ಜಾಗತಿಕ ಬಂಟರ ಸಂಘದ ಒಕ್ಕೂಟದ ಸ್ನೇಹ ಸಮ್ಮಿಲನ


Team Udayavani, Apr 5, 2018, 3:21 PM IST

0404mum05.jpg

ಮುಂಬಯಿ: ಬದುಕನ್ನು ಸ್ವಂತ ಆಸೆ-ಆಕಾಂಕ್ಷೆಗಳಿಗಾಗಿ ಮುಡಿಪಾಗಿರಿಸಿಕೊಂಡವರು ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅದರಲ್ಲೂ ತಮ್ಮದನ್ನು ಮರೆತು ಇತರರ ಬಗ್ಗೆ ಚಿಂತಿಸುವ, ಅನುಕಂಪ ತೋರುವ ಸಹೃದಯಿ ಮನಸ್ಸುಗಳು ಸಿಗುವುದು ತೀರಾ ವಿರಳ. ಆದರೆ ಸಮಾಜ ಸೇವೆಯನ್ನೇ ಧ್ಯೇಯವನ್ನಾಗಿರಿಸಿಕೊಂಡು ಬಂಟ ಸಮುದಾಯದಲ್ಲಿ ತೀರಾ ಸಂಕಷ್ಟದಲ್ಲಿರುವ ಬಂಟ ಕುಟುಂಬಗಳ ಕಣ್ಣೀರೊರೆಸುವ ಕಾಯಕದಲ್ಲಿ ಬದುಕನ್ನು ಸವೆಸುತ್ತಾ ಬಂದಿರುವವರಲ್ಲಿ ಐಕಳ ಹರೀಶ್‌ ಶೆಟ್ಟಿಯವರು ಒಬ್ಬರು. ಅವರು ಬಂಟ ಸಮಾಜದ ಮಹಾನ್‌ ವ್ಯಕ್ತಿ, ವಿಶ್ವಮಾನ್ಯ ಶಕ್ತಿಯಾಗಿ ಮೂಡಿ ನಿಂತಿದ್ದಾರೆ ಎಂದು ಖ್ಯಾತ ಉದ್ಯಮಿ, ಮಹಾದಾನಿ, ಆರ್ಗಾನಿಕ್‌ ಕೆಮಿಕಲ್ಸ್‌ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಆನಂದ ಶೆಟ್ಟಿ ತೋನ್ಸೆ ನುಡಿದರು.

ಎ. 3 ರಂದು ಕುರ್ಲಾ ಪೂರ್ವದ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ ತುಂಗಾ ಸಂಕೀರ್ಣದ ಶ್ರೀ ವಿಜಯಲಕ್ಷ್ಮೀ ಮಹೇಶ್‌ ಶೆಟ್ಟಿ ಬಾಬಾಸ್‌ ಸಭಾಗೃಹದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಸ್ನೇಹ ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದ ಇವರು, ಐಕಳ ಹರೀಶ್‌ ಶೆಟ್ಟಿಯವರ ಸಂಘಟನ ಕ್ರೀಯಾಶೀಲತೆ, ಕಾರ್ಯಕ್ಷಮತೆ, ಜಾಣ್ಮೆ, ತಾಳ್ಮೆ, ಸ್ಥಿತಪ್ರಜ್ಞೆ, ಯೋಗ್ಯತೆ, ದೃಷ್ಟಿಕೋನ ಇವೆಲ್ಲವನ್ನು ಬಂಟ ಸಮಾಜವಿಂದು ಗುರುತಿಸಿ ವಿಶ್ವಮಾನ್ಯತೆ ನೀಡಿದೆ. ವಿಶ್ವದಲ್ಲಿರುವ ಎಲ್ಲಾ ಬಂಟ ಸಂಘ-ಸಂಸ್ಥೆಗಳ ಸಂಘಟನಾತ್ಮಕ ಶಕ್ತಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಪ್ರೇರಣೆಯಾಗಿರಲಿ.  ಸಮಾಜದ ಋಣ ತೀರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯಾರಿಗೆ ಅದು ಅಸಾಧ್ಯವೋ ಅಂತಹವರು ಸಮಾಜ ಸೇವೆಯಲ್ಲಿ ತೊಡಗಿರುವ ಐಕಳ ಹರೀಶ್‌ ಶೆಟ್ಟಿಯವರಿಗೆ ಸಹಕಾರ ನೀಡುವ ಮೂಲಕ ಸೇವೆಗೆ ಮುಂದಾಗಬೇಕು. ಸಮಾಜಕ್ಕೆ  ಐಕಳ ಹರೀಶ್‌ ಶೆಟ್ಟಿ ಅವರಂತಹ ಓರ್ವ ಸಮರ್ಥ ನಾಯಕನ ಆವಶ್ಯಕತೆಯಿತ್ತು. ಅದಿಂದು ಈಡೇರಿದೆ. ನಾವೆಲ್ಲರೂ ನೊಂದವರ ಬಾಳಿನ ಆಶಾಕಿರಣವಾಗೋಣ. ದೀಪದಿಂದ ದೀಪ ಹಚ್ಚುವ ಕಾಯಕಕ್ಕೆ ತೊಡಗೋಣ. ಸಮುದಾಯದ ಅಗತ್ಯತೆಗಳಿಗೆ ಸ್ಪಂದಿಸಿ ದಾರಿದೀಪವಾಗೋಣ ಎಂದು ನುಡಿದು,  ಐಕಳರ ದೂರದೃಷ್ಟಿಯ ಕನಸನ್ನು ನನಸಾಗಿಸಲು ಸದಾ ಸರ್ವ ರೀತಿಯ ಸಹಕಾರ ನೀಡುವೆ ಎಂದು ಭರವಸೆ ನೀಡಿದರು.

