ಘಾಟ್‌ಕೋಪರ್ ಶ್ರೀ ಭವಾನಿ ಶನೀಶ್ವರ ಮಂದಿರದ ಬ್ರಹ್ಮಕಲಶಾಭಿಷೇಕ
Team Udayavani, Jan 16, 2019, 12:19 PM IST
ಮುಂಬಯಿ: ಘಾಟ್‌ಕೋಪರ್ ಪಶ್ಚಿಮದ ಶಿಲ್ಪಾ ಬಿಲ್ಡಿಂಗ್ ಹಿಂದಿನ ಜಗದುಶ್ ನಗರದ ಶ್ರೀ ಭವಾನಿ ಶನೀಶ್ವರ ದೇವಸ್ಥಾನದ ಶ್ರೀ ಗಣಪತಿ, ಶ್ರೀ ಭವಾನಿ ಹಾಗೂ ಶ್ರೀ ಶನೀಶ್ವರ ದೇವರ ನೂತನ ಶಿಲಾಬಿಂಬ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು 39ನೇ ವಾರ್ಷಿಕ ಮಹಾಪೂಜೆಯು ಜ. 15ರಂದು ಪ್ರಾರಂಭಗೊಂಡಿದ್ದು, ಜ. 20ರವರಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.
ಜ. 16ರಂದು ಬೆಳಗ್ಗೆ 8ರಿಂದ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಸಂಜೆ 6ರಿಂದ ಬಿಂಬ ಶುದ್ಧಿ, ಬಿಂಬಾಧಿವಾಸ ನಡೆಯಲಿದೆ. ಜ. 17 ರಂದು ಬೆಳಗ್ಗೆ 8ರಿಂದ ತತ್ವ ಕಲಶ, ತತ್ವ ಹೋಮಾದಿಗಳು, ಸಂಜೆ 5ರಿಂದ ಕಲಶ ಮಂಡಲ ಪೂಜೆ, ಬ್ರಹ್ಮಕಲಶ ಪ್ರತಿಷ್ಠೆ, ಕಲಶಾಧಿವಾಸ ಹಾಗೂ ಅದಿವಾಸ ಹೋಮ ಜರಗಲಿದೆ.
ಜ. 18ರಂದು ಮುಂಜಾನೆ 5.30 ರಿಂದ ಗಣಪತಿ ಹೋಮ, ಶ್ರೀ ಗಣಪತಿ, ಶ್ರೀ ಜೈಭವಾನಿ ಮತ್ತು ಶ್ರೀ ಶನೀಶ್ವರ ದೇವರ ಶಿಲಾಬಿಂಬ ಪುನರ್ ಪ್ರತಿಷ್ಠೆ, ಅಷ್ಟಬಂಧ ಲೇಪನ, ಬೆಳಗ್ಗೆ 9.25ರಿಂದ ಒದಗುವ ಕುಂಭ ಲಗ್ನ ಮುಹೂರ್ತದಲ್ಲಿ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಸಂಜೆ 6ರಿಂದ ರಂಗಪೂಜೆ, ಸಂಜೆ 6.30 ರಿಂದ ಮಂದಿರದ ಸಮೀಪದಲ್ಲಿರುವ ಶಿವಾಜಿ ಮಂದಿರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಸ್ವರಶ್ರೀ ಪ್ರತಿಷ್ಠಾನ ಇವರಿಂದ ರಸಮಂಜರಿ ಮತ್ತು ವಿವಿಧ ವಿನೋದಾವಳಿಗಳು, ಸಮ್ಮಾನ ಜರಗಲಿದೆ.
