london ಸಾರೀ ವಾಕಥಾನ್‌ ನಲ್ಲಿ ಭಾರತೀಯ ಉಡುಗೆಯ ಮೆರುಗು: ದೇಸೀ ಸೀರೆಯಲ್ಲಿ ನೀರೆಯರ ಸೊಬಗು


Team Udayavani, Aug 12, 2023, 3:12 PM IST

ಸಾರೀ ವಾಕಥಾನ್‌ ನಲ್ಲಿ ಭಾರತೀಯ ಉಡುಗೆಯ ಮೆರುಗು: ದೇಸೀ ಸೀರೆಯಲ್ಲಿ ನೀರೆಯರ ಸೊಬಗು

ಭಾರತದ ವಿಧವಿಧದ ಸೀರೆಗಳನ್ನುಟ್ಟ ಭಾರತೀಯ ಮಹಿಳೆಯರು ಲಂಡನ್‌ ನ ಟ್ರಾಫಾಲ್ಗರ್‌ ಸ್ಕ್ವೇರ್‌ ನಲ್ಲಿ ಹೆಜ್ಜೆ ಹಾಕಿ ಆಕರ್ಷಿಸಿ, ಸಂಭ್ರಮಿಸಿದ್ದರು. ಕೈಮಗ್ಗ ದಿನಾಚರಣೆಯ ಅಂಗವಾಗಿ ಬ್ರಿಟಿಷ್‌ ವುಮೆನ್‌ ಇನ್‌ ಸಾರೀಸ್‌ ಸಂಸ್ಥೆಯು “ಸಾರೀ ವಾಕಥಾನ್‌’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

1905ರ ಆಗಸ್ಟ್‌ 7ರಂದು ಕಲ್ಕತ್ತಾ (ಇಂದಿನ ಕೊಲ್ಕತ್ತಾ) ಪುರಸಭೆಯಲ್ಲಿ ಪ್ರಾರಂಭವಾದ ಸ್ವದೇಶಿ ಚಳುವಳಿಯನ್ನು ಭಾರತದಲ್ಲಿ ಪ್ರತೀ ವರ್ಷವೂ ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನಾಚರಣೆಯ ಅಂಗವಾಗಿ ಬ್ರಿಟನ್‌ ನಲ್ಲಿ ನೆಲೆಸಿರುವ ಭಾರತದ 21 ರಾಜ್ಯಗಳ ಸುಮಾರು 500ಕ್ಕೂ ಹೆಚ್ಚು ಭಾರತೀಯ ನಾರಿಯರು ತಮ್ಮ ತಮ್ಮ ರಾಜ್ಯದ ವಿಶಿಷ್ಟ ಕೈಮಗ್ಗಗಳ ಸೀರೆಗಳಲ್ಲಿ, ಲಂಡನ್‌ನ ಪ್ರಮುಖ ಸ್ಥಳಗಳಾದ ಟ್ರಾಫಾಲ್ಗರ್‌ ಸ್ಕ್ವೇರ್‌, 10 ಡೌನಿಂಗ್‌ ಸ್ಟ್ರೀಟ್‌, ಪಾರ್ಲಿಮೆಂಟ್‌ ಸ್ಕ್ವೇರ್‌ ಗಳಲ್ಲಿ ಈ  “ಸೀರೆ ನಡಿಗೆ’ ಕಾರ್ಯಕ್ರಮದಲ್ಲಿ  ಪಾಲ್ಗೊಂಡರು. ಭಾರತದ ವಿವಿಧ ಪ್ರಾಂತಗಳ ಪ್ರಾದೇಶಿಕ ಕೈಮಗ್ಗಗಳ ಕಲೆಗಾರಿಕೆಯನ್ನು ಪ್ರತಿನಿಧಿಸುವ, ಪ್ರದರ್ಶಿಸುವ “ಸಾರೀ ವಾಕಾಥಾನ್‌” ಅಂದರೆ “ಸೀರೆ ನಡಿಗೆ’ಯು ಎಲ್ಲರ ಮನ ಸೆಳೆದಿತ್ತು. ಪುಟ್ಟ ಪುಟ್ಟ ಮನೆಗಳಲ್ಲಿ ಚಿಕ್ಕಚಿಕ್ಕ ಚರಕದಿಂದ ಹೊರಹೊಮ್ಮಿದ ನೂಲು, ಕೈಮಗ್ಗಗಳ ರಂಗು ರಂಗುರಂಗಿನ ಸೀರೆ ನೀರೆಯರ ಅಂದ ಹೆಚ್ಚಿಸಿತ್ತು.

