನೆಡೆಗೆ ಸೆಳೆದಿರುವ ಭವಾನಿ ಗ್ರೂಪ್‌, ಶಿಪ್ಪಿಂಗ್‌ ಟ್ರಾನ್ಸ್‌ಪೊàರ್ಟ್‌, ಲಾಜಿಸ್ಟಿಕ್‌, ಪೋರ್ಟ್‌ ಹಾಗೂ ಫ್ತೈಟ್‌ ಮ್ಯಾನೇಜ್‌ಮೆಂಟ್‌ ಸೇವೆಗಳಲ್ಲಿ ಗ್ಲೋಬಲ್‌ ಮಟ್ಟದಲ್ಲಿ ಯಶಸ್ಸು ಪಡೆದಿದೆ. ಪ್ಲೀಟ್‌ ಮ್ಯಾನೇಜ್‌ಮೆಂಟ್‌ನಲ್ಲಿ ತನ್ನದೇ ಆದ ಕೊಡುಗೆ ಸಲ್ಲಿಸುತ್ತಿರುವ ಭವಾನಿ ಗ್ರೂಪ್‌ ನಾನ್‌-ವೆಸಲ್‌ ಆಪರೇಟಿಂಗ್‌ ಕಾಮನ್‌ ಕ್ಯಾರಿಯರ್‌ (ಎನ್‌ವಿಓಸಿಸಿ) ನಲ್ಲಿ ಸುಮಾರು 3500 ಕಂಟೇನರ್‌ಗಳನ್ನು ಒಂದೇ ಬಾರಿಗೆ ಸಾಗಿಸುವ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಹೊಂದಿದೆ. ಇದರಲ್ಲಿ ರೆಫ್ರಿಜರೇಟರ್‌ ಕ್ಯಾರಿಯರ್, ಐಎಸ್‌ಓ ಟ್ಯಾಂಕ್ಸ್‌ (ಲಿಕ್ವಿಡ್‌, ಕೆಮಿಕಲ್ಸ್‌) ಗಳೂ ಸೇರಿವೆ.

‘ಭವಾನಿ ಗ್ರೂಪ್‌’ ಇದೀಗ ತನ್ನ ಸೇವೆಯನ್ನು ಕಾಮನ್‌ವೆಲ್ತ್‌ ಆಫ್‌ ಇಂಡಿಪೆಂಡೆಂಟ್‌ ಸ್ಟೇಟ್ಸ್‌ (ಸಿಐಎಸ್‌) ರಾಷ್ಟ್ರಗಳಿಗೂ ವಿಸ್ತರಿಸಿದೆ. ಭವಾನಿ ಸಿಬ್ಬಂದಿಗಳು ಓಶಿಯನ್‌ ಕಾರ್ಗೋ ಲಾಜಿಸ್ಟಿಕ್‌ ಆಪರೇಶನ್‌ ಟಾಪ್‌ ನಾಚ್‌ ಸ್ಕಿಲ್‌ ಮೂಲಕ ನಡೆಯುತ್ತಿದೆ. ಯಾವುದೇ ರಾಷ್ಟ್ರಗಳಿಗೆ ನೆಟ್‌ವರ್ಕ್‌ ಮೂಲಕ ಶಿಪ್‌ಮೆಂಟ್‌ ಮಾಹಿತಿಯನ್ನು ಕ್ಲಪ್ತ ಸಮಯದಲ್ಲಿ ನೀಡಲಾಗುತ್ತಿದೆ. ಭವಾನಿ ಗ್ರೂಪ್‌ ಭಾರತ ಸರಕಾರದ ಮೇಕ್‌ ಇನ್‌ ಇಂಡಿಯಾ ಯೋಜನೆಯ ದೂರದೃಷ್ಟಿತ್ವದಲ್ಲಿ ಹೆಚ್ಚಿನ ನಂಬಿಕೆಯನ್ನು ಇಟ್ಟಿದ್ದು, ಭವಾನಿ ಗ್ರೂಪ್‌ ವುಡನ್‌ ಪ್ಯಾಲೆಟ್‌, ಪ್ಯಾಕೇಜಿಂಗ್‌, ಉತ್ಪಾದನೆ ಸ್ಟೋರಿಂಗ್‌ನಿಂದ ಹಿಡಿದು ಟ್ರಾನ್ಸ್‌ಪೊàರ್ಟ್‌ವರೆಗಿನ ಎಲ್ಲಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುವಲ್ಲಿ ಯಶಸ್ವಿಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಜೊತೆಗೆ ದೊಡ್ಡ ಉದ್ಯಮಗಳಿಗೂ ಪ್ಯಾಕೇಜಿಂಗ್‌ ಸೌಲಭ್ಯ ಒದಗಿಸಿ ಶಿಪ್ಪಿಂಗ್‌ ಉದ್ಯಮದಲ್ಲಿ ಸುಪೀರಿಯರ್‌ ಲಾಜಿಸ್ಟಿಕಲ್‌ ಸರ್ವಿಸಸ್‌ ಹೆಸರನ್ನು ಉಳಿಸಿಕೊಂಡಿದೆ.

