ಕುಲಾಲ ಸಂಘದ ಥಾಣೆ ನಿವೇಶನದಲ್ಲಿ ಗಣೇಶೋತ್ಸವ
Team Udayavani, Sep 1, 2017, 2:58 PM IST
ಥಾಣೆ: ಕುಲಾಲ ಸಂಘ ಮುಂಬಯಿ ಇದರ ಥಾಣೆ ಘೋಡ್‌ಬಂದರ್‌ನ ಕಾಸರವಾಡಿಯಲ್ಲಿರುವ ಸ್ವಂತ ನಿವೇಶನದಲ್ಲಿ ಆ.25ರಿಂದ 26ರ ತನಕ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಾಯಿತು.
ಆ. 25ರಂದು ಬೆಳಗ್ಗೆ ಗಣೇಶನ ಪ್ರತಿಷ್ಠೆ, ಬಳಿಕ ಸಂಘದ ಗುರು ವಂದನಾ ಭಜನಾ ಮಂಡಳಿಯ ಸದಸ್ಯರು ಹಾಗೂ 5 ಸ್ಥಳೀಯ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಭಜನೆ ನೆರವೇರಿಸಿದರು.
ಸಂಜೆ ಸಂಘದ ಮಹಿಳಾ ವಿಭಾಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮ
ವನ್ನು ಥಾಣೆಯ ಮೇಯರ್ ಮೀನಾಕ್ಷಿ ಶಿಂದೆ(ಪೂಜಾರಿ) ದೀಪ ಬೆಳಗಿಸಿ ಉದ್ಘಾಟಿಸಿ
ದರು. ಸಂಘದ ವತಿಯಿಂದ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಕಾರ್ಯದರ್ಶಿ ಡಿ. ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್. ಗುಜರನ್, ಉಪ ಕಾರ್ಯಾಧ್ಯಕ್ಷೆ ಸುಚಿತಾ ಬಂಜನ್, ಕಾರ್ಯದರ್ಶಿ ಮಾಲತಿ ಅಂಚನ್, ಕೋಶಾಧಿಕಾರಿ ಲತಾ ಎಸ್. ಮೂಲ್ಯ, 5 ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಸುರೇಖಾ ಬಂಗೇರ, ಪುಷ್ಪಲತಾ ಸಾಲ್ಯಾನ್, ಇಂದಿರಾ ಬಂಜನ್, ರೇಖಾ ಎ. ಮೂಲ್ಯ, ಪ್ರೇಮಾ ಎಲ್. ಮೂಲ್ಯ ಅವರ ಉಪಸ್ಥಿತಿಯಲ್ಲಿ ಮೇಯರ್ ಮೀನಾಕ್ಷಿ ಶಿಂದೆ ಅವರನ್ನು ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿದ ಮೇಯರ್ ಮೀನಾಕ್ಷಿ ಶಿಂದೆ ಅವರು ಮಾತನಾಡುತ್ತಾ, ಸಮಾಜದ ಅಭಿವೃದ್ಧಿಗಾಗಿ ಮಹಿಳೆಯರು ಹೆಚ್ಚು ಸಹಭಾಗಿಗಳಾಗಬೇಕು. ಕುಲಾಲ ಸಂಘದ
ಚಟುವಟಿಕೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿರುವುದು ಸಂತಸ ತಂದಿದೆ. ಥಾಣೆ ಘೋಡ್‌ಬಂದರ್‌ನ ನಿವೇಶನದ ಯಾವುದೇ ಸಮಸ್ಯೆಯಿದ್ದರೂ ನನ್ನಿಂದಾಗುವ ಎಲ್ಲಾ ಸಹಕಾರ ನೀಡುತ್ತೇನೆ. ವಿಘ್ನಗಳನ್ನು ದೂರೀ ಕರಿಸುವ ಗಣೇಶೋತ್ಸವವು ಎಲ್ಲಾ ಕಾರ್ಯಕ್ಕೂ ಮಂಗಳವನ್ನುಂಟು ಮಾಡಲಿ. ಘೋಡ್‌ಬಂದರ್‌ನ ಈ ನಿವೇಶನ ಕುಲಾಲ ಸಮಾಜದ ದ್ಯೋತಕವಾಗುವಂತಹ ಮಹೋನ್ನತ ಕಾರ್ಯ ಇಲ್ಲಿ ನಡೆಯಲಿದೆ ಎಂದು ಹಾರೈಸಿದರು.
ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಮಾತನಾಡುತ್ತಾ, ಗಣೇಶೋತ್ಸವ ಯಶಸ್ವಿ ಯಾಗುವಲ್ಲಿ ಸಮಾಜದ ಬಹುತೇಕ ಬಂಧು ಗಳು ಸಹಕಾರ ನೀಡಿದ್ದಾರೆ. ಅವರೆಲ್ಲರ ಪ್ರೋತ್ಸಾಹ ದಿಂದ ಥಾಣೆ ನಿವೇಶನದಲ್ಲಿ ಗಣೇಶೋತ್ಸವ ಮಾಡುವಂತಾಯಿತು. ಮಹಿಳಾ ವಿಭಾಗದ ಉತ್ಸವಕ್ಕೆ ವಿಶೇಷ ಮೆರುಗು ನೀಡುವಂತೆ ಅರಶಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಿ ಮಹಿಳೆಯರನ್ನು ಒಗ್ಗೂಡಿಸಿದೆ ಎಂದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್.ಗುಜರನ್ ಅವರು ಮಾತನಾಡಿ, ಮಳೆಯ ಆರ್ಭಟ ಜೋರಾಗಿದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಘೋಡ್‌ಬಂದರ್‌ನ ನಮ್ಮ ನಿವೇಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರಶಿನ ಕುಂಕುಮ ಮತ್ತು ಗಣೇಶೋತ್ಸವವನ್ನು ಯಶಸ್ವಿಗೊಳಿಸಿದ್ದೀರಿ. ಮುಂದಿನ ದಿನಗಳಲ್ಲೂ ಮಹಿಳಾ ವಿಭಾಗದ ಎಲ್ಲಾ ಕಾರ್ಯಕ್ರಮಕ್ಕೂ ಸಹಕಾರ ನೀಡಿ ಎಂದರು.
ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಅಂಚನ್ ನಿರೂಪಿಸಿದರೆ, ಸಂಘದ ಕಾರ್ಯದರ್ಶಿ ಡಿ.ಐ. ಮೂಲ್ಯ ವಂದಿಸಿದರು. ದಾನಿಗಳ ಯಾದಿಯನ್ನು ಜಯ ಅಂಚನ್, ಶೇಖರ ಮೂಲ್ಯ ಪಿ., ಸುನೀಲ್ ಕುಲಾಲ್, ಆನಂದ ಕುಲಾಲ್ ಬಂಟ್ವಾಳ, ರಘು ಬಿ. ಮೂಲ್ಯ, ಆನಂದ ಬಿ. ಮೂಲ್ಯ, ಉಮೇಶ್ ಬಂಗೇರ, ನ್ಯಾ| ಉಮಾನಾಥ್ ಮೂಲ್ಯ ಅವರು ವಾಚಿಸಿದರು. ರಾತ್ರಿ ಗಣೇಶನಿಗೆ ಮಂಗಳಾರತಿಯನ್ನು ಶಂಕರ ವೈ. ಮೂಲ್ಯ ನಡೆಸಿ ಪ್ರಾರ್ಥನೆ ಸಲ್ಲಿಸಿದರು.
ನವಿಮುಂಬಯಿಯ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಪಾದೆಬೆಟ್ಟು ರಘು ಮೂಲ್ಯ ಅವರ ಮುಂದಾಳತ್ವದಲ್ಲಿ ಗುರುವಂದನಾ ಭಜನಾ ಮಂಡಳಿಯ ಶೀನ ಮೂಲ್ಯ ಅವರ ಸಹಕಾರದೊಂದಿಗೆ ಗಣೇಶೋತ್ಸವ ಯಶಸ್ವಿಯಾಗಿ ನಡೆಯಿತು.
ಆ.26ರಂದು ಸಂಜೆ ಸಂಘದ 5 ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಯುವ ವಿಭಾಗದ ಸದಸ್ಯರು, ಮಹಿಳಾ ವಿಭಾಗ ಹಾಗೂ ಭಕ್ತರ ಸಹಕಾರದೊಂದಿಗೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಗಣೇಶ ಉತ್ಸವಕ್ಕೆ ಥಾಣೆಯ ಕುಟ್ಟಿ ಜಿ. ಮೂಲ್ಯ ಮತ್ತು ಕೃಷ್ಣ ಎಸ್. ಮೂಲ್ಯ ಠಾಕುರ್ಲಿ ವಿಶೇಷ ಸಹಕಾರ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.