ಲಾತೂರ್ ರೈಲು ಕೋಚ್ ಫ್ಯಾಕ್ಟರಿಯಲ್ಲಿ ಮೊದಲ ಬೋಗಿ ಉತ್ಪಾದನೆ
Team Udayavani, Dec 29, 2020, 7:25 PM IST
ಲಾತೂರ್, ಡಿ. 28: ಕೋವಿಡ್ – 19 ಸಂಬಂಧಿತ ಸವಾಲುಗಳ ಹೊರತಾಗಿಯೂ ಭಾರತೀಯ ರೈಲ್ವೇಯ ಸಾರ್ವಜನಿಕ ಸಂಸ್ಥೆಯಾದ ರೈಲ್ವೇ ವಿಕಾಸ್ ನಿಗಮ್ ಲಿ. (ಆರ್‌ವಿಎನ್‌ಎಲ್) ಡಿ. 25ರಂದು ಉತ್ತಮ ಆಡಳಿತ ದಿನದಂದು ಲಾತೂರ್‌ನ ಮರಾಠವಾಡ ರೈಲ್ ಕೋಚ್ ಕಾರ್ಖಾನೆಯಲ್ಲಿ ಮೊದಲ ರೈಲು ಕೋಚ್ ಶೆಲ್‌ನ ಉತ್ಪಾದನೆಯನ್ನು ಘೋಷಿಸಿದೆ. ದೇಶದ ನಾಲ್ಕನೇ ಮತ್ತು ರಾಜ್ಯದ ಮೊದಲ ಕೋಚ್ ಫ್ಯಾಕ್ಟರಿ ಇದಾಗಿದೆ. ಈ ಕಾರ್ಖಾನೆಯನ್ನು ಎರಡು ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು.
ಕಾರ್ಖಾನೆಯು ಆಧುನಿಕ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ರಾಜ್ಯದ ಈ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಸಹಕರಿಸಲಿದೆ. ವರ್ಷಕ್ಕೆ 250 ಎಂಇಎಂಯು/ಇಎಂಯು / ಎಲ್‌ಎಚ್‌ಬಿ/ ರೈಲು ಸೆಟ್ ಪ್ರಕಾರದ ಸುಧಾರಿತ ಬೋಗಿಗಳನ್ನು ತಯಾರಿಸುವ ಆರಂಭಿಕ ಸಾಮರ್ಥ್ಯದೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ ಇದರ ಲೇ ಔಟ್ ಯೋಜನೆಯಲ್ಲಿ ಸಾಕಷ್ಟು ಖಾಲಿ ಜಾಗವನ್ನು ಗುರುತಿಸಲಾಗಿರುವುದರಿಂದ ಭವಿಷ್ಯದಲ್ಲಿ ಇದರ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ. ಈ ಯೋಜನೆಯ ವೆಚ್ಚ 500 ಕೋಟಿ ರೂ. ಮತ್ತು ಭೂಮಿಯ ವೆಚ್ಚ 120 ಕೋಟಿ ರೂ. ಆಗಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.
ಸುಸ್ಥಿರ ಅಭಿವೃದ್ಧಿಗಾಗಿ ಯೋಜನೆಯು 800 ಕಿಲೋ ವ್ಯಾಟ್ ಮೇಲ್ಛಾವಣಿಯ ಸೌರ ವಿದ್ಯುತ್ ಯೋಜನೆಗಳು, ತ್ಯಾಜ್ಯ ನೀರಿನ ನಿರ್ವಹಣೆ ಮತ್ತು ಮರುಬಳಕೆ ಯೋಜನೆಗಳು, ಮಳೆನೀರು ಕೊಯ್ಲು, 10,000 ವೃಕ್ಷಾರೋಪಣ, ಎಲ…ಇಡಿ ದೀಪ, ನೈಸರ್ಗಿಕ ಬೆಳಕು ಮತ್ತು ವಾತಾವರಣ ಸಹಿತ ವಿವಿಧ ಹಸುರು ಉಪಕ್ರಮಗಳನ್ನು ಜಾರಿಗೆ ತಂದಿದೆ. ಇದರ ಆಡಳಿತಾತ್ಮಕ ಬ್ಲಾಕ್ ಅನ್ನು
ಹಸುರು ಕಟ್ಟಡ ಪರಿಕಲ್ಪನೆಯ ಪ್ರಕಾರ ನಿರ್ಮಿಸಲಾಗಿದೆ. ಯೋಜನೆಯ ಯಶಸ್ಸಿನ ಹಿಂದೆ ರೈಲ್ವೇ ಸಚಿವ ಪೀಯೂಷ್ ಗೋಯಲ್ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪ್ರಮುಖ ಪಾತ್ರವಿದೆ. ಈ ಯೋಜನೆಗೆ 2018ರ ಆ. 28ರಂದು ಅನುಮೋದನೆ ದೊರೆತ ಕೂಡಲೇ ಅದರ ತ್ವರಿತ ಅನುಷ್ಠಾನಕ್ಕಾಗಿ ಆ. 30ರಂದು ಆರ್‌ವಿಎನ್‌ಎಲ್‌ಗೆ ಗುತ್ತಿಗೆ ನೀಡಲಾಯಿತು. ಕಾರ್ಖಾನೆಯು ಮುಂದಿನ ದಿನಗಳಲ್ಲಿ ಹೆಚ್ಚಿನ ರೈಲು ಬೋಗಿಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.
ಉಪಯುಕ್ತ ಸೌಲಭ್ಯಗಳು :
350 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕಾರ್ಖಾನೆಯಲ್ಲಿ 52,000 ಚ.ಮೀ. ವ್ಯಾಪ್ತಿಯ ಪೂರ್ವ ಎಂಜಿನಿಯರಿಂಗ್ ಶೆಡ್, ಮೂರು ಲೈನ್ ಯಾರ್ಡ್ ಗಳು, 33 ಕೆವಿ ವಿದ್ಯುತ್ ಸಬ್‌ಸ್ಟೇಶನ್, ಕ್ಯಾಂಟೀನ್, ಭದ್ರತೆ ಮತ್ತು ಆಡಳಿತ ವಿಭಾಗ ಹಾಗೂ 24 ಎಕ್ರೆ ವಸತಿ ಕಾಲನಿ ಇದೆ. ಕಾರ್ಖಾನೆಯಿಂದ ಹೊಸದಾಗಿ ವಿದ್ಯುತ್ ಸಂಪರ್ಕ ಹೊಂದಿದ ಹರಂಗುಲ್ ರೈಲು ನಿಲ್ದಾಣಕ್ಕೆ ಬೋಗಿಗಳನ್ನು ಸಾಗಿಸಲು 5 ಕಿ.ಮೀ. ಉದ್ದದ ರೈಲು ಮಾರ್ಗವನ್ನು ಒದಗಿಸಲಾಗಿದೆ. ಕಾರ್ಖಾನೆಯು ಅತ್ಯಾಧುನಿಕ ಯಂತ್ರೋಪಕರಣಗಳು, ಉಪಕರಣಗಳು, ಸರಕು ನಿರ್ವಹಣ ವ್ಯವಸ್ಥೆ ಮತ್ತು ವಿವಿಧ ಉಪಯುಕ್ತ ಸೌಲಭ್ಯಗಳಿಂದ ಸುಸಜ್ಜಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.