ಗಾಣಿಗ ಸಮಾಜ ಮುಂಬಯಿ ವಾರ್ಷಿಕ ಕ್ರೀಡೋತ್ಸವ
Team Udayavani, Apr 18, 2017, 4:53 PM IST
ಮುಂಬಯಿ: ಕ್ರೀಡೆ ಯೋಗ್ಯತೆ ಅಳೆಯುವ ಮಾಪನವಲ್ಲ. ಆರೋಗ್ಯ ಕಾಪಾ ಡುವ ಒಂದು ರೀತಿಯ ಕಲೆ. ಈ ಕ್ರೀಡಾಕೂಟ ಸಮಾಜ ಬಾಂಧವರ ಪ್ರೀತಿ ತೋರುವ ಔದಾರ್ಯವೇ ಹೊರತು ಸ್ಪರ್ಧೆಯಲ್ಲ. ಹೆಚ್ಚುವರಿ ಪರಿಚಯ ಮಾಡಿಕೊಳ್ಳಲು ಅನುಕೂಲಕರ ಹಾಗೂ ಸಂಬಂಧಗಳ ಅರಿವು ಪಡೆಯುವ ಉಪಾಯವೂ ಇದಾಗಿದೆ. ಜ್ಞಾನ ಎಲ್ಲದಕ್ಕಿಂತ ಶ್ರೇಷ್ಠವಾದದ್ದು, ಅಂತೆಯೇ ಇಲ್ಲಿ ಪರಸ್ಪರ ಮಾತುಕತೆಯಿಂದ ಸ್ವಸಮುದಾಯದ ಸಂಸ್ಕೃತಿ, ಸಂಬಂಧಗಳ ಜ್ಞಾನೋದಯ ಸಾಧ್ಯವಾಗುತ್ತದೆ. ಏಕತಾ ಬದುಕು ವ್ಯರ್ಥವಾಗದಂತೆ ಸಾಂಘಿಕ ಜೀವನದ ಅರ್ಥ ಕಲ್ಪಿಸುವಲ್ಲಿ ಇಂತಹ ಅವ ಕಾಶಗಳು ಪೂರಕವಾಗಿವೆ ಎಂದು ಗಾಣಿಗ ಸಮಾಜ ಮುಂಬಯಿ ಇದರ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ ತಿಳಿಸಿದರು.
ಎ. 15ರಂದು ಬೆಳಗ್ಗೆ ಗಾಣಿಗ ಸಮಾಜ ಮುಂಬಯಿ ಸಂಸ್ಥೆಯು ಮಾಟುಂಗಾ ಪೂರ್ವದ ಕಿಂಗ್ಸ್ ಸರ್ಕಲ್‌ನ ಜಿಎಸ್‌ಬಿ ನ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ 2017 ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಸಂಭ್ರಮಗಳಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಂಘಟನೆ ಬಲಗೊಳಿಸಬೇಕು ಎಂದು ತಿಳಿಸಿದರು.
ಗಾಣಿಗ ಸಮಾಜ ಮುಂಬಯಿ ಸಂಸ್ಥೆಯ ಹಿರಿಯ ಸದಸ್ಯ ಅಣ್ಣಪ್ಪಯ್ಯ ಕೊಳಂಬೆ ಅವರು ಕ್ರೀಡೋತ್ಸವ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಉದ್ಯಮಿ ಬಿ. ಎನ್. ರಾಮಕೃಷ್ಣ , ಸಂಪರ್ಕ ಸುಧಾ ಪತ್ರಿಕೆಯ ಸಂಪಾದಕ ಪ್ರಕಾಶಕ ಯು. ಬಾಲಚಂದ್ರ ಕಟಪಾಡಿ, ಸದಾನಂದ ಕಲ್ಯಾಣು³ರ್ ಉಪಸ್ಥಿತರಿದ್ದರು.
ಉದ್ಯಮಿ ರತ್ನಾಕರ್ ಎ. ಶೆಟ್ಟಿ ಥಾಣೆ ಬ್ಯಾಟಿಂಗ್ ಮಾಡಿ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಬಳಿಕ ಅಣ್ಣಪ್ಪಯ್ಯ ಕೊಳಂಬೆ ಅವರನ್ನು ಸಂಸ್ಥೆಯ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.