ಅತಿಥಿಯಾಗಿ ಆಗಮಿಸಿದ ಖ್ಯಾತ ಉದ್ಯಮಿ, ಸಮಾಜ ಸೇವಕ, ಭವಾನಿ ಗ್ರೂಪ್‌ ಆಫ್‌ ಕಂಪೆನೀಸ್‌ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ ಇವರು ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರ ನೇತೃತ್ವದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರಿಕಲ್ಪನೆಗೆ ಸಮಸ್ತ ಬಂಟ ಬಾಂಧವರ ಸಹಕಾರ ಹರಿದು ಬರಲಿ. ಒಕ್ಕೂಟವು ಉತ್ತಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಿರುವುದಕ್ಕೆ ಸಂತಸವಾಗುತ್ತಿದೆ. ಐಕಳರಿಗೆ ತನ್ನ ಸಂಪೂರ್ಣ ಸಹಕಾರವಿದೆ. ಒಕ್ಕೂಟದ ಯೋಜನೆಗಳು ನಿತ್ಯ ನಿರಂತರವಾಗಿ ಸಾಗಲಿ. ಐಕಳರ ಅಧಿಕಾರವಧಿಯ ಬಳಿಕವೂ ಸಮರ್ಥ ವ್ಯಕ್ತಿಗೆ ಅದು ದೊರೆಯುವಂತಾಗಬೇಕು. ಬಂಟರಲ್ಲಿ ಒಗ್ಗಟ್ಟಿನ ಬಲವನ್ನು ಹೆಚ್ಚಿಸಲು ಒಕ್ಕೂಟವು ಕಾರ್ಯಪ್ರವೃತ್ತವಾಗಲಿ ಎಂದು ನುಡಿದು ಶುಭಹಾರೈಸಿದರು.

ತುಂಗಾ ಗ್ರೂಪ್‌ ಆಫ್‌ ಹೊಟೇಲ್ಸ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಹಾಗೂ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಎಸ್‌. ಹೆಗ್ಡೆ ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟವಿದೆ ಎಂಬುವುದನ್ನು ಇದೀಗ ಐಕಳ ಹರೀಶ್‌ ಶೆಟ್ಟಿ ಅವರು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಮುಂದೆ ಒಕ್ಕೂಟದ ಉತ್ತಮ ಫಲಿತಾಂಶ ವಿಶ್ವವ್ಯಾಪಿ ಪರಿಮಳ ಬೀರಲೆಂದು ಹಾರೈಸಿದರು.

ಉದ್ಯಮಿ, ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರು ಮಾತನಾಡಿ, ನಿದ್ರಾವಸ್ಥೆಯಲ್ಲಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟವನ್ನು ಎಚ್ಚರಿಸುವಲ್ಲಿ ಐಕಳ ಹರೀಶ್‌ ಶೆಟ್ಟಿ ಅವರು ಸಫಲರಾಗಿದ್ದಾರೆ. ಅತಿ ಕಿರು ಸಮಯದಲ್ಲೇ ಬೃಹತ್‌ ವಿಶ್ವ ಬಂಟ ಸಮ್ಮಿಲನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಮ್ಮಿಲನದ ಮೂಲಕ ಜಾಗತಿಕ ಮಟ್ಟದಲ್ಲಿ ಒಕ್ಕೂಟದ ವಿಶ್ವ ಬಂಟರ ಗಮನ ಸೆಳೆದಿದೆ. ಐಕಳ ಹರೀಶ್‌ ಶೆಟ್ಟಿ ಮತ್ತು ಬಂಟರ ಸಂಘದ ಸಂಬಂಧ ಅವಿಚ್ಚಿನ್ನವಾದುದು. ಸಂಘವು ಅವರ ಕಾರ್ಯಯೋಜನೆಗಳಿಗೆ ಸರ್ವ ರೀತಿಯ ಸಹಕಾರ ನೀಡುತ್ತಾ ಬಂದಿದೆ. ಮುಂದೆ ಒಕ್ಕೂಟದ ಕೀರ್ತಿ ಬಂಟರ ಸಂಘಕ್ಕೆ ಬಹುದೊಡ್ಡ ಗೌರವವಾಗಿ ಪರಿಣಮಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಒಕ್ಕೂಟದ ರಚನಾತ್ಮಕ ಕಾರ್ಯಗಳಿಗೆ ಸಹಕಾರ ನೀಡುವಂತೆ ಅವರು ವಿನಂತಿಸಿದರು.

