ಯಾಗದಿಂದ ಭಕ್ತರಲ್ಲಿ ಆತ್ಮಜ್ಞಾನ ವೃದ್ಧಿ: ಮಾಣಿಲ ಶ್ರೀ
Team Udayavani, Oct 31, 2018, 12:51 PM IST
ಮುಂಬಯಿ: ಸಮಾಜ ಕಲ್ಯಾಣದ ಸಂಕಲ್ಪ ಹೊಂದಿದ ಸಾಧು-ಸಂತರು ಧರ್ಮ ಭೂಮಿಯ ಕರ್ಮ ತೀರಿಸಲು ತಮ್ಮಲ್ಲಿನ ಅಧ್ಯಾತ್ಮಿಕ ಮನಸ್ಸುಗಳನ್ನು ಶುದ್ಧೀ ಕರಿಸಿ ಜನ್ಮಕಲ್ಯಾಣ ಮಾಡಬೇಕೆನ್ನುವ ಉದ್ದೇಶ ವನ್ನಿಟ್ಟುಕೊಂಡಿದ್ದೇವೆ. ಸಂತರು ಭಾವೈಕ್ಯದ ಹರಿಕಾರರಾಗಿದ್ದು ಅವರ ಅನುಗ್ರಹದಿಂದ ಅಧ್ಯಾತ್ಮದ ಒಲವನ್ನು ಹೊಂದಿದಾಗಲೇ ವೈಚಾರಿಕ ಪ್ರಜ್ಞೆಯ ಜಾಗೃತಿ ಮೂಡುತ್ತದೆ. ಯಾಗದಿಂದ ಭಕ್ತರಲ್ಲಿ ಆತ್ಮಜ್ಞಾನ ವೃದ್ಧಿ ಯಾಗುತ್ತದೆ ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷಿ ¾à ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.
ಅ.28 ರಂದು ಸಂಜೆ ಉಪನಗರ ಮುಲುಂಡ್ ಶಿವಾಜಿ ನಗರದಲ್ಲಿನ ನವೋದಯ ಕನ್ನಡ ವಿದ್ಯಾಲಯದ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಕೊಂಡೆವೂರಿನಲ್ಲಿ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಸಿದ್ಧತಾ ಮುಂಬಯಿ ಸಮಿತಿಯ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ನನ್ನ ಶಿಷ್ಯರಾಗಿದ್ದ ಕೊಂಡೆವೂರು ಶ್ರೀಗಳಿಗೆ ದೀಕ್ಷೆಯನ್ನಿತ್ತಾಗಲೇ ಅವರಲ್ಲಿ ಭಕ್ತಿಮಾರ್ಗದಿಂದ ಸಮಜೋದ್ಧಾರ ನಡೆಸುವ ಶಕ್ತಿ ಕಂಡಿದ್ದೆ. ಆದ್ದರಿಂದ ಅವರ ಆಶಯದ ಯಾಗದ ಮಹತ್ವವನ್ನು ನಾವೆಲ್ಲರೂ ತಿಳಿದು ಅವರೊಡನೆ ಒಗ್ಗೂಡಿ ಸಮಾಜ ಕಲ್ಯಾಣದ ಸಂಕಲ್ಪವನ್ನು ಈಡೇರಿಸಬೇಕು. ಆ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿಶ್ವದಾದ್ಯಂತ ಬೆಳಗಿಸೋಣ ಎಂದರು.