ನಮ್ಮ ದೇಶದ ವಿವಿಧ, ವಿಭಿನ್ನ, ವಿಶಿಷ್ಟ ನೇಯ್ಗೆಯನ್ನು ವಿಶ್ವದಾದ್ಯಂತ ಪ್ರಚುರ ಪಡಿಸಿ ನಮ್ಮ ದೇಶದ ಪರಂಪರೆಯನ್ನು ಪ್ರಪಂಚಕ್ಕೆ ತೋರಿಸುವ ಉದ್ದೇಶದಿಂದ ಲಂಡನ್‌ನಲ್ಲಿ ನೆಲೆಸಿರುವ ಡಾ| ದೀಪ್ತಿ ಜೈನ್‌ “ಬ್ರಿಟಿಷ್‌ ವುಮೆನ್‌ ಇನ್‌ ಸಾರೀಸ್‌’  (ಬಿ.ಡಬ್ಲ್ಯು.ಐ.ಎಸ್‌) ಎಂಬ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿದರು. ಆಧುನಿಕ ಸ್ತ್ರೀ ಇಂದು ಸೀರೆಯಲ್ಲಿ ಮರೆಯಾಗಿ ಉಳಿಯದೆ ವಿವಿಧ ರಂಗಗಳಲ್ಲಿ ತನ್ನ ಬಾಹುಗಳನ್ನು ಚಾಚಿ ಯಶಸ್ಸನ್ನು ಕಾಣುತ್ತಿದ್ದಾಳೆ. ದೇಶದ ಸಂಸ್ಕೃತಿಯಲ್ಲಿ ಮಿಳಿತವಾಗಿರುವ ಸೀರೆ, ಸ್ತ್ರೀ ಶಕ್ತಿ ಮತ್ತು ನೇಯ್ಗೆ ಕೈಗಾರಿಕೆಯ ಅರಿವು ಮೂಡಿಸಲು ಈ ಬ್ರಿಟಿಷ್‌ ವುಮೆನ್‌ ಇನ್‌ ಸಾರೀಸ್‌ ಸಂಸ್ಥೆಯು  “ಇನ್‌ಸ್ಪೈರಿಂಗ್‌  ಇಂಡಿಯನ್‌ ವುಮೆನ್‌’ ಎಂಬ ಸಂಸ್ಥೆಯ ಸಹಯೋಗದೊಂದಿಗೆ ಭಾರತದ ವಿವಿಧ ರಾಜ್ಯಗಳ 58 ಸಂಯೋಜಕಿಯರ ಬೆಂಬಲದೊಂದಿಗೆ “ಸೀರೆ ನಡಿಗೆ’ ಎಂಬ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದ್ದು ವಿಶೇಷ.

ಈ ಸೀರೆ ನಡಿಗೆ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಸುಮಾರು 40 ಕನ್ನಡದ ಕಣ್ಮಣಿಯರು ವಯಸ್ಸಿನ ಭೇದವಿಲ್ಲದೆ ನಾಡಿನ ವಿವಿಧ ವಿಭಿನ್ನ ಕೈಮಗ್ಗಗಳಲ್ಲಿ ತಯಾರಾದ ಸೀರೆಗಳನ್ನು  ಉಟ್ಟುಕೊಂಡು ನೋಡುಗರ ಮನಸೆಳೆದರು.

