ಕಾವ್ಯಶ್ರೀ ಸಾವು ನ್ಯಾಯ ಸಮ್ಮತವಾಗಿ ತನಿಖೆಯಾಗಲಿ
Team Udayavani, Aug 15, 2017, 2:00 PM IST
ಮುಂಬಯಿ: ಕಾವ್ಯಶ್ರೀ ಪೂಜಾರಿ ಓರ್ವ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟು. ಈಕೆಯ ನಿಗೂಢ ಸಾವು ಎಲ್ಲರಲ್ಲಿ ಸಂದೇಹಗಳು ಕಾಡುತ್ತಿರುವುದು ಸಹಜ. ಆ ನಿಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆಯಾಗಿ ಕಾವ್ಯಳ ಸಾವಿಗೆ ಮತ್ತು ಹೆತ್ತವರಿಗೆ ನ್ಯಾಯ ಸಿಗಬೇಕೆಂಬುದು ನಮ್ಮ ಆಶಯ ಆಗಿದೆ ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ತಿಳಿಸಿದರು.
ಆ. 14ರಂದು ಸಾಂತಾಕ್ರೂಜ್ ಪೂರ್ವ ಬಿಲ್ಲವರ ಭವನದ ಸಮಾಲೋಚನ ಸಭಾಗೃಹದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಮೋಗವೀರರು, ಬಂಟರು, ಬಿಲ್ಲವರು ಅಕ್ಕ ತಂಗಿಯ ಮಕ್ಕಳಂತೆಯೆ ಬದುಕು ಸಾಗಿಸಿದವರು. ಸಾಮರಸ್ಯದ ಜೀವನ ಇತಿಹಾಸ ನಮ್ಮದು. ಆಳ್ವರು ಸ್ವಂತಿಕೆಯ ಪ್ರತಿಷ್ಠೆವುಳ್ಳವರಾಗಿದ್ದು ರಾಷ್ಟ್ರೀಯ ಮನ್ನಣೆಯ ಶೈಕ್ಷಣಿಕ ಸಂಸ್ಥೆಯನ್ನು ಮುನ್ನಡೆಸುವವರು. ಅವರ ಸಂಸ್ಥೆಯೂ ಒಳ್ಳೆಯ ಸಂಸ್ಥೆಯಾಗಿದ್ದು, ಲಕ್ಷಾಂತರ ಮಕ್ಕಳಿಗೆ ಶಿಕ್ಷಣವನ್ನಿತ್ತು ಸುಶಿಕ್ಷಿತರನ್ನಾಗಿಸಿ ಜೀವನೋಪಾಯಕ್ಕೆ ಶ್ರಮಿಸಿದ ಸಂಸ್ಥೆ. ಘಟನೆಯನ್ನೆ ಮುಂದಿಟ್ಟು ಸಮಾಜ, ಸಮುದಾಯಗಳಲ್ಲಿ ಶಾಂತಿ ಕದಡುವುದು ಸರಿಯಲ್ಲ. ಎಲ್ಲರೂ ಶಾಂತಿಯನ್ನು ಕಾಪಾಡಿಕೊಂಡು ತನಿಖೆಗೆ ಸಹಕರಿಸಬೇಕು. ಉಭಯ ಸಂಸ್ಥೆಗಳಾದ ನಾವು ಈ ಘಟನೆಯ ಸೂಕ್ತ ತನಿಖೆಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೂ ಲಿಖೀತವಾಗಿಯೇ ಮನವಿ ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವತ್ತೂ ಬಂಟ್ಸ್ , ಬಿಲ್ಲವಾಸ್ ಎನ್ನುವ ಮನಸ್ತಾಪ ಉಂಟಾಗಿಲ್ಲ. ನಾವು ಪೂಜಿಸುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳೇ ನಮಗೆ ವೇದವಾಕ್ಯ. ಅಂದಮೇಲೆ ನಮ್ಮಲ್ಲಿ ಅಂದೂ ಇಂದೂ ಮುಂದೆಂದೂ ಜಾತೀಯ ಸಂಘರ್ಷ ಉದ್ಭವಿಸದು. ಏನಿದ್ದರೂ ನಾವು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳುತ್ತಿದ್ದೇವೆ. ಈ ಪ್ರಕರಣದಲ್ಲೂ ಅಷ್ಟೇ ನಾವು ನ್ಯಾಯಪರವಾಗಿ ದನಿಗೂಡಿಸುತ್ತಿದ್ದೇವೆ. ಇದೀಗಲೇ ಈ ಪ್ರಕರಣದ ತನಿಖೆ ಸಾಗುತ್ತಿದೆ. ಅಲ್ಲಿ ತನಕ ನಾವೇನೂ ಪ್ರತಿಕ್ರಿಯಿಸಲು ಅಸಾಧ್ಯ. ತನಿಖಾ ಫಲಿತಾಂಶದ ಅನಂತರವಷ್ಟೇ ನಾವು ಸಮುದಾಯದ ಸಂಸ್ಥೆಗಳ ಅಭಿಪ್ರಾಯ, ಅಭಿಮತಗಳನ್ನು ಕ್ರೋಡಿಕರಿಸಿ ಮುಂದಿನ ಹೆಜ್ಜೆಗಳನ್ನಿರಿಸಲಿದ್ದೇವೆ. ಸಂಸ್ಥೆಗಳ ಒಟ್ಟು ನಿರ್ಣಯಕ್ಕೆ ಬದ್ಧರಾಗಿ ಕ್ರಮ ಕೈಗೊಳ್ಳಲಿದ್ದೇವೆ. ಕಾವ್ಯಶ್ರೀ ಸಾವಿನ ಬಗ್ಗೆ ತಿಳಿದಿದ್ದರೂ ನನ್ನ ಆರೋಗ್ಯದ ದೃಷ್ಟಿಯಿಂದ ನಾನು ಈ ತನಕ ತನ್ನ ನಿಲುವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಆದರೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸದಸ್ಯ ಡಾ| ರಾಜಶೇಖರ್ ಆರ್. ಕೋಟ್ಯಾನ್ ಘಟನೆಯ ಬೆನ್ನಲ್ಲೇ ತನ್ನ ನಿಯೋಗದೊಂದಿಗೆ ಕಾವ್ಯಾಳ ನಿವಾಸಕ್ಕೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಶೀಘ್ರವೇ ಕಾವ್ಯಾಳ ನಿವಾಸಕ್ಕೆ ಭೇಟಿ ನೀಡಿ, ಈ ಬಗ್ಗೆ ಡಾ| ಮೋಹನ್ ಆಳ್ವ ಅವರಲ್ಲೂ ಮಾತುಕತೆ ನಡೆಸಲಿದ್ದೇನೆ. ಅಂದಮೇಲೆ ನಾವು ಸಾಮಾಜಿಕವಾಗಿ ಆತಂಕ ಸೃಷ್ಟಿಸಿ ಮನಸ್ತಾಪಕ್ಕೆ ಅವಕಾಶ ಕೊಡುವುದು ಸರಿಯಲ್ಲ. ತಪ್ಪಿಸ್ಥರಿಗೆ ಶಿಕ್ಷೆಯಾಗಲೇಬೇಕು. ಆ ಹಿನ್ನೆಲೆಯಲ್ಲೇ ನಮ್ಮ ಹೋರಾಟ ಮುನ್ನಡೆಯುವುದು ಎಂದು ನುಡಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಮಾತನಾಡಿ, ಡಾ| ಮೋಹನ್ ಆಳ್ವ ಅವರ ಬಗ್ಗೆ ನಾನೂ ವೈಯಕ್ತಿಕವಾಗಿ ನಂಟನ್ನಿರಿಸಿದವನು. ಅವರೋರ್ವ ಸಾಂಸ್ಕೃತಿಕ ರಾಯಭಾರಿಯಾಗಿದ್ದು ಅವರ ಗುಣಮಟ್ಟವುಳ್ಳ ಜಾಗತಿಕವಾದ ಶೈಕ್ಷಣಿಕ, ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿ. ಎಲ್ಲರೊಂದಿಗೆ ಉತ್ತಮ ಒಡನಾಟವಿರಿಸಿರುವ ಅವರ ನಡೆನುಡಿಗಳೇ ಅವರ ಪ್ರತಿಷ್ಠೆಯಾಗಿದೆ. ಕಾವ್ಯಾಳ ಸಾವಿನ ಕುರಿತು ಅವರು ಸಂಪೂರ್ಣವಾಗಿ ಸಹಕರಿಸುವ ಬಗ್ಗೆ ಕೇಳಿ ತಿಳಿದಿದ್ದೇನೆ. ಅವರೋರ್ವ ಮೇಧಾವಿಯಾಗಿದ್ದು ತನ್ನ ಶೈಕ್ಷಣಿಕ ಕ್ಯಾಂಪಸ್‌ನಲ್ಲಾದ ಅಸಹಜ ಸಾವಿನ ಬಗ್ಗೆ ಸೂಕ್ತ ತನಿಖೆಯಾಗುವ ರೀತಿಯಲ್ಲಿ ಸಹರಿಸುವ ವಿಶ್ವಾಸವೂ ನಮ್ಮಲ್ಲಿದೆ ಎಂದರು.
