ಘನ್ಸೋಲಿ ಶ್ರೀ ಮೂಕಾಂಬಿಕ ಮಂದಿರ: ಚಂಡಿಕಾ ಮಹಾಯಾಗ
Team Udayavani, Sep 28, 2017, 12:02 PM IST
ನವಿಮುಂಬಯಿ: ಘನ್ಸೋಲಿಯ ಕಾರಣಿಕ ಕ್ಷೇತ್ರವಾಗಿರುವ ಶ್ರೀ ಮೂಕಾಂಬಿಕ ದೇವಾಲಯದಲ್ಲಿ 45ನೇ ನವರಾತ್ರಿ ಮಹೋ ತ್ಸವವು ಅದ್ದೂರಿಯಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ದಿನಂಪ್ರತಿ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುತ್ತಿದೆ.
ವಿಶೇಷ ಕಾರ್ಯಕ್ರಮವಾಗಿ ಸೆ. 25ರಂದು ಲಲಿತ ಪಂಚಮಿಯ ಅಂಗವಾಗಿ ಬೆಳಗ್ಗೆ ಉಷಾ ಕಾಲ ಪೂಜೆ, ನಿತ್ಯಮಹಾಪೂಜೆ, ಚಂಡಿಕಾ ಹವನ,ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗ-ತನು ತಂಬಿಲ ಸೇವೆ, ಮಧ್ಯಾಹ್ನ ಚಂಡಿಕಾ ಯಾಗದ ಪೂರ್ಣಾಹುತಿ, ಮಹಾಪೂಜೆ, ಅನಂತರ ಅನ್ನಪ್ರಸಾದ ನೆರವೇರಿತು. ಸಂಜೆ ಭರತನಾಟ್ಯ ಕಾರ್ಯಕ್ರಮ, ಬಿಲ್ಲವರ ಅಸೋಸಿಯೇಶನ್ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಭಜನ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಭಜನೆ ಮಂಗಳ, ಮಂಗಳಾರತಿ, ಅನ್ನಸಂತರ್ಪಣೆ ಜರಗಿತು. ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ದೇವಾಲಯದ ತಂತ್ರಿಗಳಾದ ವಿದ್ವಾನ್ ರಾಮಚಂದ್ರ ಬಾಯಾರ್ ಮತ್ತು ಪ್ರಧಾನ
ಅರ್ಚಕ ಗುರುಪ್ರಸಾದ್ ವಿ. ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ನಂದಿ ಕೂರು, ಕೆ. ಎಂ. ಶೆಟ್ಟಿ, ಗೌರವ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ಭಾಸ್ಕರ ಎಂ. ಶೆಟ್ಟಿ, ಗೌರವ ಕೋಶಾಧಿಕಾರಿ ಶೇಖರ ವಿ. ದೇವಾಡಿಗ, ಜತೆ ಕೋಶಾ ಧಿಕಾರಿ ಚಂದ್ರಹಾಸ ಶೆಟ್ಟಿ ದೆಪ್ಪುಣಿ ಗುತ್ತು, ಸದಸ್ಯರಾದ ರಾಘು ಆರ್. ಕೋಟ್ಯಾನ್, ಕುಟ್ಟಿ ಎ. ಕುಂದರ್, ಸುಧಾಕರ ಸಿ. ಪೂಜಾರಿ,ಶಂಕರ ಮೊಲಿ, ವಿಶ್ವನಾಥ ಎಸ್. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಶ್ರೀಧರ ಬಿ. ಪೂಜಾರಿ, ಮಹಾಬಲ ಟಿ. ಶೆಟ್ಟಿ, ಹರೀಶ ಶೆಟ್ಟಿ ಪಡುಬಿದ್ರೆ, ಹರೀಶ್ ಶೆಟ್ಟಿ ಕುರ್ಕಾಲ್, ಹರೀಶ್ ಶೆಟ್ಟಿ ನಲ್ಲೂರು, ಶಕುಂತಳಾ ಎಸ್. ಶೆಟ್ಟಿ ಹಾಗೂ ಮೂಕಾಂಬಿಕಾ ಚಾರಿಟೆಬಲ್ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪ ಸಮಿತಿಗಳು, ಮಹಿಳಾ ವಿಭಾಗದವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ಸೆ. 30ರವರೆಗೆ ಪ್ರತೀ ದಿನ ಬೆಳಗ್ಗೆ ಉಷಾಕಾಲ ಪೂಜೆ, ನಿತ್ಯ ಮಹಾಪೂಜೆ,ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ವಿವಿಧ ಮಂಡಳಿಗಳಿಂದ ಭಜನೆ, ಭಕ್ತಿ ಸಂಗೀತ, ಭಕ್ತಿ ಪ್ರವಚನ, ಸಂಜೆ 5ರಿಂದ ಭರತನಾಟ್ಯ, ಕಥಕ್ ನೃತ್ಯ, ಭಜನ ಕಾರ್ಯಕ್ರಮ, ರಾತ್ರಿ 8.30ರಿಂದ ಮಹಾ ಪೂಜೆ, ರಂಗಪೂಜೆ, ಭಕ್ತಾದಿಗಳ ಸೇವಾ ಪೂಜೆ, ಭಜನೆ, ಮಂಗಳಾರತಿ, ತೀರ್ಥ ಪ್ರಸಾದ, ಅನ್ನ ಪ್ರಸಾದ ನಡೆಯಲಿದೆ. ಸೆ. 29ರಂದು ಬೆಳಗ್ಗೆ ದುರ್ಗಾ ಹೋಮ, ದೇವಿಗೆ ಕಲಶಾಭಿಷೇಕ, ಸಾರ್ವ ಜನಿಕ ಅನ್ನಸಂತರ್ಪಣೆ, ಸೆ. 30ರಂದು ಬೆಳಗ್ಗೆ ಅಕ್ಷರಭ್ಯಾಸ, ವಾಹನ ಪೂಜೆ, ಸಂಜೆ ಲಕ್ಷ್ಮೀ ಸಹಿತ ಸತ್ಯನಾರಾಯಣ ಮಹಾಪೂಜೆ, ರಾತ್ರಿ ದೇವಿಗೆ ವಿಶೇಷ ರಂಗಪೂಜೆ, ಸಪ್ತಶತಿ ಪುಸ್ತಕದ ಮೆರವಣಿಗೆ ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.