ಬಾಲ್ಯದಲ್ಲಿ ಹಲವಾರು ಕಷ್ಟವನ್ನು ಅನುಭವಿಸಿ ಮುಂಬಯಿಗೆ ಬಂದು ತಾಯಿ ಹಾಗೂ ದೈವ-ದೇವರ ಅನುಗ್ರಹದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎನ್ನಲು ಸಂತೋಷವಾಗುತ್ತಿದೆ. ಸಂಸ್ಥೆಯ ಈ ಯಶಸ್ಸಿಗೆ ನಾನೋರ್ವ ಕಾರಣನಲ್ಲ. ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಪಾಲು ಇದರಲ್ಲಿ ಮಹತ್ತರವಾಗಿದೆ. ಕೇವಲ ಉದ್ಯಮದಲ್ಲಿ ಮಾತ್ರವಲ್ಲ, “ಭವಾನಿ ಫೌಂಡೇಷನ್‌’ ಮುಖಾಂತರ ತಾಯ್ನಾಡು ಮತ್ತು ಕರ್ಮಭೂಮಿ ಮರಾಠಿ ನೆಲದಲ್ಲೂ ಹಲವಾರು ಸಮಾಜಪರ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಗಳಿಕೆಯ ಅರ್ಧದಷ್ಟನ್ನು ಬಡ-ಬಗ್ಗರಿಗೆ ನೀಡಿದಾಗ ಜೀವನ ಪಾವನವಾಗುತ್ತದೆ ಎಂಬ ಮಾತನ್ನು ನಂಬಿದವನು ನಾನು. ಈ ದಾರಿಯಲ್ಲೇ ಧರ್ಮನಿಷ್ಠೆಗೆ ಅನುಗುಣವಾಗಿ ಸಾಗುತ್ತಿದ್ದೇನೆ. ಇದೆಲ್ಲಾ ದೈವ ಇಚ್ಛೆಯಾಗಿದೆ. ನನ್ನ ಸಮಾಜಪರ ಕಾರ್ಯಗಳಿಗೆ ಹಿತೈಷಿಗಳು ಹಾಗೂ ಸಂಸ್ಥೆಯ ಸಿಬಂದಿಯ ಪ್ರೋತ್ಸಾಹ, ಸಹಕಾರ ಪ್ರೇರಣೆಯಾಗಿದೆ .
ಕೆ. ಡಿ. ಶೆಟ್ಟಿ , ಕಾರ್ಯಾಧ್ಯಕ್ಷರು, ಭವಾನಿ ಗ್ರೂಪ್‌ ಆಫ್‌ ಕಂಪೆನೀಸ್‌

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.