ಘಾಟ್‌ಕೋಪರ್ ಶ್ರೀ ಮೂಕಾಂಬಿಕಾ, ಕಾಲಭೈರವ ಮಂದಿರ: ವಾರ್ಷಿಕ ಮಹಾಪೂಜೆ
Team Udayavani, Feb 8, 2021, 9:04 PM IST
ಮುಂಬಯಿ: ಘಾಟ್‌ಕೋಪರ್ ಪಂತ್ ನಗರದ ಶ್ರೀ ಮೂಕಾಂಬಿಕಾ ಹಾಗೂ ಕಾಲಭೈರವ ಮಂದಿರದ 50ನೇ ವಾರ್ಷಿಕ ಮಹಾಪೂಜೆಯು ಜ. 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಕಲಶ ಪ್ರತಿಷ್ಠಾಪನೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪ್ರಸಾದ ವಿತರಣೆ, ರಾತ್ರಿ ಖಾರ್‌ಪೂರ್ವದ ಶನಿಮಹಾತ್ಮ ಸೇವಾ ಸಮಿತಿಯ ಕಾರ್ಯಕರ್ತರು ಹಾಗೂ ಮೀರಾರೋಡ್ ಮಹಿಳಾ ಭಕ್ತರಿಂದ ಭಜನೆ, ರಾತ್ರಿ ಕಾಲಭೈರವ ಮಂದಿರದಲ್ಲಿ ಮಹಾ ಮಂಗಳಾರತಿ ನಡೆಯಿತು.
ಇದನ್ನೂ ಓದಿ:ಮಾರ್ಚ್‌ನಲ್ಲಿ ಭಾರತಕ್ಕೆ ಬರಲಿವೆ 17 ರಫೇಲ್ ವಿಮಾನಗಳು : ರಕ್ಷಣಾ ಸಚಿವ
ಈ ಸಂದರ್ಭ ಕಳೆದ 50 ವರ್ಷಗಳಿಂದ ಮಂದಿರದಲ್ಲಿ ಸೇವೆ ಸಲ್ಲಿಸುತ್ತಿರುವ ಮಂದಿರದ ಕಾರ್ಯಕರ್ತರನ್ನು, ಗಣ್ಯರು ಹಾಗೂ ವಿವಿಧ ಸಂಘ – ಸಂಸ್ಥೆಗಳಾದ ಶನಿಮಹಾತ್ಮಾ ಸೇವಾ ಸಮಿತಿ ಟ್ರಸ್ಟ್ ಖಾರ್‌ಪೂರ್ವ, ಶ್ರೀ ದುರ್ಗಾಪರಮೇಶ್ವರೀ ಮಂದಿರ ಘಾಟ್‌ಕೋಪರ್, ಶನಿಮಂದಿರ ಡೊಂಬಿವಲಿ, ಶ್ರೀ ಜೈಭವಾನಿ ಶನೀಶ್ವರ ಸೇವಾ ಸಮಿತಿ ಘಾಟ್‌ಕೋಪರ್, ವೆಸ್ಟರ್ನ್ ಇಂಡಿಯಾ ಶನಿಮಹಾತ್ಮ ಪೂಜಾ ಸಮಿತಿ, ಫೋರ್ಟ್ ಮುಂಬಯಿ, ಅಯ್ಯಪ್ಪ ಸ್ವಾಮಿ ಮಂದಿರ ಘಾಟ್‌ಕೋಪರ್ ಸಂಸ್ಥೆಗಳ ಪದಾಧಿಕಾರಿಗಳನ್ನು ಹಾಗೂ ಐವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮಂದಿರದ ಸ್ಥಾಪಕರಾದ ದಿ| ಸುಂದರ ಸಾಲ್ಯಾನ್ ಅವರ ಪತ್ನಿ ಮೀನಾಕ್ಷಿ ಸುಂದರ್ ಸಾಲ್ಯಾನ್, ತಾರಾನಾಥ್ ಸುಂದರ್ ಸಾಲ್ಯಾನ್, ಕಾರ್ಯಕರ್ತರನ್ನು ಸ್ಮರಣಿಕೆ, ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು. ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.