ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಏಕಾದಶಿ ಮಹಾತ್ಮೆ ಯಕ್ಷಗಾನ
Team Udayavani, Feb 27, 2018, 3:20 PM IST
ಮುಂಬಯಿ : ಸುವರ್ಣ ಗಣೇಶೋತ್ಸವ ಸಂಭ್ರಮದಲ್ಲಿರುವ ಜಿಎಸ್ಬಿ ಸಭಾ ಕುರ್ಲಾ-ಚೆಂಬೂರ್-ಘಾಟ್ಕೋಪರ್ ಇದರ ಸಂಚಾಲಕತ್ವದ ಬಾಲಾಜಿ ಮಂದಿರ ಕುರ್ಲಾದಲ್ಲಿ ಈಗಾಗಲೇ ಸುವರ್ಣ ಗಣೇಶೋತ್ಸವ ಸಂಭ್ರಮವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗುತ್ತಿದೆ. ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಫೆ. 18 ರಂದು ಅಪರಾಹ್ನ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ಆಡಿಟೋರಿಯಂನಲ್ಲಿ ಜನಪ್ರಿಯ ಯಕ್ಷಗಾನ ಕಲಾಮಂಡಳಿ ಕುರ್ಲಾ ಇವರಿಂದ ಏಕಾದಶಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು.
ಕೊಂಕಣಿ ರಂಗಕರ್ಮಿ ಡಾ| ಚಂದ್ರಶೇಖರ್ ಶೆಣೈ ಮತ್ತು ಸಿಎ ನಗರ್ ಸತೀಶ್ ನಾಯಕ್ ಇವರು ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸುವರ್ಣ ಗಣೇಶೋತ್ಸವ ಸಮಿತಿ ಕುರ್ಲಾ ಇದರ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿವೇಕ್ ಭಂಡಾರಿ ಇವರು ಅತಿಥಿಗಳನ್ನು ಗೌರವಿಸಿದರು.
ಬಾಲಾಜಿ ಮಂದಿರ ಕುರ್ಲಾ ಇದರ ಅಧ್ಯಕ್ಷ ಜಿ. ಬಿ. ಕಾಮತ್ ಇವರು ಸ್ವಾಗತಿಸಿದರು. ಜನಪ್ರಿಯ ಯಕ್ಷಗಾನ ಮಂಡಳಿಯ ಅಧ್ಯಕ್ಷ ಮೇಲ್ಗಂಗೊಳ್ಳಿ ರವೀಂದ್ರ ಪೈ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಜನಾರ್ಧನ ಭಟ್, ಭಗೀರಥ್ ಶ್ಯಾನ್ಭಾಗ್, ಚಿತ್ರಾ ಕಾಮತ್, ಜಿ. ಬಿ. ಕಾಮತ್, ಕಾರ್ಯಕಾರಿ ಸಮಿತಿಯ ಸದಸ್ಯರು, ಕೊಂಕಣಿ ನಾಟಕ ಕಲಾವಿದ ಕಮಲಾಕ್ಷ ಸರಾಫ್, ಮುಂಬಯಿ ಕನ್ನಡ ಸಂಘ ಮಹಿಳಾ ವಿಭಾಗದ ಅಧ್ಯಕ್ಷ ರಜನಿ ಪೈ ಹಾಗೂ ಜಿಎಸ್ಬಿ ಸಭಾ ಕುರ್ಲಾ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಜನಪ್ರಿಯ ಯಕ್ಷಗಾನ ಮಂಡಳಿಯ ಕಲಾವಿದರಿಂದ ನಡೆದ ಏಕದಶಿ ಮಹಾತೆ¾ ಯಕ್ಷಗಾನವು ಉತ್ತಮ ರೀತಿಯಲ್ಲಿ ಪ್ರದರ್ಶನಗೊಂಡು ಅತಿಥಿ-ಗಣ್ಯರುಗಳಿಂದ ಪ್ರಶಂಸೆಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.