ಕಾವ್ಯಾಳ ಸಾವು ಎಲ್ಲರಲ್ಲೂ ನೋವನ್ನುಂಟುಮಾಡಿದೆ. ಇದು ಕೂಲಂಕಷವಾಗಿ ತನಿಖೆಯಾಗಿ ಎಲ್ಲರಿಗೂ ನ್ಯಾಯ ಸಿಗಬೇಕಾಗಿದೆ ಎನ್ನುವುದು ನಮ್ಮೆಲ್ಲರ ಕೋರಿಕೆ. ನಮ್ಮ ದೃಷ್ಟಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ವಿಶಾಲವಾದುದು. ಆದರೆ ದೊಡ್ಡ ಸಂಸ್ಥೆಯಲ್ಲೂ ಸಮಸ್ಯೆ ಏನಾದರೂ ಆಗಿದ್ದಾದರೆ ಅದು ಒಳ್ಳೆಯ ಬೆಳವಣಿಗೆ ಯಲ್ಲ. ನ್ಯಾಯಸಮ್ಮತವಾಗಿ ತನಿಖೆಯಾಗಲಿ ಎಂದು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಹೇಳಿದರು.
ವೇದಿಕೆಯಲ್ಲಿ ಅಸೋಸಿಯೇಶನ್‌ನ ಪೂರ್ವಾಧ್ಯಕ್ಷ ಎಲ್. ವಿ. ಅಮೀನ್, ಬಿಲ್ಲವರ ಹಿರಿಯ ಮುತ್ಸದ್ದಿ ವಾಸುದೇವ ಆರ್. ಕೋಟ್ಯಾನ್ ಉಪಸ್ಥಿತರಿದ್ದರು. ಗೋಷ್ಠಿಯಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್, ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಭಾಸ್ಕರ ವಿ. ಬಂಗೇರ, ಪುರುಷೋತ್ತಮ ಎಸ್. ಕೋಟ್ಯಾನ್, ಯುವಾಭ್ಯುದಯ ಸಮಿತಿಯ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಎನ್. ಎಂ. ಸನೀಲ್, ಚಂದ್ರಶೇಖರ ಎಸ್. ಪೂಜಾರಿ, ಜ್ಯೋತಿ ಕೆ. ಸುವರ್ಣ, ಸಿ. ಟಿ. ಸಾಲ್ಯಾನ್, ಹರೀಶ್ ಮೂಲ್ಕಿ, ಶ್ರೀನಿವಾಸ ಆರ್. ಕರ್ಕೇರ, ಭಾಸ್ಕರ್ ಎಂ. ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಪ್ರೇಮನಾಥ ಕೆ. ಕೋಟ್ಯಾನ್, ನಾಗೇಶ್ ಎಂ. ಕೋಟ್ಯಾನ್, ಉಮೇಶ್ ಎನ್. ಕೋಟ್ಯಾನ್, ಸುಮಿತ್ರಾ ಎಸ್. ಬಂಗೇರ, ವಿಲಾಸಿನಿ ಪೂಜಾರಿ, ಸುಜಾತಾ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ- ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.