ಗಾಣಿಗ ಸಮಾಜ ಮುಂಬಯಿ ವತಿಯಿಂದ 71ನೇ ಸ್ವಾತಂತ್ರ್ಯ ದಿನಾಚರಣೆ

Team Udayavani, Aug 16, 2017, 2:21 PM IST

15-Mum07.jpg

ಮುಂಬಯಿ: ನಾವು ಪ್ರತಿಯೊಬ್ಬ ಭಾರತೀಯ ಮತಪಂಥ ಪಂಗಡ, ಮೇಲು- ಕೀಳುಗಳೆಂಬ ಮನೋಭಾವದಿಂದ ಮುಕ್ತರಾಗಿ ಬಾಳಿದಾಗಲೇ ನಿಜಾರ್ಥದ ಸ್ವಾತಂತ್ರ್ಯ ಲಭಿಸು ವುದು. ಎಲ್ಲಿಯವರೆಗೆ ರಾಷ್ಟ್ರಾಭಿಮಾನ ಮತ್ತು ಮಾನವೀಯ ಮೌಲ್ಯಗಳನ್ನು ಮನದಟ್ಟು ಮಾಡಿ ಸೌಹಾರ್ದತೆ ಯಿಂದ ಬಾಳಲಾರೆವೋ ಅಲ್ಲಿಯ ವರೆಗೆ ಸಂಪೂರ್ಣ ಸ್ವಾತಂತ್ರ್ಯವು ಹುಸಿಯಾಗಿರುವುದು. ರಾಷ್ಟ್ರೀಯ ಭಾವೈಕ್ಯತೆ ನಮ್ಮಲ್ಲಿ ಮೂಡಿಸಿ ಬಾಳುವ ಅಗತ್ಯವಿದೆ. ಇದೇ ನಿಜವಾದ ಸ್ವಾತಂತ್ರ್ಯವಾಗಿದೆ. ಅದಕ್ಕಾಗಿ ಸ್ವಾತಂತ್ರ್ಯೋತ್ಸವ ಸಡಗರದಿಂದ ರಾಷ್ಟ್ರಾಭಿಮಾನ ಮೂಡಿಸಿಕೊಳ್ಳುವ ಅಗತ್ಯವಿದೆ ಎಂದು ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ ಅವರು ನುಡಿದರು.

ಕುರ್ಲಾ ಪೂರ್ವದ  ಗುಲ್‌ರಾಜ್‌ ಟವರ್‌ನಲ್ಲಿನ ಗಾಣಿಗ ಸಮಾಜ  ಮುಂಬಯಿ ಕಚೇರಿಯಲ್ಲಿ ಆ. 15ರಂದು ನಡೆದ  71ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ಧ್ವಜಾರೋಹಣಗೈದು ಬಳಿಕ ಸಂಸ್ಥೆಯ ವಿದ್ಯೋದಯ ಸಮಿತಿ ಆಯೋಜಿಸಿದ್ದ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಸ್ಥೆಯ ಉಪಾಧ್ಯಕ್ಷ ಭಾಸ್ಕರ ಎಂ. ಗಾಣಿಗ, ಗೌರವ  ಪ್ರಧಾನ  ಕಾರ್ಯದರ್ಶಿ ಚಂದ್ರಶೇಖರ್‌ ಆರ್‌. ಗಾಣಿಗ, ಗೌರವ  ಕೋಶಾಧಿಕಾರಿ ಜಯಂತ ಪದ್ಮನಾಭ ಗಾಣಿಗ, ವಿದ್ಯೋದಯ ಸಮಿತಿಯ ಕಾರ್ಯಾಧ್ಯಕ್ಷ ವಿಜಯೇಂದ್ರ ಗಾಣಿಗ, ಯುವ ವಿಭಾಗಾಧ್ಯಕ್ಷ ಗಣೀಶ್‌ ಆರ್‌. ಕುತ್ಪಾಡಿ, ಯು. ಬಾಲಕೃಷ್ಣ ಕಟಪಾಡಿ ವೇದಿಕೆಯಲ್ಲಿಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ಜಗದೀಶ್‌ ಗಾಣಿಗ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರಾಜೇಶ್‌ ಕುತ್ಪಾಡಿ, ಆರತಿ ಸತೀಶ್‌ ಗಾಣಿಗ, ವೀಣಾ ದಿನೇಶ್‌ ಗಾಣಿಗ, ದಿನೇಶ್‌ ರಾವ್‌ ಟಿ. ಎಸ್‌., ನರೇಂದ್ರ ರಾವ್‌, ವಿನಾಯಕ ಭಟ್ಕಳ, ದಿನೇಶ್‌ ಗಾಣಿಗ ಭಾಯಂದರ್‌, ಗಂಗಾಧರ ಎನ್‌. ಗಾಣಿಗ ಕಚೇರಿ ಉಸ್ತುವಾರಿ  ಪದ್ಮನಾಭ ಎನ್‌. ಗಾಣಿಗ ಮತ್ತಿತರರು ಹಾಜರಿದ್ದರು.

