ಘೋಡ್‌ಬಂದರ್‌ರೋಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಂಟಕಲ್ ಬ್ರದರ್ಸ್ ಗೆ ಪ್ರಶಸ್ತಿ
Team Udayavani, Apr 21, 2019, 12:40 PM IST
ಥಾಣೆ: ಥಾಣೆ ಪಶ್ಚಿಮದ ಘೋಡ್‌ಬಂದರ್‌ರೋಡ್ ಪರಿಸರದಲ್ಲಿ ನೆಲೆಸಿರುವ ಕ್ರೀಡಾಭಿಮಾನಿಗಳ ಕೂಡುವಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಅಯ್ಯಪ್ಪ ಸ್ವಾಮಿ ನ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಫೌಂಡೇಷನ್ ಜಿ. ಬಿ. ರೋಡ್ ಥಾಣೆ ಇದರ ಆಶ್ರಯದಲ್ಲಿ ಅಯ್ನಾ ಮತ್ತು ಕನ್ನಡ ಮೀಡಿಯಂ ಎಕ್ಸ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಮುಂಬಯಿ ಹಾಗೂ ಪ್ರವೀಣ್ ಶೆಟ್ಟಿ ಮತ್ತು ಮಧುಕರ ದೇವಾಡಿಗ ಇವರ ಸಹಾಯ, ಸಹಕಾರದಲ್ಲಿ ಎ. 13ಮತ್ತು ಎ. 14 ರಂದು ಎರಡು ದಿನಗಳ ಕಾಲ ತುಳು-ಕನ್ನಡಿಗರಿಗಾಗಿ ಥಾಣೆ ಪಶ್ಚಿಮದ ಟಿ. ಎಂ. ಸಿ. ಮೈದಾನದಲ್ಲಿ ಜರಗಿದ “ಘೋಡ್‌ಬಂದರ್‌ರೋಡ್ ಪ್ರೀಮಿಯರ್ ಲೀಗ್-2019′ ಕ್ರಿಕೆಟ್ ಪಂದ್ಯಾಟದಲ್ಲಿ ಮಾಧವ ಕಾಮತ್ ಅವರ ಮಾಲಕತ್ವದ “ಬಂಟಕಲ್ ಬ್ರದರ್ಸ್’ ತಂಡವು 1,11,111 ರೂ. ನಗದು ಮತ್ತು ಘೋಡ್‌ಬಂದರ್‌ರೋಡ್ ಪ್ರೀಮಿಯರ್ ಲೀಗ್-2019 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ದ್ವಿತೀಯ ಬಹುಮಾನವನ್ನು ಪುರುಷೋ ತ್ತಮ ಅಮೀನ್ ಮಾಲಕತ್ವದ “ಮಾಸ್Õ ಅಸೋಸಿಯೇಶನ್’ ಡೊಂಬಿವಲಿ ತಂಡ 55,555 ರೂ. ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಒಟ್ಟು 16 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದು, ಫೈನಲ್ ಪಂದ್ಯವು ಎ. 14ರಂದು ನಡೆಯಿತು. ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಬಂಟಕಲ್ ಬ್ರದರ್ಸ್ ತಂಡದ ಅರ್ಜುನ್, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಇದೇ ತಂಡದ ಅಬೂಬಕ್ಕರ್, ಉತ್ತಮ ಬೌಲರ್ ಪುರಸ್ಕಾರವನ್ನು ಬಂಟಕಲ್ ಬ್ರದರ್ಸ್ ತಂಡದ ರಫಿಕ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮಾಸ್Õ ಅಸೋಸಿಯೇಶನ್ ಡೊಂಬಿವಲಿ ತಂಡದ ಪ್ರಥಮೇಶ್ ಅವರು ಪಡೆದುಕೊಂಡರು.
