ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ:ನವರಾತ್ರಿ ಉತ್ಸವಕ್ಕೆ ಚಾಲನೆ
Team Udayavani, Sep 22, 2017, 12:39 PM IST
ನವಿಮುಂಬಯಿ: ಘನ್ಸೋಲಿಯ ಕಾರಣಿಕ ಕ್ಷೇತ್ರವಾಗಿರುವ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ 45ನೇ ನವರಾತ್ರಿ ಮಹೋತ್ಸವವು ಸೆ. 30ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದ್ದು, ಗುರುವಾರ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಚಾಲನೆ ನೀಡಲಾಯಿತು.
ಬೆಳಗ್ಗೆ 8.30ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ನವಕ ಪ್ರಧಾನ ಹೋಮ, ಪೂರ್ವಾಹ್ನ 10ರಿಂದ ಹೋಮದ ಪೂಜೆ ಪೂರ್ಣಾಹುತಿ, ಶ್ರೀ ದೇವಿಗೆ ಕಲಶಾಭಿಷೇಕ, ಅಲಂಕಾರ, ಮಧ್ಯಾಹ್ನ 12ರಿಂದ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸಂಜೆ 5 ರಿಂದ ಭರತನಾಟ್ಯ ಕಾರ್ಯಕ್ರಮ, ಸಂಜೆ 6ರಿಂದ ಶ್ರೀ ಮಣಿಕಂಠ ಭಕ್ತವೃಂದ ನೆರೂಲ್ ಅವರಿಂದ ಭಜನೆ, ಮಹಾಪೂಜೆ, ಸರ್ವಸೇವಾ ಪೂಜಾ ಆರಂಭ, ಭಜನೆ ಮಂಗಳ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ತಂತ್ರಿಗಳಾದ ವಿದ್ವಾನ್ ರಾಮಚಂದ್ರ ಬಾಯಾರ್ ಮತ್ತು ಪ್ರಧಾನ ಅರ್ಚಕ ಗುರುಪ್ರಸಾದ್ ವಿ. ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು.
ಸೆ. 30ರವರೆಗೆ ಪ್ರತೀ ದಿನ ಬೆಳಗ್ಗೆ ಉಷಾಕಾಲ ಪೂಜೆ, ನಿತ್ಯ ಮಹಾಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ವಿವಿಧ ಮಂಡಳಿಗಳಿಂದ ಭಜನೆ, ಭಕ್ತಿ ಸಂಗೀತ, ಭಕ್ತಿ ಪ್ರವಚನ, ಸಂಜೆ 5ರಿಂದ ಭರತನಾಟ್ಯ, ಕಥಕ್ ನೃತ್ಯ, ಭಜನ ಕಾರ್ಯಕ್ರಮ, ರಾತ್ರಿ 8.30 ರಿಂದ ಮಹಾಪೂಜೆ, ರಂಗಪೂಜೆ, ಭಕ್ತಾದಿಗಳ ಸೇವಾ ಪೂಜೆ, ಭಜನೆ, ಮಂಗಳಾರತಿ, ತೀರ್ಥ ಪ್ರಸಾದ, ಅನ್ನಪ್ರಸಾದ ನಡೆಯಲಿದೆ.
ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ನಂದಿಕೂರು, ಕೆ. ಎಂ. ಶೆಟ್ಟಿ, ಗೌರವ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ಭಾಸ್ಕರ ಎಂ. ಶೆಟ್ಟಿ, ಗೌರವ ಕೋಶಾಧಿಕಾರಿ ಶೇಖರ ವಿ. ದೇವಾಡಿಗ, ಜತೆ ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು, ಸದಸ್ಯರಾದ ರಾಘು ಆರ್. ಕೋಟ್ಯಾನ್, ಕುಟ್ಟಿ ಎ. ಕುಂದರ್, ಸುಧಾಕರ ಸಿ. ಪೂಜಾರಿ, ಶಂಕರ ಮೊಲಿ, ವಿಶ್ವನಾಥ ಎಸ್. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಶ್ರೀಧರ ಬಿ. ಪೂಜಾರಿ, ಮಹಾಬಲ ಟಿ. ಶೆಟ್ಟಿ, ಹರೀಶ ಶೆಟ್ಟಿ ಪಡುಬಿದ್ರೆ, ಹರೀಶ್ ಶೆಟ್ಟಿ ಕುರ್ಕಾಲ್, ಹರೀಶ್ ಶೆಟ್ಟಿ ನಲ್ಲೂರು, ಶಕುಂತಳಾ ಎಸ್. ಶೆಟ್ಟಿ ಹಾಗೂ ಮೂಕಾಂಬಿಕಾ ಚಾರಿಟೇಬಲ್ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪ ಸಮಿತಿಗಳು, ಮಹಿಳಾ ವಿಭಾಗದವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು.
ವಿಶೇಷ ಕಾರ್ಯಕ್ರಮವಾಗಿ ಸೆ. 24ರಂದು ಬೆಳಗ್ಗೆ ಮಹಾಗಣಪತಿ ದೇವರಿಗೆ ಪಂಚಾಮೃತ ಅಭಿಷೇಕ, ತ್ರಿನಾಳಿಕೇರ ಮಹಾ ಗಣಪತಿ ಹೋಮ, ಸೆ. 25ರಂದು ಬೆಳಗ್ಗೆ ಚಂಡಿಕಾಯಾಗ, ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗ ತನು ತಂಬಿಲ ಸೇವೆ, ಸೆ. 29ರಂದು ಬೆಳಗ್ಗೆ ದುರ್ಗಾ ಹೋಮ, ದೇವಿಗೆ ಕಲಶಾಭಿಷೇಕ, ಸಾರ್ವಜನಿಕ ಅನ್ನಸಂತರ್ಪಣೆ, ಸೆ. 30ರಂದು ಬೆಳಗ್ಗೆ ಅಕ್ಷರಭ್ಯಾಸ, ವಾಹನ ಪೂಜೆ, ಸಂಜೆ ಲಕ್ಷ್ಮೀ ಸಹಿತ ಸತ್ಯನಾರಾಯಣ ಮಹಾಪೂಜೆ, ರಾತ್ರಿ ದೇವಿಗೆ ವಿಶೇಷ ರಂಗಪೂಜೆ, ಸಪ್ತಶತಿ ಪುಸ್ತಕದ ಮೆರವಣಿಗೆ ಜರಗಲಿದೆ.
ನವರಾತ್ರಿ ಸಮಯ ಪೂರ್ವಾಹ್ನ 10.30ರಿಂದ ಮಧ್ಯಾಹ್ನ 12ರವರೆಗೆ ಶ್ರೀದೇವಿಗೆ ವಿಶೇಷ ಅಷ್ಟೋತ್ತರ ಅರ್ಚನೆ, ದೇವಿ ಸಹಸ್ರ ನಾಮಾರ್ಚನೆ ನಡೆಯಲಿದ್ದು, ಸೇವಾದಾರರು ಮಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಂದಿರದಲ್ಲಿ ರಂಗಪೂಜೆ, ದುರ್ಗಾನಮಸ್ಕಾರ, ಹೂವಿನ ಪೂಜೆ, ಸಹಸ್ರನಾಮಾರ್ಚನೆ, ಪಂಚಾಮೃತ ಅಭಿಷೇಕ, ದುರ್ಗಾ ಹೋಮ, ಚಂಡಿಕಾಯಾಗ, ಸರ್ವಸೇವೆ, ತೀರ್ಥ ಸ್ನಾನ, ಕ್ಷೀರಪಾಯಸ, ಅಷ್ಟೋತ್ತರ, ಕುಂಕುಮಾರ್ಚನೆ, ಲಕ್ಷ್ಮೀ ಫಲ, ಶ್ರೀ ಮಹಾ
ಗಣಪತಿ ಹೋಮ, ಪಂಚಾಮೃತ ಅಭಿಷೇಕ, ನಾಗದೇವರಿಗೆ ತಂಬಿಲ, ಆಶ್ಲೇಷಾ ಬಲಿ, ವಾಹನ
ಪೂಜೆ ಇತ್ಯಾದಿ ಸೇವೆಗಳು ಲಭ್ಯವಿದ್ದು, ಭಕ್ತಾದಿಗಳು ಇದರ ಸದುಪಯೋಗವನ್ನು ಪಡೆದು
ಕೊಳ್ಳಬಹುದು. ಅ. 1ರಂದು ಸಂಜೆ 5ರಿಂದ ಮಹಾರಾಷ್ಟ್ರ ಹೊಟೇಲ್ ಫೇಡರೇಶನ್ ಅಧ್ಯಕ್ಷ ಜಗನ್ನಾಥ್ ಕೆ. ಶೆಟ್ಟಿ ಅವರ ಸಹಾಯಾರ್ಥ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದ
ರಿಂದ ಕೋಟಿ-ಚೆನ್ನಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕೊನೆಯಲ್ಲಿ ಅನ್ನದಾನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.