ಸ್ವಾತಂತ್ರÂ ಪಡೆಯುವಲ್ಲಿ ನಮ್ಮ ಸಾವಿರಾರು ಪೂರ್ವಜರು, ಯೋಧರು, ಸೈನಿಕರು, ದೇಶಭಕ್ತರು ದುಡಿದು, ದೇಶಕ್ಕಾಗಿ ತಮ್ಮ ಜೀವವನ್ನು ಬಲಿದಾನವಾಗಿಸಿದ ಫಲವೇ ಈ ರಾಷ್ಟ್ರೋತ್ಸವ ಸಾಧ್ಯವಾಗಿದೆ. ಇದು ಆಚರಣೆಗಿಂತ ಸ್ವಾತಂತ್ರÂಕ್ಕಾಗಿ ಬಲಿದಾನಗೈದ ಪ್ರತಿಯೊಬ್ಬರಿಗೆ ಕೃತಜ್ಞತಾ ಭಾವ ಅರ್ಪಿಸುವ ಸುದಿನವಾಗಿದೆ ಎಂದು ಬಿ. ವಿ. ರಾವ್‌ ನುಡಿದು ಶುಭ ಹಾರೈಸಿದರು.

ಇಂದು ದೇಶಾದ್ಯಂತ ಅಲ್ಲಲ್ಲಿ ಸ್ವಾತಂತ್ರೊÂàತ್ಸವದ ಸಂಭ್ರಮ ನಿಜ. ಆದರೆ ನಾವುಗಳು ಇದನ್ನು ಗಳಿಸುವಲ್ಲಿ ಶ್ರಮಿಸಿದವರ ಮನೋಭಾವವನ್ನು ತಿಳಿಯುತ್ತ ಸಂಭ್ರಮಿಸಿದಾಗ ಅರ್ಥಗರ್ಭಿತ ಆಚರಣೆ ಸಾಧ್ಯ ಎಂದು ಬಾಲಕೃಷ್ಣ ಕಟಪಾಡಿ ತಿಳಿಸಿದರು.

ಗಾಣಿಗ ಸಮಾಜದ ಗಣ್ಯರೂ ರಾಷ್ಟ್ರದ ಸ್ವಾತಂತ್ರÂದ ಹಿಂದಿನ ಶಕ್ತಿಗಳಾಗಿದ್ದರು. ಇದನ್ನು ನಮ್ಮ ಯುವಜನತೆಗೆ ತಿಳಿಸುವ ಅಗತ್ಯವಿದೆ. ಆ ಮೂಲಕ ಮೂಲಭೂತ ಸೌಕರ್ಯ ವಂಚಿತವಾಗದಂತೆ  ನಮ್ಮ ಸಮಾಜದ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಮಕ್ಕಳಿಗೆ ಸೂಕ್ತ  ವಿದ್ಯಾಭ್ಯಾಸ ಕೊಡಿಸುವಲ್ಲಿ ಇಂತಹ ವಿದ್ಯಾರ್ಥಿ ವೇತನ ಪ್ರದಾನ  ಕಾರ್ಯಕ್ರಮಗಳು ಮಹತ್ವದ್ದಾಗಿದೆ ಎಂದು ವಿಜಯೇಂದ್ರ  ಗಾಣಿಗ ನುಡಿದರು.

ಕು| ಈಶಾ ರಾಜೇಶ್‌ ಗಾಣಿಗ ಸ್ವತ್ಛ ಭಾರತದ ಬಗ್ಗೆ ಸ್ವರಚಿತ ಕವನವನ್ನು ಸಂಗೀತ ಮೂಲಕ ಪ್ರಸ್ತುತ ಪಡಿಸಿದರು. ಮಾಜಿ ಕಾರ್ಯದರ್ಶಿ ಬಿ. ವಿ. ರಾವ್‌ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್‌ ಆರ್‌. ಗಾಣಿಗ  ವಂದಿಸಿದರು. ಸಮಾಜ ಬಾಂಧವರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲುಗೊಂಡಿದ್ದರು.  

 ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Elephant-Camp

Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್‌ ಶೀಘ್ರ ಆರಂಭ?

Indian-origin Anita in Canada’s Prime Ministerial race

Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

ICC Champions Trophy: England boycott match against Afghanistan?

ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್‌ ಬಹಿಷ್ಕಾರ?

Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ

Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ

Bumrah in the race for ICC Player of the Month award

Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Elephant-Camp

Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್‌ ಶೀಘ್ರ ಆರಂಭ?

Indian-origin Anita in Canada’s Prime Ministerial race

Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

ICC Champions Trophy: England boycott match against Afghanistan?

ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್‌ ಬಹಿಷ್ಕಾರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.