ಒಂದೊಂದು ಸೀರೆಯ ನೆರಿಗೆಯಲ್ಲಿ, ಸೆರಗಿನಲ್ಲಿ ಒಂದೊಂದು ಕಥನವಿದೆ, ಇತಿಹಾಸವಿದೆ, ಬೆವರಿದೆ, ಹೋರಾಟವಿದೆ ಮತ್ತು ವಾತ್ಸಲ್ಯವೂ ಇದೆ. ಇತಿಹಾಸದ ಪುಟ ಕೆದಕಿದರೆ ನಮ್ಮ ಉತ್ತರ ಕರ್ನಾಟಕದ ಇಳಕಲ್‌ ಸೀರೆಯ ನೇಯ್ಗೆ 8ನೇ ಶತಮಾನದಿಂದ ಪ್ರಾರಂಭವಾಗಿ ಇಂದಿಗೂ ತನ್ನ ವೈಭವವನ್ನು ಉಳಿಸಿಕೊಂಡಿದೆ. ಹಾಗೆಯೇ ಗುಳೆದಗುಡ್ಡ ಖಣದ ಸೀರೆ, ಶಹಾಪುರ ಸೀರೆ, ಮೈಸೂರು ರೇಶ್ಮೆ ಸೀರೆ, ಉಡುಪಿ ಸೀರೆ, ಕಸೂತಿ ಸೀರೆ, ಗೋಮಿ ತೆನಿ ಸೀರೆ, ಮೊಳಕಾಲ್ಮೂರು ಸೀರೆ, ಲಂಬಾಣಿ ಸೀರೆಗಳು ಶತಮಾನಗಳಷ್ಟು ಪ್ರಾಚೀನವಾದರೂ ಏನೆಲ್ಲ ಏರಿಳಿತ ಕಂಡರೂ ಜಗ್ಗದೇ ಕುಗ್ಗದೇ ತನ್ನ ವೈಶಿಷ್ಟ್ಯವನ್ನು ಕಳೆದುಕೊಳ್ಳದೇ ಸಮಯದ ಜತೆಗೆ ಹೆಜ್ಜೆ ಹಾಕುತ್ತಿವೆ. ನಮ್ಮ ನಾಡಿನ ವಿವಿಧ ಕೈಮಗ್ಗಗಳ ಸೀರೆಗಳ ಅರಿವು ಮೂಡಿಸಲು ನಮ್ಮ ದೇಶದ ನೇಕಾರರನ್ನು ಪ್ರೋತ್ಸಾಹಿಸಲು ಅಂದು ಕನ್ನಡತಿಯರು ಭೌಗೋಳಿಕ ಸೂಚಕ ಹೊಂದಿರುವ ಇಂತಹ ಸೀರೆಗಳನ್ನು ಉಟ್ಟು ಹೆಮ್ಮೆಯಿಂದ ಉಬ್ಬಿದರು. ದಾರಿಯುದ್ದಕ್ಕೂ ನೆರೆದಿದ್ದ ಪ್ರೇಕ್ಷಕರು ಈ ನಡಿಗೆಗೆ ಉತ್ಸಾಹದಿಂದ, ಉಲ್ಲಾಸದಿಂದ ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ಸಂಯೋಜಕಿಯರಾದ ಸರಿತಾ ರಾಹುಲ್‌, ನಿವೇದಿತಾ ದೇವರಾಜ್‌, ಮೀರಾ ಜಗದೀಶ್‌ ಹಾಗೂ ಕನ್ಯಾ ಕೆ.ಟಿ.ಯವರು 40 ಕನ್ನಡತಿಯರನ್ನು ಒಟ್ಟುಗೂಡಿಸಿ ಕರ್ನಾಟಕವನ್ನು ಪ್ರತಿನಿಧಿಸಿ ಈ  “ಸೀರೆ ನಡಿಗೆ’ಯನ್ನು ಯಶಸ್ವಿಗೊಳಿಸಿದರು.  ಅಮೂಲ್ಯ ಹೆಚ್‌.ಸಿ., ನಿಖೀತಾ ಭಟ್‌ ಮತ್ತು ಅಶ್ವಿ‌ನಿ ಮಠದ್‌ ಸಹಕರಿಸಿದರು.

ಲಂಡನ್‌ನ ಪಾರ್ಲಿಮೆಂಟ್‌ ಸ್ಕ್ವೇರ್‌ನಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಯ ಬಳಿ ಭಾರತದ ರಾಷ್ಟ್ರಗೀತೆ ಜನಗಣ ಮನ ಪ್ರತಿಧ್ವನಿಸಿತು. ಅನಂತರ ಕನ್ನಡತಿಯರು “ಬಾರಿಸು ಕನ್ನಡ ಡಿಂಡಿಮವ’ ಹಾಡಿಗೆ ಹೆಜ್ಜೆ ಹಾಕಿ ಕರ್ನಾಟಕದ ಕಂಪನ್ನು ವಿದೇಶದಲ್ಲಿಯೂ ಪಸರಿಸಿದರು. ಈ ಸೀರೆನಡಿಗೆ ಭಾರತದ ಹೈಕಮಿಷನ್‌ನ ನಂದಿತಸಾಹು ಸಾಕ್ಷಿಯಾದರು. ಭಾರತದ ಮೂಲೆ ಮೂಲೆಗಳಿಂದ ಬಂದು ಈ ಆಂಗ್ಲ ದೇಶದಲ್ಲಿ ನೆಲೆಸಿರುವ ನಮ್ಮ ನೀರೆಯರು ತಮ್ಮ ತವರು ದೇಶದ ನೇಕಾರರ ಕೈಮಗ್ಗಗಳಲ್ಲಿ ಅರಳಿದ ಸುಂದರ ಸೊಬಗಿನ ಸೀರೆಗಳನ್ನು ಉಟ್ಟು ಲಂಡನ್‌ನ ದಾರಿಗಳಲ್ಲಿ  ಹೆಜ್ಜೆ ಹಾಕುತ್ತ ಇಂದಿನ ಪೀಳಿಗೆಗೆ ಮತ್ತು ಅಲ್ಲಿಯ ನಾಗರಿಕರಿಗೆ ನೇಕಾರರ ಜೀವನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಟಾಪ್ ನ್ಯೂಸ್

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.