ಶ್ರೀ ಅಯ್ಯಪ್ಪ ಸ್ವಾಮಿ ನ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಫೌಂಡೇಷನ್ ಇದರ ಅಧ್ಯಕ್ಷ ಅಶೋಕ್ ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಉದ್ಯಮಿ, ಕೆಎಂಇಎಸ್‌ಎ ಇದರ ಅಧ್ಯಕ್ಷ ಸುರೇಶ್ ಶೆಟ್ಟಿ, ವಿಜೇತ ತಂಡಗಳ ಪಾರಿತೋಷಕದ ಪ್ರಾಯೋಜಕತ್ವವನ್ನು ವಹಿಸಿದ್ದ ಉದ್ಯಮಿ ಸಂದೀಪ್ ಶೆಟ್ಟಿ, ಥಾಣೆ ಅಸೋಸಿಯೇಶನ್‌ನ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾ ಧ್ಯಕ್ಷ ತೋಕೂರುಗುತ್ತು ಯೋಗೇಶ್ ಶೆಟ್ಟಿ,
ಮಾಸ್Õ ತಂಡದ ಮಾಲಕ, ಚಿತ್ರ ನಿರ್ಮಾಪಕ
ಪುರುಷೋತ್ತಮ ಅಮೀನ್,ಶ್ರೀ ಅಯ್ಯಪ್ಪಸ್ವಾಮಿ
ನ್ಪೋರ್ಟ್ಸ್ಆ್ಯಂಡ್ ಕಲ್ಚರಲ್ ಫೌಂಡೇಷನ್ ಉಪಾಧ್ಯಕ್ಷ ವಿಶ್ವನಾಥ್ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸೀತಾರಾಮ ಆರ್. ಶೆಟ್ಟಿ, ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಪ್ರವೀಣ್ ಶೆಟ್ಟಿ, ಮಧುಕರ್ ದೇವಾಡಿಗ, ಸಂಘದ ಸದಸ್ಯರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನಿಸಿ ಶುಭ ಹಾರೈಸಿದರು.
ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಥಾಣೆ ಮಹಾನಗರ ಪಾಲಿಕೆಯ ಮೇಯರ್ ಮೀನಾಕ್ಷೀ ರಾಜೇಂದ್ರ ಶಿಂಧೆ ಪೂಜಾರಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ
ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕುಶಲ್ ಸಿ. ಭಂಡಾರಿ, ಮಾಜಿ ನಗರ ಸೇವಕ ಗಣೇಶ್ ಮಣೇರಾ, ಕುಲಾಲ ಸಂಘ ಮುಂಬಯಿ ಉಪಾಧ್ಯಕ್ಷ ರಘು ಮೂಲ್ಯ, ಉದ್ಯಮಿ ನವೀನ್‌ಶೆಟ್ಟಿ ಬೇಲಾಡಿ,ವರ್ತಕ್ ನಗರ ಕನ್ನಡ ಸಂಘದ ಕಾರ್ಯದರ್ಶಿ ಶೇಖರ್ ಶೆಟ್ಟಿ, ವಿವಿಧ ಪ್ರಾಯೋಜಕತ್ವವನ್ನು ವಹಿಸಿದ್ದ ವಸಂತ್ ಸಾಲ್ಯಾನ್ ಬಿರೊಟ್ಟು ಬೋಳ ಮೊದಲಾದ ಗಣ್ಯ ಅತಿಥಿಗಳು ಪಾಲ್ಗೊಂಡು
ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.