ಬಾಲಚಂದ್ರ ಕಟಪಾಡಿ ಅವರು ಮಾತ ನಾಡಿ, ನಮ್ಮದು ಚಿಕ್ಕದಾದ ಹಿಂದುಳಿದ ಸಮುದಾಯ ಎನ್ನುವ ಮನೋಭಾವಕ್ಕಿಂತ ಒಗ್ಗಟ್ಟಿನ ಮೂಲಕ ಮುಂದುವರಿದ ಸಮಾಜ ಎನ್ನುವ ಭಾವನೆ ನಮ್ಮಲ್ಲಿರಲಿ. ಇದು ಕ್ರೀಡಾಕೂಟ ಮಾತ್ರವಲ್ಲ ಸಮಾಜದ ಒಗ್ಗೂಡು ವಿಕೆಯ ಅವಕಾಶವಾಗಿದೆ. ಇಲ್ಲಿ ಸ್ಪರ್ಧೆಗಿಂತ
ಭಾಗವಹಿಸುವಿಕೆ ಮುಖ್ಯವಾದುದು. ಸಮು ದಾಯ ಒಗ್ಗೂಡುವಿಕೆ ಸಂಬಂಧಗಳನ್ನು ಬಲ ಪಡಿಸಲು ಸಹಕಾರಿಯಾಗಿವೆ. ಆದ್ದರಿಂದ ಕನಿಷ್ಠ ವರ್ಷಕ್ಕೆರಡು ಬಾರಿಯಾದರೂ ಸ್ವಸಮುದಾಯದ ಕಾರ್ಯಕ್ರಮಗಳಲ್ಲಿ ತೊಡಗಿಸಿ ಅಸ್ಮಿತೆ ಬಲಪಡಿಸಬೇಕು ಎಂದರು.
ಕೇರಂ, ಲೆಮನ್ ಆ್ಯಂಡ್ ಸ್ಪೂನ್, ಮ್ಯೂಸಿಕಲ್ ಚೇಯರ್, ಚಿತ್ರ ಬಿಡಿಸುವ ಸ್ಪರ್ಧೆ, ಬಾಲ್ ಇನ್ ಬಕೆಟ್, ವಿವಿಧ ಓಟಗಳ ಸ್ಪರ್ಧೆ, ಶಾಟ್‌ಫುಟ್, ತ್ರೋಬಾಲ್, ಕ್ರಿಕೆಟ್ ಪಂದ್ಯಾಟ ಸ್ಪರ್ಧೆಗಳಲ್ಲಿ ನೂರಾರು ಸಮಾಜ ಬಾಂಧವರು, ಯುವಕ ಯುವತಿಯರು, ಮಕ್ಕಳು ಭಾಗವಹಿಸಿದರು.
ಕ್ರೀಡಾಕೂಟದ ಉದ್ಘಾಟನಾ ಸಮಾ ರಂಭದಲ್ಲಿ ಗೌರವಾಧ್ಯಕ್ಷ ಜಗನ್ನಾಥ ಎಂ. ಗಾಣಿಗ, ಉಪಾಧ್ಯಕ್ಷರಾದ ಭಾಸ್ಕರ ಎಂ. ಗಾಣಿಗ, ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್. ಗಾಣಿಗ, ಜೊತೆ ಕಾರ್ಯದರ್ಶಿ ಬಿ. ಜಗದೀಶ್ ಗಾಣಿಗ, ಗೌರವ ಕೋಶಾಧಿಕಾರಿ ಜಯಂತ ಪದ್ಮನಾಭ ಗಾಣಿಗ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಆಶಾ ಹರೀಶ್ ತೋನ್ಸೆ, ಆರತಿ ಸತೀಶ್ ಗಾಣಿಗ, ವೀಣಾ ದಿನೇಶ್ ಗಾಣಿಗ, ಪೂರ್ಣಿಮಾ ಕಲ್ಯಾಣು³ರ್, ವೀಣಾ ರಾವ್ ಚೆಂಬೂರು, ನಿತೀಶ್ ಬಿ. ರಾವ್, ಗೋಪಾಲಕೃಷ್ಣ ಗೋವಿಂದ ಗಾಣಿಗ, ಜಯಂತ್ ಗಾಣಿಗ, ರಾಜೇಶ್ ಕುತ್ಪಾಡಿ, ರಘು ಗಾಣಿಗ ಚಕಲಾ, ಶುಭಾ ಗಣೇಶ್ ಕುತ್ಪಾಡಿ ಸೇರಿದಂತೆ ಇತರ ಪದಾಧಿಕಾರಿ ಗಳು, ಸದಸ್ಯರು, ಸಮಾಜ ಬಾಂಧವರು ಹಾಜರಿದ್ದರು.
ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೀಶ್ ಆರ್. ಕುತ್ಪಾಡಿ ಸ್ವಾಗತಿಸಿದರು. ರಾಮಚಂದ್ರ ಗಾಣಿಗ ಅತಿಥಿಗಳನ್ನು ಗೌರವಿಸಿದರು. ಮಾಜಿ ಕಾರ್ಯದರ್ಶಿ ಬಿ. ವಿ. ರಾವ್ ಕಾರ್ಯಕ್ರಮ ನಿರೂಪಿಸಿ, ದರು. ಚಂದ್ರಶೇಖರ್ ಆರ್. ಗಾಣಿಗ ವಂದಿಸಿದರು.
ಚಿತ್ರ – ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.