21 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, 8ಲ. ರೂ. ಗಳ ನಿಧಿ ವಿತರಣೆ
Team Udayavani, Jul 24, 2019, 6:01 PM IST
ಮುಂಬಯಿ, ಜು. 23: ಸಮಾಜ ಸೇವೆ ಮಾಡಲು ಪ್ರತಿಷ್ಠಿತ ಸಂಘ-ಸಂಸ್ಥೆಗಳೇ ಬೇಕಾಗಿಲ್ಲ…! ಸಮಾನ ಮನಸ್ಸಿದ್ದರೆ ಸಾಕು ಎಂಬ ನಾಣ್ಣುಡಿಯೊಂದಿಗೆ ವಿಭಿನ್ನ ಸೇವಾ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿರುವ ‘ಮುಂಬಯಿಯ ಶಿವಾಯ ಫೌಂಡೇಶನ್ ಸೇವಾ ಸಂಸ್ಥೆ’ಯ ವತಿಯಿಂದ 2018-19ರ ಶೈಕ್ಷಣಿಕ ವರ್ಷದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ನೆರವು ನೀಡಲಾಯಿತು.
ಅಂತಾರಾಜ್ಯ ಮಟ್ಟದ ಒಟ್ಟು 21 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ತಲಾ ಮೂರು ಸಾವಿರ ರೂ. ಗಳ ಚೆಕ್ ಮತ್ತು ‘ಶಿವಾಯ ಫೌಂಡೇಶನ್ ಸಂಸ್ಥೆ’ಯ ವತಿಯಿಂದ ಪ್ರಶಂಸಾ ಪತ್ರವನ್ನು ವಿತರಿಸಿ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಲಾಯಿತು. ವಿದ್ಯಾರ್ಥಿ ವೇತನದ ಜೊತೆಗೆ ಸಣ್ಣ ಪ್ರಾಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಮುಂದಿನ ವಿದ್ಯಾಭ್ಯಾಸಕ್ಕೆ ಶಿವಾಯ ಫೌಂಡೇಶನ್ ನಿಂದ ಸಹಾಯ ಯಾಚಿಸಿದ್ದ ಪನ್ವೆಲ್ನ ನೀರಜ್ ಶೆಟ್ಟಿ ಎಂಬ ವಿದ್ಯಾರ್ಥಿಗೆ ಮುಂದಿನ ಕಾಲೇಜ್ ಶಿಕ್ಷಣಕ್ಕೆ ಪೂರಕವಾಗಲೆಂಬ ಉದ್ದೇಶದಿಂದ ಮಾನವೀಯ ನೆಲೆಯಲ್ಲಿ ಇಪ್ಪತ್ತು ಸಾವಿರ ರೂ. ಗಳ ಚೆಕ್‌ನ್ನು ವಿತರಿಸಲಾಯಿತು.
ವೈವಿಧ್ಯಮಯ ಸೇವೆಗಳು:
ಶಿವಾಯ ಫೌಂಡೇಷನ್‌ನ ಸದಸ್ಯರ ಇನ್ನೊಂದು ವೈಶಿಷ್ಟ್ಯತೆಯೆಂದರೆ ಅವರಲ್ಲಿರುವ ಒಗ್ಗಟ್ಟು. ಸದಸ್ಯರ ಮಕ್ಕಳ ಹುಟ್ಟುಹಬ್ಬಗಳು, ಇನ್ನಿತರ ಶುಭ ಕಾರ್ಯಕ್ರಮಗಳು ನಡೆಯುವುದು ಇಲ್ಲಿನ ಕ್ಯಾನ್ಸರ್ ಆಸ್ಪತ್ರೆ, ಅನಾಥಾಶ್ರಮ, ಬುದ್ಧಿಮಾಂದ್ಯ, ಅಂಗವಿಕಲ, ವೃದ್ಧಾಶ್ರಮಗಳಲ್ಲಿ ಎಂಬುವುದು ಉಲ್ಲೇಖನೀಯ ಅಂಶ. ರೋಗಿಗಳಿಗೆ ಆಹಾರ ವಿತರಣೆ, ಹಣ್ಣುಹಂಪಲುಗಳ ವಿತರಣೆ, ಬುದ್ಧಿಮಾಂದ್ಯ, ಅಂಗವಿಕಲ ಶಾಲೆಗಳಿಗೆ ಮಧ್ಯಾಹ್ನದ ಊಟೋಪಚಾರ, ದಿನೋಪಯೋಗಿ ವಸ್ತುಗಳ ಕೊಡುಗೆಯನ್ನಿತ್ತು ಸಹಕರಿಸುತ್ತಿದೆ. ಸರಕಾರದ ನಿರ್ಲಕ್ಷ್ಯಕ್ಕೊಳಗಾಗಿ ಸಂಪೂರ್ಣವಾಗಿ ಶಿಥಿಲಗೊಂಡಿದ್ದ ವಿಕ್ರೋಲಿಯ ಬುದ್ಧಿಮಾಂದ್ಯ ಶಾಲೆಯೊಂದರ ತರಗತಿಗಳನ್ನು ಜೀರ್ಣೋದ್ಧಾರಗೊಳಿಸಿದ ಶ್ರೇಯಸ್ಸು ಈ ಸಂಸ್ಥೆಗಿದೆ.