ಅತಿಥಿ-ಗಣ್ಯರನ್ನು ಸಂಘದ ಅಧ್ಯಕ್ಷ ಅಶೋಕ್ ಮೂಲ್ಯ ಹಾಗೂ ಇತರ ಪದಾಧಿಕಾರಿಗಳು ಗೌರವಿಸಿದರು. ಭಾಗವಹಿಸಿದ ಪ್ರತೀ ತಂಡದಲ್ಲೂ ಉತ್ತಮ ಪ್ರದರ್ಶನವನ್ನು ನೀಡಿದ ಕ್ರೀಡಾಪಟು ಗಳನ್ನು ಸಂಸ್ಥೆಯ ಪದಾಧಿಕಾರಿಗಳು, ಆಯೋಜ
ಕರು ಸ್ಮರಣಿಕೆಯನ್ನಿತ್ತು ಗೌರವಿಸಿದರು. ತೀರ್ಪು ಗಾರರಾಗಿ ಸಹಕರಿಸಿದ ಹೇಮಂತ್ ಮಾತ್ರೆ, ರಾಜೇಶ್ ಕದಂ, ಮಧುಕರ ಜಸ್ವಾಲ್,ಸ್ಕೋರರ್ ಆಗಿ ಸಹಕರಿಸಿದ ಅವಿನಾಶ್ ಪ್ರಜಾಪತಿ, ವೀಕ್ಷಕ ವಿವರಣೆ ನೀಡಿದ ಮನೀಷ್ ಶೆಟ್ಟಿ ಕಾಂತಾವರ, ಅಯ್ನಾ ಮತ್ತು ಕನ್ನಡ ಮೀಡಿಯಂ ಎಕ್ಸ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಮುಂಬಯಿ ಹಾಗೂ ಪ್ರವೀಣ್ ಶೆಟ್ಟಿ ಮತ್ತು ಮಧುಕರ ದೇವಾಡಿಗ, ನಂದಾ ಶೆಟ್ಟಿ ಇವರನ್ನು ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಗೌರವಿಸಿ
ದರು. ಸಮಾರೋಪ ಸಮಾರಂಭವನ್ನು ಸತ್ಯ
ಪಾಲ್ ರೈ ಮೀರಾರೋಡ್ ನಿರ್ವಹಿಸಿದರು. ಮನೀಷ್ ಶೆಟ್ಟಿ ಕಾಂತಾವರ ವಂದಿಸಿದರು.
ಅಯ್ನಾ ಮತ್ತು ಕನ್ನಡ ಮೀಡಿಯಂ ಎಕ್ಸ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಮುಂಬಯಿ ಹಾಗೂ ಪ್ರವೀಣ್ ಶೆಟ್ಟಿ ಮತ್ತು ಮಧುಕರ ದೇವಾಡಿಗ, ನಂದಾ ಶೆಟ್ಟಿ, ಕೀರ್ತಿ ಎಸ್. ಶೆಟ್ಟಿ, ತೇಜಸ್ವಿನಿ ಶೆಟ್ಟಿ, ಹೇಮಾ ಎಸ್. ಶೆಟ್ಟಿ, ಶಿಶಿರ್ ಮಂಡ್ಯ, ಶಕುಂತಳಾ ಎಸ್. ಶೆಟ್ಟಿ ಪಾವನ್ ಮೊದಲಾದವರು ಸಹಕರಿಸಿದರು.
ಥಾಣೆ ಬಂಟ್ಸ್‌ನ ಜಗದೀಶ್ ಶೆಟ್ಟಿ, ಥಾಣೆ ಬಂಟ್ಸ್
ಉಪಾಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಹೊಟೇಲ್ ಉದ್ಯಮಿಗಳಾದ ಶ್ರೀಧರ ಶೆಟ್ಟಿ, ಜಗದೀಶ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ಹೀರಾನಂದಾನಿ, ವಿಶ್ವನಾಥ್ ಶೆಟ್ಟಿ ಸ್ವಸ್ತಿಕ್ ಎಂಟರ್‌ಪ್ರೈಸಸ್, ರೇವತಿ ಶೆಟ್ಟಿ ಥಾಣೆ ಬಂಟ್ಸ್, ಜಗದೀಶ್ ಮೂಲ್ಯ ಲಕ್ಷ್ಮೀ ಕ್ಯಾಟರರ್, ಉದ್ಯಮಿಗಳಾದ ರವಿ ಕೋಟ್ಯಾನ್, ಚಂದ್ರಶೇಖರ್ ಶೆಟ್ಟಿ, ವಸಂತ್ ಸಾಲ್ಯಾನ್ ಒದೊಟ್ಟು ಬೋಳ, ಜಯರಾಮ್ ನಾಯಕ್, ಸುಂದರಿ ಥಾಣೆ ಬಂಟ್ಸ್, ಆದರ್ಶ್ ಶೆಟ್ಟಿ, ಮನೋಜ್ ಶೆಟ್ಟಿ, ಶೈಲೇಶ್ ಶೆಟ್ಟಿ, ಹರೀಶ್ ಶೆಟ್ಟಿ,ಪವನ್, ಶಕುಂತಳಾ ಎಸ್. ಶೆಟ್ಟಿ, ಪ್ರವೀಣ್ ಶೆಟ್ಟಿ, ಮಹೇಶ್ ಕರ್ಕೇರ, ಸತ್ಯಪಾಲ್ ರೈ ಮೀರಾ
ರೋಡ್ ಪಂದ್ಯಾಟವನ್ನು ಆಯೋಜಿಸಿದ್ದರು.