ಜ. 19ರಂದು ಚಂಡಿಕಾ ಹೋಮ, ಪೂರ್ಣಾಹುತಿ, ಮಹಾ ಪೂಜೆ, ಮಧ್ಯಾಹ್ನ 12ರಿಂದ ಪ್ರಸಾದ ವಿತರಣೆ, ಅಪರಾಹ್ನ 2.30ರಿಂದ ಶ್ರೀ ಸತ್ಯನಾರಾಯಣ ಮಹಾ ಪೂಜೆ, ಅಪರಾಹ್ನ 4.30ರಿಂದ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಸಂಜೆ 5 ರಿಂದ ಭಜನೆ, ರಾತ್ರಿ 7ರಿಂದ ಅನ್ನಸಂತರ್ಪಣೆಯನ್ನು ಆಯೋ ಜಿಸಲಾಗಿದೆ. ಸಂಜೆ 7.30 ರಿಂದ ಯಕ್ಷಗಾನ ತಾಳಮದ್ದಳೆಯ ರೂಪದಲ್ಲಿ ಶ್ರೀ ಶನಿಗ್ರಂಥ ಪಾರಾಯಣವು ಭವ್ಯಶ್ರೀ ಕುಲ್ಕುಂದ ಇವರ ಭಾಗವತಿಕೆಯಲ್ಲಿ ಶಶಿಧರ ರಾವ್ ಚಿತ್ರಾಪು ಹಾಗೂ ಮುಂಬಯಿಯ ಪ್ರಸಿದ್ಧ ಕಲಾವಿದರಿಂದ ನಡೆಯಲಿದೆ. ಜ. 20 ರಂದು ಬೆಳಗ್ಗೆ 4 ರಿಂದ ಭಜನೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಜರಗಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೊವಾಯಿ ಶ್ರೀ ಪಂಚಕುಟೀರ ರುಂಡ ಮಾಲಿನಿ ದೇವಸ್ಥಾನದ ಶ್ರೀ ಸುವರ್ಣ ಬಾಬಾ ಅವರು ಆಶೀರ್ವಚನ ನೀಡಲಿದ್ದಾರೆ. ಶಿವಗಿರಿ ಮಠ ವರ್ಕಳ ಕೇರಳ ಇಲ್ಲಿನ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಅವರು ಹಿತನುಡಿಯನ್ನಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಭವಾನಿ ಶನೀಶ್ವರ ದೇವಸ್ಥಾನದ ಅಧ್ಯಕ್ಷ ಹರೀಶ್ ಎಸ್. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಬಿಜೆಪಿ ಶಾಸಕ ರಾಮ್ ಕದಂ, ಗೌರವ ಅತಿಥಿಗಳಾಗಿ ಕಚ್ಚಾರು ಶ್ರೀ ನಾಗೇಶ್ವರ ಮಂದಿರದ ಅಧ್ಯಕ್ಷ ಸುರೇಶ್ ಎಸ್. ಕಡಂದಲೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಭಾರತೀಯ ಜನತಾ ಪಕ್ಷದ ಮಹಾರಾಷ್ಟ್ರ ಪ್ರದೇಶ ಗೌರವ ಕಾರ್ಯದರ್ಶಿ ವಿಜಯ ಸುಂದರ ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಶನೀಶ್ವರ ಮಂದಿರ ನೆರೂಲ್ ಅಧ್ಯಕ್ಷ ಧರ್ಮದರ್ಶಿ ರಮೇಶ್ ಪೂಜಾರಿ, ಬಂಟರ ಸಂಘ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಹರೀಶ್ ಶೆಟ್ಟಿ, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ರವಿ ಮಂಜೇಶ್ವರ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ದಯಾನಂದ ಪೂಜಾರಿ, ನಗರ ಸೇವಕರುಗಳಾದ ತುಕರಾಮ್ ಕೃಷ್ಣ ಪಾಟೀಲ್, ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಸುವರ್ಣ ಅವರು ಆಗಮಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ಸಂಘ-ಸಂಸ್ಥೆಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು ಎಂ. ಕೆ. ಲೋಕೇಶ್ ಶಾಂತಿ ಮಂಗಳೂರು ಇವರ ನೇತೃತ್ವದಲ್ಲಿ ಜರಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಬಿ. ಸಾಬ್ಳೆ, ಉಪ ಕಾರ್ಯಾಧ್ಯಕ್ಷ ಬಿ. ಕೂಸಪ್ಪ, ಸಲಹೆಗಾರ ಶೇಖರ್ ಎಸ್. ಅಮೀನ್, ಅಧ್ಯಕ್ಷ ಹರೀಶ್ ಎಸ್. ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಎಸ್. ಪೂಜಾರಿ, ಗೌರವ ಕೋಶಾಧಿಕಾರಿ ಕರುಣಾಕರ ಸಿ. ಬಂಗೇರ, ಉಪಾಧ್ಯಕ್ಷ ಅನಿಲ್ ಕೆ. ಕುಕ್ಯಾನ್, ಜತೆ ಕಾರ್ಯದರ್ಶಿ ಚೇತನ್ ವೈ. ಕರ್ಕೇರ, ಜತೆ ಕೋಶಾಧಿಕಾರಿ ಅಮಯ್ ಎ. ಮಯ್ಕರ್, ಪ್ರಧಾನ ಅರ್ಚಕ ರಮೇಶ್ ಶಾಂತಿ, ಬ್ರಹ್ಮಕಲಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕರು, ಕಾರ್ಯಾಧ್ಯಕ್ಷ ಬಾಬು ಬೆಳ್ಚಡ, ಉಪ ಕಾರ್ಯಾಧ್ಯಕ್ಷ ವಸಂತ ಎನ್. ಸುವರ್ಣ, ಗೌರವ ಕಾರ್ಯದರ್ಶಿ ಪ್ರಕಾಶ್ ಎಸ್. ಪೂಜಾರಿ, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಸದಸ್ಯರು ಮತ್ತು ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.