2019ರ ಫೆ. 18ರಿಂದ ಫೆ. 24ರ ತನಕ ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿರುವ “ವಿಶ್ವಜಿತ್ ಅತಿರಾತ್ರ ಸೋಮಯಾಗ’ದ ಬಗ್ಗೆ ಕೊಂಡೆವೂರು ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಸಂಕ್ಷಿಪ್ತ ಮಾಹಿತಿ ನೀಡಿ, ಭಕ್ತಿಯಿಂದ ಬಂದ ಪ್ರತಿಯೊಬ್ಬ ಭಕ್ತರ ಮನೋಭಿಷ್ಠಗಳನ್ನು ಈಡೇರಿಸುವುದು ಸನ್ಯಾಸಿಗಳ ಧರ್ಮವಾಗಿದೆ. ಸಜ್ಜನರ ಸ್ನೇಹಿಗಳಾಗಿ ಜೀವನದುದ್ದಕ್ಕೂ ಭಕೊ¤àದ್ಧಾರದ ಕಾರ್ಯ ನೆರವೇರಿಸಿ ಜೀವನ ಪಾವನಗೊಳಿಸಲು ಇಂತಹ ಧಾರ್ಮಿಕ ಸೇವೆಗಳು ಅಗತ್ಯವಾಗಿವೆ. ಆದ್ದರಿಂದ ಸೋಮಯಾಗದಲ್ಲಿ ಭಾಗಿಗಳಾಗಿ ಪುಣ್ಯಕ್ಕೆ ಪಾತ್ರರಾಗಿರಿ ಎಂದು ಭಕ್ತಾಭಿಮಾನಿಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷ ಹಾಗೂ ಶಾಲಾಡಳಿತ ಸಮಿತಿಯ ಕಾರ್ಯಾಧ್ಯಕ್ಷ ಜಯ ಕೆ. ಶೆಟ್ಟಿ, ಶ್ರೀ ನಿತ್ಯಾನಂದ ಸೇವಾ ಸಮಿತಿ ಗಣೇಶ್‌ಪುರಿ ಟ್ರಸ್ಟಿ ನ್ಯಾಯವಾದಿ ಸಂಧ್ಯಾ ಜಾಧವ್, ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮುಂಬಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ, ಕೃಷ್ಣ ಎನ್. ಉಚ್ಚಿಲ್, ಮಾಜಿ ಗೌರವಾಧ್ಯಕ್ಷ ರೋಹಿದಾಸ್ ಆರ್. ಬಂಗೇರ, ಕರ್ನಾಟಕ ಸರಕಾರದ ಮಾಜಿ ಎಂಎಲ್‌ಸಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಮೋನಪ್ಪ ಎಂ. ಭಂಡಾರಿ, ಯಶೋದಾ ಭಟ್ಟಂಪಾಡಿ, ಸಂದೀಪ್ ಶೆಟ್ಟಿ, ಸದಾನಂದ ನಾವರ, ಜಯರಾಮ್ ಪೂಜಾರಿ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಂಬಯಿ ಸಮಿತಿಯ ಅಶೋಕ್ ಎಂ. ಕೋಟ್ಯಾನ್ ಥಾಣೆ, ಎಸ್. ಕೆ. ಶ್ರೀಯಾನ್, ವಿಶ್ವನಾಥ್ ಯು. ಮಾಡಾ, ರವಿ ಎಸ್.ಮಂಜೇಶ್ವರ, ಹರೀಶ್ ಕೆ. ಚೇವಾರ್, ಚಂದ್ರಶೇಖರ ಆರ್. ಬೆಲ್ಚಡ, ತೋನ್ಸೆ ಸಂಜೀವ ಪೂಜಾರಿ ಸೇರಿದಂತೆ ನೂರಾರು ಭಕ್ತರು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪಾಲ್ಗೊಂಡ ಭಕ್ತಾದಿಗಳನ್ನು ಶ್ರೀಗಳು ಫಲಮಂತ್ರಾಕ್ಷತೆಯೊಂದಿಗೆ ಹರಸಿದರು.
ಯಾಗ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಡಿ. ಕೋಟ್ಯಾನ್ ಸ್ವಾಗತಿಸಿ ಕೊಂಡೆವೂರು ಕ್ಷೇತ್ರದ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ವಿಶ್ವಜಿತ್ ಅತಿರಾತ್ರ ಸೋಮಯಾಗದ ಸಿದ್ಧತೆಯ ಬಗ್ಗೆ ತಿಳಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಮುಂಬಯಿ ಸಮಿತಿಯ ಅಧ್ಯಕ್ಷ ರಾಜೇಶ್ ರೈ ವಂದಿಸಿದರು.
ಚಿತ್ರ- ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.