ಒಂದು ಉತ್ತಮ ಪಂದ್ಯಾಟದ ಆಯೋಜನೆಯನ್ನು ಇಲ್ಲಿ ಮಾಡಲಾಗಿದೆ. ಐಪಿಎಲ್ ರೀತಿಯಲ್ಲಿ ಉತ್ಸಾಹಭರಿತ ವಾತಾವರಣದಲ್ಲಿ ನಡೆಯುತ್ತಿರುವ ಈ ಪಂದ್ಯಾಟವನ್ನು ನೋಡುವಾಗ ಖುಷಿಯಾಗುತ್ತಿದೆ. ನಮ್ಮ ತುಳು-ಕನ್ನಡಿಗರಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಅದೆಷ್ಟೋ ಉತ್ತಮ ಕ್ರೀಡಾಪಟುಗಳಿದ್ದಾರೆ. ಅವರಿಗೆ ಉತ್ತಮ ವೇದಿಕೆಯ ಆವಶ್ಯಕತೆಯಿದೆ. ಇಲ್ಲಿ ತುಳು-ಕನ್ನಡಿಗ ಯುವಕರನ್ನು ಒಗ್ಗೂಡಿಸಿ, ಈ ಮೂಲಕ ಅವರಲ್ಲಿರುವ ಪ್ರತಿಭೆಗೆ ಪೂರಕವಾದ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ. ಇಂತಹ ಕಾರ್ಯ ನಿಜವಾಗಿಯೂ ಅಭಿನಂದನೀಯ. ಮುಂದಿನ ದಿನಗಳಲ್ಲೂ ಸಂಸ್ಥೆಯ ವತಿಯಿಂದ ಇದೇ ರೀತಿಯಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮತ್ತು ಅವರನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರಲಿ
– ಐಕಳ ಹರೀಶ್ ಶೆಟ್ಟಿ (ಅಧ್ಯಕ್ಷರು: ವಿಶ್ವ ಬಂಟರ ಸಂಘಗಳ ಒಕ್ಕೂಟ).
ಯುವ ಕ್ರೀಡಾಳುಗಳನ್ನು ಪ್ರೋತ್ಸಾಹಿಸುವ ಕಾರ್ಯ ನಿಜವಾಗಿಯೂ ಮೆಚ್ಚುವಂಥದ್ದು. ಇಂದಿನ ಯುವ ವರ್ಗದವರಿಗೆ ದಿನ ನಿತ್ಯದ ಕೆಲಸದ ಒತ್ತಡವಿರುತ್ತದೆ. ಈ ಒತ್ತಡದ ಬದುಕಿನ ಮಧ್ಯೆ ಸ್ವಲ್ಪ ಸಮಯವನ್ನು ತೆಗೆದುಕೊಂಡು ಕ್ರೀಡೆಯಲ್ಲಿ ಆಟೋಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ. ಇದು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯಕರವಾಗಿದೆ. ಈ ನಿಟ್ಟಿನಲ್ಲಿ ಈ ರೀತಿಯ ಪಂದ್ಯಾಟಗಳು ಯುವ ವರ್ಗಕ್ಕೆ ಪ್ರೇರಕ ಶಕ್ತಿಯನ್ನು ನೀಡಲಿ. ಇಂತಹ ಪಂದ್ಯಾಟಗಳಿಂದ ಹೊರಬರುವ ಪ್ರತಿಭೆಗಳನ್ನು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಲ್ಲಿ ಯಶಸ್ಸನ್ನು ಕಾಣಬೇಕು
– ಕರ್ನಿರೆ ವಿಶ್ವನಾಥ ಶೆಟ್ಟಿ (ಉಪಾಧ್ಯಕ್ಷರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.