ಆರಂಭದಲ್ಲಿ ಉದ್ಯಮಿ ಆನಂದ ಶೆಟ್ಟಿ ತೋನ್ಸೆ ಇವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖ್ಯಾತ ಗಾಯಕ ಸುರೇಶ್‌ ಶೆಟ್ಟಿ ಶಿಬರೂರು ಪನ್ವೇಲ್‌ ಪ್ರಾರ್ಥನೆಗೈದರು. ಕಾರ್ಯಕ್ರಮ ಸಮಿತಿಯ ಸಂಚಾಲಕ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಸ್ವಾಗತಿಸಿ, ವಿಶ್ವ ಬಂಟರ ಸಮ್ಮಿಲನ-2018 ಇದರ ಯಶಸ್ವಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಒಕ್ಕೂಟದ ಮಹಾಪೋಷಕರಾಗಿ ಸಹಕರಿಸಿದ ಮುಖ್ಯ ಅತಿಥಿ ಆನಂದ ಶೆಟ್ಟಿ ತೋನ್ಸೆ ಇವರನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಹಾಗೂ ಗಣ್ಯರು ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆಯನ್ನು ಸಮ್ಮಾನಿಸಿ ಅಭಿನಂದಿಸಿದರು. ವೇದಿಕೆಯಲ್ಲಿದ್ದ ಅತಿಥಿ-ಗಣ್ಯರನ್ನು, ಮಹಾಪೋಷಕರು, ಪೋಷಕರು, ದಾನಿಗಳನ್ನು ಸದಸ್ಯತ್ವದ ಪ್ರಮಾಣ ಪತ್ರ ಹಾಗೂ ಪುಷ್ಪಗುಚ್ಚದೊಂದಿಗೆ ಗೌರವಿಸಲಾಯಿತು.

ಸ್ನೇಹ ಸಮ್ಮಿಲನದಲ್ಲಿ ಭಾಗಿಯಾದ ವಿವಿಧ ಬಂಟ-ಸಂಸ್ಥೆಗಳ ಪದಾಧಿಕಾರಿಗಳು, ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಬಂಟರವಾಣಿಯ ಗೌರವ ಪ್ರದಾನ ಸಂಪಾದಕ ಅಶೋಕ್‌ ಪಕ್ಕಳ ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಜತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಕಾರ್ಯದರ್ಶಿ ವಿಜಯ ಪ್ರಸಾದ್‌ ಆಳ್ವ, ಗೌರವ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಗೌರವ ಜತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯಕ್ರಮ ಸಮಿತಿಯ ಸಂಚಾಲಕ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಕಾರ್ಯಕ್ರಮ ಸಮಿತಿಯ  ಸಂಚಾಲಕ ಶಾಂತಾರಾಮ ಬಿ. ಶೆಟ್ಟಿ ಉಪಸ್ಥಿತರಿದ್ದರು. ಸಮಾಜ ಬಾಂಧವರು, ವಿವಿಧ ಬಂಟ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. 

ಒಕ್ಕೂಟದ ಮಹಾಪೋಷಕರು, ಪೋಷಕರಾಗಿ ಸಹಕರಿಸಿದ ದಾನಿಗಳಿಗೆ ಕೃತಜ್ಞನಾಗಿದ್ದೇನೆ. ಬಂಟರ ಸಂಘ ಮುಂಬಯಿ ನನ್ನ ಜೀವನದಲ್ಲಿ ಬಹಳಷ್ಟು ಮನೋಲ್ಲಾಸ ನೀಡಿದ ಸಂಸ್ಥೆಯಾಗಿದೆ. ಮುಂಬಯಿ ಬಂಟರು ನನ್ನನೆಂದೂ ಮರೆಯದೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನನಗೆ ನಿಮ್ಮೆಲ್ಲರ ಋಣವಿದೆ. ಆ ಋಣವನ್ನು ಸಮಾಜ ಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತೀರಿಸಲು ಪ್ರಯತ್ನಿಸುತ್ತೇನೆ. ಇಂದು ಬಹುದೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲೇರಿಸಿಕೊಂಡಿದ್ದೇನೆ. ಸಮಾಜಕ್ಕೆ ಪ್ರಯೋಜನವಾಗುವ ಕಾರ್ಯವನ್ನು ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಯಾವುದೇ ಕುಂದು- ಕೊರತೆ ಬಾರದಂತೆ ಬಂಟರ ಸೇವಕನೆಂಬ ಭಾವ ದಿಂದ ವಿನಮ್ರತೆಯಿಂದ ನಡೆಸುತ್ತೇನೆ. ವಿಶ್ವ ಬಂಟರ ಸಮ್ಮಿಲನ ಯಶಸ್ವಿಯಾಗಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ 
ಐಕಳ ಹರೀಶ್‌ ಶೆಟ್ಟಿ (ಅಧ್ಯಕ್ಷರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ).

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Uppinangady: ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

11

Mangaluru: ಗಾಂಜಾ ಮಾರಾಟ; ಇಬ್ಬರ ಬಂಧನ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.