ಸಂಸ್ಥೆಯ ಸದಸ್ಯರು:
ಡಾ| ಪ್ರಸಾದ್ ಶೆಟ್ಟಿ, ತಾರನಾಥ್ ರೈ, ನವೀನ್ ಪಡು ಇನ್ನಾ, ಶ್ವೇತಾ ಶೆಟ್ಟಿ, ಸಂದೀಪ್ ಶೆಟ್ಟಿ, ಸ್ವೀಟಿ ಲುಲ್ಲಾ, ಪ್ರಶಾಂತ್ ಶೆಟ್ಟಿ ಪಲಿಮಾರ್, ಪ್ರಶಾಂತ್ ಶೆಟ್ಟಿ ಪಂಜ, ಮಧುಸೂಧನ್ ಶೆಟ್ಟಿ ಬೈಕಲಾ, ಹರೀಶ್ ಕೋಟ್ಯಾನ್, ಆರೂರು ಪ್ರಭಾಕರ್ ಶೆಟ್ಟಿ, ರಕ್ಷಾ ಶೆಟ್ಟಿ, ಅಶೋಕ್ ಶೆಟ್ಟಿ ಮುಟ್ಲುಪಾಡಿ, ದೀಪಾ ಪೂಜಾರಿ, ಡಾ| ಸ್ವರ್ಣಾ ಶೆಟ್ಟಿ, ವರ್ಣಿತ್ ಶೆಟ್ಟಿ, ವಿನೋದ್ ದೇವಾಡಿಗ, ಕಿರಣ್ ಜೈನ್, ಅವಿನಾಶ್ ನಾಯ್ಕ್, ಮಲ್ಲಿಕಾ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಬೈಕಾಡಿ, ಸಂದೀಪ್ ಶೆಟ್ಟಿ ಸಾಕಿನಾಕಾ, ದಿವಾಕರ್ ಶೆಟ್ಟಿ, ಸೋನಿಯಾ ಶೆಟ್ಟಿ, ಸುಷ್ಮಾ ಪೂಜಾರಿ, ಶಿಲ್ಪಾ ಗೌಡ ಮಾಂಡ್ವಂಕರ್, ನಾಗೇಶ್ ಭೋವಿ, ಸುನಿಲ್ ಮೂಲ್ಯ, ಸಚಿನ್ ಶೆಟ್ಟಿ, ನಿತೇಶ್ ನಾಯ್ಕ್, ರಾಜೇಶ್ ಶೆಟ್ಟಿ ಕಟಪಾಡಿ, ಕವಿತಾ ಶೆಟ್ಟಿ, ನವೀನ್ ಪೂಜಾರಿ, ಅಮೃತ್ ಶೆಟ್ಟಿ, ಪುರುಷೋತ್ತಮ್ ಶೆಟ್ಟಿಗಾರ್, ರೋಹಿತ್ ಮುದಲಿಯಾರ್, ಅಮಿತ್ ಶೆಟ್ಟಿ, ರಮೇಶ್ ಶ್ರೀಯಾನ್, ಪ್ರಭಾಕರ್ ಬೆಳುವಾಯಿ, ರಮ್ಯಾ ಶೆಟ್ಟಿ, ಸುಧಾಕರ್ ಪೂಜಾರಿ, ಸತೀಶ್ ರೈ, ಜ್ಯೋತಿ ಶೆಟ್ಟಿ, ಲವ ಪೂಜಾರಿ, ಪ್ರವೀಣ್ ಶೆಟ್ಟಿ ಅಂಗಡಿಗುತ್ತು, ಕಿರಣ್ ಶೆಟ್ಟಿ ಬೈಕಾಡಿ, ಮೋಹನ್ ಶೆಟ್ಟಿ, ಪೂನಂ ಸತೀಶ್ ಶೆಟ್ಟಿ, ಪ್ರಕಾಶ್ ದೇವಾಡಿಗ, ಪ್ರಶಾಂತ್ ಮೊಗವೀರ, ಸರಿತಾ ಪ್ರಶಾಂತ್ ಪೂಜಾರಿ, ಅನುಷಾ ಪೂಜಾರಿ, ಯೋಗೇಶ್ ಪೂಜಾರಿ, ಪ್ರಸಾದ್ ರೈ ಕಲಾಯಿಗುತ್ತು, ಸತೀಶ್ ರೈ ಪುತ್ತೂರು, ಸಂದೇಶ್ ಶೆಟ್ಟಿ, ಇನ್ನಂಜೆ, ವಿಕಾಸ್ ಶೆಟ್ಟಿ ಕರ್ಜತ್, ಶಿವರಾಜ್ ಶೆಟ್ಟಿ ಕರ್ಜತ್, ವಿಷ್ಣು ಶೆಟ್ಟಿ ಕರ್ಜತ್, ಆಶಾ ಶೆಟ್ಟಿ, ಪ್ರಭಾವತಿ ಶೆಟ್ಟಿ, ದಿನೇಶ್ ಕರ್ಕೇರ, ನಂಜುಂಡಾ ರಾವ್ ಬೆಂಗಳೂರು, ಚೇತನ್ ಬೆಂಗಳೂರು, ಸುಜಿತ್ ಕೋಟ್ಯಾನ್, ಪ್ರಕಾಶ್ ದೇವಾಡಿಗ, ಪ್ರದೀಪ್ ದೇವಾಡಿಗ ಅವರು ಸಹಕರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.